ಆಕಾಶ್ ಆರ್.ಎಸ್
ಹಣೆ ಸವರಿ
ಕೆನ್ನೆಗೆ ಚುಂಬಿಸಿ
ಎಚ್ಚರಿಸಿದ
ಇಳೆಸಂಜೆವರೆಗು ಕಾದು ಕೂತರೂ
ದೊರಕಲಿಲ್ಲ,
ಅವನಿಗೆ ಬೇಕಿದೆ
ನನ್ನಲ್ಲಿ ಉಳಿದ ಮಾತು
ಮುಸ್ಸಂಜೆ ಮೌನಕ್ಕೂ
ನನ್ನಲ್ಲಿ ಉಳಿದ ಮಾತಿಗು
ನೇಸರದಿ ದುಃಖಿತ ನಾಗಿದ್ದ,
ಇರುಳು ಚಂದಿರನು ಏಕಾಂಗಿ

ಈಗ ನನ್ನ ತಬ್ಬಿ ಬಿಕ್ಕಳಿಸಿ ಅಳುತ್ತಿದ್ದ
ಯಾಕೆಂದು ಕೇಳಿದೆ
ಅವನಿಗೂ ಬೇಕಿದೆ
ನನ್ನಲ್ಲಿ ಉಳಿದ ಮಾತು..!
ಬಾನೆಲ್ಲ ಬೆಳದಿಂಗಳ ಸಂಭ್ರಮ
ಆದರೆ ನಕ್ಷತ್ರಗಳು ಸೂತಕದಲ್ಲಿವೆ
ನಾನು ಅಲ್ಲಿನ ಅತಿಥಿಯೆಂದು
ಅವುಗಳು ಕಾದಿವೆ
ಕಾಡುತ್ತಿವೆ
ನನ್ನಲ್ಲಿ ಉಳಿದ ಮಾತು..!
0 ಪ್ರತಿಕ್ರಿಯೆಗಳು