ನಾಗೇಶ್ ಹೆಗಡೆ c/o ಫಿಶ್ ಮಾರ್ಕೆಟ್

ನಾಗೇಶ್ ಹೆಗಡೆ ಫಿಶ್ ಮಾರ್ಕೆಟ್ ನಲ್ಲಿದ್ದರು. ‘ಸದ್ಯಕಿದು ಗದ್ದಲ ಸಂತಿ’ ಎಂಬ ಹಣೆಪಟ್ಟಿ ಹಚ್ಚಿಕೊಂಡೇ ಆರಂಭವಾಗಿರುವ ಫಿಶ್ ಮಾರ್ಕೆಟ್ ನಲ್ಲಿ ಈ ಬಾರಿ ಒಂದಿಷ್ಟು ಸದ್ದು ಗದ್ದಲವಿತ್ತು. ನಾಗೇಶ್ ಹೆಗಡೆ ಈ ಸಂತೆಯಲ್ಲಿಯೂ ತಮ್ಮ ದನಿ ಕೇಳುವಂತೆ ಮಾಡಿದರು.
ಫಿಶ್ ಮಾರ್ಕೆಟ್ ನಲ್ಲಿ ನನ್ನಂತ ಮೆಲುದನಿಯವರಿಗೇನು ಕೆಲಸ ಎಂದುಕೊಂಡರೆನೋ?. ನ್ಯಾನೋ ಬಸ್ ಗಳು ಅಗತ್ಯವಿರುವ ದೇಶದಲ್ಲಿ ನ್ಯಾನೋ ಕಾರ್ ಗಳು ಬರುತ್ತಿರುವ ವಿಪರ್ಯಾಸದಿಂದ ಹಿಡಿದು ಇಂದಿನ ಪತ್ರಿಕೋದ್ಯಮದವರೆಗೆ ತಮ್ಮ ಗಟ್ಟಿ ನಂಬಿಕೆಯನ್ನು ಮುಂದಿಟ್ಟರು.
ಆ ಚಿತ್ರಗಳು ಇಲ್ಲಿವೆ. ಡಿ ಜಿ ಮಲ್ಲಿಕಾರ್ಜುನ್, ಶ್ರೀಜಾ, ಸುಘೋಷ್ ಅವರ ಕೃಪೆಯಿಂದ. ಎಂದಿನಂತೆ ‘ಕಡಲತೀರ’ದ ಸಂದೀಪ್ ಕಾಮತ್ ತಮ್ಮ ಬ್ಲಾಗ್ ನಲ್ಲಿ ಈ ಮಾರ್ಕೆಟ್ ಬಗ್ಗೆ ಬರೆದರೆ ಎಂದಿನಂತೆ ಎತ್ತಿ ಇಲ್ಲಿ ಸಾಗಿಸಲು ನಾವೂ ಅವರ ಬ್ಲಾಗ್ ಬಾಗಿಲು ಕಾಯುತ್ತಿದ್ದೇವೆ.
ಅಂದ ಹಾಗೆ ಈ ಮಾರ್ಕೆಟ್ ನಲ್ಲಿ ಕೆ ಎಸ್ ರಾಜಾರಾಂ, ಸಾಗರದಿಂದ ಚಂದ್ರಶೇಖರ್, ಹುಬ್ಬಳ್ಳಿಯಿಂದ ಸುನಂದಾ ಹಾಗೂ ಪ್ರಕಾಶ್ ಕಡಮೆ, ಯು ಬಿ ಪವನಜ, ಹಾಲ್ದೊಡ್ಡೇರಿ ಸುಧೀಂದ್ರ ಇದ್ದರು.
IMG_8475(2)
IMG_8463 IMG_8466
IMG_1618 IMG_1625
IMG_1621 IMG_8493
IMG_1624 IMG_1538
IMG_1601 IMG_1550
IMG_8428 IMG_8436
IMG_1551 IMG_8543
IMG_8550 IMG_8554

‍ಲೇಖಕರು avadhi

May 31, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

6 ಪ್ರತಿಕ್ರಿಯೆಗಳು

 1. PRAKASH HEGDE

  ಅವಧಿ…..
  ಫೋಟೊಗಳು ಸಕತ್ ಆಗಿದೆ….
  ಬರಲಾಗಿದ್ದಕ್ಕೆ ಪರಿತಪಿಸುತ್ತಿದ್ದೇನೆ…..
  ಫಿಶ್ ಮಾರ್ಕೆಟ್ ಕಾರ್ಯಕ್ರಮ ವಿಡಿಯೋ ಮಾಡಿದರೆ ಹೇಗೆ…?
  ಅನಿವಾರ್ಯ ಕಾರಣಗಳಿಂದ ತಪ್ಪಿ ಹೊಗುವ ನಮ್ಮಂಥವರಿಗೆ,
  ದೂರದಲ್ಲಿರುವವರಿಗೆ
  ವಿದೇಶದಲ್ಲಿರುವವರಿಗೆ..
  ಅನುಕೂಲವಾಗುತ್ತದೆ…
  ದಯವಿಟ್ಟು …….

  ಪ್ರತಿಕ್ರಿಯೆ
  • avadhi

   ವಿಡಿಯೋ ಮಾಡಿರುತ್ತಾರೆ ಬಿಡು ಎಂದು ಕಾರ್ಯಕ್ರಮ ತಪ್ಪಿಸಲು ಇಟ್ಟಿಗೆ ಹಾಗೂ ಸಿಮೆಂಟ್ ಗೆ ಒಳ್ಳೆ ಅವಕಾಶ

   ಪ್ರತಿಕ್ರಿಯೆ
 2. PRAKASH HEGDE

  ಅವಧಿ…..
  ಬರಲಾಗದ ಅನಿವಾರ್ಯತೆಯಲ್ಲಿ ಈ ಪರಿಹಾರ..
  ಒಳ್ಳೊಳ್ಳೆ ಅಪರೂಪದ “ಅಥಿತಿ”ಗಳನ್ನು ಕರೆಸುತ್ತೀರಿ…
  ಅವರ ಮನದಾಳದ ಮಾತು ಕೇಳಿಸುತ್ತೀರಿ…
  ನಮ್ಮ ಮನೆಗೆ ಬಂದ ಆತ್ಮೀಯ ಅಭ್ಯಾಗತರಂತೆ ಅವರು ಮಾತನಾಡುತ್ತಾರೆ..
  ನಮ್ಮೊಡನೆ ಬೆರೆಯುತ್ತಾರೆ….
  ಅಂಥಹ ಭಾವಪೂರ್ಣ ಅವಧಿ…
  ರೆಕಾರ್ಡ್ ಆದರೆ ಉತ್ತಮ ಎನ್ನುವ ಅಭಿಪ್ರಾಯ….
  ಇಟ್ಟಿಗೆ ಸಿಮೆಂಟು….

  ಪ್ರತಿಕ್ರಿಯೆ
  • avadhi

   ಪ್ರೀತಿಯ ಪ್ರಕಾಶ್ ಹೆಗಡೆ ಅವರಿಗೆ
   ಸಲಹೆಗೆ ಥ್ಯಾಂಕ್ಸ್
   ನಿಮ್ಮ ನಮ್ಮ ಗೆಳೆಯರಾದ, ಫಿಶ್ ಮಾರ್ಕೆಟ್ ನ ಹಿತೈಷಿ
   ಡಿ ಜಿ ಮಲ್ಲಿಕಾರ್ಜುನ್ ಈಗಾಗಲೇ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ
   ನಾಗೇಶ್ ಹೆಗಡೆ ಅವರ ಸಂವಾದದ ಪೂರ್ಣ ವಿಡಿಯೋ ಪ್ರತಿ ಲಭ್ಯವಿದೆ.
   ಅಜಿತ್ ಕೌಂಡಿನ್ಯ ಮಲ್ಲಿ ನೇತೃತ್ವದಲ್ಲಿ ವಿಡಿಯೋ ಮಾಡಿದ್ದಾರೆ.
   ಮುಂದಿನ ಎಲ್ಲಾ ಸಂವಾದಗಳೂ ಪೂರ್ಣ ರೆಕಾರ್ಡ್ ಆಗಲಿದೆ.
   ಈ ಮೊದಲಿನ ಕಾರ್ಯಕ್ರಮಗಳ ಪೈಕಿ ಬಹುತೇಕ ಎಲ್ಲವನ್ನೂ
   ಅವಧಿ ಬಳಗ ಆಯ್ದ ಭಾಗವನ್ನು ವಿಡಿಯೋ ಮಾಡಿದೆ.

   ಪ್ರತಿಕ್ರಿಯೆ
 3. PRAKASH HEGDE

  ತುಂಬಾ ಖುಷಿಯಾಯಿತು….
  ಫಿಷ್ ಮಾರ್ಕೆಟ್ ಗೆ ಬರುವ ಅಥಿತಿಗಳು..
  ಸಭೆಗಳಲ್ಲಿ ಮಾತಾಡುವ ಹಾಗೆ ಸ್ಕ್ರಿಪ್ಟ್ ನೊಂದಿಗೆ ಬರುವದಿಲ್ಲ….
  ಅವರ ಅಂರ್ತರಾಳದ ಮಾತುಗಳು ನಮ್ಮ ಹ್ರದಯಕ್ಕೆ ತಟ್ಟುತ್ತವೆ…
  ಕೇಳುಗರ ಪ್ರಶ್ನೆಗಳು…
  ಅತಿಥಿಗಳ ಉತ್ತರಗಳು….
  ಆತ್ಮೀಯವಾಗಿರುತ್ತದೆ ಅಲ್ಲಿನ ವಾತಾವರಣ….
  ತುಂಬಾ ..ತುಂಬಾ ಧನ್ಯವಾದಗಳು…
  ಕಾರ್ಯಕ್ರಮ ತಪ್ಪಿಸಿಕೊಂಡವರ ಪರವಾಗಿ….
  ಇಟ್ಟಿಗೆ ಸಿಮೆಂಟು…

  ಪ್ರತಿಕ್ರಿಯೆ
 4. ಶಮ, ನಂದಿಬೆಟ್ಟ

  ಇಲ್ಲ..ಅದು ತಪ್ಪಿಸಿಕೊಳ್ಳಲು ಕಾರಣ ಅಲ್ಲ.. ವೀಡಿಯೋ ಆದರೂ ಸಿಗುತ್ತಲ್ಲಾ ಎಂಬ ಆಶಾವಾದ.. ಶನಿವಾರದ ಮಾರ್ಕೆಟ್ ನಮ್ಮಂಥ ವೀಕೆಂಡ್ busy ಜನಗಳಿಗೆ ಭಾರೀ ದುಬಾರಿ ಅನಿಸುತ್ತೆ.. ಒಮ್ಮೊಮ್ಮೆ ಭಾನುವಾರವೂ ಮಾರ್ಕೆಟ್ ಬರಬಾರದೇ…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: