ದ್ವೀಪದೊಳಗೆ ದ್ವೀಪಗಳು!

burger.jpg

 

“ವೆಂಕಿ ಬರ್ಗರ್”

 

ದೊಡ್ಡದೊಂದು ದ್ವೀಪ, ಅದರೊಳಗೆ ಲಕ್ಷಾಂತರ ದ್ವೀಪಗಳನ್ನು ಊಹಿಸಿಕೊಳ್ಳಿ. ಅದು ಹೇಗೆ ಸಾಧ್ಯ ಅಂತೀರೇನೋ?ಇಂತಹದೊಂದನ್ನು ಕಲ್ಪಿಸಿಕೊಳ್ಳಲು ಕಷ್ಟವಲ್ಲವೆ? ನೀವೇನಾದರೂ ನ್ಯೂಯಾರ್ಕ್ ನಗರಕ್ಕೆ ಬಂದರೆ ಇಂತಹದೊಂದು ಸಾಧ್ಯ ಅಂತ ಖಂಡಿತಾ ನಿಮಗೆ ನಂಬಿಕೆ ಬರುತ್ತೆ. ನಮ್ಮ ಬಾಂಬೆ, ಕ್ಷಮಿಸಿ ಮುಂಬಯಿ ತರಹಾನೇ ನ್ಯೂಯಾರ್ಕ್ ಕೂಡಾ ಒಂದು ದೊಡ್ಡ ದ್ವೀಪವೇ (ನಿಜವಾಗಿಯೂ ಮೂರು ದ್ವೀಪಗಳು ಸೇರಿ ನ್ಯೂಯಾರ್ಕ್ ಆಗಿರುವುದು). ಆದಾಗ್ಯೂ, ಈ ನಗರದಲ್ಲಿ ಲಕ್ಷಾಂತರ ದ್ವೀಪಗಳು ಅಲ್ಲಿ ಇಲ್ಲಿ ಚುಕ್ಕೆಗಳಂತೆ ಎಲ್ಲೆಂದರಲ್ಲಿ ಸಿಗುತ್ತವೆ – ವ್ಯಕ್ತಿಗಳೆಂಬ ದ್ವೀಪಗಳು, ವಿವಿಧ ಸಮುದಾಯಗಳು, ಅಂತರ್ಜಾಲಗಳು (ನೆಟ್ ವರ್ಕ್), ಉದ್ಯಮಶೀಲರ ಗುಂಪುಗಳು, ಕಲಾವಿದರು, ವ್ಯಾಪಾರಿಗಳು, ಬ್ಯಾಂಕಿನವರು, ತೆಗೆದುಕೊಳ್ಳುವವರು, ಕೊಡುವವರು, ಮಾರುವವರು, ಕೊಳ್ಳುವವರು – ಹೀಗೇ ದ್ವೀಪಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ನ್ಯೂಯಾರ್ಕ್ ನಗರಕ್ಕೆ ನಾನೇನೂ ಹೊಸಬನಲ್ಲ. ಆದರೆ ಈ ಅತಿರಂಜಿತ ಪ್ರತಿಷ್ಠಿತ ಪಟ್ಟಣದೊಂದಿಗೆ ನನಗೆ ಹೊಸತೊಂದು ಸಂಬಂಧ ಏರ್ಪಡುತ್ತಿದೆ. ನ್ಯೂಯಾರ್ಕ್ ನಗರಕ್ಕೆ ಭೇಟಿಗೆಂದು ಯಾವಾಗ ಬಂದರೂ ಅದೊಂದು ರೋಮಾಂಚಕ ಅನುಭವ. ಆದರೆ ನ್ಯೂಯಾರ್ಕ್ ನಗರದಲ್ಲೇ ವಾಸಿಸುವುದೆಂದರೆ – ನಾನು ಹೇಳುವುದನ್ನು ನೀವು ನಂಬಲೇ ಬೇಕು, ಇಲ್ಲಿ ನೆಲೆಯೂರುವುದೆಂದರೆ ಅದು ಖಂಡಿತವಾಗಿಯೂ ಬೇರೆಯೇ ರೀತಿ. ನಾನು ನನ್ನದೇ ಆದ ದ್ವೀಪವನ್ನು ನಿರ್ಮಿಸಬೇಕು, ನನ್ನ ದ್ವೀಪವೆಂದರೆ ಅದಕ್ಕೆ ಅದರದೇ ಆದ ಮಾನದಂಡಗಳಿರಬೇಕು ಮತ್ತು ಅದರಿಂದಾಗಿ ನನ್ನ ಇರುವಿಕೆಯನ್ನು ರೂಪಿಸಿಕೊಳ್ಳಬೇಕು.

itsasm1.jpgನಾನು ಇಂತಹ ಬೃಹತ್ತಾದ, ಬಹುಮುಖಿ ಸಮುದಾಯಕ್ಕೆ ಧುಮುಕುತ್ತಿದ್ದೇನೆ – ಇಲ್ಲಿ ೧೭೦ಕ್ಕೂ ಹೆಚ್ಚಿನ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಇಲ್ಲಿನ ಮೂರನೇ ಒಂದು ಭಾಗದಷ್ಟು ಜನರು ಬೇರೆ ಬೇರೆ ದೇಶದವರು. ಜಾಗತಿಕ ಆರ್ಥಿಕ ಸ್ಥಿತಿಗತಿ, ವ್ಯಾಪಾರ ವ್ಯವಹಾರಗಳ, ಮಾಧ್ಯಮಗಳ ಮತ್ತು ಸಂಸ್ಕೃತಿಯ ನಾಡಿ ಹಿಡಿಯುವ ಜಾಗವೆನಿಸಿಕೊಂಡಿರುವ ನ್ಯೂಯಾರ್ಕ್ ನಗರಕ್ಕೆ ನಾನು ಅಡಿಯಿಟ್ಟಿದ್ದೇನೆ. ಇಲ್ಲಿ ನಾನೀಗ ಕಳೆದಿರುವುದು ಕೆಲವು ವಾರಗಳಷ್ಟೇ, ಆದಾಗ್ಯೂ ನನ್ನ ಮುಂದಿನ ತಿಂಗಳುಗಳು, ವರ್ಷಗಳಲ್ಲಿ ಜೀವನ ಮತ್ತು ಬದುಕಿನ ಬಗ್ಗೆ ನನ್ನ ದೃಷ್ಟಿಕೋನಗಳಲ್ಲಿ ಸಾಕಷ್ಟು ಬದಲಾವಣೆಗಳು ಬಂದೇ ಬರುತ್ತವೆಂದು ನಾನು ನಂಬಿದ್ದೇನೆ.

ನಾನು ಕಂಡುಕೊಂಡಿರುವ ಲಕ್ಷಾಂತರ ದ್ವೀಪಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಇಣುಕಿ ನೋಡಲಿದ್ದೇನೆ, ಕೈಯಾಡಿಸಲಿದ್ದೇನೆ, ಅವುಗಳ ಒಳ ಹೊರಗನ್ನು ಆಂತರ್ಯವನ್ನು ಅರಿಯಲೆತ್ನಿಸಲಿದ್ದೇನೆ. ಅವುಗಳನ್ನು ಕುರಿತು ಆಸಕ್ತಿ ತೋರಿ, ಜೊತೆಯಲ್ಲಿ ಹೆಜ್ಜೆ ಹಾಕಿ ಪ್ರೀತಿ ತೋರಿ ತಿಳಿದು ಅವುಗಳೊಡನೆ ಮುಳುಗೇಳಲಿದ್ದೇನೆ.

ಈ ದ್ವೀಪಗಳಿಂದ ದ್ವೀಪಕ್ಕೆ ಕುಪ್ಪಳಿಸುವ ನನ್ನ ಆಟಕ್ಕೆ, ಸಾಹಸಕ್ಕೆ ನಿಮಗೆ ಸ್ವಾಗತ. ಈ ಪಯಣ ಖಂಡಿತಾ ಚರ್ಚಿಸಲು, ತಿಳಿಯಲು, ತಿಳಿಸಲು ಅರ್ಹವಾದುದು ಎಂದು ನನ್ನೊಳಗಿರುವುದೇನೋ ಧ್ವನಿಸುತ್ತಿದೆ.

ನಿಮ್ಮ ಪ್ರೀತಿಯ

ವೆಂಕಿ

‍ಲೇಖಕರು avadhi

July 29, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. Malathi S

    ಮೊದಲ ತುತ್ತು, ರುಚಿಯಾಗಿತ್ತು. Reminded me of a childhood song ‘No man can live as an island.. journeying through life alone’

    So happy ದ್ವೀಪಿಂಗ್ (island hopping)….regards, Malathi S

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: