ನಾನು ಮತ್ತು ಗೀತಾ ಮೊನ್ನೆ 2012ರ ಮೇ 13ರಂದು ನನ್ನ ಹುಟ್ಟೂರಾದ ಕಡೇನಂದಿಹಳ್ಳಿಯಲ್ಲಿ ಬಂಧುಗಳ, ಮಿತ್ರರ ಸಮ್ಮುಖದಲ್ಲಿ ಪುರೋಹಿತಶಾಹಿ ಆಚರಣೆಗಳನ್ನು ಆದಷ್ಟು ಕಡಿಮೆ ಮಾಡಿ ಮದುವೆಯಾದೆವು. ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಗೌರಿ ಲಂಕೇಶ್, ಶಿವಸುಂದರ್, ಪ್ರೊ.ವಿ.ಎಸ್.ಶ್ರೀಧರ್, ಪಾರ್ವತೀಶ, ಅಣ್ಣ ರಾಜೇಂದ್ರ ಬುರಡಿಕಟ್ಟಿ ಮುಂತಾದವರು ಸರಳ ಮದುವೆಯ ಮಹತ್ವದ ಬಗ್ಗೆ ಮನಮುಟ್ಟುವಂತೆ ಮಾತಾಡಿದರು.
ಮಂತ್ರಮಾಂಗಲ್ಯದಂತಹ ಸರಳ ವಿವಾಹಗಳು ವೈಚಾರಿಕತೆಯನ್ನು ಮೈಗೂಢಿಸಿಕೊಂಡ ನಗರ ಮತ್ತು ಸಣ್ಣಪುಟ್ಟ ಪಟ್ಟಣಗಳಲ್ಲಿ ಬೇಕಾದಷ್ಟು ನಡೆದಿವೆ. ಆದರೆ ನಮ್ಮೂರ ಮಟ್ಟಿಗೆ ಇದು ಹೊಸತು. ಯಾವುದೇ ಮಹೂರ್ತ ನೋಡದೇ, ಪುರೋಹಿತರನ್ನು ಕರೆಸದೆ, ಓಲಗ ವಾದ್ಯಗಳಿಲ್ಲದೇ, ಅರಿಷಿಣ ಹಚ್ಚಿಕೊಳ್ಳದೇ ಮದುವೆಯಾಗುತ್ತಿದ್ದಾನಂತೆ ಎಂಬ ಸುದ್ದಿ ಊರಿಗೆಲ್ಲಾ ಹಬ್ಬಿ ಜನರೆಲ್ಲಾ ತಬ್ಬಿಬ್ಬಾಗಿದ್ದರು. ಮಳೆಬಿದ್ದು ಗೋವಿನ ಜೋಳ ಹಾಕುವ ಕೆಲಸ ಇದ್ದರೂ ಈ ಮದುವೆಯನ್ನು ನೋಡೋದಕ್ಕೆ ಕುತೂಹಲದಿಂದ ಜನರೂ ಬೇಕಾದಷ್ಟು ಬಂದಿದ್ದರು. ಮದುವೆಯ ನಂತರ ಜನರಿಗೆ ತೃಪ್ತಿಯಾದದ್ದು ನನಗೂ ಖುಷಿ ಕೊಟ್ಟಿತು. -ಕುಮಾರ ಬುರಡೀಕಟ್ಟಿ
ಪುರೋಹಿತಶಾಹಿ ಕಂದಾಚಾರಗಳಿಲ್ಲದೆ ಸರಳ ವಿವಾಹವಾದ ನಿಮಗೆ ಅಭಿನಂದನೆಗಳು. ಇಂಥ ಆದರ್ಶ ವಿವಾಹಕ್ಕೆ ಪ್ರಚಾರ ನೀಡಿದ ಅವಧಿಯ ನಿಲುವೂ ಅಭಿನಂದನೀಯ. ಪುರೋಹಿತಶಾಹಿ ಕಂದಾಚಾರಗಳ ಕಬಂಧ ಬಾಹುಗಳಲ್ಲಿ ಸಿಲುಕಿ ಇಡೀ ಭಾರತೀಯ ಜನಜೀವನವೇ ನರಳುತ್ತಿರುವಾಗ ಇಂಥ ಪ್ರಯತ್ನಗಳು ಮರುಭೂಮಿಯ ನಡುವಿನ ಓಯಸಿಸ್ ನಂತೆ ಕಂಡುಬರುತ್ತವೆ.
ಕುಮಾರ್-ಗೀತಾ ಅವರೇ ಚೆಂದಾಗಿ ಬಾಳಿ. ತುಂಬಾ ಖುಷಿಯಾಯಿತು. ಅಂದಹಾಗೆ ನೀವ್ಯಾಕೆ ಮದುವೆಯಲ್ಲೂ ಟೋಪಿ ಹಾಕಿಕೊಂಡಿದ್ದೀರಿ?
ನೂರ್ಕಾಲ ಚನ್ನಾಗಿರಿ ಕುಮಾರ್-ಗೀತ…
ಹಿರಿಯರು ಬಂದು ಹರಸಿದ್ದು ಖುಷಿಯಾಯ್ತು…
ಕುಂವೀ ಕೂಡ ತಮ್ಮ ಮಗನ ಮದುವೆ ಹೀಗೆ ಮಾಡುತ್ತಾರೆ ಎಂದು ಕೇಳಿದೆ…ನುಡಿದಂತೆ ನಡೆವ ವ್ಯಕ್ತಿ ಆತ….
ಸೂಕ್ತವಾದ ಸರಳವಾದ ಮದುವೆಗೆ ಖುಷಿ ಇದೆ….
Sarala vivahada mahatvavannu samaajakke gotthupadisida navadampatigalige haardika shubhashayagalu:-)
ಕುಮಾರ್ ಮತ್ತು ಗೀತಾರವರಿಗೆ,
ನಿಮ್ಮ ಮದುವೆಯ ವಿಚಾರ ಓದಿ ಬಹಳ ಸಂತೋಷವಾಯಿತು.ನಿಮ್ಮ ಸರಳ ಮದುವೆ ಸಮಾಜದ ಅಸಂಖ್ಯಾತ ಜನರಿಗೆ ಸ್ಪೂರ್ತಿದಾಯಕ ವಾಗಲಿ ಹಾಗೂ ನಿಮ್ಮ ಬಾಳಿನಲ್ಲಿ ಇನ್ನೂ ಹೆಚ್ಚಿನ ಸಂತೋಷ ತರಲಿ ಎಂದು ಹಾರೈಸುತ್ತೇನೆ. ನಿಮಗೆ ಅಭಿನಂದನೆಗಳು.