‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ
ನಮ್ಮ ಸಂತೇಕಡೂರು ಶಿವಮೊಗ್ಗ ಸಮೀಪ ತುಂಗಾ ತೀರದ ಬಲಗಡೆಯಲ್ಲಿರುವ ಸಂಸ್ಕೃತ ಗ್ರಾಮಕ್ಕೆ ಕೇವಲ ನಾಲ್ಕು ಕಿಲೋಮೀಟರುಗಳ ಅಂತರದಲ್ಲಿರುವ ಹಳ್ಳಿ. ಆ...
ನಮ್ಮ ಸಂತೇಕಡೂರು ಶಿವಮೊಗ್ಗ ಸಮೀಪ ತುಂಗಾ ತೀರದ ಬಲಗಡೆಯಲ್ಲಿರುವ ಸಂಸ್ಕೃತ ಗ್ರಾಮಕ್ಕೆ ಕೇವಲ ನಾಲ್ಕು ಕಿಲೋಮೀಟರುಗಳ ಅಂತರದಲ್ಲಿರುವ ಹಳ್ಳಿ. ಆ...
ರೇಷ್ಮಾ ಗುಳೇದಗುಡ್ಡಾಕರ್ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು. ಈ ಪುಸ್ತಕ ಕಾರ್ಬೆಟ್ ಅವರ...
ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಕನ್ನಡದಲ್ಲಿ 'ಲಲಿತ ಪ್ರಬಂಧʼಗಳಿಗೆ ಮುಖ್ಯವಾದ ಸ್ಥಾನವಿತ್ತು. ಇಂಗ್ಲಿಷಿನ 'ಎಸ್ಸೇ’ ಎಂಬ ಮಾತಿಗೆ ಸಂವಾದವಾಗಿ...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ನಾಗತಿಹಳ್ಳಿ ಚಂದ್ರಶೇಖರ ನನ್ನ ಪ್ರೀತಿಯ ಲೇಖಕ. ನಾನು ಅತ್ಯಂತ ಇಷ್ಟಪಡುವ ಸಾಹಿತಿ. ಅವರ ಬರಹಗಳೆಂದರೆ, ನನಗೆ ಕೊಬ್ಬರಿ ಬೆಲ್ಲ. ಗುಲ್ಬರ್ಗಕ್ಕೆ ಬಂದಾಗ ಅವರ ಜೊತೆ ನಾನು, ಕತೆಗಾರ ಚಿತ್ರಶೇಖರ ಕಂಠಿ ಮಾತಾಡಿದ್ವಿ. ಊಟ ಮಾಡಿದ್ವಿ. ಹರಟೆ ಹೊಡೆದಿದ್ವಿ.
ಗುಲ್ಬರ್ಗದ ಅಮರ ಪ್ರಕಾಶನದಿಂದ ನಾಗತಿಹಳ್ಳಿ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ನಾಗತಿಹಳ್ಳಿ ಬಂದಿದ್ರು. ಅವರ ಸಮ್ಮುಖದಲ್ಲಿಯೇ ನಾನು ಅವರ ಅಂಕಣ ಬರಹಗಳಾದ ‘ ನನ್ನ ಪ್ರೀತಿಯ ಹುಡುಗಿಗೆ’ ಎರಡು ಸಂಪುಟಗಳ ಬಗ್ಗೆ ಪ್ರಬಂಧ ಮಂಡಿಸಿದ್ದೆ. ನನ್ನ ಜೊತೆ ಆರ್.ಜಿ,ಹಳ್ಳಿ ನಾಗರಾಜ ಮತ್ತಿತರರು ಇದ್ದರು.
ನನ್ನ ಮಾತುಗಳನ್ನು ಆಲಿಸಿದ ನಾಗತಿಹಳ್ಳಿ ಆಮೇಲೆ, ‘ಚೆನ್ನಾಗಿ ನನ್ನನ್ನು ಓದಿಕೊಂಡಿದ್ದೀರಿ. ‘….ಹುಡುಗಿ’ ಅಂಕಣ ಅಷ್ಟು ಪರಿಯಾಗಿ ಗಮನವಿಟ್ಟು ಓದಿದ್ದೀರಿ.ಥ್ಯಾಂಕ್ಸ್’ ಅಂದಿದ್ರು.
ಅದಾಗಿ ಸರಿಸುಮಾರು ಐದಾರು ವರ್ಷಗಳಾದರೂ, ನನಗಿನ್ನು ನೆನಪಿದೆ.
ಇವತ್ತಿಗೂ ನಾಗತಿಹಳ್ಳಿ ಅವರಿಂದ ಹೊಸ ಬರಹ, ಪುಸ್ತಕ ಬಂದರೆ, ಖರೀದಿ ಮಾಡಿಯೇ ಓದುತ್ತೇನೆ.
ಅವರು ಫೆಂಟಾಸ್ಟಿಕ್ ರೈಟರ್.
ನೂರ್ಕಾಲ ಬಾಳಲಿ ಎನ್ನೋದೇ ನಮ್ಮಂಥವರ ಅಭಿಮಾನದ ಮಾತು.
ಪ್ರೀತಿಯಿಂದ
ಮಹಿಪಾಲರೆಡ್ಡಿ ಮುನ್ನೂರ್
ಗುಲ್ಬರ್ಗ.
ಜಂಗಮ – 9611365002