ನನ್ನ ಹಾಡು, ನನ್ನ ಪುಸ್ತಕ

ಕಿನ್ನರಿ

deepulag269ಪುಸ್ತಕ ಮತ್ತು ಹಾಡು ನನಗೆ ತುಂಬಾ ಇಷ್ಟವಾದ ಎರಡು ಸಂಗತಿಗಳು. ಈಗಲೂ, ಹಿಂದೆಯೂ ಹಾಗೂ ಮುಂದೆಯೂ ಇವೆರಡೂ ನನಗೆ ತುಂಬಾ ಇಷ್ಟ.

ಸಾಧಾರಣವಾಗಿ ಜನರು ಖುಷಿ ಸಂದರ್ಭಗಳಲ್ಲಿ, ಒತ್ತಡವನ್ನು ಕಳೆದುಕೊಳ್ಳಲು ಅಥವಾ ಪಾರ್ಟಿಗಳ  ರಂಗು ಹೆಚ್ಚಿಸಲು ಹಾಡಿನ ಮೊರೆ ಹೋಗ್ತಾರೆ. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹಾಡು ಇಷ್ಟ ಇರುತ್ತೆ. ನನಗೆ, ನನ್ನ ಮೂಡ್ಗೆ ತಕ್ಕಂತೆ ಬೇರೆ ಬೇರೆ ರೀತಿಯ ಹಾಡುಗಳು ಇಷ್ಟ ಆಗುತ್ತೆ.

ನಾನು ಹೆಚ್ಚಾಗಿ ಇಷ್ಟ ಪಡೋದು ಬಾಲಿವುಡ್ ಹಾಡುಗಳನ್ನ ಹಾಗೂ ಕೆಲವು ಇಂಗ್ಲೀಷ್ ಹಾಡುಗಳು. ಹಾಡುಗಳ ಬಗ್ಗೆ ನಾನು ಹೆಚ್ಚಾಗಿ ಹಂಚಿಕೊಳ್ಳೋದು ನನ್ನ ಕಸಿನ್ ಹತ್ತಿರ. ಅವನು ಚೆನ್ನಾಗಿ ಹಾಡ್ತಾನೆ. ನಮ್ಮಿಬ್ಬರಿಗೂ ಒಂದೇ ಬಗೆಯ taste ಇದೆ.

ಮೊದ ಮೊದಲು ನಾನು ಸುಮ್ಮನೆ ಖುಷಿಗಾಗಿ ಹಾಗೂ ರಿಲ್ಯಾಕ್ಸ್ ಮಾಡೋಕ್ಕೆ ಹಾಡು ಕೇಳ್ತಿದ್ದೆ. ಆಮೇಲೆ ಡ್ಯಾನ್ಸ್ ನ  ಪ್ರೀತಿಯಿಂದ ಹಾಡಿನ ಪ್ರೀತಿಯೂ ಹೆಚ್ಚಾಯ್ತು. ಡ್ಯಾನ್ಸ್ ಮಾಡುವಾಗ ಹಾಡಿನ ಸಾಹಿತ್ಯ, ಸಂಗೀತದ ಲಯ ಹಾಗೂ ತಾಳಗಳು ತುಂಬಾ ಮುಖ್ಯ. ಹಾಗೇ ಡ್ಯಾನ್ಸ್ ಮಾಡ್ತಾ ಮಾಡ್ತಾ ಹಾಡಿಗೆ ತಕ್ಕಂತೆ ತುಟಿಯನ್ನು ಆಡಿಸಬೇಕಲ್ಲ. ಅದರಿಂದಾಗಿ ನಾನು ಹಾಡಿನ ಸಾಹಿತ್ಯವನ್ನ ಕಲೀತಾ ಹೋದೆ. ಒಂದೇ ಹಾಡನ್ನ ಮತ್ತೆ ಮತ್ತೆ ಕೇಳಿ ಅದರ ಸಾಹಿತ್ಯವನ್ನ ಕಲಿತೆ. ಆದರೂ ಒಮ್ಮೊಮ್ಮೆ ಸಾಹಿತ್ಯ ತಪ್ಪಾಗುತ್ತೆ. ಆಗೆಲ್ಲ ನನ್ನ ಕಸಿನ್ ಅಣಕಿಸ್ತಾನೆ. ಹಿಂದೆಲ್ಲ ಹೀಗೆ ಅಣಕಿಸಿದರೆ ನನಗೆ ಸಿಟ್ಟು ಬರ್ತಿತ್ತು. ಈಗ ಸಿಟ್ಟು ಮಾಡ್ಕೊಳ್ಳಲ್ಲ. ಸ್ಪೋರ್ಟೀವ್   ಆಗಿ ತೊಗೊಳ್ತೀನಿ. ಅವನಿಂದಾಗಿಯೇ ನಾನು ಟಿವಿಯಲ್ಲಿ ಬರೋ ಹಾಡುಗಳ ಕಾರ್ಯಕ್ರಮಗಳನ್ನ ನೋಡೋಕ್ಕೆ ಶುರು ಮಾಡ್ದೆ, ಈಗ ಅಂತಹ ಎಲ್ಲ ಕಾರ್ಯಕ್ರಮ ನೋಡ್ತೀನಿ. ಅವನೂ ಕೂಡ ಅಂತಹ ಕಾರ್ಯಕ್ರಮಗಳಿಗೆ ಆಡಿಷನ್ ಮಾಡಿದಾನೆ.

ನನ್ನ ಅಪ್ಪ – ಅಮ್ಮ ಇಬ್ಬರೂ ನನಗೆ ಹಾಡಿನ ಸಿಡಿಗಳನ್ನು ಕೊಡಿಸ್ತಾರೆ. ನನ್ನಪ್ಪ ನನಗೆ `ಐ-ಪಾಡ್ಕೂಡ ತೆಕ್ಕೊಟ್ಟಿದಾರೆ. ಅದಿಲ್ಲದೆ ನನಗೆ ಇರೋಕ್ಕೇ ಸಾಧ್ಯವಿಲ್ಲ. ಅದು ನನ್ನ ಹೃದಯದಲ್ಲಿ ಇಟ್ಕೊಂಡಿರೋ ಸಂಗಾತಿ ಹಾಗೂ ಒಂದು ದೊಡ್ಡ ನಿಧಿ. ಇದಕ್ಕೆ ಮೊದಲು ಅಪ್ಪ ನನಗೆ `ವಾಕ್ಮನ್ ಸಿಡಿ ಪ್ಲೇಯರ್ತಂದು ಕೊಟ್ಟಿದ್ರು. ಅದರಲ್ಲೂ ತುಂಬಾ ಹಾಡು ಕೇಳ್ತಿದ್ದೆ. ಸಿಡಿಗಳನ್ನ ಇಟ್ಕೊಳ್ಳೋಕೆ ದೊಡ್ಡ ಪೌಚ್ ಕೊಡ್ಸಿದಾರೆ. ಅಪ್ಪನ ಜೊತೆ ನಡೆಸುವ ತಿರುಗಾಟದಲ್ಲಿ `ಪ್ಲಾನೆಟ್ ಎಂಭೇಟಿ ನಮ್ಮ ಮೊದಲ ಕಾರ್ಯಕ್ರಮ ಆಗಿರುತ್ತೆ. ನನಗೆ ಸುಸ್ತು ಆಗುವವರೆಗೂ ನಾವು ಅಲ್ಲಿರ್ತೀವಿ. ಆಮೇಲೆ ಬ್ಲಾಸಂ ಬುಕ್ ಶಾಪ್ ಅಥವಾ ಕ್ರಾಸ್ ವರ್ಡ್ಸ್  ಗೆ ಹೋಗ್ತೀವಿ. ಐ-ಪಾಡ್ ಗೆ  ಮೊದಲು ಮೊಬೈಲ್ನಲ್ಲಿ ಎಫ್ ಎಂ ಸ್ಟೇಷನ್ ಕೇಳ್ತಿದ್ದೆ. ಹೊಸ ಹಾಡಿನ ಸಿಡಿ ಸಿಕ್ಕಿಲ್ಲ ಅಂದ್ರೆ ಎಫ್ ಎಂನಲ್ಲಿ ಕೇಳೋದು. ಈಗ ನನ್ನ ಅಣ್ಣಂದಿರೂ ಹಾಡಿನ ಸಿಡಿ ಕೊಡಿಸ್ತಾರೆ. ಅವರ ಮೊಬೈಲ್ಗಳಲ್ಲಿ ಒಳ್ಳೊಳ್ಳೆ ಹಾಡುಗಳನ್ನ ಡೌನ್ ಲೋಡ್ ಮಾಡಿಕೊಂಡು ಬಂದು ನನ್ನ ಐ-ಪಾಡ್ಗೆ ಹಾಕಿ ಕೊಡ್ತಾರೆ.

girl-walking-through_ubr00041ಹಾಗೇನೇ ಪುಸ್ತಕಗಳೂ ನನ್ನ ಪ್ರೀತಿಯ ಸಂಗಾತಿಗಳು. ನನ್ನ ಪ್ರಕಾರ ಪುಸ್ತಕಗಳನ್ನ ಓದುವುದರಿಂದ ಒಳ್ಳೆಯದೇ ಆಗುತ್ತೆ. ಓದುವುದು ಯಾವ ರೀತಿಯಲ್ಲೂ ಕೆಟ್ಟದ್ದಲ್ಲ. ಅದರಲ್ಲೂ ಓದುವುದರಿಂದ ನಮ್ಮ ಭಾಷೆ ಮತ್ತು ಶಬ್ದ ಜ್ಞಾನ ತುಂಬಾ ಬೆಳೆಯುತ್ತೆ. ಕೆಲವೊಂದು ಪುಸ್ತಕಗಳಂತೂ ಎಷ್ಟೊಂದು ಕಲ್ಪನೆ ಮತ್ತು ಕಲಾತ್ಮಕತೆಯಿಂದ ತುಂಬಿರುತ್ತೆ. ಅವುಗಳನ್ನ ಓದೋದೇ ಒಂದು ಖುಷಿ.

ನನಗೆ ನೆನಪಿರುವ ವಯಸ್ಸಿನಿಂದಲೂ ಪುಸ್ತಕಗಳು ನನ್ನ ಪ್ರೀತಿಯ ಸಂಗಾತಿಗಳು. ಫೇಮಸ್ ಫೈವ್ , ಹ್ಯಾರಿ ಪಾಟರ್, ಅಗಾಥಾ ಕ್ರಿಸ್ಟೀ ಹಾಗೂ ಲಾರಾ ಎಂಗೆಲ್ಸ್  ಸರಣಿ ಪುಸ್ತಕಗಳು ನನಗೆ ಇಷ್ಟವಾದ ಪುಸ್ತಕಗಳು. ಸಾಹಸ ಹಾಗೂ ರೋಚಕತೆ ಇರುವ ಪುಸ್ತಕ ಅಂದ್ರೆ ಹೆಚ್ಚು ಖುಷಿ. ಎಲ್ರೂ ಕೂಡ ಕನಿಷ್ಠ ಪಕ್ಷ ಕಾಮಿಕ್ಸ್ ಸ್ಟ್ರಿಪ್ ಗಳನ್ನಾದರೂ ಓದ್ಬೇಕು. ಅದು ಎಷ್ಟೊಂದು ಖುಷಿ ಕೊಡುತ್ತೆ. ಹಾಗೂ ನಮ್ಮ ಭಾಷೆನೂ ಬೆಳೆಯುತ್ತೆ.

ಈ ಪುಸ್ತಕಗಳನ್ನ ಬರೆಯುವ ಲೇಖಕರ ಬಗ್ಗೆ ನನಗೆ ಆಶ್ಚರ್ಯ ಆಗುತ್ತೆ. ಜಗತ್ತಿನ ಎಲ್ಲ ಜನರ ಆಸಕ್ತಿ, ಅಭಿಪ್ರಾಯಗಳನ್ನ ದೃಷ್ಟಿಯಲ್ಲಿಟ್ಟುಕೊಂಡು ಬರೀತಾರಲ್ಲ ಅವರು ಅದು ಹೇಗೆ ಸಾಧ್ಯ ಅಂತ. ಹೀಗೆ ಬರೆಯೋಕ್ಕೆ ಅವರು ಎಷ್ಟೆಲ್ಲ ಯೋಚನೆ ಮಾಡಬೇಕಲ್ವ! ಓದುಗರಿಗೆ ಅರ್ಥ ಆಗುವ ಭಾಷೆ ಬಳಸ್ಬೇಕು! ಒಬ್ಬೊಬ್ಬ ಲೇಖಕರದೂ ಒಂದೊಂದು ಶೈಲಿ. ಎಲ್ಲರ ಶೈಲಿಯೂ ಚೆನ್ನಾಗಿರುತ್ತೆ. ಹಾಗೇ ತುಂಬಾ ಜನಪ್ರಿಯವೂ ಆಗಿರುತ್ತೆ. ಈ ಲೇಖಕರು ಕೆಲವು ವಿಷಯಗಳನ್ನ ಎಷ್ಟೊಂದು ಬೇರೆ ಬೇರೆ ರೀತಿಯಲ್ಲಿ ಕಲ್ಪಿಸಿಕೊಳ್ತಾರಲ್ಲ ಅಂತ ಅನ್ನಿಸುತ್ತೆ. ಇಂತಹ ಅದ್ಭುತ ಶಕ್ತಿಯ ಲೇಖಕರಲ್ಲಿ ನನ್ನ ಪ್ರೀತಿಯ ಕೆಲವು ಲೇಖಕರಿದ್ದಾರೆ – ಎನಿಡ್ ಬ್ಲೈಟನ್, ಜೆ.ಕೆ.ರೋಲಿಂಗ್, ಅಗಾಥಾ ಕ್ರಿಸ್ಟೀ, ಲಾರಾ ಎಂಗೆಲ್ಸ್  ವೈಲ್ಡರ್…

ಪುಸ್ತಕ ಓದೋದ್ರಿಂದ ಆಗುವ ಖುಷಿ ಬೇರೆಯದರಿಂದ ಆಗಲ್ಲ. ಪುಸ್ತಕದ ಖುಷಿ ಮತ್ತು ಆಕರ್ಷಣೆ ನಿಲ್ಲಿಸೋಕ್ಕೆ ಆಗಲ್ಲ. ಅದರಿಂದಾಗೇ ನನಗೆ ಪುಸ್ತಕ ಓದೋದಂದ್ರೆ ತುಂಬಾ ಇಷ್ಟ. ಪುಸ್ತಕಗಳು ನನ್ನನ್ನು ಸೆಳೆದುಕೊಳ್ತಾವೆ. ನಾನು ಎಲ್ಲಿಗೇ ಹೋಗಲಿ ನನ್ನ ಜೊತೆ ಪುಸ್ತಕಗಳು ಇರುತ್ತವೆ.

ಸಿ.ಡಿ.ಗಳ ಹಾಗೇನೇ ನಾನು ತುಂಬಾ ಪುಸ್ತಕ ಕೊಳ್ತೀನಿ. ಪುಸ್ತಕಗಳ ಬಗ್ಗೆ ನನ್ನ ಅಭಿಪ್ರಾಯಾನಾ ನನ್ನ ಅಪ್ಪ – ಅಮ್ಮಾನೂ ಪ್ರೋತ್ಸಾಹಿಸ್ತಾರೆ. ಅವರಷ್ಟೇ ಅಲ್ಲ, ಇನ್ನೂ ಕೆಲವರು ನನ್ನ ಈ ಓದುವ ಹವ್ಯಾಸವನ್ನ ತುಂಬಾ ಪ್ರೋತ್ಸಾಹಿಸ್ತಾರೆ. ಅಂತಹವರಿಂದಾಗೀನೇ ನಾನು `ಕನ್ನಡ ಟೈಮ್ಸ್ನಲ್ಲಿ ಹ್ಯಾರಿ ಪಾಟರ್ ನ ಆರು ಪುಸ್ತಕಗಳ ಬಗ್ಗೆ ಲೇಖನ ಬರೆದೆ. ಅದಂತೂ ಒಂದು ದೊಡ್ಡ ಮರೆಯಲಾಗದ ಅನುಭವ ನನಗೆ.

ಮತ್ತೊಮ್ಮೆ ಪುಸ್ತಕ ಓದೋದು ಮತ್ತು ಹಾಡು ಕೇಳೋದು ನನ್ನ ಪ್ರೀತಿಯ ಹವ್ಯಾಸಗಳು ಅಂತ ಹೇಳಿ ಈ ನನ್ನ ಬರವಣಿಗೆಯನ್ನ ಇಲ್ಲಿಗೆ ಮುಗಿಸ್ತೀನಿ.

‍ಲೇಖಕರು avadhi

April 9, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

7 ಪ್ರತಿಕ್ರಿಯೆಗಳು

 1. ಅಜಯ್

  ಕನ್ನಡದಲ್ಲಿ ಇಷ್ಟು ಚೆನ್ನಾಗಿ ಬರಿತೀರ, ಆದ್ರೆ ನಿಮಗೆ ಕನ್ನಡ ಪುಸ್ತಕಗಳನ್ನು ಓದುವ, ಕನ್ನಡ ಹಾಡುಗಳನ್ನು ಕೇಳುವ ಅಭ್ಯಾಸ/ಹವ್ಯಾಸ ಇಲ್ಲ ಅಂದ್ರೆ ಆಶ್ಚರ್ಯ ಆಗತ್ತೆ. ಇನ್ನು ಸ್ವಲ್ಪ ದೊಡ್ಡವರಾದ್ಮೇಲೆ ’ಕಾಫಿ ಡೇ ’ ಅಭ್ಯಾಸ ಕೂಡ ಮಾಡಿಕೊಳ್ಳಬಹುದು 🙂

  ಪ್ರತಿಕ್ರಿಯೆ
 2. srinivasagowda

  ವೆಲ್ಕಮ್ ಟು ಕಿನ್ನರಿ
  ಕಿನ್ನರಿ ಅಂತ ನಿಮ್ಮಪ್ಪ ಒಳ್ಳೆ ಹೆಸರೇ ಇಟ್ಟಿದ್ದಾರೆ ಬಿಡು
  ಎಷ್ಟು ಚೆನ್ನಾಗಿ ಬರಿತೀಯ ನೀನು,
  ಅವಧಿಯಲ್ಲಿ ಸಿಕ್ಕಾಪಟ್ಟೆ ಬುದ್ದಿವಂತರ ಪೋಸ್ಟ್ ಓದಿ ಓದಿ ಬೇಜಾರಾಗಿದ್ದ
  ನಮಗೆ ತುಂಬಾ ದಿನ ಆದ ಮೇಲೆ ಥ್ರಿಲ್ ಅಗೋ ತರ
  ಬರೆಯೋರು ಬಂದಿದ್ದು ಒಳ್ಳೇದೇ ಆಯ್ತು ಬಿಡು.
  ಅಲ್ಲಾ, ನಿಂಗೆ ಇಂಗ್ಲಿಷು ಬರುತ್ತೆ , ಕನ್ನಡಾನು ಬರುತ್ತೆ ಅನ್ನೋದೇ ಅಚ್ಚರಿ
  ಗೊತ್ತಾ,
  ಮತ್ತೆ ಮತ್ತೆ ಬರಿ, ಓದೋಕೆ ನಾವ್ ರೆಡಿ.
  ಎಂ. ಬಿ. ಶ್ರೀನಿವಾಸ ಗೌಡ
  ನವದೆಹಲಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: