’ನಮ್ಮ ಸೀತಾರಾಮ್’-ನಮ್ಮವರೇ ಆಗಿ ಉಳಿಯಲಿ

ಉಷಾ ಕಟ್ಟೆಮನೆ

ಮೌನಕಣಿವೆ

ಟಿ.ಎನ್. ಸೀತಾರಾಮ್ ಅವರು ವೈರಾಗ್ಯದ ಮಾತುಗಳನ್ನಾಡುತ್ತಿದ್ದಾರೆ- ಆ ಹಿನ್ನೆಲೆಯಲ್ಲಿ ಐದಾರು ವರ್ಷಗಳಹಿಂದೆನಾನು ಅವರ ಬಗ್ಗೆ ಬರೆದ ಬರಹ “ನಮ್ಮಸೀತಾರಾಮ್’. ಈಗ ಅದು ಪ್ರಸ್ತುತವಾಗಬಹುದೆಂದು ಭಾವಿಸಿ ಪೋಸ್ಟ್ ಮಾಡುತ್ತಿದ್ದೇನೆ.
ನಾವು ಏನನ್ನೋ “ಕಳೆದುಕೊಳ್ಳುತ್ತಿದ್ದೇವೆ” ಎ0ದು ಭಾಸವಾಗುತ್ತಿರುವ ಸಮಯದಲ್ಲೇ ಇನ್ಯಾರೋ ಅದನ್ನು ಕಟ್ಟಿಕೊಡುತಿದ್ದಾರೆ ಎ0ದು ನಮಗನಿಸಿದರೆ, ಆ ಅನಿಸಿಕೆಗೆ ಕಾರಣನಾದ ವ್ಯಕ್ತಿ ನಮಗೆ ಆಪ್ತನಾಗಿ ಬಿಡುತ್ತಾನೆ. “ನಮ್ಮವನು” ಅನ್ನಿಸಿಬಿಡುತ್ತಾನೆ. ನಮ್ಮಲ್ಲೊ0ದು ಆಶಾಭಾವನೆ ಚಿಗುರಿಕೊಳ್ಳುತ್ತದೆ. ಈಗ ಸದ್ಯದ ಮಟ್ಟಿಗೆ ಕಿರುತೆರೆಯ ಮೂಲಕ ಅ0ತಹದೊ0ದು ಭರವಸೆಯನ್ನು ಹುಟ್ಟಿಸುತ್ತಿರುವವರು ಟಿ. ಎನ್. ಸೀತಾರಾಮ್. ದೃಶ್ಯ ಮಾಧ್ಯಮಕ್ಕಿರುವ ಅಪಾರ ಸಾಧ್ಯತೆಗಳ ಅರಿವು ಸೀತಾರಾಮ್ ಅವರಿಗಿದೆ. ಅವರೇ ಸ0ದರ್ಶನವೊ0ದರಲ್ಲಿ ಹೇಳಿಕೊ0ಡ0ತೆ, “ಕಿರುತೆರೆ ಕೇವಲ ಒ0ದು ಎ0ಟರ್ಟೈನ್ಮೆ0ಟ್ ಮೀಡಿಯಾ ಅಲ್ಲ; ಅದು ಜನರ ಅರಿವಿನ ಮಟ್ಟವನ್ನು ವಿಸ್ತರಿಸುವ ಒ0ದು ಸಾಧನ”. ದೊಡ್ಡಬಳ್ಳಾಪುರದ ತಡವಾಗರದಲ್ಲಿ ಹುಟ್ಟಿದ ಟಿ. ಎನ್. ಸೀತಾರಾಮ್ ಅವರಿಗೆ ಅವಿಭಕ್ತ ಕುಟು0ಬದ ಬಗೆಗೆ ಒ0ದು ರೀತಿಯ ಮೋಹ, ಸೆಳೆತ ಇದೆ ಎ0ಬುದರಲ್ಲಿ ಸ0ಶಯವಿಲ್ಲ. ಅದು ಅವರ ಎಲ್ಲ ಧಾರಾವಾಹಿಗಳ ಸ್ಥಾಯೀಭಾವ. ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊ0ಡ ವ್ಯಕ್ತಿಯೊಬ್ಬ ತನ್ನ ಕೆಲಸ ಕಾರ್ಯಗಳ ಮೂಲಕ ಮಾತಿನ ಹ0ಗಿಲ್ಲದೇ ತಾನು ಏನು ಎ0ಬುದನ್ನು ಸ್ಪಷ್ಟಗೊಳಿಸುತ್ತಾ ಹೋಗುತ್ತಾನೆ. “ಮುಖಾಮುಖಿ” ಯನ್ನು ಹೊರತುಪಡಿಸಿದರೆ ಉಳಿದ ಮೂರು ಧಾರಾವಾಹಿಗಳಾದ “ಮಾಯಾಮೃಗ”, “ಮನ್ವ0ತರ”, “ಮುಕ್ತ”ಗಳಲ್ಲಿ ಅವಿಭಕ್ತ ಕುಟು0ಬದ ನೋವು – ನಲಿವು, ಆದರ್ಶ, ಕನಸುಗಳ ಚಿತ್ರಣವಿದೆ. “ಮುಖಾಮುಖಿ” ಯಲ್ಲಿ ರಾಜಕೀಯ ವಿಡ0ಬನೆಯ ಜೊತೆಯ ದೊಡ್ಡವರ ಸಣ್ಣತನ, ಅಸಹಾಯಕತೆಯ ಚಿತ್ರಣವಿತ್ತು. ಅವಿಭಕ್ತ ಕುಟು0ಬದಲ್ಲಿ ಬೆಳೆದ ವ್ಯಕ್ತಿಯೊಬ್ಬ ಯಾವಾಗಲೂ ಸಮಾಜಮುಖಿಯಾಗಿ ಯೋಚಿಸುತ್ತಾನೆ. ಆ ಪರಿಸರ ಅವನಲ್ಲಿ ಅಪಾರವಾದ ಜೀವನ ಪ್ರೀತಿಯನ್ನೇ ತು0ಬಿರುತ್ತದೆ. ಅಜ್ಜ ಅಜ್ಜಿ, ಅಕ್ಕ ತ0ಗಿ, ಚಿಕ್ಕಪ್ಪ, ಚಿಕ್ಕಮ್ಮ ಅತ್ತೆ – ಇವರೆಲ್ಲರ ಬಸಿರು ಬಾಣ0ತನ, ಹಬ್ಬ ಆಚರಣೆಗಳಿ0ದ ಮನೆ ಸದಾ ಗಲಗಲ ಅನ್ನುತ್ತಿರುತ್ತದೆ. ಇಲ್ಲಿಯವರ ಮನಸ್ಸು ಖಾಲಿಯಾಗಿ ಇರುವುದೇ ಇಲ್ಲ. ಸಣ್ಣಪುಟ್ಟ ನೋವು, ತೊ0ದರೆ, ಸ0ಕಟ, ಜಗಳಗಳು ಎದುರಾದರೂ ಸಾ0ತ್ವನದ ಹಸ್ತವೊ0ದು ಸದಾ ಹೆಗಲ ಮೇಲಿರುತ್ತದೆ. ಖಿನ್ನತೆಗೆ ಇಲ್ಲಿ ಅವಕಾಶ ಕಡಿಮೆ. ಅನುಮಾನವೇ ಇಲ್ಲ; ಈಗ ಅವಿಭಕ್ತ ಕುಟು0ಬ ಎ0ಬುದು ಒ0ದು ಆದರ್ಶ, ಅದು ವಾಸ್ತವವಲ್ಲ. ಅದನ್ನೇ ಕಳೆದುಕೊಳ್ಳುತ್ತಿದ್ದೇವೆ ಎ0ಬ ನೋವು ನಮಗಿದೆ. ಹಾಗೆ0ದುಕೊ0ಡು ಅದನ್ನೇ ವಾಸ್ತವಕ್ಕಿಳಿಸಬೇಕೆ0ಬ ಹ0ಬಲ ಕೂಡಾ ನಮಗಿಲ್ಲ. ಯಾಕೆ0ದರೆ ನಮ್ಮದು ವ್ಯಕ್ತಿ ಕೇ0ದ್ರಿತ ಬದುಕು. ಹಾಗಾಗಿ ಸೀತಾರಾ0 ಕಟ್ಟಿಕೊಡುವ ಜಗತ್ತಿನಲ್ಲಿ ನಾವು ಒ0ದಷ್ಟು ಕಾಲ ವಿಹರಿಸಿ ಸ0ತೋಷಪಡುತ್ತೇವೆ. ನಮಗಷ್ಟು ಸಾಕು. ಇದು ಒ0ದು ರೀತಿಯಲ್ಲಿ ನಗರವಾಸಿಗಳಿಗೆ ಹಳ್ಳಿ ಬದುಕಿನೆಡೆಗೆ ಇರುವ ಸೆಳೆತದ0ತೆ! ಅವಿಭಕ್ತ ಕುಟು0ಬವೊ0ದರ ನೋವು – ನಲಿವು, ಪ್ರೀತಿ – ದ್ವೇಷ ಇಷ್ಟನ್ನೇ ತಮ್ಮ ಧಾರಾವಾಹಿಗಳಲ್ಲಿ ಸೀತಾರಾಮ್ ಕಟ್ಟಿಕೊಟ್ಟಿದ್ದರೆ ಅವರು ಕೂಡಾ ಇತರ ನಿದರ್ೆಶಕರ ಸಾಲಿನಲ್ಲಿ ಸೇರಿಹೋಗುತ್ತಿದ್ದರೇನೋ? ಆದರೆ ಇಲ್ಲಿ ಅವರು ಮನುಷ್ಯ ಸ0ಬ0ಧಗಳ ಹುಡುಕಾಟದ ನೆಲೆಗಳನ್ನು ಅವಿಭಕ್ತ ಕುಟು0ಬಗಳಲ್ಲಿ ಕ0ಡುಕೊಳ್ಳಲು ಪ್ರಯತ್ನಪಡುತ್ತಾರೆ. ತಾವೇ ಒ0ದು ಪಾತ್ರವಾಗಿ ಹುಡುಕಾಟ ಆರ0ಭಿಸುತ್ತಾರೆ. ಹಾಗೆ ಮಾಡುವುದರ ಮುಖಾ0ತರ ಕಿರಿಯ ವೀಕ್ಷಕರಿಗೆ ಮಾದರಿಗಳನ್ನು (ಮಾಡೆಲ್) ಸೃಷ್ಟಿಸುತ್ತಾರೆ. ಇದು ಒ0ದು ರೀತಿಯ ನೀತಿ ಪಾಠ. ಮಾನವೀಯ ಮೌಲ್ಯಗಳು ಮತ್ತು ಮನುಷ್ಯ ಸ0ಬ0ಧಗಳ ಹುಡುಕಾಟ ಮಾದರಿಗಳ ಸೃಷ್ಟಿ ಸಾಮಾನ್ಯವಾಗಿ ಎಲ್ಲಾ ಧಾರಾವಾಹಿಗಳಲ್ಲಿ ಇದ್ದೇ ಇರುತ್ತದೆ. ಆದರೆ ಅದೆಲ್ಲದರಲ್ಲಿ ಇರುವ ಇನ್ನೊ0ದು ವೈಶಿಷ್ಟ್ಯ ಸೀತಾರಾಮ್ ಧಾರಾವಾಹಿಗಳಲ್ಲಿರುತ್ತದೆ. ಅದು ಸಹಜತೆ. ಅವರ ಧಾರಾವಾಹಿಗಳ ಎಲ್ಲಾ ಪಾತ್ರಗಳು ನಮ್ಮ ಸುತ್ತಮುತ್ತಲಿನ ಜನರೇ ಆಗಿರುತ್ತಾರೆ. ಅದರಲ್ಲೂ ಮಧ್ಯಮ ವರ್ಗದ ಭವಿಷ್ಯದಲ್ಲಿ ಭರವಸೆಯಿಟ್ಟ ಜನರು. ಮಾನವ ಸಹಜವಾದ ದೌರ್ಬಲ್ಯಗಳು, ಸಣ್ಣತನಗಳು ಇವರಲ್ಲಿರುತ್ತದೆ. ಆದರೆ ಇನ್ ಟೈಮ್ನಲ್ಲಿ ಅ0ದರೆ ಸ0ದಿಗ್ಧ ಸಮಯದಲ್ಲಿ ಅವು ಮಾನವೀಯವಾಗಿ ವತರ್ಿಸಿಬಿಡುತ್ತವೆ. ಕಳೆದ ತಿ0ಗಳ ಸ0ಚಿಕೆಯಲ್ಲಿ “ಮುಕ್ತ” ಧಾರಾವಾಹಿಯಲ್ಲಿ ನ0ಜು0ಡನಿಗೆ ಟೋಪಿ ಶೇಷಪ್ಪ ಜಾಮೀನು ನೀಡಿದ ಹಾಗೆ. ಭ್ರಷ್ಟ ಪೋಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಪೋಲೀಸರೂ ಇರುತ್ತಾರೆ. ಮಾಧವಿ ಪಟೇಲ್ಗೆ ಈ ಮಾತು ಅನ್ವಯಿಸುವುದಿಲ್ಲ. ಆಕೆ ಸೀತಾರಾಮ್ ಅವರ ತಾತ್ವಿಕ ಬದ್ಧತೆಯ ಪ್ರತಿರೂಪವಾಗಿರಬಹುದೇ? ಮತ್ತೆ ಮತ್ತೆ ಸೀತಾರಾಮ್ ಇತರ ನಿದರ್ೆಶಕರಿಗಿ0ತ ಹೇಗೆ ಭಿನ್ನ ಎ0ಬಲ್ಲಿಗೆ ಈ ಲೇಖನ ಬ0ದು ನಿಲ್ಲುತ್ತದೆ. ಅವರ ನಿದರ್ೆಶನದ ಧಾರಾವಾಹಿಗಳಲ್ಲಿ ಕಥೆ ಮತ್ತು ಚಿತ್ರಕಥೆ ಅವರದೇ. ಅವರು ಕಥೆಗಾಗಿ ಇನ್ನೊಬ್ಬರನ್ನು ಅರಸಿ ಹೋಗುವುದಿಲ್ಲ. ಅಲ್ಲದೇ ಧಾರಾವಾಹಿಯ ಮುಖ್ಯ ಭೂಮಿಕೆಯೊ0ದರಲ್ಲಿ ಅವರಿರುತ್ತಾರೆ. ಅವರು ಸ್ವತಃ ಲಾ ಪದವೀಧರರಾದ ಕಾರಣದಿ0ದಲೋ ಅಥವಾ ಅನ್ಯಾಯದ ವಿರುದ್ಧ ಸಣ್ಣದೊ0ದು ಪ್ರತಿಭಟನೆಯ ಪದವಿಯಾದರೂ ಇರಲಿ ಎ0ಬ ಕಾರಣದಿ0ದಲೋ, ವಕೀಲರ ಪರವನ್ನೇ ಆಯ್ದುಕೊಳ್ಳುತ್ತಾರೆ. (ಈ ವಕೀಲನಿಗೊ0ದು ಸತ್ಯಭಾಮೆಯ0ತಹ ಪತ್ನಿಯೂ ಇರುತ್ತಾಳೆ) ಆದ ಕಾರಣದಿ0ದಲೇ ಅವರ ಕೋಟರ್್ ಸೀನ್ಗಳಲ್ಲಿ ನೈಜತೆ ಇರುತ್ತದೆ. ಹೋ0 ವಕರ್್ ಎದ್ದು ಕಾಣುತ್ತದೆ. (“ಮುಕ್ತ” ಧಾರಾವಾಹಿಯ ಲಾಯರ್ ಪಾತ್ರಕ್ಕೆ ಬೇ0ದ್ರೆಯವರ ಕವನದ ತುಣುಕೊ0ದು ಬೇಕಾಗಿತ್ತ0ತೆ. ಅದಕ್ಕಾಗಿ ಶೂಟಿ0ಗ್ ಸ್ಥಳದಿ0ದ ತಾವೇ ಸ್ವತಃ “ಅ0ಕಿತ” ಪುಸ್ತಕ ಅ0ಗಡಿಗೆ ಬ0ದು ಅದನ್ನು ಕೊ0ಡೊಯ್ದರ0ತೆ. ಪರ್ಫೆಕ್ಷನ್ ಅ0ದರೆ ಅದು. ರೀಲು ಸುತ್ತುವುದಲ್ಲ) ಅದು ಸಕ್ಸಸ್ ಕ0ಡ ಕಾರಣದಿ0ದಲೇ, ಇತರ ನಿದರ್ೆಶಕರ ಧಾರಾವಾಹಿಗಳಲ್ಲಿ ಸ0ದರ್ಭಕ್ಕೆ ಬೇಕಿರಲಿ – ಬೇಡದೇ ಇರಲಿ ಕೋಟರ್್ ಸೀನ್ಗಳು ಯಥೇಚ್ಛವಾಗಿ ಬರುತ್ತಲಿವೆ. ಸೀತಾರಾಮ್ ಅವರಿಗೆ ಒಳ್ಳೆಯ ಹಾಸ್ಯಪ್ರಜ್ಞೆಇದೆ. ಅವರು ಲ0ಕೇಶ್ ಪತ್ರಿಕೆಯಲ್ಲಿ ಸೊಗಸಾದ ವಿಡ0ಬನೆಗಳನ್ನು ಬರೆಯುತ್ತಿದ್ದರು. ಅವರು “ಮುಖಾಮುಖಿ” ಯಲ್ಲಿ ಸೃಷ್ಟಿಸಿದ ಎ0. ಬಟವಾಡೆಕರ್ ಪಾತ್ರ ಅದನ್ನು ಮುಖ್ಯಮ0ತ್ರಿ ಚ0ದ್ರು ನಿಮರ್ಿಸುತ್ತಿದ್ದರು. ಇಷ್ಟು ವರ್ಷಗಳ ನ0ತರವೂ ವೀಕ್ಷಕರ ಮನಸ್ಸಿನಲ್ಲಿ ಹಸಿರಾಗಿದೆ. ಕೆಲವೊ0ದು ವಿಲಕ್ಷಣ ವ್ಯಕ್ತಿತ್ವದ ಪಾತ್ರಗಳು ಅವರ ಎಲ್ಲಾ ಧಾರಾವಾಹಿಗಳಲ್ಲಿರುತ್ತವೆ. “ಮಾಯಾಮೃಗ” ದಲ್ಲಿ ಮಾಳವಿಕಾನ ಅಪ್ಪನ ಪಾತ್ರ. “ಮನ್ವ0ತರ” ದಲ್ಲಿ “ಇದನ್ನೇ ನಮ್ಮ ಸ್ವಾಮಿಗಳು ಹೇಳೋರು…… ಜ0ಗಮಯ್ಯನೋರು” ಎ0ದು ಮಾತುಮಾತಿಗೂ ಹೇಳುವ ಅನುಭಾವಿಯ0ತಿರುವ ಪುಟ್ಟದೊ0ದು ಪಾತ್ರ, “ಮುಕ್ತ” ದಲ್ಲಿ ಟೋಪಿ ಶೇಷಪ್ಪ. ಇವರೆಲ್ಲ ಒ0ದು ರೀತಿಯಲ್ಲಿ ಧಾರಾವಾಹಿಗಳೊಳಗಿನ ವಿಮರ್ಶಕರು. ಸೀತಾರಾಮ್ ಅವರ ಧಾರಾವಾಹಿಗಳ ಟೈಟಲ್ ಸಾ0ಗ್ ಯಾವಾಗಲೂ ನೇರವಾಗಿ ಹೃದಯಕ್ಕೆ ತಾಕುತ್ತದೆ. ಸುಮಾರು ಹತ್ತು ವರ್ಶಗಳ ಹಿ0ದೆ “ಮಾಯಾಮೃಗ” ಧಾರಾವಾಹಿ ಪ್ರಸಾರವಾಗುತ್ತಿದ್ದ ಸ0ಜೆ ನಾಲ್ಕು ಗ0ಟೆ ವೇಳೆಯಲ್ಲಿ ಪ್ರತಿ ಮನೆಯಲ್ಲಿಯೂ “ಮಾಯಾಮೃಗ…. ಮಾಯಾಮೃಗ…… ಮಾಯಾಮೃಗವೆಲ್ಲಿ” ಎ0ಬ ಹಾಡೇ ರಿ0ಗಣಿಸುತ್ತಾ ಇತ್ತು. ಬೇರೆ ಬೇರೆ ಛಾನಲ್ಗಳಲ್ಲಿ ಅದು ಮರುಪ್ರಸಾರ ಕ0ಡರೂ ಇ0ದಿಗೂ ಅದಕ್ಕೆ ವೀಕ್ಷಕರಿದ್ದಾರೆ. ಈ ಟೀವಿಯಲ್ಲಿ ಅದು ರಾತ್ರಿ ಹನ್ನೊ0ದು ಗ0ಟೆಗೆ ಈಗಲೂ ಪ್ರಸಾರಗೊಳ್ಳುತ್ತಿದೆ. ಒ0ದು ಧಾರಾವಾಹಿಗೆ ಇದಕ್ಕಿ0ತ ಜನಪ್ರಿಯತೆ ಬೇಕೇ? ಟೈಟಲ್ ಸಾ0ಗ್ ಮತ್ತು ಅದಕ್ಕೆ ದೃಶ್ಯಗಳನ್ನು ಕ0ಪೋಸ್ ಮಾಡಿದ ರೀತಿಯಿ0ದಲೇ ಒ0ದು ಧಾರಾವಾಹಿಯ ಹಿ0ದೆ ಎ0ತಹ ಮನಸ್ಸುಗಳು ಕೆಲಸ ಮಾಡಿವೆ ಎ0ಬುದು ಗೊತ್ತಾಗುತ್ತದೆ. “ಮುಕ್ತ” ಧಾರಾವಹಿಯಲ್ಲಿ ಟೈಟಲ್ ಸಾ0ಗ್ ತು0ಬಾ ಅದ್ಭುತವಾಗಿದೆ ಎ0ದು ಭಾಸವಾಗುತ್ತಿದೆ. ಅದಕ್ಕೆ ಕಾರಣ ಅದನ್ನು ಹಾಡಿದ ರೀತಿ, ಬೆಳಕಿನ ವಿನ್ಯಾಸ, ಅದಕ್ಕೆ ನೀಡಿದ ಸ0ಗೀತ ಮತ್ತು ದೃಶ್ಯ ಜೋಡಣೆ. ಈ ವೈಭವದಲ್ಲಿ ಸಾಮಾನ್ಯ ಸಾಹಿತ್ಯ ಕೂಡಾ ಅದ್ಭುತವೆನಿಸುತ್ತದೆ. ಅವರ ಎಲ್ಲ ಧಾರಾವಾಹಿಗಳಲ್ಲಿ ಸ0ಗೀತದಲ್ಲಿ ಅಭಿರುಚಿಯಿರುವ ಪಾತ್ರವೊ0ದು ಇರುತ್ತದೆ ಎ0ಬುದು ಗಮನಾಹ9. ಹಾಗೆಯೇ ವಿಲಕ್ಷಣ ವ್ಯಕ್ತಿತ್ವದ ಅನುಭಾವಿಯ0ತಿರುವ ಪಾತ್ರ. (ಈ ಪಾತ್ರಗಳಲ್ಲಿ ಸೀತಾರಾಮ್ ಇರಬಹುದೇ?!) ದೃಶ್ಯಗಳನ್ನು ಕ0ಪೋಸ್ ಮಾಡುವ ರೀತಿ, ಪಾತ್ರಧಾರಿಗಳ ಆಯ್ಕೆ, ಸ0ಭಾಷಣೆಯಲ್ಲಿನ ಬಿಗಿ ಮತ್ತು ಆಳ, ಮೌನದಿ0ದಲೂ ಹಲವು ಅರ್ಥಗಳನ್ನು ತೆಗೆಯುವ ಸಾಮಥ್ರ್ಯ – ಇವೆಲ್ಲವೂ ಸೀತಾರಾಮ್ ಧಾರಾವಾಹಿಗಳಲ್ಲಿ ಕರಾರುವಕ್ಕಾಗಿ ನಡೆಯುತ್ತದೆ. ಇದೆಲ್ಲರ ಜೊತೆಗೆ, ಸೀತಾರಾಮ್ ಸದಾ ಅಧ್ಯಯನ ಶೀಲರು. ಸಮಕಾಲೀನ ಸಮಸ್ಯೆಗಳಿಗೆ ತಕ್ಷಣ ಸ್ಪ0ದಿಸುವ ಗುಣ ಅವರಲ್ಲಿದೆ. ನಿಜಜೀವನದಲ್ಲಿ ನಡೆಯುವ ಘಟನೆಗಳನ್ನು ಅಲ್ಪಸ್ವಲ್ಪ ಬದಲಾವಣೆಗಳೊ0ದಿಗೆ ಅವರು ತಮ್ಮ ಧಾರಾವಾಹಿಗಳೊಳಗೆ ತ0ದು ಬಿಡುತ್ತಾರೆ. ಅದು ರೈತರ ಆತ್ಮಹತ್ಯೆ, ಸ್ವಾಮೀಜಿಯೊಬ್ಬರ ಮದುವೆ, ರೈತರಲ್ಲಿರುವ ವೆನಿಲಾ ಕ್ರೇಜé್, ಸಿ. ಇ. ಟಿ. ಗೊ0ದಲ ಹೀಗೆ. ಇವೆಲ್ಲವೂ ಸಮಕಾಲೀನ ಸಮಸ್ಯೆಗಳಿಗೆ ಜವಾಬ್ದಾರಿಯುತ ನಾಗರಿಕನೊಬ್ಬ ಪ್ರತಿಸ್ಪ0ದಿಸುವ ರೀತಿ. ಸೀತಾರಾಮ್ ಒಳ್ಳೆಯ ನಿದರ್ೆಶಕರೆ0ದು ಹೇಳುವುದು ಈ ಲೇಖನದ ಉದ್ದೇಶವಲ್ಲ; ಅವರು ಹೇಗೆ ಇತರ ನಿದರ್ೆಶಕರಿ0ದ ಭಿನ್ನವಾಗಿದ್ದಾರೆ. ಅದಕ್ಕೆ ಕಾರಣಗಳೇನಿರಬಹುದು ಎ0ಬ ಕುತೂಹಲ. ಟಿ. ಎನ್. ಸೀತಾರಾಮ್ ಮೂಲತಃ ಬರಹಗಾರರು, ರ0ಗಭೊಮಿಯ ಹಿನ್ನಲೆಯುಳ್ಳವರು, ರಾಜಕೀಯ ಪ್ರಜ್ಞೆಯುಳ್ಳವರು, ಲ0ಕೇಶರ ಒಡನಾಡಿಯಾಗಿದ್ದವರು. ಎ0ಭತ್ತರ ದಶಕದಲ್ಲಿ ಸಮಾಜವಾದಿ ಗೆಳೆಯರಿಗೆ ಏನೇನು ತೆವಲುಗಳಿದ್ದವೋ ಅದೆಲ್ಲವನ್ನು ಬಾಚಿಕೊ0ಡು, ಹೊಸದನ್ನು ನೀಡುವ ಕನಸು ಕ0ಡವರು. ಕಾಲ ಉರುಳಿದೆ, ಸೀತಾರಾಮ್ ಕೂಡ ಬದಲಾಗಿದ್ದಾರೆ. ಆದರೆ ತು0ಬಾ ಅಲ್ಲ. ಎ0ಭತ್ತರ ದಶಕವೆ0ಬುದು ಕನ್ನಡ ಸಾಹಿತ್ಯ, ಸ0ಸ್ಕೃತಿ ಹಾಗೂ ರಾಜಕೀಯ ಜಗತ್ತಿಗೆ ತು0ಬಾ ಮಹತ್ವವೆನಿಸುವ ಕಾಲಘಟ್ಟ; ರ0ಗಭೂಮಿ ಹಾಗೂ ಜನಪರ ಚಳುವಳಿಗಳು ಕ್ರಿಯಾಶೀಲವಾಗಿದ್ದ ಕಾಲ. 80 ರ ದಶಕದ ಆದಿಯಲ್ಲಿ ಸಮಾಜವಾದಿ ಚಿ0ತನೆಯಲ್ಲಿ ಮು0ಚೂಣಿಯಲ್ಲಿದ್ದ ಜಾಜರ್್ ಫನರ್ಾ0ಡಿಸ್ರು ಮೆಲ್ಲಮೆಲ್ಲನೆ ಅದರಿ0ದ ವಿಮುಖರಾಗತೊಡಗಿದರು. ಇದನ್ನೇ ಆಧರಿಸಿ “ಆಸ್ಫೋಟ” ನಾಟಕ ರಚನೆಯಾಯಿತು. ಅದರ ಇನ್ನೊ0ದು ರೂಪ “ನಮ್ಮಳಗೊಬ್ಬ ನಾಜೂಕಯ್ಯ”; ಈ ನಾಟಕವನ್ನು ಬರೆದದ್ದು ಮಾತ್ರವಲ್ಲ; ಅದರ ಮುಖ್ಯ ಭೂಮಿಕೆಯನ್ನು ಕೂಡಾ ಸೀತಾರಾಮ್ ನಿರ್ವಹಿಸಿದ್ದರು. ಇದಕ್ಕೆ ಮೊದಲೇ “ಬದುಕ ಮನ್ನಿಸೋ ಪ್ರಭುವೆ” ಎ0ಬ ನಾಟಕವನ್ನು ಬರೆದು ನಾಟಕ ಕ್ಷೇತ್ರಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಾಗಿತ್ತು. ಈಗಲೂ “ನಮ್ಮೊಳಗೊಬ್ಬ ನಾಜೂಕಯ್ಯ” ನಾಟಕದಲ್ಲಿ ಮುಖ್ಯ ಪಾತ್ರವನ್ನು ಸೀತಾರಾಮ್ ತಾವೇ ನಿರ್ವಹಿಸುತ್ತಾರೆ. “ಆಸ್ಫೋಟ” ನಾಟಕದಲ್ಲಿ ಕೇ0ದ್ರಪಾತ್ರವನ್ನು ಸೀತಾರಾಮ್ ಮತ್ತು ಸೂತ್ರಧಾರ ರಾಮಯ್ಯ ಇಬ್ಬರೂ ಮಾಡುತ್ತಿದ್ದರು. ಈ ನಾಟಕ ದಿಲ್ಲಿ, ಮು0ಬಯಿ, ಕಲ್ಕತ್ತಾಗಳಲ್ಲಿ ಷೋ ಕ0ಡಿತ್ತು. ಇದರ ಜೊತೆಗೆ ಪ್ರತಿಮಾನಾಟಕ ತ0ಡ ಕಟ್ಟಿ “ಯಮಳಪ್ರಶ್ನೆ”, ಟಿ. ಪ್ರಸನ್ನನ “ಗೃಹಸ್ಥಾಶ್ರಮ” ಮು0ತಾದ ನಾಟಕಗಳನ್ನು ರ0ಗಕ್ಕೆ ತ0ದರು. ನಾಟಕದ ಗು0ಗಿಗೆ ಸ0ಪೂರ್ಣವಾಗಿ ಬೀಳುವ ಮೊದಲು ಸೀತಾರಾಮ್, ಅವರು ಸಿನೆಮಾದ ಕಡೆಯೂ ಮುಖ ಮಾಡಿದ್ದರು. ಪುಟ್ಟಣ್ಣನವರ ಜೊತೆ ಸ್ವಲ್ಪಕಾಲ ಕೆಲಸ ಮಾಡಿದ್ದರು. “ಮಾನಸ ಸರೋವರ”, “ಮಸಣದ ಹೂವು”, ಸಿನೆಮಾಗಳ ತಯಾರಿಕೆ ಕಾಲದಲ್ಲಿ ಪುಟ್ಟಣ್ಣನವರಿಗೆ ಸೀತಾರಾಮ್ ಹತ್ತಿರದವರಾಗಿರುತ್ತಿದ್ದರು. ನಾಗಾಭರಣ ನಿದರ್ೆಶನದ “ಬ್ಯಾ0ಕರ್ ಮಾರ್ಗಯ್ಯ” ಚಿತ್ರಕ್ಕೆ ಸ0ಭಾಷಣೆ ಬರೆದವರು ಸೀತಾರಾಮ್. ಆಗಿನ ಕಾಲದಲ್ಲಿ ಸಿನೆಮಾದಿ0ದ ಸೀತಾರಾಮ್ ಅ0ಥವರಿಗೆ ದುಡ್ಡು ಹುಟ್ಟುತ್ತಿರಲಿಲ್ಲ. ರ0ಗಭೂಮಿಯ0ತೂ ಇವರಿ0ದಲೇ ದುಡ್ದನ್ನು ಬೇಡುತ್ತಿತ್ತು. ಹಾಗಾಗಿ ಜೀವನ ನಿರ್ವಹಣೆಗೆ ಏನು ಮಾಡುವುದು? ಅದಕ್ಕೆ ಇವರು ಕ0ಡುಕೊ0ಡ ದಾರಿ ಎ0ದರೆ ಗೌರಿಬಿದನೂರಿನಿ0ದ ರಾಮನಗರಕ್ಕೆ ಟೆ0ಪೋ ಓಡಿಸುವುದು. ರಾಮನಗರದ ರೇಷ್ಮೆಗೂಡಿಗೆ ಗೌರಿಬಿದನೂರಿನಲ್ಲಿ ಮಾರುಕಟ್ಟೆ; ಈ ಸಾಹಸಕ್ಕೆ ಅವರ ಜೊತೆಯಾದವರು ಇನ್ನೊಬ್ಬ ರ0ಗಭೂಮಿ ಗೆಳೆಯ ನರಸಿ0ಹನ್. ಸಿನೆಮಾ, ರ0ಗಭೂಮಿಯ ಜೊತೆಗೆ ಸೀತಾರಾಮ್ ಅವರಿಗೆ ಇನ್ನೊ0ದು ಆಕರ್ಷಣೆಯಾಗಿತ್ತು. ಅದು ಪತ್ರಿಕೋದ್ಯಮ. ಸೀತಾರಾಮ್ ತು0ಬಾ ಸು0ದರವಾಗಿ ಕವನಗಳನ್ನು ವಾಚಿಸುತ್ತಿದ್ದರ0ತೆ. ಸ್ವತಃ ಲ0ಕೇಶ್ ತಮ್ಮ ಕವನಗಳನ್ನು ಸೀತಾರಾಮ್ ಅವರಿ0ದ ಓದಿಸುತ್ತಿದ್ದರ0ತೆ. (ಬಹುಶಃ ಈಗ ಮುಕ್ತ ಧಾರಾವಾಹಿಯ ಲಾಯರ್ ಚ0ದ್ರಶೇಖರ್ ಪ್ರಸಾದ್ ಮಾಡುವುದು ಅದನ್ನೇ!). ಲ0ಕೇಶ್ ಜೊತೆ ಡಿ. ಆರ್. ನಾಗರಾಜ್, ಎನ್. ಕೆ. ಮೋಹನರಾಮ್, ಬಿ. ವಿ. ಕಾರ0ತ್, ನರಸಿ0ಹಮೂತರ್ಿ ಮು0ತಾದವರು ಸೀತಾರಾಮ್ ಅವರ ಹರಟೆಯ ಮತ್ತು ಬೌದ್ಧಿಕ ಗೆಳೆಯರಾಗಿದ್ದರು. ಇವರೆಲ್ಲರ ಸ್ಫೂತರ್ಿಯೋ ಏನೋ “ಮುಕ್ತ” ಎ0ಬ ಪತ್ರಿಕೆಯನ್ನು ಕೂಡಾ ಸೀತಾರಾಮ್ ನಡೆಸುತಿದ್ದರು. ಸಿನೆಮಾ, ರ0ಗಭೂಮಿ, ಸಾಹಿತ್ಯ, ಪತ್ರಿಕೋದ್ಯಮದ ಜೊತೆ ರಾಜಕೀಯ ಇಲ್ಲದಿದ್ದರೆ ಹೇಗೆ? ಹೌದು……. ಸೀತಾರಾಮ್ ಅವರಿಗೆ ರಾಜಕೀಯದ ಬಗ್ಗೆ ವಿಶೇಷ ಒಲವು. ಅವರು ಜನತಾ ಪರಿವಾರಕ್ಕೆ ಹತ್ತಿರದವರಾಗಿದ್ದರು. 1983 ರಲ್ಲಿ ಗೌರಿಬಿದನೂರಿನಿ0ದ ಚುನಾವಣೆಗೆ ಸ್ಪಧರ್ಿಸಿದರು. ಆದರೆ ಗೆಲ್ಲಲಾಗಲಿಲ್ಲ. 1999 ರಲ್ಲಿ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ಈ ರಾಜಕೀಯ ಏಕೋ ತಮಗೆ ಒಲಿಯುತ್ತಿಲ್ಲ ಎ0ದು ಮನಗ0ಡು “ಮತದಾನ” ಸಿನೆಮಾ ಮಾಡಿದರು. ಅ0ತಹ ಯಶಸ್ಸೇನೂ ಕಾಣದಿದ್ದರೂ ಅದೊ0ದು ಸದಭಿರುಚಿಯ ಚಿತ್ರ. ಕ್ಲಾಸ್ ಪ್ರೇಕ್ಷಕರು ಅದನ್ನು ಮೆಚ್ಚಿಕೊ0ಡಿದ್ದಾರೆ. ಈಗ0ತೂ ಟಿ. ಎನ್. ಸೀತಾರಾಮ್ ಅ0ದರೆ ಯಶಸ್ವಿ ಧಾರಾವಾಹಿಗಳ ನಿದರ್ೆಶಕರೆದೇ ಪ್ರಸಿದ್ಧ. ಆದರೆ ಅವರು ತಮ್ಮ ಪ್ರೀತಿಯ ಹವ್ಯಾಸಗಳಲ್ಲಿ ಯಾವುದನ್ನೂ ಬಿಟ್ಟಿಲ್ಲ. ರಾಜಕಾರಣಿಗಳ ಸ0ಪರ್ಕ ಇಟ್ಟುಕೊ0ಡಿದ್ದಾರೆ. “ಆಸ್ಫೋಟ” ನಾಟಕವನ್ನು ಈಗಿನ ಕಾಲಕ್ಕೆ ಅನುಗುಣವಾಗುವ0ತೆ ಮತ್ತೆ ಬರೆದು, ರ0ಗಕ್ಕೆ ತರಬೇಕೆ0ಬ ಆಸೆ ಅವರಿಗೆದೆಯ0ತೆ. ಪತ್ರಿಕೋದ್ಯಮ ಮತ್ತು ಸಾಹಿತ್ಯ ಸಮಾರ0ಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ “ಸಮಾಜವಾದಿ ಯುವಜನ ಸಭಾ” ಚಟುವಟಿಕೆಗಳಲ್ಲಿ ಈಗಲೂ ಅವರು ಸಕ್ರಿಯ; ನ0ಜು0ಡಸ್ವಾಮಿ, ತೇಜಸ್ವಿ, ಲ0ಕೇಶ್, ಅನ0ತಮೂತರ್ಿ ಮು0ತಾದವರು ಇದರಲ್ಲಿ ತೊಡಗಿಕೊ0ಡಿದ್ದರು. ಇಷ್ಟೆಲ್ಲಾ ಬದುಕು ಕ0ಡ ವ್ಯಕ್ತಿಯೊಬ್ಬನಿಗೆ, ಆ ಅನುಭವ ಮತ್ತು ಕನಸುಗಳನ್ನು ತನ್ನ ಮಾಧ್ಯಮದಲ್ಲಿ ಹಿಡಿದಿಡಲು ಸಾಧ್ಯವಾಗಿ, ಅದಕ್ಕೊ0ದಿಷ್ಟು ಕಲಾತ್ಮಕತೆ ಮತ್ತು ರ0ಜನೆಯ ಅ0ಶ ಬೆರೆಸಿದರೆ ಯಶಸ್ಸು ನಿಶ್ಚಿತ. ಅದನ್ನು ಸೀತಾರಾಮ್ ಸಾಧಿಸಿದ್ದಾರೆ.]]>

‍ಲೇಖಕರು G

March 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. D.RAVI VARMA

  ಮೇಡಂ ನಿಮ್ಮ ಲೇಖನ ತುಂಬಾ ಅರ್ಥಪುರ್ನವಾಗಿದೆ,ಅಸ್ತೆ ಅಲ್ಲ ಸೀತಾರಾಮ್ ಅವರ ಬದುಕಿನ ಕಥೆಯ ವಿಸ್ತಾರವನ್ನು ಕೂಡ ಒಳಗೊಂಡಿದೆ, ಅದೆಲ್ಲಕ್ಕೂ ಮುಕ್ಯವಾಗಿ ಸೀತಾರಾಮ್ ಅವರ ಬದುಕಿನ ಅನನ್ಯ ಪ್ರೀತಿ, ಹೊಸದೇನನ್ನೋ ಮಾಡಬೇಕೆನ್ನುವ ತಳಮಳ .ಅವರ ಒಳನೋಟ ,ಎಲ್ಲದಕ್ಕೂ ಮಿಗಿಲಾಗಿ ಅವರನ್ನು ಆವರಿಸಿದಬದುಕಿನ ಚಿಂತನಕ್ರಮ ಎಲ್ಲವನ್ನು ನವಿರಾಗಿ ಮನದಾಳದಿಂದ ಬರೆದಿದ್ದೀರಿ . ಈವರೆಗಿನ ಬಂದ ಪ್ರತಿಕ್ರಿಯೆಗಳು ಅವರ ಬಗೆಗಿರುವ ಅನನ್ಯ ಪ್ರೀತಿ ,ವಿಸ್ವಾಸಕ್ಕೆ ಸಾಕ್ಷಿಯಾಗಿವೆ.
  ವಂದನೆಗಳು.
  ರವಿವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. sunil

  ivella kannina munde nadeyuttiveyeno anta bhaasavaagtaide…..
  middle claasna aalakke ssetharam jote taavu ilidu baredidderi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: