ನಂಬಿದ್ರೆ ನಂಬಿ, ಬಿಟ್ರೆ ಬಿಡಿ..

BELIVE IT OR NOT —

ವಿಚಿತ್ರ ಆದರೆ ಸತ್ಯ

ಶ್ರೀನಿವಾಸ ಜಿ  ಕಪ್ಪಣ್ಣ

 

ಕರ್ನಾಟಕ ಸರ್ಕಾರ 12  ಅಕಾಡೆಮಿಗಳನ್ನು 2 ಪ್ರಾಧಿಕಾರವನ್ನ ಹೊಂದಿದೆ ಈ ಪೈಕಿ 2 ಪ್ರಾಧಿಕಾರಗಳು ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯದಡಿ ಹಾಗೂ 2  ಅಕಾಡೆಮಿಗಳು ವಾರ್ತಾ ನಿರ್ದೆಶನಾಲಯದಡಿ ಬರುತ್ತವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಪ್ರಾಧಿಕಾರ ಹಾಗೂ ಅಕಾಡೆಮಿಗಳ ಕಥೆ ನೋಡೋಣ   1.ಕನ್ನಡ ಅಭಿವೃದ್ಧಿ ಪ್ರಾಧಿಕಾರ  . ‘ಕನ್ನಡದ ಕಾವಲು ನಾಯಿ’ ಎಂದೇ ಹೆಸರಾದ ಈ ಪ್ರಾಧಿಕಾರ ಸಂಪುಟ ದರ್ಜೆಯ ಸಚಿವ ಸ್ಥಾನಮಾನದ ಅಧ್ಯಕ್ಷರನ್ನು ಹೊಂದಿದೆ. ಇದರ ಅಧ್ಯಕ್ಷರ ಅಧಿಕಾರಾವಧಿಯನ್ನು 3 ವರ್ಷಗಳ ಕಾಲ ಮುಂದುವರಿಸಿರುವ ಸರ್ಕಾರ ಸದಸ್ಯರನ್ನು ಮಾತ್ರ ನೇಮಿಸಿಲ್ಲ. ಹೆಸರಿಗೆ ಸಂಪುಟ ಸ್ಥಾನಮಾನ ಆದರೆ ಪ್ರಾಧಿಕಾರದ ಎಲ್ಲಾ ಕೆಲಸಕ್ಕೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಒಪ್ಪಿಗೆ ಪಡೆಯಬೇಕು. ಸಂಪುಟ ಸ್ಥಾನಮಾನವಾದರೂ ಕನ್ನಡದ ಚರ್ಚೆ ನಡೆಯುವ ಯಾವ ಸಂಪುಟ ಸಭೆಗೂ ಅಧ್ಯಕ್ಷರಿಗೆ ಆಹ್ವಾನವಿಲ್ಲ.   2. ಪುಸ್ತಕ ಪ್ರಾಧಿಕಾರ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ಇದೆ. ಅಧ್ಯಕ್ಷರ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಈ ಜೂನ್ 12 ಕ್ಕೆ ಅಧಿಕಾರ ಅವಧಿ ಮುಗಿಯುತ್ತದೆ.   3. ಜಾನಪದ ಅಕಾಡೆಮಿ ಜಾನಪದ ಅಕಾಡೆಮಿಯ ಯೋಜನೆಗಳನ್ನು ಸಂಪೂರ್ಣಗೊಳಿಸಲು ಕಾಲಾವಕಾಶ ಬೇಕು ಎಂದು ಅಧ್ಯಕ್ಷರು ಕೋರಿದ್ದರು. ಅವರ ಅಧಿಕಾರ ಅವಧಿಯನ್ನು ಮಾರ್ಚ್ ಅಂತ್ಯದವರೆಗೆ ಮುಂದುವರಿಸಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದರು. ಆ ನಂತರ ‘ಜಾನಪದ ಪದಕೋಶ’ ಬಿಡುಗಡೆ ಸಮಾರಂಭದಲ್ಲಿ ಜಾನಪದ ವಿಶ್ವವಿದ್ಯಾಲಯದ ಉದ್ಘಾಟನೆಯಾಗುವವರೆಗೆ ಕಾಲಾವಧಿಯನ್ನು ವಿಸ್ತರಿಸುವುದಾಗಿ ಮುಖ್ಯಮಂತ್ರಿಗಳು ಮತ್ತೆ ಘೋಷಿಸಿದ್ದರು. ಆದರೆ ಆದೇಶ ಹೊರಬಿದ್ದಿಲ್ಲ.   4. ಚಿತ್ರಕಲಾ, ಸಂಗೀತ-ನೃತ್ಯ, ಯಕ್ಷಗಾನ, ಕೊಂಕಣಿ, ಬ್ಯಾರಿ ಅಕಾಡೆಮಿ ಈ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ, ಸದಸ್ಯರಿಲ್ಲ. 5. ನಾಟಕ ಅಕಾಡೆಮಿ ಈ ಅಕಾಡೆಮಿಗೆ ಅಧ್ಯಕ್ಷರನ್ನು ನೇಮಿಸಿದ 6  ತಿಂಗಳ ನಂತರ ಸದಸ್ಯರನ್ನು ಇತ್ತೀಚೆಗಷ್ಟೇ ಘೋಷಿಸಲಾಗಿದೆ.   6. ಸಾಹಿತ್ಯ ಅಕಾಡೆಮಿ ಈ ಅಕಾಡೆಮಿಯ ಸ್ತಿತಿ ಶೋಚನೀಯ. ಇದಕ್ಕೆ ಅಧ್ಯಕ್ಷರೂ ಇಲ್ಲ, ಸದಸ್ಯರೂ ಇಲ್ಲ.  ಅರೆಭಾಷೆ ಅಕಾಡೆಮಿ ಆರಂಭಿಸುವುದಾಗಿ ಸರ್ಕಾರ ಘೋಶಿಸಿದ್ದಷ್ಟೇ ಬಂತು. ಇನ್ನೂ ಅದು ಕಣ್ಣು ಬಿಟ್ಟಿಲ್ಲ.   7. ತುಳು ಮತ್ತು ಕೊಡವ ಅಕಾಡೆಮಿ ಈ ಅಕಾಡೆಮಿಗಳಿಗೆ ಮಾತ್ರ ಅಧ್ಯಕ್ಷರು ಹಾಗೂ ಸದಸ್ಯರು ಇದ್ದಾರೆ. ಶಿಲ್ಪಕಲಾ ಅಕಾಡೆಮಿಯ ಅಧಿಕಾರ ಅವಧಿ ಇನ್ನೂ ಮುಗಿದಿಲ್ಲ. 8. ರಂಗಾಯಣ ನಾಟಕ ಅಕಾಡೆಮಿ ಅಧ್ಯಕ್ಷ ಅಧಿಕಾರ ಅವಧಿ ಮುಗಿಯುತ್ತಿದಂತೆಯೇ ಸರ್ಕಾರ ಮುತುವರ್ಜಿಯಿಂದ ಬಿ ವಿ ರಾಜಾರಾಂ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಘೋಷಿಸಿತು. ಆದರೆ ಅದರ ಆಡಳಿತ ಮಂಡಳಿಗೆ ಸದಸ್ಯರನ್ನೇ ನೇಮಿಸಿಲ್ಲ. ಮತ್ತೆ ಅದೇ ತರಾತುರಿಯಲ್ಲಿ ಶಿವಮೊಗ್ಗ, ಧಾರವಾಡದಲ್ಲಿ ರಂಗಾಯಣವನ್ನು ಆರಂಭಿಸಿತು. ಆದರೆ ಅದಕ್ಕೆ ಆಡಳಿತ ಮಂಡಳಿಯನ್ನಾಗಲಿ, ಕಾರ್ಯ ಯೋಜನೆಯನ್ನಾಗಲೀ ರೂಪಿಸಲಿಲ್ಲ.   9. ಹಂಪಿ ಉತ್ಸವ ದಸರಾ ನಂತರ ಅತಿ ಮುಖ್ಯ ಉತ್ಸವಗಳಲ್ಲಿ ಒಂದಾಗಿದ್ದ ಹಂಪಿ ಉತ್ಸವದ ಕಥೆ ಏನಾಯಿತು? 10..ರವೀಂದ್ರ ಕಲಾಕ್ಷೇತ್ರ ರವೀಂದ್ರ ಕಲಾಕ್ಷೇತ್ರದ ಘನತೆಯೇ ಕುಸಿದು ಬಿದ್ದಿದೆ. ಯಾವುದೇ ಪ್ರಮುಖ ತಂಡಗಳಿಗಾಗಲೀ, ಕಲಾವಿದರಿಗಾಗಲೀ ಕಲಾಕ್ಷೇತ್ರ ಸಿಕ್ಕಿಲ್ಲ. 11. ಜಾನಪದ ಜಾತ್ರೆ 10  ರಿಂದ 15  ಸಾವಿರ ಜನರನ್ನು ಸೆಳೆಯುತ್ತದ್ದ, ಕರ್ನಾಟಕ ಸರ್ಕಾರದ ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಜಾನಪದ ಜಾತ್ರೆ ಕಳಾಹೀನವಾಗಲು ಕಾರಣ ಏನು?   12. ಪ್ರಶಸ್ತಿಗಳು ರಾಜ್ಯದ ಹೆಮ್ಮೆಯ ಪ್ರಶಸ್ತಿಗಳಾದ ಗುಬ್ಬಿ ವೀರಣ್ಣ, ಶಾಂತಲಾ ಪ್ರಶಸ್ತಿಗಳು ತಮ್ಮ ಘನತೆ ಕಳೆದುಕೊಂಡಿದೆ.   ವಾರ್ತಾ ನಿರ್ದೆಶನಾಲಯದಡಿ ಬರುವಂತಹವು- 1. ಚಲನ  ಚಿತ್ರ  ಅಕಾಡೆಮಿ ಅಧ್ಯಕ್ಷರನ್ನಾಗಿ ತಾರಾ ಅವರನ್ನು ನೇಮಿಸಲಾಗಿದೆ. ಆದರೆ ಸದಸ್ಯರ ನಾಮಕರಣ ಆಗಿಲ್ಲ. 2. ಮಾಧ್ಯಮ  ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಲಾಗಿದೆ  ]]>

‍ಲೇಖಕರು G

April 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

೧ ಪ್ರತಿಕ್ರಿಯೆ

 1. ಜಿ.ಎನ್.ಅಶೋಕವರ್ಧನ

  ಎಲ್ಲಿವರೆಗೆ ಪ್ರಜಾಪ್ರಭುಗಳಿಗೆ ಮಾಲಿಕ ಯಾರು, ಮ್ಯಾನೇಜರ್ ಯಾರೂಂತ ಗುರುತಿಸಲು ಬರುವುದಿಲ್ಲವೋ ಅಲ್ಲಿವರೆಗೆ ಈ ಗೊಂದಲ ಇರುವಂಥದ್ದೇ. ನಾನು ಪುಸ್ತಕೋದ್ಯಮವನ್ನು ಸರಕಾರೀಕರಣದಿಂದ ಹೊರಗೆ ತನ್ನೀಂತ ಮಾತಾಡುತ್ತಿದ್ದಾಗಲೂ ಇದನ್ನು ಸಾರ್ವತ್ರೀಕರಿಸಿಯೇ ಹಲವು ಹತ್ತು ಬಾರಿ ಹೇಳಿದ್ದೇನೆ. ಪ್ರಶಸ್ತಿ ಪುರಸ್ಕಾರಗಳ ಕುರಿತೂ ಇದು ತುಂಬಾ ಗಂಭೀರವಾದ ವಿಚಾರವೆಂದು ದಿ| ಡಿವಿಕೆ ಮೂರ್ತಿಯವರು ಅಂದೇ ತೋರಿಕೊಟ್ಟಿದ್ದರು. (ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ ಪ್ರಸ್ತಾವ ಕಳಿಸಿದಾಗ, ವಿನಯಪೂರ್ವಕವಾಗಿಯೇ ತಿರಸ್ಕರಿಸಿದರೂ ನನ್ನಲ್ಲಿ ಹೇಳಿದ್ದಿದೆ “they have no business to do”) ನಮ್ಮ ಯೋಗ್ಯತೆಗೆ ತಕ್ಕಂಥಾ ಸರಕಾರವೇ ನಮಗೆ ಸಿಕ್ಕುವುದು 🙁
  ಶೋಕವರ್ಧನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: