ನನ್ನ ಪ್ಯಾಂಟ್ ಹರಿದಿದ್ದು, ಅದನ್ನು ನಾಲ್ಕು ಜನ ನೋಡ್ತಾರೆ …

ಮೇಫ್ಲವರ್ ಮೀಡಿಯಾ ಹೌಸ್ ನಲ್ಲಿ ‘ಮ್ಯಾಜಿಕ್ ಕಾರ್ಪೆಟ್’ ಸ್ಲಂ ಡಾಗ್ ಬಗ್ಗೆ ನಡೆಸಿದ ಸಂವಾದ ಹಲವು ದಾರಿಗಳನ್ನು ತೋರಿಸಿತು.

ಈ ಸಂವಾದದ ಬಗ್ಗೆ ಸಂದೀಪ್ ಕಾಮತ್ ಬರೆದ ಭಿನ್ನ ಲೇಖನ ಈಗ ಚರ್ಚೆಗೆ ಕಾರಣವಾಗಿದೆ.

ಚರ್ಚೆಯಲ್ಲಿ ಭಾಗವಹಿಸಿ. ಚಿತ್ರವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ದಾರಿ ಮಾಡಿಕೊಡಿ- 

slumdogmillionaire

 

ಸಂದೀಪ್,
ನಿಮಗೆ ಆರೋಗ್ಯಕರವಾದ intraspection ಇದೆ. I like it.

-paramesvara guruswamy

+++

ನಂಗೂ ಇಷ್ಟವಾಗುತ್ತೆ. ಓದಿ ತುಂಬಾನೇ ನಗಬಹುದು. ಆದರೆ ಓದಿ ಆದ ಮೇಲೆ ಅವರ ಅಭಿಪ್ರಾಯ ಮಾತ್ರ ನಂಗೆ ಒಪ್ಪಿಗೆ ಆಗೋಲ್ಲ. ಎಷ್ಟೋ ಸಲ ಎಳೆ ಹುಡಗನೇನೋ ಅಂದನ್ನಿಸಿದ್ದಿದೆ. ನಂಗೂ ಇವತ್ತು ವಾದ ಮಾಡೊ ಮೂಡ್ ಬಂದಿದೆ. ಅದಕ್ಕಾಗಿ;

-Fashion TV , ಈ ಚಾನೆಲ್ ಯಾಕೆ ಇರೋದು ಅಂತ ಯಾರದರೂ ಫ್ಯಾಷನ್ ಡಿಸೈನರ್ ಹತ್ರ ಕೇಳಿ ನೋಡಿ. ಆ ಪ್ರೊಫೆಷನ್ ನಮಗೆ ಅರ್ಥವಾಗದಿದ್ರೆ ಸುಮ್ಮನಿರಬೇಕು. ramp ಇರೋದು ಕೇವಲ ದೇಹ ತೋರಿಸೊಕ್ಕಲ್ಲ. ಮಾಡೆಲ್ ಹಾಕುವ ಬಟ್ಟೆಯ ಮೇಲೆ ಆ ವರ್ಷದ / ಮುಂದಿನ ವರ್ಷದ ಟ್ರೆಂಡ್ ನಿರ್ಧಾರವಾಗುತ್ತೆ. ಅದನ್ನು inspiration ಆಗಿ ಇಟ್ಟು ಕೊನ್ಡು ಬೇರೆ ಡಿಸೈನ್ ಮಾಡುತ್ತಾರೆ. ಅಲ್ಲಿ ಉಪಯೋಗಿಸಿದ ಬಟ್ಟೆ, ಅದರ ನೇಯ್ಗೆ, ಬಣ್ಣ, ಹೋಲಿಗೆ,accessories…….. ಎಲ್ಲವನ್ನೂ ಗಮನಿಸಲಾಗುತ್ತೆ. garments industry, fashion industry ಬಗ್ಗೆ ಗೊತ್ತಿಲ್ಲದ ಜನ ಆ ಚಾನೆಲ್ ಬಗ್ಗೆ ಮೂಗು ಮುರಿಯುವುದು ಸಹಜವೇ.

-ಇನ್ನೂ ಇಂಗ್ಲೀಶ್ ಸಿನೆಮಾ, ನಾನು ನೋಡಿದ ಸಿನೆಮಾ ಪಾತ್ರಗಳಿಗೆ ಫ್ಯಾಮಿಲಿ ಅನ್ನೋದು ತುಂಬಾ ಮಹತ್ತರ ಸಂಗತಿ. ಜವಾಬ್ದಾರಿ, ಕರ್ತವ್ಯ ಇದರ ಬಗ್ಗೆಯೋ ತುಂಬಾ ಮಹತ್ವ ಕೊಡಲಾಗುತ್ತೆ ಎಂದು ತಿಳಿದಿದ್ದೇನೆ. ನನಗೆ ಯಾವತ್ತೂ ಅದೊಂದು ಕೆಟ್ಟ ಸಂಸ್ಕ್ರತಿ ಎಂದು ಅನ್ನಿಸಲೇ ಇಲ್ಲ. ಅಲ್ಲೂ individuality ಇದೆ, loyalty ಇದೆ.

ಏನೋಪಾ……
-ಮೊನ್ನೆ ಟೀವಿಲಿ ತೋರಿಸ್ತಾ ಇದ್ರು, ಅನಿಲ್ ಕಪೂರ್ ತಮಗೆ ಬಂದ ಹಣವನ್ನು ಸ್ಲಮ್ ಮಕ್ಕಳ ಸಲುವಾಗಿ ಕೆಲಸ ಮಾಡುವ ಸಂಸ್ಥೆಗೆ ಕೊಟ್ಟದ್ದು.

-ಇನ್ನೂ ಪಿಚ್ಚರ್ ಬಗ್ಗೆ ಏನೂ ಹೇಳಲ್ಲ. ನಾನು ನೋಡಿಲ್ಲ. ಪ್ರಶಸ್ತಿ ಬರೋ ಮೊದಲು ಅದರ ಕತೆ ಓದಿದ್ದೆ. ಆ ಕರೋರ್ ಪತಿ ಮಾದರಿ ಕತೆ ನೋಡಬೇಕು ಅನ್ನಿಸಲಿಲ್ಲ. ಈಗ ಪ್ರಶಸ್ತಿ ಬಂದ ಮೇಲೂ ನೋಡಬೇಕು ಅನ್ನಿಸ್ತಿಲ್ಲ. ನೋಡೊಕೆ ಇರುವ ಫಿಲ್ಮ್ ಲೀಸ್ಟ್ ಇನ್ನೂ ಮುಗಿದಿಲ್ಲ. ಮುನ್ದೊಂದು ದಿನ ನೋಡ್ತಿನಿ. ಆದ್ರೆ ಯಾರಾದ್ರೂ ಆಸ್ಕರ್ ಗೆ ಬಯ್ದ್ರೆ ಮಾತ್ರ ನಂಗೆ ಕೋಪ ಬರುತ್ತೆ. ನಮಗೆ ಕ್ರಿಕೆಟ್ಗೆ ವರ್ಲ್ಡ್ ಕಪ್ ಬೇಕು, ಆಟಗಳಿಗೆ ಓಲಂಪಿಕ್ಸ್ ಬೇಕು, ಆದ್ರೆ ಫಿಲ್ಮ್‌ಗಳಿಗೆ ಇರೋ ಪ್ರಶಸ್ತಿ ಮಾತ್ರ ಬೇಡ.

– ಸ್ಲಮ್ ತೋರಿಸಿದ್ದೆ ಮಾಹಾಪರಾಧ ಅಂತ ಓದಿ ಓದಿ ಬೇಜಾರು ಬಂದು ಬಿಟ್ಟಿದೆ. ನಾನು ನೋಡಿದ ಹೊರ ದೇಶದ ಚಿತ್ರಗಳಲ್ಲಿ ಬಡತನ ಇತ್ತು. ಕೊಳಕು ಅಪಾರ್ಟ್ ಮೆನ್ಟ್ ಗಳು ಇದ್ವು, ಮೂರುಕು ಮನೆಗಳು ಇದ್ವು. ಅವನ್ನು ನೋಡಿ ನಾನು ಯಾವತ್ತೂ ಆ ದೇಶಗಳಲ್ಲಿ ಇರೋದು ಬಡತನ ಮಾತ್ರ ಅಂತ ತೀರ್ಮಾನ ಮಾಡೇ ಇಲ್ಲ. ಕತೆಗೆ ಪೂರಕ ಆಗಿರೋ ಲೋಕೇಶನ್ ಗಳಿದ್ದವು. ನಿಜವಾಗ್ಲೂ ಇಲ್ಲಿ ನಮ್ಮ ಸ್ಲಮ್ ಗಳನ್ನು ಅಷ್ಟು ಕೆಟ್ಟದಾಗಿ ತೋರಿಸಿದ್ದಾರ?

-neelanjala

+++

ನಿಮ್ಮ ಕಲ್ಪನೆಯ ಸಂದರ್ಶನ ಚೆನ್ನಾಗಿದೆ. ಇಷ್ಟವಾಯಿತು. ಮೇ ಪ್ಲವರ್ ನಲ್ಲಿ ನಡೆದ ಸ್ಲಂ ಡಾಗ್ ಮಿಲಿನಿಯೇರ್ ಚಿತ್ರ ಸಂವಾದದಲ್ಲಿ ಪಾಲ್ಗೊಂಡಿದ್ದೆ. ಆದರೆ, ತುಟಿ ಬಿಚ್ಚಲಿಲ್ಲ. ನೀವೆಲ್ಲಾ ಏನಲ್ಲಾ ಅಭಿಪ್ರಾಯ ಹೊರ ಹಾಕತ್ತೀರಿ ಎಂದು ಗಮನಿಸುತ್ತಿದೆ. ನಿಮ್ಮ ಸುಂದರ ಭಾರತ ಕಲ್ಪನೆ ಬಗ್ಗೆ ನನ್ನ ಕೆಲ ತಕರಾರುಗಳು ಇವೆ.

ಶಂಕರಚಾರ್ಯರು ಸೌಂದರ್ಯ ಮೀಮಾಂಸೆಯಲ್ಲಿ ಬದುಕು ಮಾಯ ಎನ್ನುವಾಗೆ ನಿಮ್ಮ ಕಲ್ಪನೆಯೂ ಇದೆ. ಸುಂದರ ಕಲ್ಪನೆಯೇ ಮಿಥ್ಯ ಎಂದು ನನ್ನಗೆ ಅನ್ನಿಸುತ್ತದೆ. ಇಲ್ಲಿನ ಬಡತನ, ಜಾತೀಯತೆ, ಭ್ರಷ್ಟಾಚಾರ, ಇವೆಲ್ಲ ನೀವು ಪ್ರತಿಪಾದಿಸುವ ಸುಂದರ ಭಾರತವೇ ?. ಇವೆಲ್ಲಾ ವಾಸ್ತವಾಗಿರುವುದರಿಂದಲೇ ಇಂತಹ ಸಿನೆಮಾಗಳು, ಕಥೆಗಳು ಬರಲು ಸಾಧ್ಯ ಎಂದು ನನ್ನ ತಿಳುವಳಿಕೆ.

ನಾನು ಸಿನೆಮಾ ನೋಡಿದ್ದೀನಿ. ಇತ್ತೀಚಿಗೆ ಗುರುಗಳಾದ ಪರಮೇಶ್ವರ ಅವರು ಒಂದು ಮಾತು ಹೇಳಿದ್ದರು. ಕೆಲ ಸಿನೆಮಾಗಳು ಮೊಂಡು ಚಾಕುನಿಂದ ಕೊ ಯ್ಯುದ್ದಿರುವಾಗೆ ಮಾಡ್ತಾರೆ ಅಂತ. ಅವರದ್ದೆ ಮಾತು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತೇನೆ. ಆದರೆ, ಸ್ಲಂ ಡಾಗ್ ಸಿನಮಾ ನನಗೆ ಹಾಗೆ ಅನ್ನಿಸಲಿಲ್ಲ. ಅದೊಂದು ಹರಿತವಾದ ಚಾಕು ಎಂದೆನ್ನಿಸಿತು. ವರ್ತಮಾನದ ಬಗ್ಗೆ ಅರಿವು ಇಲ್ಲದಿದ್ದರೆ, ಇತಿಹಾಸ ಅರ್ಥವಾಗುವುದಿಲ್ಲ. ಇತಿಹಾಸ ಗೊತ್ತಿಲ್ಲದಿದ್ದರೆ ಇತಿಹಾಸ ಸೃಷ್ಟಿಸಲು ಸಾಧ್ಯವಾಗೋದಿಲ್ಲ.
– ಸಂಬುದ್ಧ

+++

ಪರಮೇಶ್ವರ ಗುರುಸ್ವಾಮಿಯವರೇ

ನಾನು ’ಸ್ಲಂ ಡಾಗ್ ’ ಸಿನೆಮಾದ ಬಗ್ಗೆ ಗಂಭೀರವಾಗಿ ಬರೆಯಬಹುದಿತ್ತು ಆದ್ರೆ ನಿಮ್ಮೊಂದಿಗೆ ಸಂವಾದದ ನಂತರ ಹಾಸ್ಯದ ಧಾಟಿಯಲ್ಲೇ ಬರೆಯೋಣ ಅನ್ನಿಸಿತು.
ನೀವು ನಿಮ್ಮ ಅಭಿಪ್ರಾಯಗಳನ್ನು ನವಿರಾದ ಹಾಸ್ಯದೊಂದಿಗೆ ಹೇಳಿದ್ದು ನಂಗೆ ತುಂಬಾ ಇಷ್ಟ ಆಯ್ತು.ಬಹುಷಃ ನಾನು ಇನ್ನು ಮುಂದೆ ಸಿನೆಮಾ ನೋಡುವ ದೃಷ್ಟಿ ಸ್ವಲ್ಪ ಮಟ್ಟಿಗೆ ಬದಲಾಗಬಹುದೇನೋ ನಿಮ್ಮ ಸಂಪರ್ಕಕ್ಕೆ ಬಂದಿದ್ದರಿಂದ.

ನಾನು ಶಿವಸೇನೆ ಅಥವ ಇನ್ಯಾವುದೇ ಸಂಘಟನೆಯ ರೀತಿಯಲ್ಲಿ ಸ್ಲಂ ಡಾಗ್ ಅನ್ನು ವಿರೋಧಿಸುವುದಿಲ್ಲ .ನಂಗೆ ಡ್ಯಾನಿಯ ಬಗ್ಗೆ ,ಸಿನೆಮಾ ನಿರ್ದೇಶಕರ ಬಗ್ಗೆ ಅಪಾರವಾದ ಗೌರವ ಒಲುಮೆ ಇದೆ.ನಮ್ಮೆಲ್ಲರ ದಿನ ನಿತ್ಯದ ಜಂಜಡಗಳಿಂದ ಸ್ವಲ್ಪ ಮಟ್ಟಿಗಾದ್ರೂ ನೆಮ್ಮದಿ,ರಿಲೀಫ್ ನೀಡುವುದು ಸಿನೆಮಾಗಳು.

ನನ್ನ ಪ್ಯಾಂಟ್ ಹರಿದಿದ್ದು ಅದನ್ನು ನಾಲ್ಕು ಜನ ನೋಡ್ತಾರೆ (ಮತ್ತೆ ಆ ಪ್ಯಾಂಟನ್ನು ನಾನು ಹೊಲಿಯಲು ಸಾಧ್ಯ ಇಲ್ಲ!) ಅನ್ನೋ ಸಂಕೋಚವಷ್ಟೇ ನನಗೆ ಇದ್ದಿದ್ದು.ಇದನ್ನು ದೇಶಪ್ರೇಮ ಅಂತ ನಾನು ಅಂದುಕೊಂಡಿಲ್ಲ.

ಕಾರ್ಯಕ್ರಮದ ಕಡೆಯವರೆಗೂ ನೀವು ತುಂಬಾ ಬ್ಯಾಲೆನ್ಸ್ ಆಗಿ ಮಾತಾಡಿದ್ರಿ ಅದು ನಂಗೆ ತುಂಬಾನೇ ಇಷ್ಟ ಆಯ್ತು.

ಮದುವೆ .ಮುಂಜಿ ಮುಂತಾದ ಕಾರ್ಯಕ್ರಮಕ್ಕೆ ಹೋಗ್ಬೇಕಾದ್ರೆ ಹೆಂಗಸರು(ಗಂಡಸರೂ!) ತಮ್ಮ ಬಿಳಿ ಕೂದಲನ್ನು ಡೈ ಮಾಡಿ ಕಪ್ಪಾಗಿಸಿ ಹೋಗ್ತಾರೆ ಯಾರೂ ಕೂದಲಾಗಿರೋದು ನೈಜತೆ ಅದು ರಿಯಾಲಿಟಿ ಅಂತ ಹಾಗೆ ಹೋಗಲ್ಲ.ಆದ್ರೆ ಭಾರತದ ನೈಜತೆ ತೋರಿಸಿದ್ರೆ ಇವರಿಗೆಲ್ಲ ಖುಷಿಯಾಗುತ್ತೆ. ಭಾರತಕ್ಕೂ ಕೃತಕವಾದ ಬಣ್ಣ ಹಾಕಿ ತೋರಿಸೋಣ ಅನ್ನೋ ನನ್ನ ಆಸೆಗೆ ಯಾರೂ ಸಪೋರ್ಟ್ ಮಾಡಲ್ಲ.

ಈ ಬಗ್ಗೆ ನಂಗೆ ಬೇಸರವಿಲ್ಲ.ಭಾರತಕ್ಕೆ ಬಣ್ಣ ಕೊಡುವ ಪ್ರಕ್ರಿಯೆಯಲ್ಲಿ ನಾನು ಖಂಡಿತ ಭಾಗಿ ಆಗ್ತೀನಿ.

ನೀಲಾಂಜಲರವರೇ,

ನೀವು ಹಾಗೂ ’ಇನ್ನೊಬ್ಬರು’ ಯಾವತ್ತೂ ನನ್ನನ್ನು ಮತ್ತು ನನ್ನ ಮಾತುಗಳನ್ನು ಎಳಸು ಅಂತಲೇ ಭಾವಿಸಿರೋದ್ರಿಂದ ನನ್ನ ಯಾವುದೇ ಮಾತುಗಳು ನಿಮಗೆ ಸರಿ ಅನ್ನಿಸೋದು ನಂಗೆ ಸಂಶಯ ಹಾಗಾಗಿ ನಾನು ಚರ್ಚೆಯ ಮೂಡ್ ನಲ್ಲಿಲ್ಲ!

ಆದ್ರೆ ಒಂದೇ ಮಾತು ಫ್ಯಾಶನ್ ಲೋಕದ ಬಗ್ಗೆ ಗೊತ್ತಿರದಿದ್ರೆ ಮಾತಾಡಬಾರದು ಅಂತ ನಂಗೆ ತಾಕೀತು ಮಾಡಿದ್ರಿ ನೀವು.ಆದ್ರೆ ನೀವೇ ಆ ಬಗ್ಗೆ ಒಂದು ದೊಡ್ಡ ಪ್ಯಾರಾ ಬರೆದ್ರಿ .ಹೀಗಾಗಿ ನಿಮಗೆ ಫ್ಯಾಶನ್ ಲೋಕದ ಬಗ್ಗೆ ತುಂಬಾ ಅರಿವಿದೆ ಅಂದುಕೊಳ್ಳೋಣವೇ?
ಸುಬುದ್ಧ,

ಹಿಂದೆ ಇದ್ದ -ಈಗ ಇರುವ -ನಾಳೆ ಇರುವ ಎಂದೆಂದೂ ಇರುವ ಭಾರತ ನನಗೆ ಸುಂದರವಾದ ಭಾರತವೇ .ನಾನು ಪಾಕಿಸ್ತಾನದಲ್ಲಿ ಹುಟ್ಟಿದ್ರೆ ನಾನು ಕಸಬ್ ನನನ್ನು ಸಪೋರ್ಟ್ ಮಾಡ್ತಾ ಇದ್ದೆ .

ಅದರ ಅರ್ಥ ಇಷ್ಟೆ ಭಾರತ ಹೇಗೆ ಇದ್ರೂ ,ಭಾರತದಲ್ಲಿ ಎಷ್ಟೆ ಬಡತನ ಇದ್ರೂ ,ಎಷ್ಟೆ ಸ್ಲಂ ಗಳಿದ್ರೂ ,ಎಷ್ಟೆ ಭ್ರಷ್ಟಾಚಾರಗಳಿದ್ರೂ ಭಾರತ ನನಗೆ ಸುಂದರವೇ .
ಬಡತನವೇ ಇಲ್ಲದ,ಭ್ರಷ್ಟಾಚಾರವೇ ಇಲ್ಲದ ,ಕೆಟ್ಟ ಅಂಶಗಳೇ ಇಲ್ಲದ ದೇಶ ಯಾವುದಾದ್ರೂ ಇದ್ರೆ ಹೇಳಿ ನಾನು ಅಲ್ಲಿಗೆ ಹೊಗುವ ತಯಾರಿ ನಡೆಸ್ತೀನಿ..

-ಸಂದೀಪ್ ಕಾಮತ್

+++

ಸಂದೀಪ್,

ಇನ್ನೊಂದು ದೊಡ್ಡ ಪ್ಯಾರಾ ;)
“ತುಂಬಾ ಅರಿವು” ಅಂತ ಏನಿಲ್ಲ. ನನ್ನ ದೊಡ್ಡಮ್ಮನ ಮಗಳು ಫ್ಯಾಷನ್ ಡಿಸೈನರ್. ಅವಳ ಒಡನಾಟದಿಂದ ಅವಳ ಫಿಲ್ಡ್ ಬಗ್ಗೆ ಸ್ವಲ್ಪ ಜಾಸ್ತಿ ಗೊತ್ತು.

ಮೇಲೆ ಹೇಳಿದ್ದೆಲ್ಲ ಅವಳಿಂದ ಕಲಿತದ್ದೇ. ಬಟ್ಟೆಯ ನೆಯ್ಗೆಯ ಆಧಾರದ ಮೇಲೆ quality n prize ಡಿಸೈಡ್ ಆಗೋದು, ಏಷ್ಟೋನ್ದು ಬಗೆಯ fabrics, stitching, cuttings, patterns, washes…… ಎಲ್ಲ ಅವಳಿಂದಲೇ ಗೊತ್ತಾಗಿದ್ದು. ಗುಂಡಿಗಳು ಎಷ್ಟು ತರಹ ಇರುತ್ತೆ ಗೊತ್ತಾ!

ಬೆಂಗಳೂರಲ್ಲಿ ಆಗೋ fab india expo ನೋಡಿ ಬರಬೇಕು. ಚಿಕ್ಕ ಜಲಕ್ ಸಿಗುತ್ತೆ. amazing field. ನಾ ಹಾಕೋ ಬಟ್ಟೆಯಲ್ಲಿ ಇಷ್ಟೊಂದು ಕೆಲಸ ಇರುತ್ತೆ ಅಂತ ನಂಗೆ ಗೊತ್ತಿರಲಿಲ್ಲ D

ನೀಲಾಂಜಲ

‍ಲೇಖಕರು avadhi

January 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇಂದು 'ಥಟ್ ಅಂತ ಹೇಳಿ' ಯಲ್ಲಿ ತುಂಗಾ

ಇಂದು ರಾತ್ರಿ  ೧೦-೩೦ ಕ್ಕೆ ಪ್ರಸಾರವಾಗುವ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ತುಂಗಾ ವಿಮರ್ಶೆ ಇದೆ. ಮೇಫ್ಲವರ್ ಪ್ರಕಟಿಸಿರುವ ವಿ ಗಾಯತ್ರಿ...

4 ಪ್ರತಿಕ್ರಿಯೆಗಳು

 1. ಸಂದೀಪ್ ಕಾಮತ್

  ನೀಲಾಂಜಲ,
  ನೀವು ನಿಮ್ಮ ದೊಡ್ಡಮ್ಮನ ಮಗಳಿಂದ ಫ್ಯಾಶನ್ ಲೋಕದ ಬಗ್ಗೆ ಅರಿತದ್ದು ತುಂಬಾ ಒಳ್ಳೆಯ ಸಂಗತಿ.
  ಖಂಡಿತ ನನಗೆ ಫ್ಯಾಶನ್ TV(FTV) ಯ ಫ್ಯಾಶನ್ ಗಳು ಅರ್ಥ ಆಗಲ್ಲ.ಅದಕ್ಕೇ ನಾನು ಅದನ್ನು ಅರ್ಧ ರಾತ್ರಿಯ ನಂತರವೇ ನೋಡೋದು ಆ ಹೊತ್ತಿನಲ್ಲಿ ಬಟ್ಟೆಗಳು ತೀರಾ ಕಮ್ಮಿ ಇರೋದ್ರಿಂದ ಅದನ್ನು ಬಹಳಷ್ಟು ಸರಳವಾಗಿ ಅರ್ಥೈಸಲು ನಂಗೆ ಸಹಕಾರಿಯಾಗಿದೆ.ಇನ್ನೂ ಚೆನ್ನಾಗಿ ಅರ್ಥೈಸಲು ಆಗಬಹುದೇನೋ ಅಂತ ಒಂದು ದಿನ ಬೆಳಿಗ್ಗೆ ಮೂರು ಘಂಟೆಯ ತನಕ ಕೂತಿದ್ದೂ ಇದೆ ಆದ್ರೆ ಇನ್ನೂ ಸರಳಗೊಳಿಸಲು ಸುಶ್ಮಾ ಸ್ವರಾಜ್ ರ ನಿರ್ಬಂಧನೆಯಿದೆಯಂತೆ!
  ಅವಧಿ,
  ನಿಜವಾಗಿಯೂ ನಂಗೆ ಸ್ಲಂ ಡಾಗ್ ಬಗ್ಗೆ ಚರ್ಚೆ ಮಾಡಲಿ ಇಷ್ಟವೇ ಇರಲಿಲ್ಲ.ಯಾಕಂದ್ರೆ ಎಲ್ಲರೂ ಆ ಸಿನೆಮಾವನ್ನು ’ಎಂಜಾಯ್’ ಮಾಡಿದ ಹಾಗೆ ನಂಗೂ ಎಂಜಾಯ್ ಮಾಡೋ ಆಸೆ ಇದೆ.
  ಆದ್ರೆ ಬ್ಲೂ ಫಿಲಂ ನೋಡೊ ತಂದೆಯೊಬ್ಬ, ಈ ಫಿಲಮ್ ಅನ್ನು ನನ್ನ ಮಗ ನೋಡಿ ಬಿಟ್ರೆ ಏನ್ ಗತಿ ಅನ್ನೋ ಭಯ,ಸಂಕೋಚದಿಂದ ಸಿ.ಡಿಯನ್ನು ಭದ್ರವಾಗಿ ಬಚ್ಚಿಡುತ್ತಾನಲ್ಲ ಅದೇ ರೀತಿ ’ಸ್ಲಂ ಡಾಗ್ ’ಅನ್ನೋ ’ಭಾರತದ ನೈಜ ಪರಿಸ್ಥಿತಿ’ಯನ್ನು ಬಿಂಬಿಸುವ ಸಿನೆಮಾ ನೋಡಿ ಪರದೇಶದವರು (ನಮ್ಮ ದೇಶದವ್ರು ಎಷ್ಟೆ ನೋಡ್ಲಿ ನಂಗೆ ಬೇಜಾರಿಲ್ಲ ಇಂ!ಥ ಹತ್ತು ಧಾರಾವಿಗಳನ್ನು ನೋಡಿಯೂ ಇಂಟರ್ವಲ್ ನಲ್ಲಿ ನೆಮ್ಮದಿಯಾಗಿ ಸಮೋಸ ತಿನ್ನುವವರು ನಾವು!) ನೋಡಿ ಏನ್ ಅಂದುಕೋತಾರೋ ಅನ್ನೋ ಒಂದು ಅನಾವಶ್ಯಕ ’ಎಳಸು’ ಆತಂಕ ನನ್ನದಾಗಿತ್ತು ಅಷ್ಟೇ.
  ಹೊರದೇಶದವರ ರೆಸ್ಪಾನ್ಸ್ ಈ ಸಿನೆಮಾಗೆ ಹೇಗಿರುತ್ತೆ ಎಂಬ ಕುತೂಹಲದಿಂದ ಗೂಗಲ್ ಸರ್ಚ್ ಮಾಡಿದ್ರೆ ಬಾರ್ಬರಾ ಅನ್ನೋರ ಕಮೆಂಟ್ ನೋಡಿದೆ.
  “ಪ್ರೀತಿಯ ಡ್ಯಾನಿ,
  ನಿನ್ನೆ ನಾವು ನಿನ್ನ ಸಿನೆಮಾ ನೋಡಿದೆವು.ಅದ್ಭುತವಾಗಿತ್ತು.ಸಿನೆಮಾ ಮುಗಿದ ಮೇಲೆ ಡಿನ್ನರ್ ಗಾಗಿ ಹೋಟೇಲಿಗೆ ಹೋದ್ವಿ.ಆದ್ರೆ ಊಟ ಮಾಡ್ತಾ ಇದ್ದ ಹಾಗೆ ಆ ಸ್ಲಂ ಮಕ್ಕಳ ಮುಖ ನೆನಪಾಯ್ತು.ನಾವೇನೋ ತುಂಬಾ ಶ್ರೀಮಂತರು ಇಂಥ ಹೋಟೇಲಲ್ಲಿ ಡಿನ್ನರ್ ಮಾಡ್ತೀವಿ,ಆದ್ರೆ ಆ ಕಂದಮ್ಮಗಳು ಊಟವಿಲ್ಲದೇ ಆ ಸ್ಲಂ ನಲ್ಲಿ ದಿನ ಕಳೀತಾರಲ್ವ ಅನ್ನೋ ನಿರಾಸೆ ಉಂಟಾಗ್ತಾ ಇದೆ.ನಾವು ಆ ಸ್ಲಂ ಮಕ್ಕಳಿಗೆ ಏನಾದ್ರೂ ಮಾಡಬೇಕಲ್ಲ?
  -ಬಾರ್ಬರಾ”
  ಬಾರ್ಬರಾಳ ಉದ್ದೇಶ ಉದಾತ್ತವಾದದ್ದು .ಬಹುಷ ಇಂಥ ಉದ್ದೇಶಗಳು ಸರಿಯಾಗಿ ಕಾರ್ಯನಿರತವಾದ್ರೆ ನಾನೂ ಡ್ಯಾನಿಯ ಕಾಲಿಗೆ ಬೀಳಬಹುದೇನೋ.
  ಆದ್ರೆ ಹೀಗಾಗುತ್ತಾ?
  ನಾಳೆ ಇದೇ ಸ್ಲಂ ಮಕ್ಕಳ ಅಭಿವೃದ್ಧಿಯ ಹೆಸರಲ್ಲಿ ನೂರಾರು ಸಂಸ್ಥೆಗಳು ಹುಟ್ಟಿಕೊಳ್ತಾವೆ.ಹೊರದೇಶದವರಿಗೆಲ್ಲ ಒಂದು ’ಸ್ಲಂ ಡಾಗ್ ಮಿಲೆನಿಯರ್ ’ನ ಡಿ ವಿ ಡಿ ಕೊಟ್ಟು ಈ ಅಕೌಂಟ್ ಗೆ ನಿಮ್ಮ ಡೊನೇಶನ್ ಕಳಿಸಿ ಅಂತ ಹೇಳ್ತಾನೇ ಹಲವರು ಕಾಸು ಮಾಡ್ಕೋತಾರೆ .ಹಾಗೆ ಮಾಡಿದ ಕಾಸಿನಲ್ಲಿ ತಮ್ಮ ಅಪಾರ್ಟ್ಮೆಂಟ್ ಕಟ್ಟಿ ಅದಕ್ಕೆ ’ಸ್ಲಂ ಡಾಗ್ ನಿಲಯ’ ಅಂತ ಹೆಸರಿಟ್ಟುಕೊಳ್ತಾರೆ.
  ಆದ್ರೆ ಆ ದಾರಾವಿಯ ಸ್ಲಂ ಮಾತ್ರ ಇನ್ನಷ್ಟು ಜಮಾಲ್ ಗಳನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತೆ.ಆದ್ರೆ ಆ ’ರಿಯಲ್ ಜಮಾಲ್’ ಮಾತ್ರ ಮಿಲೆನಿಯರ್ ಆಗೋದೇ ಇಲ್ಲ !

  ಕವಿ ಇಕ್ಬಾಲ್ ’ಸಾರೇ ಜಹಾಂ ಸೇ ಅಚ್ಚಾ ಹಿಂದೂಸಿತಾ ಹಮಾರ ’ ಅಂತ ಬರೆದಾಗಲೂ ಭಾರತದಲ್ಲಿ ದಾರಿದ್ರ್ಯ ಇತ್ತು.ಆದ್ರೆ ಆ ಕವಿ ಸುಳ್ಳೆ ಸುಳ್ಳು ಬರೆದ.
  ’ಸಾರೇ ಏಶಿಯಾ ಮೇಂ ದೇಖೋ ಧಾರಾವಿ ಸ್ಲಂ ಬಡಾ ಹಮಾರ ’ ಅಂತ ಬರೀಲಿಲ್ಲ. ಕವಿ ಇಕ್ಬಾಲ್ ರಂಥ ಸುಂದರ ಭಾರತದ ಕಲ್ಪನೆಯಷ್ಟೆ ನನ್ನದು .ಅದಕ್ಕಿಂತ ದರಿದ್ರ ಸತ್ಯವಿದ್ರೆ ನನ್ನನ್ನೂ ಕವಿ ಇಕ್ಬಾಲ್ ರ ಹಾಗೆ ಸುಳ್ಳು ಜಗತ್ತಿನಲ್ಲಿ ಬದುಕಲು ಬಿಡಿ.
  ಓಹ್ ತುಂಬಾನೆ ನೆಗೆಟಿವ್ ಥಿಂಕರ್ ಹಾಗೂ ಸ್ಯಾಡಿಸ್ಟ್ ಅಲ್ವಾ ನಾನು.
  May be……. I am just like that 🙂

  ಪ್ರತಿಕ್ರಿಯೆ
 2. Pramod

  ಈ ಅವಧಿನೂ ಟಿವಿ ಚಾನೆಲ್ ಗಳ ತರ ಆಗಿದ್ಯಲ್ಲ ಇತ್ತೀಚೆಗೆ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: