ನಮ್ಮನೆಗೆ ಈಗ ಟಿವಿ ಬ೦ತು!

ನಮ್ಮನೆಗೆ ಟಿವಿ ಬಂತು!

– ಚಿತ್ರ ಸ೦ತೋಷ್

ಧರಿತ್ರಿ ನಮ್ಮನೆಗೆ ಟಿವಿ ಬಂತು ಎಂದು ಹೇಳೋದು ಎಂಥ ವಿಚಿತ್ರ ಸುದ್ದಿ ಎಂದು ಅನಿಸುತ್ತೆ ಅಲ್ವೇ? ಈಗ ಯಾರ ಮನೆಯಲ್ಲಿ ಟಿವಿ, ಕಂಪ್ಯೂಟರ್ ಇಲ್ಲ ಅಂತ ಕೇಳ್ತೀವಿ. ಆದರೆ, ಪುತ್ತೂರಿನ ಪುಟ್ಟದೊಂದು ಹಳ್ಳಿ ಕಳೆಂಜೋಡಿ ಎಂಬಲ್ಲಿಗೆ ಮೊನ್ನೆ ಮೊನ್ನೆ ಕರೆಂಟು ಬಂತು. ಅಲ್ಲಿ ಇದ್ದಿದ್ದು 12 ಮನೆಗಳು ಮಾತ್ರ. ಪುಟ್ಟ ದ್ಬೀಪ ತರ ಇತ್ತು. ಸುತ್ತಮುತ್ತ ದಟ್ಟ ಕಾಡು., ಕರೆಂಟು ಕಂಬ ಹಾಕೋದೇ ಕಷ್ಟ ಅನ್ತಾ ಇದ್ರು. ಆದರೆ. ತಿಂಗಳ ಹಿಂದೆ ನಮ್ಮ ಹಳ್ಳಿಗೆ ಕರೆಂಟು ಬಂದಿದೆ. ಸರ್ಕಾರಿ ಯೋಜನೆಯಡಿಯಲ್ಲಿ ಮನೆಗಳಲ್ಲಿ ಎರಡು ಮೂರು ವಿದ್ಯುತ್ ದೀಪ ಬೆಳಗುತ್ತಿದೆ. ಚಿಮಿಣಿ ದೀಪ ನೋಡಿದ ಇಲ್ಲಿನ ಹೆಂಗಸರಿಗೆಲ್ಲಾ ಫುಲ್ ಖುಷಿ. ದಟ್ಟಕಾಡಿನ ನಡುವೆ ಪುಟ್ಟ ಪುಟ್ಟ ತೋಟಗಳ ನಡುವೆ ಇದ್ದ ಮನೆಗಳಲ್ಲಿ ಮೂರ್ನಾಲ್ಕು ಚಿಮಿಣಿ ದೀಪಗಳು. ಬೀಡಿ ಸುರುಟುವ ಹೆಂಗಸರೆಲ್ಲಾ ಈ ಚಿಮಿಣಿಗಳನ್ನೇ ಅವಲಂಬಿಸಿದ್ದರು. ಎಷ್ಟೊ ಬಾರಿ ನಿದ್ದೆಗಣ್ಣಿನಲ್ಲಿ ಬೀಡಿ ಸುರುಟುತ್ತಿರುವಾಗ ಆ ದೀಪ ಹಾಗೇ ಬಿದ್ದು, ಬೀಡಿಗಳೆಲ್ಲಾ ಸೀಮೆಎಣ್ಣೆ ವಾಸನೆ ಬಂದು ಆ ಬೀಡಿಗಳೇ ವ್ಯರ್ಥ ಆಗುತ್ತಿದ್ದವು. ಈಗ ಹೆಂಗಳೆಯರೆಲ್ಲಾ ವಿದ್ಯುತ್ ದೀಪ ದಡಿಯಲ್ಲಿ ಬೀಡಿ ಸುರುಟುತ್ತಿದ್ದಾರೆ. ನನ್ನ ತಮ್ಮಾಇಂದು ಬೆಳ್ಳಂಬೆಳಿಗ್ಗೆ ಫೋನು ಮಾಡಿದ್ದ. ಹಲೋ ಅನ್ನೋಕೆ ಮೊದಲೇ ಅಕ್ಕಾ ಟಿವಿ ಬಂತು ಅಂದ. ಕೇಬಲ್ ಹಾಕಿಸಿದ್ಯಾ? ಅಂತ ಕೇಳಿದೆ. ಎಲ್ಲಾ ಹಾಕಿಸಿದ್ದೀನಿ ಅಂದ. ಮೊದಲು ನನಗೆ ಮಾತೇ ಹೊರಡಲಿಲ್ಲ. ನನ್ನ ತಮ್ಮ ಮತ್ತು ನಾನು ಒಂದ್ಸಲ ಪಕ್ಕದೂರ ಗೌಡ್ರ ಮನೆಗೆ ಟಿವಿ ಬಂದಾಗ ಅದನ್ನು ನೋಡಲು ಅಲ್ಲಿಗೆ ಹೋಗಿದ್ದು ನೆನಪಾಯಿತು ನಮ್ಮ ಹಳ್ಳಿ ದಾಟಿ ಗೌಡ್ರ ಮನೆಗೆ ಹೋಗಬೇಕಿತ್ತು. ಆಗ ನನ್ನ ವಯಸ್ಸಿನ್ನೂ ಹತ್ತು ದಾಟಿರಲಿಲ್ಲ. ಊರಿನವರೆಲ್ಲಾ ಟಿವಿ ನೋಡಲು ಬರುತ್ತಿದ್ದರು. ಮಕ್ಕಳಂತೂ ಗೌಡ್ರ ಮನೆಯ ವರಾಂಡದಲ್ಲಿ ಎದುರು ಸಾಲಿನಲ್ಲಿ ಚಾಪೆ ಹಾಸಿ ಕೂರುತ್ತಿದ್ದರು.ನನ್ ತಮ್ಮ ಫೋನ್ ಮಾಡಿದಾಗ ಎಲ್ಲವೂ ಒಮ್ಮೆಲೇ ನೆನಪಾಯಿತು. ಟಿವಿ ಬಂದ ಖುಷಿಯನ್ನು ಅಮ್ಮಂಗೆ ಕೇಳೋಣ ಅನಿಸ್ತು. ಅಮ್ಮಾ, ಫುಲ್ ಖುಷೀನಾ ಅಂಥ ಕೇಳಿದೆ. ಅದಕ್ಕೆ ಅಮ್ಮಾ, ಏನು ಸೌಂಡು ಮಗಾ, ನನಗೆ ತಲೆ ಧಿಮ್ ಅನ್ಯಾ ಇದೆ. ನಿನ್ನೆಯಿಂದ ಮನೆಯಲ್ಲಿ ಜಾತ್ರೆ. ಏನೇನೋ ಹಾಕ್ತಾನೆ…ನೋಡ್ತಾರೆ. ನನಗಿನ್ನೂ ಅಭ್ಯಾಸವಾಗಬೇಕು ಅಂದ್ರು. ಮೊದಲೇ ಬಿಪಿ ಪೇಶೆಂಟು ಆಗಿರುವ ಅಮ್ಮಂಗೆ ಮೊದಲೇ ಗಜಿಬಿಜಿ, ಸದ್ದು&ಗದ್ದಲ ಆಗೋಲ್ಲ. ಸರಿ ಹೋಗುತ್ತೆ ಬಿಡಮ್ಮಾ ಅಂದೆ. ನಮ್ಮನೆಗೆ ಟಿವಿ ಬಂತು ಅಂಥ (ನಮ್ ಜನರೇಷನ್) ಕೇಳುವ ಸುದ್ದಿ ನಿಮಗೆ ಏನನಿಸಿತ್ತು?]]>

‍ಲೇಖಕರು G

August 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

9 ಪ್ರತಿಕ್ರಿಯೆಗಳು

 1. ರಮೇಶ್ ಹಿರೇಜಂಬೂರು

  ನಿಜಕ್ಕೂ ಇದು ಸಂತಸದ ಸಂಗತಿಯೇ, ಸಹ್ಯಾದ್ರಿ ಮಡಿಲಿನಲ್ಲಿರುವ ಅದೆಷ್ಟೋ ಹಳ್ಳಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ! ಹಾಗಿರುವಗಾಗ ನಿಮ್ಮ ಮನೆಗೆ ಟಿವಿ ಬಂದಿದ್ದು ಸಂತಸವೇ ಸರಿ. ಯಾವುದೇ ಹೊಸತನ ಬಂದಾಗ ಅದನ್ನು ಅನುಭವಿಸುವವರಿಗೆ ಗೊತ್ತು ಅದು ಎಷ್ಟು ಆನಂದ ಎಂಬುದು.. ಆ ಕ್ಷಣ ಹಂಚಿಕೊಂಡಿದ್ದಕ್ಕೆ ಹಾಗು ಅಂತದ್ದೇ ಗಳಿಗೆಯನ್ನು ಮೆಲುಕು ಹಾಕಲು ನೆಪವಾಗಿದ್ದಕ್ಕೆ ಥ್ಯಾಂಕ್ಸ್…

  ಪ್ರತಿಕ್ರಿಯೆ
 2. Kumara Raitha

  ಟಿವಿ ಬಂತು ಅನ್ನುವ ಖುಷಿ ಹಿಂದೆ ವಿದ್ಯುತ್ ಬಂತು ಆನ್ನೋ ಸಂಭ್ರಮ ಇದೆಯಲ್ಲ ಅದು ತುಂಬ ದೊಡ್ಡದು.. ನಿಮ್ಮೂರಿಗೆ ಕರೆಂಟು ಬಂದಿದ್ದು.. ಅದರ ಹಿಂದೆ ಟಿವಿ ಬಂದಿದ್ದು ಕೇಳಿ ನಮಗೂ ಸಂತಸವಾಯಿತು… 🙂

  ಪ್ರತಿಕ್ರಿಯೆ
 3. D.RAVI VARMA

  ಮೇಡಂ, ನಿಮ್ಮ ಮನೆಗೆ ತಿ,ವಿ ಬಂದದ್ದಕ್ಕಿತ ನಿಮ್ಮ ಹಳ್ಳಿಗೆ ಕರೆಂಟು ಬಂದದ್ದು ತುಂಬಾ ಕುಶಿನೀಡಿತು ಇನ್ನು ಅದೆಸ್ತು ಹಳ್ಳಿಗಳು ಕತ್ತಲೆ ಕೂಪದಲ್ಲಿ ಕರಗುತ್ತಿವೆಯೂ ಅಲ್ಲವೇ, ಬಿಡಿ, ನಮ್ಮ ಮನೆಗಳಿಗೆ ಹೊಸದೇನನ್ನದುರು ತಂದಾಗ ಅದು ಕೊಡುವ ಕುಶಿ,ಥ್ರಿಲ್, ಅದನ್ನು ಶಬ್ಧಗಳಲ್ಲಿ ಹೇಳಲಾಗದು. ನಿಮ್ಮ ಈ ಕುಶಿ ನಿರಂತರವಾಗಿರಲಿ ……

  ಪ್ರತಿಕ್ರಿಯೆ
 4. shama, nandibetta

  ಚಿತ್ರಾ, ನಿಂಗೊತ್ತಾ ನಂದಿಬೆಟ್ಟದ ನಮ್ಮನೇಲಿ ಇವತ್ತಿಗೂ ಟಿ.ವಿ ಇಲ್ಲ… Anyway ಕರೆಂಟು ಬಂತು ಅಂದೆಯಲ್ಲ ಻ದು ಖುಷಿ ಕೊಡ್ತು. ಅಮ್ಮನಿಗೆ ಬಹಳ ಸಂತೋಷ ಾಗುತ್ತೆ ಅಲ್ವಾ ? ಎಷ್ಟೋ ಕೆಲಸಗಳಿನ್ನು ನಿರಾಳ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: