ನನ್ನ ಶಾಲೆಗಾಗಿ…

ತೆಲುಗು ನಟ ಚಿರಂಜೀವಿಯ ಈ ಮೇಲ್ ವಿಳಾಸ ಬೇಕಾಗಿದೆ ಮತ್ತು ನನ್ನ ಶಾಲೆಗೆ ಸಹಾಯ ಬೇಕಾಗಿದೆ ಸ್ನೇಹಿತರೆ, ಇಲ್ಲಿರುವುದು ನಾನು ಓದಿದ ವೆಂಕಟಾಲ (ಯಲಹಂಕ)ದ ಶಾಲೆಯ ಹಳೆಯ ಕಟ್ಟಡ. ಇದು ಹೈವೆ ಅಗಲೀಕರಣದಿಂದ ಇನ್ನು ಒಂದು ತಿಂಗಳಲ್ಲಿ ನೆಲಸಮವಾಗಲಿದೆ! ಇದರ ಹಿಂದೆ ನಾಲ್ಕು ಕೋಣೆಗಳುಳ್ಳ ಹೊಸಾ ಕಟ್ಟಡವಿದೆ. ಈ ಹಳೆಯ ಕಟ್ಟಡ ಬಿದ್ದುಹೋದರೆ ಮಕ್ಕಳಿಗೆ ಆಟವಾಡಲು ಜಾಗ ಇರುವುದಿಲ್ಲ. ಏಕೆಂದರೆ ಮಕ್ಕಳಿಗೆ ಪಾಠದ ಜೊತೆಗೆ ಆಟವೂ ಬಹಳ ಮುಖ್ಯವಾದುದು. ಅದೂ ಅಲ್ಲದೇ ಈ ಹೈವೇಯವರು, ಶಾಲೆಯ ಪಕ್ಕದಲ್ಲೇ ಇರುವ ಮಸೀದಿಯ ಸಣ್ಣ ಜಾಗಕ್ಕೆ 25 ಲಕ್ಷ ಪರಿಹಾರವನ್ನು ನೀಡಿದ್ದಾರೆ! ಆದರೆ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವ ಶಾಲೆಯ ದೊಡ್ಡಜಾಗಕ್ಕೆ ಕೇವಲ 6 ಲಕ್ಷಗಳ ಪರಿಹಾರ! ಒಂದು ತಿಂಗಳ ಹಿಂದೆಯೇ ಈ ಹಳೆಯ ಕಟ್ಟಡ ನೆಲಸಮವಾಗುತ್ತಿತ್ತು. ಆದರೆ ಅಲ್ಲಿನ ಶಿಕ್ಷಕರು ಪ್ರತಿಭಟಿಸಿ, ಕೆಡವಲು ಜೆಸಿಬಿ ಯಂತ್ರವನ್ನು ತಂದಾಗ ಎಲ್ಲಾ ಮಕ್ಕಳನ್ನು ಕಟ್ಟಡ ಒಳಗೆ ಕೂರಿಸಿ, ತಾವೂ ಒಳಗೆ ಹೋಗಿ, ಹೆಚ್ಚಿನ ಪರಿಹಾರ ಕೊಡಿ, ಅಥವಾ ಹೊಸಾ ಕಟ್ಟಡ ಮತ್ತು ಕಾಂಪೌಂಡ್ ಕಟ್ಟಿಕೊಡಿ ಎಂದರು. ಆಕ್ಷಣಕ್ಕೆ ಈ ಹಳೆಯ ಶಾಲೆ ಬೀಳಲಿಲ್ಲ. ಉಳಿದುಕೊಂಡಿದೆ. ಆದರೆ ಯಾವಾಗಲಾದರೂ ಬೀಳಬಹುದು. ಇನ್ನೂ ಚಿರಂಜೀವಿ; ಹೊಸಾ ಕಟ್ಟಡದ ಹಿಂದೆ ತೆಲುಗು ನಟ ಚಿರಂಜೀವಿಯವರ ಹತ್ತು-ಹದಿನೈದು ಎಕರೆಗಳ ದೊಡ್ಡ ಜಮೀನಿದೆ. ಅದರಲ್ಲಿ ಸ್ವಲ್ಪ ಜಾಗವನ್ನು ಮಕ್ಕಳ ಆಟದ ಮೈದಾನಕ್ಕೆಂದು ನೀಡಿದರೆ ಉಪಯೋಗವಾಗುತ್ತದೆ. ಬೇಕಾದರೆ ಹೈವೇ ನೀಡುವ ಪರಿಹಾರದ ಒಟ್ಟೂ ಹಣವನ್ನು ಜಮೀನಿಗೆ ನೀಡಲು ಶಿಕ್ಷಕರು ಸಿದ್ಧವಿದ್ದಾರೆ. ಮತ್ತು ಆ ಮೈದಾನಕ್ಕೆ ಅವರ ಹೆಸರನ್ನೇ ಇಡಲೂ ಇಚ್ಛಿಸಿದ್ದಾರೆ. ನನಗೆ ತಿಳಿದಂತೆ ಸಾಮಾಜಿಕ ಕಳಕಳಿಯುಳ್ಳ ಕೆಲವೇ ನಟರಲ್ಲಿ ಚಿರಂಜೀವಿ ಪ್ರಮುಖರು. ಆದ್ದರಿಂದ ನನಗೆ ಚಿರಂಜೀವಿಯವರ ಈ ಮೇಲ್ ಐಡಿ (ಅಧಿಕೃತ) ಬೇಕಾಗಿದೆ. ದಯವಿಟ್ಟು ಹೇಗಾದರು ಪ್ರಯತ್ನಪಟ್ಟು ಸಹಾಯ ಮಾಡಿ. ಕೊನೆಯದಾಗಿ: ಈ ಶಾಲೆಯಲ್ಲಿ ಕಲಿಯುತ್ತಿರುವ 85 ಮಕ್ಕಳಲ್ಲಿ ಎಲ್ಲಾ ಮಕ್ಕಳೂ ಬಡತನದ ಹಿನ್ನಲೆಯಲ್ಲಿ ಬೇಯುತ್ತಿರುವವರೇ ಆಗಿದ್ದಾರೆ. ಅವರಿಗೆ, ನೋಟ್ ಪುಸ್ತಕ, ಜಾಮಿಟ್ರೀ, ಪೆನ್ನು-ಪೆನ್ಸಿಲ್, ಶೂ ಕೊಳ್ಳುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಸಹೃದಯರು ಈ ಕೆಳಗಿನ ವಿಳಾಸಕ್ಕೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.   ವಿಳಾಸ: ಮುಖ್ಯೋಪಧ್ಯಾಯರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಬಿ.ಬಿ.ರಸ್ತೆ, ವೆಂಕಟಾಲ ಯಲಹಂಕ, ಬೆಂಗಳೂರು-560064]]>

‍ಲೇಖಕರು G

July 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This