’ದೇಶ ಕಾಲ’ ವಿಶೇಷ ಚೀಲದಲ್ಲಿ ವಾಪಾಸ್..

ಪ್ರೀತಿಯ ವಿವೇಕ್ ಶಾನಭಾಗ ರೇ, ತಮ್ಮ ’ ದೇಶಕಾಲ ’ ವಿಶೇಷ ಸಂಚಿಕೆಯನ್ನು ನಾನು ಬಹಳ ಖುಷಿಯಿಂದ ಓದಿದ್ದೆ.ಆದರೆ ಈಗ ಪಶ್ಚಾತ್ತಾಪ ಆಗ್ತಾ ಇದೆ. ನಾನು ಬೈ ಮಿಸ್ಟೇಕ್ ಎಲ್ಲಾ ಲೇಖನ ,ಕಥೆ,ಕವನಗಳನ್ನು ಓದಿದ್ದೇನೆ.ಓದಿದ ಕಥೆ ಕವನಗಳನ್ನು ಈಗ ಡಿಲೀಟ್ ಮಾಡಲು ನನ್ನ ಮೆದುಳು ಹಾರ್ಡ್ ಡಿಸ್ಕ್ ಅಲ್ಲ .ಹಾಗಾಗಿ ಏನೂ ಮಾಡೊದಿಕ್ಕೆ ಆಗಲ್ಲ .ಆ ಬಗ್ಗೆ ನನಗೆ ಬೇಸರವಿದೆ.ಐಟಿ ಬಿಟಿಯವರ ಕೃಪೆಯಿಂದ ಏನಾದ್ರೂ ಮೆದುಳಿನಿಂದ ’ಬೈ ಮಿಸ್ಟೇಕ್ ಆಗಿ ಓದಿದ’ ಆಯ್ದ ಕಥೆ ಕವನಗಳನ್ನು ಡಿಲೀಟ್ ಮಾಡುವ ಸೌಲಭ್ಯ ಒದಗಿ ಬಂದಲ್ಲಿ ನನ್ನಂಥ ಬಡಪಾಯಿಗಳಿಗೆ ಅನುಕೂಲವಾಗುತ್ತದೆ. ನನ್ನ ತಕರಾರನ್ನು ಓದಿ ಮುಂದಿನ ’ ದೇಶಕಾಲ’ ದ ಹೊತ್ತಿಗೆ ನಿಮ್ಮ ತಪ್ಪನ್ನು ಸರಿಪಡಿಸಿದಲ್ಲಿ ಬಹಳ ಅನುಕೂಲವಾಗುತ್ತದೆ. ನಾನು ದೇಶಕಾಲದ ಎಲ್ಲಾ ಕಥೆ ,ಕವನ,ಲೇಖನಗಳನ್ನು ಲೇಖಕರ ಜಾತಿ ಗೊತ್ತಿಲ್ಲದೆ ಓದಿದೆ ಅನ್ನೋದೇ ನನ್ನ ತಕರಾರು.ನಾನು ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಬಹುತೇಕ ಲೇಖಕರ ಜಾತಿ ,ಪಂಥ ,ಅವರು ಬಲ ಪಂಥೀಯರೋ ಎಡಪಂಥೀಯರೋ ಅನ್ನುವದರ ಅರಿವು ಅಷ್ಟೊಂದು ಇಲ್ಲ.ಒಂದು ಬೇಸರದ ಸಂಗತಿ ಅಂದ್ರೆ ಈ ಲೇಖಕರ ಜಾತಿಗಳನ್ನು ಗೂಗಲ್,ವಿಕಿಪಿಡಿಯಾದಲ್ಲಿ ಹುಡುಕಿದರೂ ಆ ಬಗ್ಗೆ ಸರಿಯಾದ ಮಾಹಿತಿ ದೊರಕಿಲ್ಲ.ಹಾಗಾಗಿ ಮುಂದಿನ ’ದೇಶಕಾಲ’ ವಿಶೇಷ ಸಂಚಿಕೆಯಲ್ಲಿ ಎಲ್ಲಾ ಲೇಖಕರ ಕಿರು ಪರಿಚಯವನ್ನು(ಜಾತಿ,ಉದ್ಯೋಗ ,ಎಡಪಂಥ/ಬಲಪಂಥ etc) ಹಾಕಿದಲ್ಲಿ ನಮ್ಮಂಥ ಬಡಪಾಯಿಗಳು ‘ ಆಯ್ದ ’ ಲೇಖಕರ ಲೇಖನ,ಕಥೆ,ಕವನಗಳನ್ನಷ್ಟೇ ಓದಲು ಅನುಕೂಲವಾಗುತ್ತದೆ. ನಿಮ್ಮ ಸರ್ ನೇಮ್ ಶಾನಭಾಗ ಅಂತ ಇರೋದ್ರಿಂದ ನೀವೂ ಕೂಡ ಕೊಂಕಣಿ ಅನ್ನೋ ಅನಿಸಿಕೆಯಿಂದ ನಾನು ಈಗಾಗಲೇ ಖರೀದಿಸಿರೋ ’ ದೇಶಕಾಲ ’ವನ್ನು ಹಿಂತಿರುಗಿಸುತ್ತಿಲ್ಲ. ಒಂದು ವೇಳೆ ನೀವು ಬೇರೆ ಶಾನಭಾಗರಾಗಿದ್ದಲ್ಲಿ ದಯವಿಟ್ಟು ತಿಳಿಸಿ ’ದೇಶಕಾಲ ವಿಶೇಷ’ ಸಂಚಿಕೆಯನ್ನು ವಿಶೇಷ ಚೀಲದಲ್ಲಿ ವಾಪಾಸ್ ಕಳಿಸುತ್ತೇನೆ. ಪ್ರೀತಿಯಿಂದ (ಕೊಂಕಣಿಯಾದಲ್ಲಿ ಮಾತ್ರ), ಸಂದೀಪ್ ಕಾಮತ್]]>

‍ಲೇಖಕರು avadhi

June 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

22 ಪ್ರತಿಕ್ರಿಯೆಗಳು

 1. Vivek Prakash

  Hi All,
  You people are so mean and ridiculous that you can accept a great literary work. All of you who have commented will end up only talking. Sandeep Kamath, No one requested you to buy Deshakaala & Shri Vivek Shanbhag is not working for only your kind of stupid and ridiculous readers. Better dont enter the world of Deshakaala, Go round and round in these kind of GOOD FOR NOTHING BLOGS. Its your bad luck that you cant like this great work of literature.
  With absolutely no regards,
  Vivek Prakash

  ಪ್ರತಿಕ್ರಿಯೆ
 2. ರವೀಂದ್ರ ಮಾವಖಂಡ

  ಮಾನ್ಯ ಸಂದೀಪ್ ಕಾಮತರೇ,
  ಅವಧಿಯಲ್ಲಿ ನಿಮ್ಮ ಬರಹ ಓದಿ ಅಸಹ್ಯವಾಯಿತು. ನಿಮಗೆ ಬರಹಕ್ಕಿಂತ ಜಾತಿಯೇ ಮುಖ್ಯ ಎನ್ನುವುದಾದರೆ ಬರವಣಿಗೆ ಏಕೆ ? ನಮ್ಮ ನಮ್ಮ ಅಹಂಗಳನ್ನು ಮೀರುವ, ಆ ಮೂಲಕವೇ ನಮ್ಮ ಅರಿವಿನ ಹರಹನ್ನು ವಿಸ್ತರಿಸಿಕೊಳ್ಳುವ ಬರವಣಿಗೆಗೆ ನೀವು ಹಾಗೂ ಈ ರೀತಿ ಬರೆಯಲು ಕಾರಣರಾದ ಆ ಇಬ್ಬರು (ಆ ಮಹಾಶಯರುಗಳ ಹೆಸರು ಹೇಳಲೂ ಅಸಹ್ಯ. ಅವರಲ್ಲೊಬ್ಬರು ವಿಮರ್ಶಕರು ಬೇರೆ. ಬ್ರಾಹ್ಮಣರು ನಡೆಸುವ ಸಾಹಿತ್ಯಿಕ ದ್ವೈಮಾಸಿಕವೊಂದರಲ್ಲಿ ಬರೆದು ಬರೆದೇ ಅವರು ವಿಮರ್ಶಕರಾದದ್ದನ್ನು ಅವರು ಮರೆತರೇ ?) ಈ ರೀತಿಯ ಕಳಂಕವನ್ನು ಹಚ್ಚುತ್ತಿರುವುದನ್ನು ನೋಡಿದರೆ ನಿಮ್ಮ ತಲೆಯಲ್ಲಿ ಏನು ತುಂಬಿಕೊಂಡಿದೆ ಅಂತ ಸಂಶಯ ಬರುತ್ತಿದೆ. ಈ ಜೋಕ್ ಓದಿ.
  ಉಪನ್ಯಾಸಕ- ನಿನ್ನ ತಲೆ ತುಂಬಾ ಸೆಗಣಿ ತುಂಬಿಕೊಂಡಿದೆ.
  ವಿದ್ಯಾರ್ಥಿ- ಅದಕ್ಕೇ ನೀವು ದಿನಾ ನನ್ನ ತಲೆ ತಿನ್ನೋದು!
  ಧನ್ಯವಾದಗಳು
  ರವೀಂದ್ರ ಮಾವಖಂಡ

  ಪ್ರತಿಕ್ರಿಯೆ
 3. ರವೀಂದ್ರ ಮಾವಖಂಡ

  Sandeep, idu nimma blog-nalli neevu bareda saalugalu. OdikoLLi. ” ನನ್ನ ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ ರ ಹೊಸ ಪುಸ್ತಕವನ್ನಷ್ಟೇ ಕೊಳ್ಳಬೇಕು ಅಂತ ಅಂದುಕೊಂಡ ನಾನು ಜಯಂತ್ ಕಾಯ್ಕಿಣಿ ಪುಟ್ಟ ಹುಡುಗ ಪೂರ್ಣನ ಬಗ್ಗೆ ಹೇಳುತ್ತಾ ಅವನ ಕೆಲವು ಕವಿತೆಗಳನ್ನು ಓದಿದಾಗ ಅದನ್ನು ಕೊಳ್ಳದೆ ಇರಲಾಗಲಿಲ್ಲ.ಪುಟ್ಟ ಪೂರ್ಣನ ಮುಗ್ಧ ಕವಿತೆಗಳು ಓದಿ ಯಾಕೋ ಖುಷಿ ದುಖಃ ಎರಡೂ ಆಯ್ತು. “

  ಪ್ರತಿಕ್ರಿಯೆ
 4. Jyothi

  I fully agree with Mr. Vivek Prakash. He’s 100% right. If we see everything with caste and creed there wouldnt be any difference between us and the politicians. Anything that’s good, wherever it may come from, should be accepted unconditionally.
  As regards somebody’s comment that “IT/BT PEOPLE who sit in car and write”, it’s the fact their concern for the language is beyond doubt and they’re doing great, honest job. Even they write in pure Kannada, based on their own experiences and the simple flow captivates the readers unlike the works of many of those who witness the plight of downtrodden. Many a time they succeed in making their readers emotional, even cry sometimes, don’t be under the impression that only those who write experiencing the downtrodden’s plight succeed!!
  Let’s not politicise this issue and enjoy the good work, whether it’s “janivaara” or not. Even after 60 years of independence talking about caste and creed, that too a so-called “educated” IT S/W!! It’s nothing but UNFORTUNATE!!

  ಪ್ರತಿಕ್ರಿಯೆ
 5. D.Manjunatha, IFS

  For the first time i reading this kind of response from the reader of the Deshakala, which is very unfortunate. It is my request to AVADI, please donot give space to these kind of comments.

  ಪ್ರತಿಕ್ರಿಯೆ
 6. vinayaka

  ಕಾಮತ್‌,
  ನೀನು ದೇಶ ಕಾಲ ಹೊಗಳಿದ್ದೊ, ತೆಗಳಿದ್ದೊ ಅರ್ಥ ಆಗ್ತಾ ಇಲ್ಲ! (ಹೊಗಳಿದ್ದು ಅಂದುಕೊಳ್ಳುತ್ತೀನಿ) ಲೇಖಕರ ವಿಳಾಸ, ಜಾತಿ, ಪಂಥ, ಗಿಟ್ಟಿಸಿಕೊಂಡ ಪ್ರಶಸ್ತಿಗಳು ಮತ್ತು ಆ ಪ್ರಶಸ್ತಿ ಗಿಟ್ಟಲು ಮೂಲ ಕಾರಣ…ಬದಲಿಸಿದ ಪಂಥಗಳು(ಇಸವಿ ಸಮೇತ) ಹಾಗೂ ಅದಕ್ಕೆ ಕಾರಣ…ಈ ಎಲ್ಲಾ ಮಾಹಿತಿಯುತ ಕೈಪಿಡಿಯನ್ನು ಪುಸ್ತಕದ ಜೊತೆ ಉಚಿತವಾಗಿ ಕೊಟ್ಟರೆ ಮಾತ್ರ ನಾವು ಹೊಸ ಪುಸ್ತಕ ಖರೀದಿಸೋಣ…ಸದ್ಯಕ್ಕೆ ದೇಶ ಕಾಲ ವಾಪಸ್‌ ಕೊಡು..ಇಲ್ಲ ಅಂದ್ರೆ ಸುಮಾರು ಜನಕ್ಕೆ ಬೇಜರಾಗತ್ತೆ ಪಾಪ…ಆಮೇಲೆ ಪ್ರೇತಗಳಾಗಿ ಬಂದು ನಿನ್ನ ಕನಸಿನಲ್ಲಿ ಕಾಡಿ, ನೀನು ರಾತ್ರಿ ಹಾಸಿಗೆಯಲ್ಲೇ ಉಷ್‌ ಮಾಡಿ…ಈ ಉಸಾಪರಿಗಳೆಲ್ಲ ಯಾಕೆ ಬೇಕು ಅಲ್ವಾ?!
  -ಕೋಡ್ಸರ

  ಪ್ರತಿಕ್ರಿಯೆ
 7. chitra

  hello
  am frustrated about ur reaction mr.sandeep.ur reaction is so childish…..ur so mean n cheap….it wont affect to vivek shanbhag,or jayant kaikini or the team……you people are jealous of them n their fame…that is the truth…-chitra

  ಪ್ರತಿಕ್ರಿಯೆ
 8. ಅಶೋಕವರ್ಧನ

  ಛೆ! ಮಾವಖಂಡ ಮುಂತಾದವರು ಸಂದೀಪ್ ಕಾಮತ್ತರ ಧ್ವನಿ ಗ್ರಹಿಸದಾದರೇ!! ಸ್ವಾಮೀ ಅವರಿಗೆ ಓದು ಕುಶಿ ಕೊಟ್ಟಿದೆ, ಸಂಚಿಕೆ ಸಂತಸ ತುಂಬಿದೆ. ‘ಈಗ’, ಅಂದರೆ ಜಾತಿ ಗುರುತಿಸಿಯೇ ಮೆಚ್ಚಬೇಕು ಅಥವಾ ಕೊಚ್ಚಬೇಕು ಎನ್ನುವ ‘ವಿಮರ್ಶೆ’ ನೋಡಿ ಹತಾಶೆಯಿಂದ ಹೀಗೆ ವ್ಯಂಗ್ಯವಾಡಿದ್ದಾರೆ. ಕಾಮತರ ಒಳ್ಳೆಯ ಪತ್ರಕ್ಕೆ ಗೈಡ್ ಬರೆಯಲಾರೆ, ನನ್ನ ಗೈಡ್‍ಲೈನಾದರೂ ………
  ಅಶೋಕವರ್ಧನ

  ಪ್ರತಿಕ್ರಿಯೆ
  • ರವೀಂದ್ರ ಮಾವಖಂಡ

   ಕ್ಷಮಿಸಿ ಅಶೋಕವರ್ಧನ ಸರ್. ನನಗೆ ಸಂದೀಪರ ಬರಹದ ಒಳಾರ್ಥ ಆಮೇಲೆ ಹೊಳೆಯಿತು. ಆದರೆ ಅಷ್ಟೊತ್ತಿಗೆ ನಾನು ಕಾಮೆಂಟಿಸಿಬಿಟ್ಟಿದ್ದೆ. ನಿಮ್ಮ ಗೈಡ್‌ಲೈನ್ ಕೃತಜ್ಞ.

   ಪ್ರತಿಕ್ರಿಯೆ
 9. balu

  ಯಪ್ಪಾ.. ಜನಕ್ಕೆ ವ್ಯಂಗ್ಯ ಕೂಡ ಅರ್ಥ ಆಗೋಲ್ವೇ?
  ಸಂದೀಪ್ ಕಾಮತಾರೆ ನಿಮ್ಮ ಪ್ರತಿಕ್ರಿಯೆ ಕೆಲವರ ಮೆದುಳಿಗೆ ಸರಿಯಾಗಿ ಅರ್ಥವಾಗದೆ (ಸರಿಯಾಗಿ compile ಆಗಿಲ್ಲ) ನಿಮ್ಮನ್ನು ಭಯಾನಕ ಬುದ್ದಿಜೀವಿಗಳ ಸಾಲಿಗೆ ಸೇರಿಸ್ತಾ ಇದ್ದಾರೆ. ಸ್ವಲ್ಪ ಜೋಪಾನ ಮಾಡಿ.
  ಆಮೇಲೆ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ, ಹಾಗು ನನಗೆ ಬೇರೆ ಒಂದು ಐಡಿಯಾ ಹೊಳೆದಿದೆ. ಐಜೂರರ ರ ಕಡೆಯಿಂದ ಲೇಖಕರ ಪರಿಚಯ ಪಸ್ತಕ ಬರೆಸಿದರೆ ಹೇಗೆ? I mean ಜಾತಿ ಆದಾರಿತ ವಿಂಗಡಣೆ, ಹೇಗಿದ್ದರೂ ರಾಷ್ಟ್ರ ಕವಿ ಅವರನ್ನ ಒಕ್ಕಲಿಗ ಕವಿಯನ್ನಾಗಿ ಕೆಲವರು ಮಾಡಿ ಬಿಟ್ಟಿದ್ದಾರೆ. ನಮ್ಮಂತ ಹುಲು ಮಾನವರಿಗೆ (ಓದುಗರಿಗೆ) ಇವೆಲ್ಲ ಹೇಗೆ ಅರ್ಥ ಆಗಬೇಕು? ಕುಶಿ ಕೊಡುವ ಬರಹವನ್ನೆಲ್ಲ ಓದಿ ಬಿಡುತ್ತೇವೆ.
  ಕೊನೆ ಮಾತು: ನಿಮ್ಮ ವಿಶೇಷ ಚೀಲದಲ್ಲಿ ನಾನು ಕೊಂಡ ಪುಸ್ತಕಕ್ಕೂ ಸ್ವಲ್ಪ ಜಾಗ ಇಟ್ಟಿರಿ.

  ಪ್ರತಿಕ್ರಿಯೆ
 10. ಸಂದೀಪ್ ಕಾಮತ್

  ನನ್ನ ಪತ್ರದ ಆಶಯವನ್ನು ಅರ್ಥೈಸಿಕೊಂಡು ಬೆಂಬಲಿಸಿದ ಅಶೋಕವರ್ಧನ,ಸುಘೋಷ್,ಬಾಲು ಹಾಗೂ ಜಯದೇವ ರಿಗೆ ಧನ್ಯವಾದಗಳು.
  ಪ್ರೀತಿಯ ರವೀಂದ್ರ ,
  ಬಹುಷ ಇನ್ನೊಂದು ಬಾರಿ ನನ್ನ ಪತ್ರ ಓದಿದ್ರೆ ನಿಮಗೆ ಅದರ ಆಶಯ ಅರ್ಥ ಆಗಬಹುದೇನೋ.
  ಯಾವೊಬ್ಬ ವ್ಯಕ್ತಿಯೂ ಲೇಖಕನ ಜಾತಿ ನೋಡಿ ಪುಸ್ತಕ ಕೊಳ್ಳೋದು ನನಗೆ ಗೊತ್ತಿಲ್ಲ.ಹಾಗೇನಾದ್ರೂ ಆಗಿದ್ರೆ ಜಾತಿ ಬೆಂಬಲವಿರುವ ವ್ಯಕ್ತಿಗಳು ಪುಸ್ತಕ ಬರೆದೇ ಲಕ್ಷಾಧಿಪತಿಗಳಾಗ್ತಿದ್ರೇನೋ?
  ಯಾವುದಕ್ಕೂ ನನ್ನ ಹಳೆಯ ಬ್ಲಾಗ್ ಲೇಖನವೊಂದನ್ನು ಓದಿ .
  http://kadalateera.blogspot.com/2008/10/blog-post_28.html
  ಬಾಲು,ವಿನಾಯಕ,
  ’ದೇಶಕಾಲ’ದ ವಿಶೇಷ ಚೀಲ ಕಳೆದು ಹೋಗಿದ್ದರಿಂದ ವಾಪಾಸ್ ಮಾಡುವ ಯೋಚನೆಯನ್ನು ಕೈ ಬಿಡಲಾಗಿದೆ.
  ಪ್ರೀತಿಯಿಂದ ,
  ಸಂದೀಪ್ ಕಾಮತ್

  ಪ್ರತಿಕ್ರಿಯೆ
 11. RJ

  ಮುಖ್ಯವಾಗಿ ನನಗೆ ಅನಿಸುತ್ತೆ: ಈ ಥರ ವಿಷಯವೊಂದನ್ನು ಚರ್ಚೆಗೆ
  ಎಳೆದು ತರುವದೇ ತಪ್ಪು.ಎಲ್ಲಾ ವಿಷಯಗಳನ್ನು ಚರ್ಚಿಸಿಯೇ ಮಥಿಸುವದಾದರೆ
  ಅದಕ್ಕೆ ಕೊನೆಯೇ ಇಲ್ಲ. At least, ಇಲ್ಲಿ ಚರ್ಚೆಗೆ ಒಳಪಡುತ್ತಿರುವ ‘ವಿಷಯ’ಕ್ಕೆ ಅಂಥದೊಂದು
  ಗಂಭೀರತೆ ಅಥವಾ ಅರ್ಹತೆಯೂ ಕೂಡ ಇದ್ದಂತಿಲ್ಲ.ಇಂಥ ಚರ್ಚೆಗಳಿಂದ ಬಹುಶಃ
  ಇನ್ನೊಂದು ತೆರನಾದ ಅಪಾಯವಿದೆ.
  ಅದೇನೆಂದರೆ,ಅನೇಕ ನಿರ್ಲಿಪ್ತ ಓದುಗರು ಅಂದರೆ,ಬರೆಯುವವರ ಜಾತಿ/ಹೆಸರು
  ಗಮನಿಸದೇ ಕೇವಲ ಖುಷಿಗಾಗಿ ಓದುವವರು ಕೂಡ “ಹೀಗೂ ಉಂಟೆ..” ಎಂದು ಸುಖಾಸುಮ್ಮನೆ ತಲೆಕೆಡಿಸಿಕೊಳ್ಳಬಹುದು.
  ಮತ್ತು ಅದರ ಶಾಪವು ಅವಧಿಗೆ ತಟ್ಟುವದು..

  ಪ್ರತಿಕ್ರಿಯೆ
 12. aditi

  nija nudiyabekendare ravindra mavakhanda avre sandeep kamatara barahada olarthvannu sariyagi arthamadikondiddare. nodi jayant sir aneka sari nudidante mugdtege estella shakti ide.

  ಪ್ರತಿಕ್ರಿಯೆ
 13. jyothi

  Sorry Kamat, before realising your satire and intention of mockery, I’d posted my comments… and thought this wouldnt be published.. however the second reading gave me ur actual intention and by the time it was already published. Sorry to the power of infinity.. But anyway this’s also a compliment to u, u know.. how nicely u aroused our anger and this way we agree with ur views…

  ಪ್ರತಿಕ್ರಿಯೆ
 14. arundhati ramesh

  ಸಂದೀಪ್ ಕಾಮತರೆ,
  ದೇಶಭಕ್ತಿ’ ಕೇಳಿದ್ದೆವು..ಓದಿದ್ದೆವು..ನೋಡಿದ್ದೆವು..
  ಹೀಗೆ ಇಷ್ಹೊಂದು ‘ಜಾತಿಭಕ್ತಿ’ ‘ಪ್ರದೇಶಭಕ್ತಿ’
  ಕಂಡಿದ್ದು , ಓದುತ್ತಿರುವುದು, ಇದೇ ಮೊದಲ ಸಲ ಅಲ್ಲ.
  ವಿಶೇಷವಾಗಿ ಪ್ರಕಟವಾಗಿರುವುದು ಗುರುತಿಸಲ್ಪಟ್ಟಿರುವುದು
  ಮಾತ್ರ ಸದ್ಯದ ಸಂಗತಿ .
  ಏನೇ ಇರಲಿ ..ಧನ್ಯವಾದಗಳು..

  ಪ್ರತಿಕ್ರಿಯೆ
 15. Krishnapaada Rao

  ಹೌದು. ಈ ಚರ್ಚೆ ಸಾಕಾಯ್ತು ಮಾರಾಯ್ರೆ. ಹೊಸದೆಂತಾದ್ರೂ ಮಾತಾಡಿ. ಮೊನ್ನೆ ಭಗವದ್ಗೀತೆನೇ ಸಮಾ ಬೈದು ಒಂದು ಲೇಖನ ಯಾರೋ ಒಂದು ಬ್ಲಾಗಲ್ಲಿ ಬರ್ದಿದಾರೆ. ಯಾರ ಕಣ್ಣಿಗೂ ಬಿದ್ದ ಹಂಗಿಲ್ಲ.
  http://bageshree.wordpress.com/2010/06/29/%E0%B2%97%E0%B3%80%E0%B2%A4%E0%B3%86%E0%B2%AF-%E0%B2%AC%E0%B2%97%E0%B3%8D%E0%B2%97%E0%B3%86-%E0%B2%B8%E0%B3%81%E0%B2%AE%E0%B3%8D%E0%B2%AE%E0%B2%A8%E0%B3%86-%E0%B2%B9%E0%B3%80%E0%B2%97%E0%B3%87/
  ಬೇರೆ ಯಾವ ಧರ್ಮದ ಬಗ್ಗೆಯಾದ್ರೂ ಜನ ಹಿಂಗೆ ಬರೀತಾರಾ?

  ಪ್ರತಿಕ್ರಿಯೆ
 16. ಹುಲಿಕುಂಟೆ ಮೂರ್ತಿ

  ಸಕತ್ತಾಗಿದೆ… ವಾಸನೆ.. ಆದರೂ ನಮ್ಮೂರಿನ ಕದಿರಮ್ಮಜ್ಜಿ ಹೇಳುವ ಕತೆಯಲ್ಲಿ ಬರೋ ಕೋಣದ ಕಾಲು ಕಡಿಯುವ ರುಚಿ ಇದ್ಯಲ್ಲಾ… ಇದು ಈ ಕಾಮತ, ಶಾನುಭೋಗರಿಗೆ ಗೊತ್ತಿದ್ರೆ ಸಂದಾಕಿತ್ತು…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: