ನನ್ನ ಮೆಚ್ಚಿನ ಲಂಕೇಶ್ ಕವನ…

ಕಾಡುವ ಕವನ

ರವಿವರ್ಮ ಹೊಸಪೇಟೆ

ಸದಾ ಕುಡಿದಿರು ….

ಬೋದಿಲೇರ್

ಅನುವಾದ ಪಿ. ಲಂಕೇಶ್

ಮನುಸ್ಯ ಸದಾ ಕುಡಿದ ಸ್ತಿತಿಯಲ್ಲ್ಲಿರಬೇಕು …ಅದೊಂದೇ…ಒಂದೇ ಪರಿಹಾರ ಸಮಸ್ಯೆಗೆ; ಕಾಲದ ಅಸಹ್ಯ ಭಾರ ನಿನ್ನ ಭುಜಗಳನ್ನು ಮುರಿಯದಂತೆ, ನಿನ್ನ ತಲೆಯನ್ನು ತಗ್ಗಿಸದಂತೆ ನೋಡಿಕೊಲ್ಲುವುದಕ್ಕಾಗಿ, ಬಿಡದೆ ಸುಮ್ಮನೆ ಕುಡಿಯುತ್ತಿರು . ಏನನ್ನು ಕುಡಿಯುವುದು ? ವೈನ್ ,ಕಾವ್ಯ ಋಜುತ್ವ,ಯಾವುದನ್ನಾದರೂ …. ಕುಡಿಯಬೇಕು ಮಾತ್ರ. ಕುಡಿದು ಎಚ್ಚರಗೊಂಡಾಗ, ಅರಮನೆಯಮೆಟ್ಟಿಲಮೇಲೆ, ಹೊಂಡದ ಹಸಿರು ದಡದ ಮೇಲೆ,  ದರಿದ್ರ ಒಬ್ಬಂಟಿತನದ ನಿನ್ನ ರೂಮಲ್ಲಿ, ನಿನಗೆ ಎಚ್ಚರವಾದಾಗ ಕೇಳು—ಕೇಳು, ಗಾಳಿಯನ್ನ, ಅಲೆಗಳನ್ನ, ನಕ್ಷತ್ರಗಳನ್ನ, ಹಕ್ಕಿಗಳನ್ನ, ಗಡಿಯಾರಗಳನ್ನ, ಸದ್ದುಮಾಡುವ, ಕೂಗಾಡುವ, ನಡೆದಾಡುವ, ಹಾಡುವ ಎಲ್ಲದನ್ನು ಕೇಳು ಆಗ ವೇಳೆ ಎಸ್ಟೆಂದು ಕೇಳು ; ಗಾಳಿ, ಅಲೆ ನಕ್ಷತ್ರ, ಹಕ್ಕಿ, ಗಡಿಯಾರ ಇವೆಲ್ಲ ಆಗ ಉತ್ತರಿಸುತ್ತವೆ ; “ಇದು ಕುಡಿಯುವ ವೇಳೆ ಕಾಲಕ್ಕೆ ಅನ್ಯಾಯವಾಗಿ ಹುತಾತ್ಮ ನಾಗುವ ಬದಲು . ಕುಡಿ, ಬಿಡದೆ ಕುಡೀ ವೈನ್, ಕಾವ್ಯ, ಋಜುತ್ವ ನಿನಗೆ ಇಷ್ಟ ಬಂದದ್ದನ್ನು ಕುಡಿ ” ರವಿವಾರ ಎಲ್ಲ ಪುಸ್ತಿಕೆ ಜೋಡಿಸಲು ಕೂತಾಗ ಲಂಕೇಶ್ ಅವರು ಅನುವಾದಿಸಿದ ಪಾಪದ ಹೂವುಗಳು ನೆಲಮನೆ ಪ್ರಕಾಶನ ಮೈಸೂರು ಪ್ರಕಟಿಸಿದ ಪುಸ್ತಿಕೆ ಸಿಕ್ಕಿತು ಎಂದೋ ಓದಿದ್ದ ಪುಸ್ತಿಕೆ ಮತ್ತೊಮ್ಮೆ ಓದಿದೆ .ಲಂಕೇಶ್ ಅವರು ಆ ಪುಸ್ತಿಕೆಯ ಮುನ್ನುಡಿ ಹಲವು ಸಾಲುಗಳು ಹೀಗಿವೆ.. ಬೋದಿಲೇರ್ ಯಾಕೆ ? ಜಡಗೊಂಡ ಓದುಗರನ್ನು ತನ್ನ ಆಭಾವದಿಂದ ಬೆಚ್ಚಿಬ್ಲಿಸದೆ ಇರುವ ಲೇಖಕ ಯೆನ್ತದನ್ನು ಮಾಡಲಾರ ಎಂಬುದು ಬೋದಿಲೇರನ ನಂಬಿಕೆ ಕೊನೆಪಕ್ಷ ಬೋದಿಲೇರನ ನರಕದಿಂದಲಾದರು ನಮ್ಮ ಪಾತಕರು ಎಚ್ಚರಗೊಳ್ಳಲಿ ಎಂಬುದು ನನ್ನ ಆಶೆ . ಯಾವ ರೀತಿಯ ಎಚ್ಚರ? ಬದುಕಿನ ಶೂನ್ಯತೆಗೆ ,ಕ್ರೌರ್ಯಕ್ಕೆ ಮನಬಿಚ್ಚುವುದು ಅಷ್ಟು ಕಷ್ಟವಲ್ಲ; ಆದರೆ ಮನಬಿಚ್ಚಿ ಪಾಪದ ಆಳಕ್ಕೆ ಇಳಿದೂ, ನೈತಿಕ ಎಚ್ಚರ ಉಳಿಸಿ ಕೊಳ್ಳುವುದು ಕಷ್ಟ….  ]]>

‍ಲೇಖಕರು G

September 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This