ನಮ್ಮ ಅಂಕಣಕಾರರು

Writers

ನೀವೂ ಬರೆಯಬಹುದು!

ನಿಮ್ಮ ಲೇಖನಗಳನ್ನು ಅವಧಿಯಲ್ಲಿ ಪ್ರಕಟಿಸಲು ನಮ್ಮ ಸಂಪಾದಕ ಬಳಗವನ್ನು ಸಂಪರ್ಕಿಸಿ. 

ಶಿವಕುಮಾರ ಮಾವಲಿ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿ ಹುಟ್ಟೂರು. ಹೈಸ್ಕೂಲ್ ವರೆಗೆ ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ. ಶಿವಮೊಗ್ಗದ ಡಿ.ವಿ.ಎಸ್. ಕಾಲೇಜು ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ. ಇನ್ಫೋಸಿಸ್, ಕನ್ವರ್ಜಿಸ್, ಆಲ್ಟಿಸೋರ್ಸ್ ಕಂಪೆನಿಗಳಲ್ಲಿ ಕೆಲವರ್ಷ ಉದ್ಯೋಗ. ಪ್ರಸ್ತುತ ಬೆಂಗಳೂರಿನ ವಿಜಯನಗರದಲ್ಲಿರುವ ಆರ್ ಎನ್ ಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ. ‘ದೇವರು ಅರೆಸ್ಟ್ ಆದ’ ಮೊದಲ ಕಥಾ ಸಂಕಲನ. ಎರಡನೆಯ ಕಥಾಸಂಕಲನ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ ‘ಬಹುರೂಪಿ’ಯಿಂದ ಪ್ರಕಟವಾಗಿದೆ. ‘ಸುಪಾರಿ ಕೊಲೆ’ ಎಂಬ ಇವರ ನಾಟಕ ಚಲನಚಿತ್ರವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಇಂಗ್ಲಿಷ್ ಗೆ ಸಂಬಂಧಿಸಿದಂತೆ ‘ಜನರಲ್ ಇಂಗ್ಲಿಷ್’, ‘ಕಂಪಸ್ಲರಿ ಇಂಗ್ಲಿಷ್’, ‘ಹ್ಯಾಂಡ್ ಬುಕ್ ಆಫ್ ಟ್ರಾನ್ಸ್ ಲೇಷನ್’ ಕೃತಿಗಳನ್ನು ರಚಿಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಅಂಕಣ, ಅವಧಿ ಆನ್ ಲೈನ್ ಮ್ಯಾಗಝೀನ್ ನಲ್ಲಿ ‘ಮಾವಲಿ ಮಿರ್ಚಿ’ ಎಂಬ ಅಂಕಣ ಬರೆದಿದ್ದಾರೆ. 

ಹಿ ಚಿ ಬೋರಲಿಂಗಯ್ಯ

Nulla porttitor accumsan tincidunt. Cras ultricies ligula sed magna dictum porta. Nulla porttitor accumsan tincidunt. Lorem ipsum dolor sit amet, consectetur adipiscing

ಶ್ರೀಪಾದ್ ಭಟ್

Nulla porttitor accumsan tincidunt. Cras ultricies ligula sed magna dictum porta. Nulla porttitor accumsan tincidunt. Lorem ipsum dolor sit amet, consectetur adipiscing

ರಾಧಿಕಾ ವಿಟ್ಲ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ. ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು. ಕುಂಚ-ಬಣ್ಣ ಹಿಡಿದರೆ ಧ್ಯಾನ. ಜೊತೆಗೆ ಪುಟ್ಟ ಮಗನ ಅಮ್ಮ. ಸುಂದರ ಬದುಕು ಅಂಗೈಯಲ್ಲೇ ಆಡುತ್ತಿರುವುದಕ್ಕೆ ಸಂತೃಪ್ತಭಾವದಲ್ಲಿದ್ದಾರೆ! ಚಾರಣ ಮಾಡಿದಾಗ, ಬೆಟ್ಟ ಹತ್ತಿ ಪ್ರಕೃತಿಯಲ್ಲಿ ಮಗ ಕಳೆದು ಹೋಗುವ ಪರಿ ಅವರಿಗೆ ಪ್ರತಿ ಬಾರಿಯೂ ಸೋಜಿಗ. ತನ್ನನ್ನೇ ಕಂಡ ಹಾಗೆ! ಆರೂವರೆ ವರ್ಷದ ಮಗನಿಗೂ ಹಿಮಾಲಯ ಸೂಜಿಗಲ್ಲು.

ಕೆರೆಮನೆ ಶಿವಾನಂದ ಹೆಗಡೆ

Nulla porttitor accumsan tincidunt. Cras ultricies ligula sed magna dictum porta. Nulla porttitor accumsan tincidunt. Lorem ipsum dolor sit amet, consectetur adipiscing

ಸುಶ್ಮಿತಾ ಶೆಟ್ಟಿ

ಕಡಲೂರಾದ ಕುಂದಾಪುರದ ನಾವುಂದದಾಕೆ. ಸದ್ಯ ಮಣಿಪಾಲದಲ್ಲಿ ನೆಲೆ. ಓದಿದ್ದು ಪತ್ರಿಕೋದ್ಯಮ.ಸಾಹಿತ್ಯವೇ ಆಸಕ್ತಿ ಮತ್ತು ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ. ಕವಿತೆಗಳಲ್ಲಿ ಆಳವಾಗಿ ಬದುಕುವ ಹುಡುಗಿಗೆ ಬರವಣಿಗೆನ್ನು ರೂಢಿಸಿಕೊಳ್ಳುವುದೇ ರೂಢಿ. ನಿಂತಲ್ಲೇ ಬೇರೂರಿ ಅವಶ್ಯಕತೆಗಳಾಚೆ ಬೆಳೆಯುವುದೇ ಹಂಬಲ.

ರೇಣುಕಾ ರಮಾನಂದ

ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ವೃತ್ತಿಯಲ್ಲಿ ಶಿಕ್ಷಕಿ. ೨೦೧೭ರಲ್ಲಿ ಪಲ್ಲವ ಪ್ರಕಾಶನ ಹೊಸಪೇಟೆ ಇವರು ಪ್ರಕಟಿಸಿದ ‘ಮೀನುಪೇಟೆಯ ತಿರುವು’ ಇದು ರೇಣುಕಾ ರಮಾನಂದರ ಮೊದಲ ಕವಿತಾ ಸಂಕಲನ. ಈ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಮುಂಬೈನ ಶ್ರೀಮತಿ ಸುಶೀಲಾ ಶೆಟ್ಟಿ ಕಾವ್ಯ ಹಸ್ತಪ್ರತಿ ಪ್ರಶಸ್ತಿ, ಗುಲ್ಬರ್ಗಾ ಸೇಡಂನ ಮಾತೋಶ್ರೀ ‘ಅಮ್ಮ’ ಪ್ರಶಸ್ತಿ, ಹಾಸನದ ಮಾಣಿಕ್ಯ ಪ್ರಕಾಶನದ ಕಾವ್ಯಮಾಣಿಕ್ಯ ರಾಜ್ಯಪ್ರಶಸ್ತಿ, ಹರಿಹರದ ಸಾಹಿತ್ಯ ಸಂಗಮದ ಹರಿಹರಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೆ ವಿ ರತ್ನಮ್ಮ ದತ್ತಿ ಪ್ರಶಸ್ತಿ  ದೊರೆತಿದೆ. ೨೦೧೭ರ ಮೈಸೂರು ಅಸೋಸಿಯೇಷನ್ ಮುಂಬೈ ನೇಸರು ಜಾಗತಿಕ ಕವನಸ್ಪರ್ದೆಯಲ್ಲಿ ಪ್ರಥಮ ಬಹುಮಾನ, ೨೦೧೬ರ ಜೀವನ್‌ಪ್ರಕಾಶನ ಚಿಕ್ಕಬಳ್ಳಾಪುರ ಏರ್ಪಡಿಸಿದ ಯುಗಾದಿ ಕಾವ್ಯಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದಿಂದ ಎರಡು ಬಾರಿ ೨೦೧೪ ಮತ್ತು ೨೦೧೫ನೇ ಸಾಲಿನಲ್ಲಿ ಗುಡಿಬಂಡೆ ಪೂರ್ಣಿಮಾ ರಾಜ್ಯದ ಉದಯೋನ್ಮುಖ ಕವಯತ್ರಿ ದತ್ತಿನಿಧಿ ಪ್ರಶಸ್ತಿ, ೨೦೧೪ ರ ಸಂಕ್ರಮಣ ಕಾವ್ಯ ಬಹುಮಾನ ತುಷಾರ ಮಾಸಪತ್ರಿಕೆಯ ೨೦೧೯ನೇ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾಸ್ಪರ್ಧೆ ಬಹುಮಾನ ಹಾಗೂ ಮುಂಬೈ ಗೋಕುಲವಾಣಿ ಪತ್ರಿಕೆ ಏರ್ಪಡಿಸಿದ ೨೦೨೦ರ ಕಥಾಸ್ಪರ್ಧೆಯ ದ್ವಿತೀಯ ಬಹುಮಾನವನ್ನು ರೇಣುಕಾ ರಮಾನಂದರು ಪಡೆದಿದ್ದಾರೆ. ಕರಾವಳಿಯ ಮಣ್ಣ ಕಣದ ಸರಳತೆಯನ್ನು, ನೈಜತೆಯನ್ನು ತಮ್ಮ ಬರಹದಲ್ಲಿ ಉಸಿರಾಡುವುದನ್ನು ಇಷ್ಟಪಡುವ ರೇಣುಕಾ ಮೀನುಪೇಟೆಯಿಂದ ಸಮುದ್ರಕ್ಕೂ ಸಮುದ್ರದಿಂದ ಮೀನುಪೇಟೆಗೂ ಇರುವ ಒಂದು ಸಣ್ಣ ಹಸಿರ ಕಾಲುಹಾದಿಯ ಒಂಟಿ ಪಯಣವನ್ನು ತೀರ ಹಚ್ಚಿಕೊಂಡವರು.

ಮೇಘನಾ ಸುಧೀಂದ್ರ

ಹುಟ್ಟಿದ್ದು ಕತ್ತರಿಗುಪ್ಪೆ ಗ್ರಾಮ, ಮೂಲತಃ ಜಯನಗರ, ಬೆಂಗಳೂರಿನವರು. ಓದಿದ್ದು Master of Science in Artificial Intelligence and Signal Processing ದೂರದ ಬಾರ್ಸಿಲೋನಾದಲ್ಲಿ. ಅಲ್ಲಿದ್ದಾಗಲೇ ಹಳೆ ಬೆಂಗಳೂರಿನ ಕಥೆಗಳು, ಪ್ರಸಂಗಗಳು ಒನ್ ಇಂಡಿಯಾದಲ್ಲಿ ‘ಜಯನಗರದ ಹುಡುಗಿ’ ಎಂಬ ಅಂಕಣದಲ್ಲಿ ಪ್ರಕಟವಾಗಿದ್ದವು. ಪ್ರೇರಣೆ, ಕನ್ನಡ ಕಲಿಸಿದ, ದಿನ ಪತ್ರಿಕೆಗಳನ್ನ ಓದೋಕೆ ಹೇಳಿಕೊಟ್ಟ, ಡೆಡ್ ಲೈನ್ ಮೀರಬಾರದೆಂದು ಕಲಿಸಿದ, ೫೦ಕ್ಕೂ ಹೆಚ್ಚು ಪುಸ್ತಕ ಬರೆದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಎಲೆ ಮರೆಯ ಕಾಯಿಯಂತಿದ್ದ ಸಂಯುಕ್ತ ಕರ್ನಾಟಕದ ಸುದ್ದಿ ತಾತ ಸಂಪಾದಕ ಹೆಚ್ ಆರ್ ನಾಗೇಶರಾವ್. ಸದ್ಯಕ್ಕೆ ಬೆಂಗಳೂರಿನ MsC ML groupನಲ್ಲಿ Senior AI Engineer, ಅಂದರೆ ಮೆಷೀನುಗಳಿಗೆ ಮನುಷ್ಯರ ಹಾಗೆ ಮಾತು ಕಲಿಸುವ ಕೆಲಸ. ಸದ್ಯಕ್ಕೆ ಜಯನಗರದ ಹುಡುಗಿ ಎಂಬ ಪುಸ್ತಕ ಹೊರಬಂದಿದೆ. ಪ್ರತಿವಾರ ‘ಅವಧಿ’ಯಲ್ಲಿ ‘ಓಲಾ ಬಾರ್ಸಿಲೋನಾ’, ‘ಹಿತೈಷಿಣಿ’ಯಲ್ಲಿ ‘ಮೇಘ ಸಂದೇಶ’ ಎಂಬ ಅಂಕಣ ಬರೆಯುತ್ತಿದ್ದಾರೆ. ಜಾಸ್ತಿ ಬರೆದ್ದದ್ದು ಅಂಕಣ ಮತ್ತು ಕಥೆಗಳು.

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This