ನನಗೊಬ್ಬಳು ಹೆಂಡತಿಯಿದ್ದಳು

-ರಾಘವೇಂದ್ರ ಜೋಶಿ [caption id="attachment_17739" align="alignnone" width="236" caption="ಕಲೆ: ಸುಘೋಷ್ ನಿಗಳೆ"][/caption] ನನಗೊಬ್ಬಳು ಹೆಂಡತಿಯಿದ್ದಳು ಎಲ್ಲರಿಗಿರುವಂತೆ. ನನಗೊಬ್ಬಳು ಮಗಳಿದ್ದಳು ಎಲ್ಲರಿಗಿರುವಂತೆ. – ಮೊದಮೊದಲು ಭುಜದೊಳಗೆ ತಂಪಿತ್ತಾ ತಂಪಿದ್ದುದರಿಂದ ಭುಜಬಲವಿತ್ತಾ ಗೊತ್ತಿಲ್ಲ; ಮಜವಂತೂ ಗಜವಾಗಿತ್ತು. ಒಂದೇ ಒಂದು ಕೊಸರಿತ್ತು ಮಕ್ಕಳಿಲ್ಲದ ಕೊರತೆಯಿತ್ತು ಮತ್ತು ನಂಬಿಕೆಯಿತ್ತು; ತಮಸೋಮ ಜ್ಯೋತಿರ್ಗಮಯದೊಳಗೆ – ಎಂಟೂ ಮುಕ್ಕಾಲು ವರ್ಷ ಬೆಟ್ಟವನೇರಿ ಕಣಿವೆಯಿಳಿದು ಬೆವರಿಳಿಸಿ ಸುಸ್ತಾಗಿ ಕೊನೆಗೊಮ್ಮೆ ಅಶ್ವತ್ಥ ವೃಕ್ಷದ ಕಟ್ಟೆಯಲ್ಲಿ ಜೋಡಿ ನಾಗರಗಳ ಗಂಟು ನೋಡಿದ ಬಳಿಕ ಮಗಳು ಸ್ವಯಂಭೂ! – ಸಿಟ್ಟಿತ್ತು ಹೆಂಡತಿಗೆ ನನ್ನ ಹುಚ್ಚಾಟಗಳ ಬಗ್ಗೆ. ಹೆಂಡತಿಯ ಹೆಸರೂ ಒಂದೇ ಮಗಳದೂ ಅದೇ. ಇದೇ ಕಾರಣಕ್ಕೆ ಅವಳಿಗೆ ಅಸಹನೆಯಿತ್ತು ಜಗತ್ತಿನ ಕುಹಕದ ಮಾತಿಗೆ,ನೋಟಕ್ಕೆ. – ಕಿರಿಕಿರಿಯಿತ್ತು ಅವಳಿಗೆ ಮಗಳ ಬಗೆಗಿನ ನನ್ನ ಪ್ರೀತಿಗೆ. ಅನುಮಾನವಿತ್ತು ತನ್ನದೇ ಸ್ನಿಗ್ಧ ಚೆಲುವಿನ ಬಗ್ಗೆ. ಆದರೂ ಆಕೆ ಯಾವತ್ತೂ ಬೊಗಸೆ ಮುಚ್ಚಿಕೊಂಡವಳಲ್ಲ; ನನ್ನ ಪಕ್ಕೆಲುಬಿನ ಕಫಕ್ಕೆ,ಕೆಮ್ಮಿಗೆ. – ಮೊನ್ನೆ ವಿಮಾನ ಪತನಗೊಂಡಾಗ ಸುಟ್ಟು ಹೋದಳು ಬೊಗಸೆ ಮುಚ್ಚಿತ್ತು ನನಗೆ ಅಳಲಾಗಲಿಲ್ಲ ಕಿರುಚಲಾಗಲಿಲ್ಲ. ಕಣ್ಣೆದುರಿಗೆ ನಿಂತ ನಿಜದ ಚಿತ್ರಪಟ ನೋಡಿ ಸಂಕಟಗೊಂಡೆ. ಹೌದು,ಇಷ್ಟುದಿನ ಅವಳು ನನಗೆ ಬರೇ ಹೆಂಡತಿಯಾಗಿರಲಿಲ್ಲ; ಚೊಕ್ಕಟ ಮಗಳಾಗಿದ್ದಳು..]]>

‍ಲೇಖಕರು avadhi

June 27, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

18 ಪ್ರತಿಕ್ರಿಯೆಗಳು

 1. Mahendra

  ಗೌರವ ಸೆಳೆವ ರಾ ಜೋಶಿ
  ನವ್ಯ ಭಾವ್ಯ ಕಾವ್ಯ ಋಷಿ!
  *
  ’ನನಗೊಬ್ಬಳು ಹೆಂಡತಿ ಯಿದ್ದಳು’
  ಶಿರ್ಶಿಕೆ ಗಮನವೆಳೆದಾಗೆನ್ನ ಮೆದುಳೊಳು
  ನೆನಪಾಯ್ತು ’ಮೈಸೂರುಮಲ್ಲಿಗೆ’ ಗಳು,
  ಮತ್ಹ್‍ಲವು ಹಳೆಯ ರಮ್ಯ ಚಿಂತೆಗಳು!
  *
  ’ನನಗೊಬ್ಬಳು ಹೆಂಡತಿ ಯಿದ್ದಳು’
  ಮಹಾಭಾವರ್ಥ ತುಂಬಿರುವ ಸಾಲುಗಳು
  ವಿಮಾನಯಾನಪಥನ, ಅದಾವ ಕರ್ಮ?
  ’ಅವ’ನರಿಯನೆ ದರ್ಮಾದರ್ಮ?
  *
  ಉಸಿರು ಸಿಗದು ಮಹಾಸಂಕಟ ಹಿಡಿದಾಗ,
  ಹೃದಯ ಕುಸಿದು ’ಅಯ್ಯೋ ವೆಂಕಟ’ ಶೋಖರಾಗ!
  ಅದೆಂಥ ನಾಶ ಬಾಳಿನಲೂ ಅನರ್ಥಮೋಸ
  ಇಡೀ ಜೀವನ ಹಾಳಾದಂತೆ ಶೂನ್ಯ ಶೇಷ!
  *
  ಮುನ್ನಡೆಯಬೇಕು ಅನಿಸಿ ಅರ್ಥಹೀನ ಬಾಳು
  ಅದು ’ಕರ್ಮ’ಗೊರಳು ಕಾಲದುರುಳು!
  ಅದಕೆ ಬೇಕು ಅಮೋಘ ಆತ್ಮಶಕ್ತಿ,
  ಕುಸಿದು ಕೊರಗುವ ಅನಾಥ ವ್ಯಕ್ತಿ.
  *
  ಹೆಂಡತಿ ಮಗಳು ಅಮೃಥ ಮನದೊಳು,
  ಇನ್ನೆಂದಿಗೂ ಇಲ್ಲದೆಯಿದ್ದರು ಪಕ್ಕದೊಳು!
  ಆ ದುರ್ಭಾಗ್ಯ ಸಹಿಸಿಕೊಳ್ಳಲು ಬಾಳೊಳು
  ದೊರಕಲಿ ಮಹಾತ್ಮರ ಆತ್ಮಗೋಳ!
  *
  – ವಿಜಯಶೀಲ, ಬೆರ್ಲಿನ್, ೨೭.೦೬.೧೦.
  [email protected]

  ಪ್ರತಿಕ್ರಿಯೆ
 2. satish

  kavi sahebra ,
  agdhi chalo bardeera ,nodri yappa .ee saal galu estu chanda adav ree .manasige naat tad ree.All the best and keep writing

  ಪ್ರತಿಕ್ರಿಯೆ
 3. sunaath

  ಅಷ್ಟು ಹಚ್ಚಿಕೊಂಡ ಹೆಂಡತಿ ಒಮ್ಮೆಲೆ ಇಲ್ಲವಾದ ಸಾಲು ಓದಿದಾಗ ಹೃದಯ ಸ್ತಬ್ಧವಾಗುತ್ತದೆ. ಮನ ಮಿಡಿಯುವ ಕವನ.

  ಪ್ರತಿಕ್ರಿಯೆ
 4. jyothi

  beautiful…thumba ishta aythu..ಭುಜದೊಳಗೆ ತಂಪಿತ್ತಾ
  ತಂಪಿದ್ದುದರಿಂದ ಭುಜಬಲವಿತ್ತಾ ಗೊತ್ತಿಲ್ಲ;ಮಜವಂತೂ ಗಜವಾಗಿತ್ತು.ಯಾವತ್ತೂ
  ಬೊಗಸೆ ಮುಚ್ಚಿಕೊಂಡವಳಲ್ಲ;ನನ್ನ ಪಕ್ಕೆಲುಬಿನ ಕಫಕ್ಕೆ,ಕೆಮ್ಮಿಗೆ…these lines i liked very much.so….touchy….keep writing….good luck…

  ಪ್ರತಿಕ್ರಿಯೆ
 5. tadagalale surendra

  naanu vimarshaka alla. aadare aa kavite odidaaga hotte kivuchidantaayitu. idee deha kuggihoyitu. joshi nimmondige naaviddeve endu helona annisutte. ashtu prabhaava beeritu aa kavite. abhinandanegalu, joshi.

  ಪ್ರತಿಕ್ರಿಯೆ
 6. Yatheesh

  Joshiyavare,
  Thumbaa arthapoorna kavithe……Padagala olage inukidare olagina artha tiliyuttade….Yaako tragic end sari kaanalilla….neevu olavina kavi aagabeku…..
  Yatish.

  ಪ್ರತಿಕ್ರಿಯೆ
 7. Siddu Yawagal

  Joshi,
  I am touched…….believe me i have tears in my eyes after reading this.
  Keep writing, I am happy for you that you started writing…..

  ಪ್ರತಿಕ್ರಿಯೆ
 8. RJ

  ಕವಿತೆ ಮೆಚ್ಚಿ ಇಲ್ಲಿ ಮತ್ತು ನನಗೆ ವೈಯಕ್ತಿಕವಾಗಿ
  ಮೇಲ್ ಮಾಡಿದವರೆಲ್ಲರಿಗೂ ವಂದನೆಗಳು.
  ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಿಜಕ್ಕೂ ಖುಷಿ ಮತ್ತು ಸಮಾಧಾನ (?) ತಂದಿದೆ..
  So nice of you & avadhi.
  -RJ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: