ನನ್ನ ಬಾಳಸಂಗಾತಿ ವಿಭಾ ನೆನಪಿನಲ್ಲಿ..

ಗೆಳೆಯರೆ ನನ್ನ ಬಾಳಸಂಗಾತಿ ವಿಭಾ ನೆನಪಿನಲ್ಲಿ ನಮ್ಮ ಲಡಾಯಿ ಪ್ರಕಾಶನವು ವರ್ಷವೂ ಹಸ್ತಪ್ರತಿರೂಪದಲ್ಲಿ ಇರುವ ಅತ್ಯುತ್ತಮ ಕಾವ್ಯ ಕೃತಿಗೆ ವಿಭಾ ಸಾಹಿತ್ಯ ಪ್ರಶಸ್ತಿ ನೀಡಿ ಆ ಕೃತಿಯನ್ನು ಪ್ರಕಟಿಸುವ ಕಾರ್ಯವನ್ನು ಮಾಡುತ್ತ ಬಂದಿದೆ. ಈ ಪ್ರಶಸ್ತಿಯು ೫೦೦೦ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ೨೦೧೧ ಅ ಸಾಲಿನ ಪ್ರಶಸ್ತಿಯನ್ನು ಡಾ ಎಸ್ ಜಿ ಸಿದ್ಧರಾಮಯ್ಯ ಮತ್ತು ಡಾ ಎಂ ಎಸ್ ಆಶಾದೇವಿ ಅವರ ನಿರ್ಣಾಯಕತ್ವದಲ್ಲಿ ಭರವಸೆಯ ಕವಿ ಚನ್ನಪ್ಪ ಅಂಗಡಿಯವರ ಭೂಮಿ ತಿರುಗುವ ಶಬ್ಧ ಕವನ ಸಂಕಲನಕ್ಕೆ ದೊರೆತಿದೆ ಈ ಪ್ರಶಸ್ತಿ ವಿತರಣಾ ಸಮಾರಂಭವು ಎಪ್ರಿಲ್ ೧ ರಂದು ರವಿವಾರ ಸಂಜೆ ೬ ಗಂಟೆಗೆ ಧಾರವಾಡದ ವಿದ್ಯಾವರ್ದಕ ಸಂಘದಲ್ಲಿ ನಡೆಯಲಿದೆ ವಿಮರ್ಶಕ ಡಾ ಎಚ್ ಎಸ್ ರಾಘವೇಂದ್ರರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಪ್ರಶಸ್ತಿ ಪಡೆದ ಕೃತಿಯನ್ನು ಡಾ ಎಸ್ ಜಿ ಸಿದ್ದರಾಮಯ್ಯ ಬಿಡುಗಡೆ ಮಾಡುವರು. ಕವಯತ್ರಿ ಸವಿತಾ ನಾಗಭೂಷಣ ಅಧ್ಯಕ್ಷತೆ ವಹಿಸುವರು ಡಾ ಎಂ ಡಿ ಒಕ್ಕುಂದ ಪ್ರಾಸ್ತಾವಿಕ ಮಾತು ಆಡುವರು ಡಾ ಎಚ್ ಎಸ್ ಅನುಪಮಾ ನಿರೂಪಿಸಲಿದ್ದಾರೆ. ಇದಕ್ಕೂ ಮೊದಲು ೩.೩೦ ಗಂಟೆಗೆ ಇತ್ತೀಚೆಗೆ ಭರವಸೆ ಹುಟ್ಟಿಸುವ ರೀತಿಯಲ್ಲಿ ಬರೆಯುವ ಯುವ ಕವಿಗಳು ಭಾಗವಹಿಸುವ ಕವಿಗೊಷ್ಟಿ ನಡೆಯಲಿದೆ ಡಾ ಲೋಕೇಶ ಅಗಸನಕಟ್ಟೆ ಅವರು ಚಾಲನೆ ನೀಡುವ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಬಿ ಪೀರ್‌ಭಾಷಾ ವಹಿಸುವರು. ಡಾ ವಿನಯಾ , ಅರುಣ ಜೋಳದಕೂಡ್ಲಗಿ, ಡಾ ಬಸು ಬೇವಿನಗಿಡದ , ಎಂ ಡಿ ಒಕ್ಕುಂದ , ಬಸವರಾಜ ಹೂಗಾರ , ಡಾ ಅನಸೂಯ ಕಾಂಬಳೆ, ವಿ ಹರಿನಾಥ್ ಬಾಬು, ವೀರಣ್ನ ಮಡಿವಾಳರ, ಕಾವ್ಯಶ್ರೀ, ಚನ್ನಪ್ಪ ಅಂಗಡಿ, ಸುನಂದಾ ಕಡಮೆ, ಸುಧಾ ಚಿದಾನಂದಗೌಡ, ಶ್ರೀದೇವಿ ಕೆರೆಮನೆ , ಗಣೇಶ ಹೊಸ್ಮನೆ, ವಿಜಯಕಾಂತ ಪಾಟೀಲ, ಶೌಕತ್‌ಅಲಿ ಮೇಗಿಲಮನಿ, ಬಸವರಾಜ ಹೃತ್ಸಾಕ್ಷಿ, ಸೈಪ್ ಜಾನ್ಸೆ ಕೊಟ್ಟೂರ್, ಬಸವರಾಜ ಹಳ್ಳಿ, ಶರೀಫ್ ಹಸಮಕಲ್, ಚೈತ್ರಾ ಬೇವಿನಗಿಡದ, ಸ್ಮಿತಾ ಮಾಕಳ್ಳಿ , ಸೀಮಾ ಸಮತಳ, ವಿಠಲ್ ದಳವಾಯಿ, ನಾಗೇಶ ನಾಯಕ, ಲತೀಶ್, ಕೃಷ್ಣಮೂರ್ತಿ, ನಾಗರಾಜ ಬಣಕಾರ ಕವಿತಾ ವಾಚನ ಮಾಡುವರು … ಕಾವ್ಯ ಪಿ ಕೆ ಕವಿಗೊಷ್ಟಿಯ ನಿರ್ಹಹಣೆ ಮಾಡುವರು.. ನೀವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಇದು ನನ್ನ ವೈಯಕ್ತಿಕ ಕರೆ ಬನ್ನಿ ಬಸೂ ಸೂಳಿಭಾವಿ  ]]>

‍ಲೇಖಕರು G

April 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This