ದೊಡ್ಡ ಬಳ್ಳಾಪುರದಲ್ಲಿ ’ಕರ್ನಾಟಕ ಓದು’ ಕಮ್ಮಟ

ಕರ್ನಾಟಕ ಓದು: ಕೆಲವು ಕೇಳ್ವಿಗಳು

– ಹುಲಿಕುಂಟೆ ಮೂರ್ತಿ

ಕಳೆದ ಎರಡು ವರುಷಗಳಿಂದ ಕನ್ನಡ ಪ್ರಜ್ಞೆಯ ನಿಜ ದಿಕ್ಕನ್ನು ಕಂಡುಕೊಳ್ಳುವ ಸಲುವಾಗಿ ನಾಡಿನ ಹೆಮ್ಮೆಯ ವಿದ್ವಾಂಸರಾದ ಕೆ.ವಿ.ನಾರಾಯಣ್ ಮಾರ್ಗದರ್ಶನದಲ್ಲಿ ನಾಡಿನ ವಿವಿದೆಡೆಗಳಲ್ಲಿ ನಡೆಯುತ್ತಿರುವ ‘ಕರ್ನಾಟಕ ಓದು’ ಕಮ್ಮಟ ಈಗ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದೆ. ದಿನಾಂಕ 01.09.2012 ಮತ್ತು 02.09.2012 ಶನಿವಾರ ಬೆಳಿಗ್ಗೆ 10ರಿಂದ ಭಾನುವಾರ ಸಂಜೆ 5ರವರೆಗೆ. ದೊಡ್ಡಬಳ್ಳಾಪುರದ ಕನ್ನಡ ಹೋರಾಟಗಾರ ತ.ನ.ಪ್ರಭುದೇವ್ ಅವರ ತೋಟದಲ್ಲಿ (ಹಳ್ಳಿಮನೆ ನಿಸರ್ಗಧಾಮ, ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವ ರಸ್ತೆ, ತಿಮ್ಮಸಂದ್ರಕ್ಕಿಂತ ಮೊದಲು ಸಿಗುತ್ತದೆ.) ‘ಬಯಲು ಬಳಗ’ ಈ ಕಮ್ಮಟದ ಜವಾಬ್ದಾರಿ ಹೊತ್ತಿದೆ. ಇದು ನಿಮಗೆ ಅಧಿಕೃತ ಆಹ್ವಾನ. ದಯಮಾಡಿ ತಮ್ಮ ಭಾಗವಹಿಸುವಿಕೆಯ ಕುರಿತು ಒಂದು ರೀಪ್ಲೇ ಅಥವಾ ಫೋನ್ ಕಾಲ್ ನಿರೀಕ್ಷಿಸುತ್ತೇವೆ. ಶನಿವಾರ ದೊಡ್ಡಬಳ್ಳಾಪುರದಲ್ಲಿ ಉಳಿಯಲು ವ್ಯವಸ್ಥೆ ಇರುತ್ತದೆ.

ಡಾ.ಕೆ.ವೈ.ನಾರಾಯಣಸ್ವಾಮಿ- 9739007127, ಡಾ.ರವಿಕುಮಾರ್ ಬಾಗಿ-9448881480.

ಕರ್ನಾಟಕ ಓದು ಎಂಬ ಮಾತನ್ನು ಬಳಕೆಗೆ ತಂದು ಎರಡು ವರುಶಗಳು ಕಳೆದಿವೆ. ಹಲವು ಗೆಳೆಯಲು ಬೆರೆ ಬೇರೆ ಕಡೆಗಳಲ್ಲಿ ಸೇರಿ ಮಾತುಕತೆಯಲ್ಲಿ ಕರ್ನಾಟಕ ಓದು ಎಂದರೇನು, ಅದು ಏಕೆ ಬೇಕು, ಅದನ್ನು ಕಟ್ಟುವ ಬಗೆ ಹೇಗೆ ಎಂಬುದನ್ನು ಕಂಡುಕೊಳ್ಳಲು ತೊಡಗಿದ್ದೇವೆ. ಕೆಲವೊಮ್ಮೆ ಮಾತಿನ ಓಟದಲ್ಲಿ ದಿಟವೆನಿಸುವ ಮಾತುಗಳು ಒಂದು ಚೌಕಟ್ಟಿಗೆ ಸಿಲುಕದೆಯೂ ಹೋಗುವುದುಂಟು. ಆಡಿದ ಮಾತುಗಳನ್ನು ಬರಹಕ್ಕೆ ಇಳಿಸಲು ಮುಂದಾಗಿರುವುದೂ ಉಂಟು. ಏನೇ ಇರಲಿ ಹೊಸಬರು ಈ ದಿಕ್ಕಿನಲ್ಲಿ ತೊಡಗಿಕೊಳ್ಳಲು ಅನುವು ದೊರೆಯ ಬೇಕಾದರೆ ಈವರಗೆ ನಡೆದ ಮಾತುಕತೆಯಲ್ಲಿ ತಲೆ ಎತ್ತಿದ ಕೇಳ್ವಿಗಳಲ್ಲಿ ಕೆಲವನ್ನು ಮತ್ತೆ ಮುಂಚೂಣಿಗೆ ತರುವುದು ಸರ ಎನಿಸಿದೆ. ಹೀಗಾಗಿ ಈ ಮುಂದಿನ ಮಾತುಗಳು. 1.ಕರ್ನಾಟಕ ಓದು ಎಂಬುದು ದಾರಿಯೋ? ಇಲ್ಲವೇ ಗುರಿಯೋ? ಇಲ್ಲವೇ ಎರಡೂ ಆಗಿದೆಯೋ? ಒಂದು ವೇಳೆ ಅದು ದಾರಿ ಎಂದು ತಿಳಿದರೆ ಆ ದಾರಿ ಹಿಡಿದು ಯವ ಗುರಿಯನ್ನು ತಲುಪಬೇಕು ಎಂಬುದು ನಮಗೆ ಗೊತ್ತಿರಬೇಕು. ಹಾಗಿಲ್ಲದಿದ್ದರೆ ಅದು ಸೆಳೆದೊಯ್ಯುವ ಕಡೆಗೆ ಸಾಗುತ್ತೇವೆ. ಬದಲಿಗೆ ಅದನ್ನು ಗುರಿ ಎಂದು ತಿಳಿದರೆ ಆ ಗುರಿಯನ್ನು ತಲುಪಲು ಇರುವ ದಾರಿ ಯಾವುದು ಎಂದು ಗೊತ್ತಿರ ಬೇಕು. ಅಂತಹ ದಾರಿ ಒಂದೋ ಇಲ್ಲವೇ ಹಲವು ಇವೆಯೋ ಎಂಬುದನ್ನೂ ಗುರುತಿಸಿಕೊಳ್ಳಬೇಕು. ಆಗ ಐಆವ ದಾರಿಯನ್ನು ಆಯ್ದುಕೊಳ್ಳಬೇಕು ಎಂಬ ಕೇಳ್ವಿಯೂ ಎದುರಾಗುತ್ತದೆ. ದಾರಿ ಗೊತ್ತಿಲ್ಲದಿದ್ದರೆ ಗುರಿಯ ಹಂಬಲ ಮಾತ್ರ ಉಳಿದುಕೊಳ್ಳುತ್ತದೆ. ಒಂದು ವೇಳೆ ದಾರಿ ಗುರಿಗಳೆರಡೂ ಒಂದೇ ಎಂದು ತಿಳಿಯಬಹುದೇ? ಅಂದರೆ ದಾರಿಯಲ್ಲಿ ಸಾಗುವುದೇ ಗುರಿಯೇ ಹೊರತು ಅದಕ್ಕೆ ಬೇರೊಂದು ಗುರಿಯಿಲ್ಲ ಎಂದೂ ತಿಳಿಯಬಹುದು. ದಾರಿಯೇ ಗುರಿಯಾಗಿ ಬಿಟ್ಟಿರುತ್ತದೆ. ಒಂದೆರಡು ಎತ್ತುಗೆಗಳ ಮೂಲಕ ಈ ಗೋಜಲನ್ನು ಬಿಡಿಸಲು ಹೊರಡೋಣ. ಕಣ್ಣು ಮತ್ತು ನೋಟದ ನಂಟನ್ನು ನೋಡಿ. ಕಣ್ಣು ಇಲ್ಲವೇ ದಿಟ್ಟಿಯು ನೋಟವನ್ನು ನಮಗೆ ಕಾಣಿಸುವ ಹತ್ಯಾರು; ಹಾಗಾಗಿ ಅದು ದಾರಿ. ನೋಟ ನಮ್ಮ ಗುರಿ;ಅದನ್ನು ಕಣ್ಣೀನ ಮೂಲಕ ನಾವು ನೋಟುತ್ತೇವೆ;ಪಡೆಯುತ್ತೇವೆ. ಆದರೆ ನಮ್ಮ ಕಣ್ಣು ನಮ್ಮ ನೋಟವನ್ನು ಹಿಡಿತದಲ್ಲಿ ಇರಿಸಿಕೊಳ್ಳುತ್ತದೆ. ಏನನ್ನು ನೋಡಬೇಕು ಮತ್ತು ಎಷ್ಟನ್ನು ನೋಡಬೇಕು ಮುಂತಾದವುಗಳನ್ನು ಕಣ್ಣು ನಮಗೆ ತಿಳಿಸಿಕೊಡುತ್ತಿರುತ್ತದೆ. ಅಂದರೆ ಕಣ್ಣು ಕೇವಲ ದಾರಿ ಮಾತ್ರ ಅಲ್ಲ ;ಅದು ನಮ್ಮ ನೋಟದ ಚಹರೆಗಳನ್ನು ಕಟ್ಟುವ ಕೆಲಸವನ್ನೂ ಮಾಡುತ್ತದೆ. ದಾರಿ ಮತ್ತು ಗುರಿಗಳು ಹೀಗೆ ಒಂದರೊಡನೊಂದು ಬೆಸೆದುಕೊಂಡಿರುತ್ತವೆ. ಇನ್ನೊಂದು ಕಡೆಯಿಂದ ಇದನ್ನು ನೋಡೋಣ. ದೀಪದ ಬೆಳಕು ನಮಗೆ ಏನನ್ನಾದರೂ ನೋಡಲು ನೆರವಾಗುತ್ತದೆ. ಆ ಬೇಕಿಲ್ಲದಿದ್ದರೆ ಕತ್ತಲು.ಹಾಗಾಗಿ ಏನೂ ಕಾಣದು. ಹೀಗಿರುವಾಗ ದೀಪವು ನಮಗೆ ನಾವು ನೋಡಬೇಕಾದುದನ್ನು ತೋರಿಸುತ್ತದೆ. ನಾವು ನೋಡುತ್ತಿರುವುದು ದೀಪವನ್ನು ಬಿಟ್ಟಿರುವುದನ್ನಲ್ಲ. ಏಕೆಂದರೆ ದೀಪದ ಬೆಳಕಿನಲ್ಲಿ ನಮಗೆ ದೀಪವೂ ಕಾಣಿಸುತ್ತಿರುತ್ತದೆ. ಅಂದರೆ ಇಲ್ಲಿಯೂ ಕೂಡ ದಾರಿ ಮತ್ತು ಗುರಿಗಳು ಒಂದರೊಡನೊಂದು ಹೆಣೆದುಕೊಂಡಿರುವುದು ಗೊತ್ತಾಗುತ್ತದೆ. ತಿಳಿವನ್ನು ಪಡೆಯಲು ದಾರಿಗಳನ್ನು ಹುಡುಕುವಾಗ ನಾವು ಆಯ್ದುಕೊಳ್ಳುವ ದಾರಿಯು ನಾವು ಯಾವ ತಿಳಿವನ್ನು ಪಡೆಯಬೇಕು ಎಂಬುದನ್ನೂ ಹಿಡಿತದಲ್ಲಿರಿಸಿಕೊಂಡಿರುತ್ತದೆ. ಆದ್ದರಿಂದ ನಾವು ದಾರಿಯನ್ನು ಆಯ್ದುಕೊಳ್ಳುವಾಗ ಎಚ್ಚರವಹಿಸಬೇಕಾಗುತ್ತದೆ. ಇಲ್ಲದಿದ್ದರೆ ನಾವು ನಮಗೆ ಬೇಕಾದನ್ನು ನೋಡುವ ಬದಲು ನೋಡಿದ್ದನ್ನೇ ನಮಗೆ ಬೇಕಾದದ್ದು ಎಂದು ತಿಳಿಯುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಕನರ್ಾಟಕ ಓದು ಎಂಬುದನ್ನು ಅರಿಯಲು ಮುಂದಾಗಬೇಕಿದೆ. 2. ನಾವು ತಿಳಿದದ್ದು ಕೇವಲ ತಿಳಿವಾಗಿರುತ್ತದೋ ಇಲ್ಲವೇ ಅದು ನಮ್ಮ ಬದುಕನ್ನು ಬದಲಿಸಲು ನೆರವಾಗುತ್ತದೋ? ಈಗ ನಾವು ಪಡೆಯುತ್ತಿರುವ ಕಲಿಕೆ ನಮ್ಮಲ್ಲಿ ಇದು ಸರಿ ಇದು ತಪ್ಪು ಎಂಬ ತಿಳಿವನ್ನು ಮೂಡಿಸಲು ಹೆಣಗುತ್ತದೆ.ಈ ಮಾತನ್ನೂ ಹೀಗೂ ಹೇಳಬಹುದು. ಯಾವುದೇ ಇರಲಿ ಅದನ್ನು ಬೇಕು/ಬೇಡ.ಸರಿ/ತಪ್ಪು. ದಿಟ/ಸಟೆ, ಬೆಳೆಸಬೇಕಾದ್ದು/ ಹೊಸಕಬೇಕಾದ್ದು ಎಂದು ಒಡೆದು ನೋಡಲು ಬರುತ್ತದೆ ಎಂದು ಕಲಿಸಲಾಗುತ್ತದೆ. ಎತ್ತುಗೆಗಾಗಿ ಒಂದು ಮಾತನ್ನು ನೋಡೋಣ: ಹೆಚ್ಚು ಬೆಳೆದರೆ ಎಲ್ಲರ ಹಸಿವು ಹಿಂಗುತ್ತದೆ ಎಂದು ಹೇಳಿದರೆ ಅದನ್ನು ಸರಿ ಎಂದು ತಿಳಿಯುತ್ತೇವೆ. ಹೆಚ್ಚು ಬೆಳೆಯಲು ಇರುವ ದಾರಿಗಳನ್ನು ಹುಡುಕುತ್ತೇವೆ. ಹೀಗೆ ಹೆಚ್ಚು ಬೆಳೆಯುವಾಗ ಕಳೇದುಕೊಂಡದ್ದೇನು ಮತ್ತು ಹೆಚ್ಚು ಬೆಳೆದರೂ ಅದು ಎಲ್ಲರ ಹಸಿವನ್ನು ಏಕೆ ಹಿಂಗಿಸುವುದಿಲ್ಲ ಎಂಬ ಕೇಳ್ವಿಯನ್ನು ನಾವು ಎದುರಿಸುವುದೇ ಇಲ್ಲ. ಹೀಗೆ ಕೇಳಿಕೊಳ್ಳುವುದನ್ನು ಕಲಿಕೆಯು ನಮ್ಮಲ್ಲಿ ಬೆಳೆಸಿಲ್ಲ. ಅಂದರೇನಾಯ್ತು? ತಿಳಿವನ್ನು ಬದುಕಿನಲ್ಲಿ ನೆಲೆಗೊಳಿಸಿಕೊಳ್ಳುವಾಗಲೂ ಎಚ್ಚರ ಬೇಕಾಗುತ್ತದೆ. ಏಕೆಂದರೆ ಆ ತಿಳಿವು ಒಂದು ತುಂಬಲಾರದ ಕಂದಕವನ್ನೇ ತೋಡುತ್ತಿರಬಹುದು ಎಂಬ ಅರಿವೂ ನಮ್ಮಲ್ಲಿ ಇರುವುದಿಲ್ಲ. ಹಾಗಾಗಿ ತಿಳಿವು ಎಂಬುದು ತನಗೆ ತಾನೇ ಬಿಡಿಯದ ಮಾತಲ್ಲ. ಅದು ಬದುಕಿನೊಡನೆ ಪಡೆದುಕೊಳ್ಳುವ ನಂಟನ್ನು, ಬೆಸುಗೆಯನ್ನು ಅರಿತೇ ಅದನ್ನು ನಾವು ಬೇಕಾದುದೋ ಅಲ್ಲವೋ ಎಂಬುದನ್ನು ಗುರುತಿಸಿಕೊಳ್ಳಬೇಕಾಗುವುದು. ಕರ್ನಾಟಕ ಓದು ಎಂಬುದು ತಿಳಿವನ್ನು ಪಡೆದುಕೊಳ್ಳವು ಹತ್ಯರು ಮಾತ್ರವಾಗಿ ಉಳಿಯದೇ ಆ ತಿಳಿವು ನಮ್ಮ ಹಸನಾದ ಬದುಕಿಗೆ ಬೇಕೋ ಬೇಡವೋ ಎಂಬುದನ್ನೂ ಕೂಡ ನಮಗೆ ತಿಳಿಸಿಕೊಡುವಂತೆ ಆಗಬೇಕು. ಈಗ ಮೊದಲಿಗೆ ಬರೋಣ. ತಿಳಿವು ನಮ್ಮ ಗುರಿಯಾಗುವುದಾದರೆ ಆಗ ಅದನ್ನು ಪಡೆದುಕೊಳ್ಳುವ ಹತ್ಯಾರುಗಳು ಕೂಡ ನಮ್ಮ ಬಗಲಲ್ಲಿ ಇರಬೇಕಾಗುತ್ತದೆ. ನಮ್ಮ ಬೇಕುಗಳಿಗೆ ತಕ್ಕಂತೆ ಈ ಹತ್ಯಾರುಗಳೂ ಕೂಡ ಬದಲಾಗುತ್ತಲೇ ಇರಬೇಕಾಗುತ್ತದೆ. ಈ ಮಾತು ಗಮನದಲ್ಲಿರಬೇಕು. ಏಕೆಂದರೆ ಬದಲಾಗದ ಹತ್ಯಾರುಗಳಿಲ್ಲ. ಅಂದರೆ ಕರ್ನಾಟಕ ಓದು ಎಂಬುದು ಅಚ್ಚುಕಟ್ಟಾದ ಹೇಳಿಕೆಗಳ ಚೌಕಟ್ಟಲ್ಲ. ಅದು ಬಳಕೆಯಿಂದ ಕಟ್ಟುವ ಮತ್ತು ಬೇಕೆಂದಾಗ ಬದಲಾಗುವ ಹತ್ಯಾರು ಎಂಬುದನ್ನು ಮರೆಯಬಾರದು. 3. ಲೋಕದಲ್ಲಿ ನಾಡುಗಳ ಗಡಿಗೆರೆಗಳು ತೆಳುವಾಗುತ್ತಿರುವಾಗ ಕರ್ನಾಟಕ ಓದು ಎಂಬುದು ನಮ್ಮನ್ನು ಹೆಳವರನ್ನಾಗಿ ಮಾಡುವುದಿಲ್ಲವೇ? ಪೈಪೋಟಿ ಮತ್ತು ನಾಳೆಗಾಗಿ ಈಹೊತ್ತನ್ನು ಮುಡಿಪಿಡುವುದು ಇವೆರಡೂ ನಮ್ಮ ಇಂದಿನ ಬದುಕಿನ ನೆಲೆಗಳಾಗಿವೆ. ಪೈಪೋಟಿ ಇಲ್ಲದೆಯೂ ಇಂದಿನ ದಂದುಗವನ್ನು ನಡೆಸುತ್ತಿರುವ ಜನರ ಬದುಕು ಇದರಿಂದ ನಮ್ಮ ಕಣ್ಣೆದುರಿಗೆ ಬರುವುದೇಇಲ್ಲ. ಇಡೀ ಲೋಕದಲ್ಲಿ ಏನು ನಡೆಯುತ್ತಿದೆ ಅದು ನಮಗೂ ತಿಳಿಯಬೇಕು, ನಾವು ಹಾಗೇ ಅಗಬೇಕು ಎಂಬ ಹಂಬಲದ ಕೈಮೇಲಾದರೆ ಆಗ ನಾವು ಈಹೊತ್ತನ್ನು ಬಲಿಕೊಡುತ್ತೇವೆ. ‘ನಮ್ಮ ಚಿಂತೆ ನಮಗೆ ಹಾಸಲುಂಟು ಹೊದೆಯಲುಂಟು’ ಎಂದ ಬಸವಣ್ಣನ ಮಾತನ್ನು ನಾವು ಜನರ ನೋವಿಗೆ ಬೆನ್ನುಮಾಡಿದ ಮಾತೆಂದು ತಿಳಿಯಬಾರದಲ್ಲವೇ? ಈ ಕೇಳ್ವಿಯನ್ನು ಕೆಲವರು ಇನ್ನೂ ಒಂದು ನಿಟ್ಟಿನಲ್ಲಿ ಮುಂದಿಡುತ್ತಾರೆ. ಲೋಕದ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವುದು ಇಲ್ಲಿ ನಮ್ಮ ಮೇಲೆ ಹಿಡಿತ ಪಡೆಯುತ್ತಿರುವುದರಿಂದ ನಾವು ಎಲ್ಲವನ್ನು ಒಂದು ಚೌಕಟ್ಟಿನಲ್ಲಿ ಇರಿಸಿ ನೋಡಬೇಕೇ ಹೊರತು ಬಿಡಿಯಾಗಿ ನೋಡುವುದರಿಂದ ನಮಗೆ ಬರಲಿರುವ ಹೊಡೆತಗಳ ಅರಿವು ನಮಗೆ ಗೊತ್ತಾಗದೇ ಹೋಗುತ್ತದೆಯಲ್ಲವೇ? ಮಾರುಕಟ್ಟೆಯ ತೋಳುಗಳು ಉದ್ದವಾಗುತ್ತಿರುವುದನ್ನು ಕಂಡವರು ಈ ಮಾತನ್ನು ನಮ್ಮ ಮುಂದೆ ಇಡುತ್ತಿದ್ದಾರೆ. ದಿಟ. ರೋಗ ಮತ್ತು ಅದರ ಮದ್ದು ಎರಡೂ ಒಂದೇ ಬೇರಿನಿಂದ ಹುಟ್ಟುತ್ತವೆ ಎಂದು ತಿಳಿದರೆ ಮಾತ್ರ ಈ ಗೊಂದಲ ಮುಂದುವರೆಯುತ್ತದೆ. ರೋಗ ಎಲ್ಲಿಂದಲೇ ಹುಟ್ಟಿರಲಿ ಮದ್ದು ನಮ್ಮಲ್ಲೇ ಇರಬೇಕು ಎಂಬ ತಿಳಿವು ನಮ್ಮಲ್ಲಿ ಮೂಡದಿದ್ದರೆ ಆಗ ಈಗಿರುವ ಲೋಕದ ಚಿಂತೆಯ ಹಂಗಿನಿಂದ ನಾವು ಹೊರಬರಲಾರೆವು. ಪೈಪೋಟಿಯಲ್ಲಿ ಕೈಕಾಲು ಸೋಲುವುದರಿಂದ ತಪ್ಪಿಸಿಕೊಳ್ಳಲಾರೆವು.  

ಸೆಪ್ಟೆಂಬರ್ 1 ಮತ್ತು 2 ರಂದು ನಡೆಯುವ ಕಮ್ಮಟದ ವೇಳಾಪಟ್ಟಿ

01.09.2012 10:30-12:00 ಟಿಪ್ಪಣಿಯನ್ನು ಚಚರ್ಿಸುವುದು 12:15-1:45 ಟಿಪ್ಪಣಿಯನ್ನು ಚಚರ್ಿಸುವುದು 1:45-2:30 ಊಟ 2:30-4:00 ಒಳಗೊಳ್ಳುವಿಕೆ ಎಂದರೇನು? (ಗುಂಪು ಚಚರ್ೆ) 4:15-5:45 ಒಳಗೊಳ್ಳುವಿಕೆ ಎಲ್ಲರೊಡನೆ ಮಾತು 02.09.2012 9:30-11:00 ಕಲಿಕೆಯ ಹಕ್ಕು: ಎದುರಾಗಿರುವ ಸವಾಲುಗಳು (ಗುಂಪು ಚಚರ್ೆ) 11:15-12:45 ಕಲಿಕೆಯ ಹಕ್ಕು: ಎಲ್ಲರೂ ಕೂಡಿ ಮಾತು 12:45-1:30 ಊಟ 1:30-3:00 ಬರೆಯುವ ಕೆಲಸ 3:15-4:45 ಬರಹವನ್ನು ತಿದ್ದುವ ಕೆಲಸ  ]]>

‍ಲೇಖಕರು G

August 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This