ದೇಶಕಾಲದ ಸಾಧನೆ ಅದ್ಭುತ. ಕೊರತೆಗಳು ಎಂದೂ ಮುಗಿದದ್ದಲ್ಲ..

೧. ನಾನು ಪರ್ವತಾರೋಹಣ ಕೂಟ ಕಟ್ಟಿದೆ (೧೯೭೬ರ ಸುಮಾರಿಗೆ). ಸಲಕರಣೆ ಸಂಗ್ರಹಿಸುವ ಉದ್ದೇಶದಿಂದ ವಾರ್ಷಿಕ ಸದಸ್ಯ ಶುಲ್ಕ ಹದಿನೈದು ಸಂಗ್ರಹಿಸಿದೆ. ಹತ್ತೋ ಹನ್ನೆರಡೋ ಸದಸ್ಯರಾದರೂ ಕಾಡುಬೆಟ್ಟ ಅಲೆಯುವುದು ನಡೆಸಿಯೇ ಇದ್ದೆ. ಒಂದು ವರ್ಷ ಕಳೆದ ಮೇಲೆ ಒಂದರಲ್ಲೂ ಭಾಗವಹಿಸದ ಒಬ್ಬ ಸದಸ್ಯ ಕೂಟದ ರಚನೆಯ ಶೋಧಕ್ಕಿಳಿದ – ಇದು ಪ್ರಜಾಸತ್ತಾತ್ಮಕವೋ? ಎಲ್ಲ ಸದಸ್ಯರ ಅನುಕೂಲ ನೋಡಿ ಒಂದು ಸಭೆ ಯಾಕೆ ಕರೆದಿಲ್ಲ? ಇತ್ಯಾದಿ. ನಾನವನ ಹದಿನೈದು ರೂಪಾಯಿ ಹಿಂದಿರುಗಿಸಿ, ಔಪಚಾರಿಕ ಕೂಟ ಕಟ್ಟುವ ಉತ್ಸಾಹ ಕಳಚಿಕೊಂಡೆ (ಆರೋಹಣ ಇಂದಿಗೂ ಕ್ರಿಯಾಶೀಲವಾಗಿಯೇ ಇದೆ). ೨. ವಾರದಲ್ಲೊಮ್ಮೆ ಬರುವ ಬಿಡುವನ್ನು ಪೂರ್ಣ ಬಳಸಿಕೊಂಡು ಕಾಡು, ಬೆಟ್ಟ ಸುತ್ತುತ್ತಿದ್ದೆ. ಭಾಷಣ-ಭಯಂಕರ ಪರಿಸರ ವಾದಿಯೊಬ್ಬರು ಅದೇ ಕಾಡುಬೆಟ್ಟ ವಲಯದಲ್ಲಿ ಬರುವ ಜನ, ಸಂಸ್ಕೃತಿಗಳ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಇವರು ಮೂಲದಲ್ಲಿ ಪಿತ್ರಾರ್ಜಿತ ಸ್ವಂತ ಆಸ್ತಿಯನ್ನು ಹಡಬೆಬಿಟ್ಟು, ಲೋಕೋದ್ಧಾರ ಮಾಡುವ ಮುಖವಾಡದಲ್ಲಿ ಇನ್ಯಾರಲ್ಲೋ ಪರಪುಟ್ಟನಾಗಿದ್ದುಕೊಂಡು ವೇದಿಕೆ ಮತ್ತು ಮಾಧ್ಯಮಗಳಿಗೆ ‘ನುಡಿಸೇವೆ’ ಧಾರಾಳ ಕೊಡುತ್ತಿದ್ದರು. ನಾನೇ ಹುಟ್ಟಿಸಿ, ಕಟ್ಟಿದ ಅಂಗಡಿ ಆರೋಗ್ಯಪೂರ್ಣವಾಗಿ ಮೂವತ್ತೈದರ ಹರಯ ದಾಟಿ ನಡೆದಿದೆ. ನಾನು ಕಾಡು, ಬೆಟ್ಟ ಸುತ್ತುವುದನ್ನು ಬಿಟ್ಟಿಲ್ಲ. ೩. ಶಿವರಾಮ ಕಾರಂತರ ಯಕ್ಷಗಾನ ಪ್ರಯೋಗವನ್ನು ನೋಡಿದ ಪಂಡಿತರೊಬ್ಬರು ಸುದೀರ್ಘ ಪತ್ರ ಬರೆದು – ಹೀಗಲ್ಲ ಹಾಗೆ, ಹಾಗಲ್ಲ ಹೀಗೆ ಎಂದರಂತೆ. ಕಾರಂತರ ಮರುಟಪಾಲಿನ ಚುಟುಕು ಹೇಳಿತಂತೆ – ಸಲಹೆಗಳು ಚೆನ್ನಾಗಿವೆ, ನೀವ್ಯಾಕೆ ಪ್ರಯೋಗಿಸಬಾರದು? ೪. ದೇಶಕಾಲದ ಸಾಧನೆ ಅದ್ಭುತ. ಕೊರತೆಗಳು ಎಂದೂ ಮುಗಿದದ್ದಲ್ಲ. ಸಲಹೆಗಳು ಖಂಡಿತಾ ಬೇಕು. ಪ್ರಾತಿನಿಧ್ಯ, ಧಿಕ್ಕಾರ ಇತ್ಯಾದಿ ‘ಮೌಲ್ಯ’ಗಳು ಸ್ಪಷ್ಟವಾಗಿ ಸ್ವಾರ್ಥಮೂಲ! -ಜಿ ಎನ್ ಅಶೋಕವರ್ಧನ]]>

‍ಲೇಖಕರು avadhi

June 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

೧ ಪ್ರತಿಕ್ರಿಯೆ

  1. hamid

    ಇವತ್ಯಾವುದೋ ಬ್ಲಾಗ್ ಓದ್ತಾ ಇತ್ತ ಕಡೆ ಬಂದೆ. ನೋಡಿದ್ರೆ ಏನಪಾ ಒಂದು ಪತ್ರಿಕೇ ಬಗ್ಗೆ ಇಷ್ಟೆಲ್ಲಾ. ಅಲ್ಲ ಗುರುಗಳೆ, ಈ ದೇಶಕಾಲ ಅನ್ನೋ ಪತ್ರಿಕೆಗೂ ನೀವ್ ಭೇಟಿ ಮಾಡಿರೋ ಪರಿಸರವಾದಿಗೂ ಏನ್ ಸಂಬಂಧಾ? ಸಿಕ್ಕಿದ್ದೇ ಚಾನ್ಸೂ ಅಂತಾ ಎಲ್ರೂ ತಮ್ ಕಿಂದ್ರೀನೂ ಬಾರುಸ್ಕೊಂಡ್ರಂತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: