’ನಾನವನಲ್ಲ!’ ಅಂದದ್ದು ಇವರು!!

ಸತ್ತರೂ ರಂಗಭೂಮಿ…

– ಗೋಪಾಲ ವಾಜಪೇಯಿ

ಹಿಂದೆಲ್ಲ ಕೆಲವರು ರಂಗಭೂಮಿಯಿಂದಲೇ ಜೀವಿಸಿದರು. ಇನ್ನು ಕೆಲವರು ರಂಗಭೂಮಿಯಲ್ಲೇ ಜೀವಿಸಿದರು. ಮತ್ತೆ ಕೆಲವರು ರಂಗಭೂಮಿಗಾಗಿಯೇ ಜೀವಿಸಿದರು. ಇನ್ನು ಕೆಲವರು ರಂಗಭೂಮಿಯ ಏಳ್ಗೆಗಾಗಿ ‘ವ್ರತಸ್ಥ’ರಂತೆ ಜೀವ ಸವೆಸಿದರು. ಮತ್ತೆ ಕೆಲವರು ರಂಗಭೂಮಿಯೇ ತಮ್ಮ ಬದುಕಿನ ‘ಏಕಮೇವ ಧ್ಯೇಯ’ವೆಂಬಂತೆ ಬದುಕಿದರು. ಕನ್ನಡ ಮತ್ತು ನೆರೆಯ ಮರಾಠಿ ರಂಗಭೂಮಿ ಇತಿಹಾಸದಲ್ಲಿ ಇಂಥ ಅನೇಕ ದೃಷ್ಟಾಂತಗಳು ಸಿಗುತ್ತವೆ. ಅನೇಕ ಧೀಮಂತರು ಸಿಗುತ್ತಾರೆ. ಅಂಥ ಧೀಮಂತರಲ್ಲಿ ಮರಾಠಿಯ ಆಚಾರ್ಯ ಪಿ.ಕೆ. ಅತ್ರೆ (ಪ್ರಹ್ಲಾದ ಕೇಶವ ಅತ್ರೆ) ಮುಖ್ಯರೆನಿಸುತ್ತಾರೆ. ಅವರೊಬ್ಬ ಅಪ್ರತಿಮ ವಾಕ್ಪಟು. ಯಾವುದೇ ವಿಷಯದ ಮೇಲೂ ಅಧಿಕಾರಯುತವಾಗಿಯೇ ಮಾತಾಡಬಲ್ಲವರು. ಅವರ ಚಮತ್ಕಾರಿಕ ಮಾತುಗಳನ್ನು ಕೇಳಲೆಂದೇ ಜನ ಸಭಾಗೃಹಗಳ ಸುತ್ತ ಕಾದು ನಿಲ್ಲುತ್ತಿದ್ದರಂತೆ. ಅಕಸ್ಮಾತ್ ಅವರೇನಾದರೂ ಪೇಟೆ ಅಥವಾ ಬಸ್ ನಿಲ್ದಾಣದಲ್ಲಿ ಕಂಡರೆ ಅವರ ಎರಡು ಮಾತುಗಳನ್ನಾದರೂ ಕೇಳಲು ಜನ ಮುಗಿಬೀಳುತ್ತಿದ್ದರಂತೆ. ಕನ್ನಡದಲ್ಲಿ ಬಂತಲ್ಲ, ‘ಬುದ್ಧಿವಂತ’ ಎಂಬ ಉಪ್ಪಿ ಅಭಿನಯದ ಸಿನೆಮಾ. ಅದು ಮೂಲತಃ ಆಚಾರ್ಯ ಅತ್ರೆ ಬರೆದ ಮರಾಠಿಯ ನಾಟಕ ‘ತೋ ಮೀ ನವ್ಹೇಚ್…’ (ಅವನು ನಾನಲ್ಲ). ಮರಾಠಿಯಲ್ಲಿ, ತಿರುಗುಮಂಚದ ರಂಗಭೂಮಿಯ ಮೇಲೆ ನಾನದರ ಪ್ರಯೋಗಗಳನ್ನು ನೋಡಿದ್ದೇನೆ. ಸೀನು ಬದಲಾಗುವುದರೊಳಗಾಗಿ ಬೇರೊಂದು ವೇಷ ತೊಟ್ಟು ಬರುತ್ತಿದ್ದ ನಟ ಬಾಲಚಂದ್ರ ಪೆಂಡಾರಕರ್ ಅವರ ಅಭಿನಯ ಚಾತುರ್ಯವೇ ಅಂಥದು. ಸಾವಿರಕ್ಕೂ ಮೀರಿ ಯಶಸ್ವೀ ಪ್ರದರ್ಶನಗಳನ್ನು ಕಂಡ ನಾಟಕ ಅದು. ‘ಸಾಷ್ಟಾಂಗ ನಮಸ್ಕಾರ…’ ಅತ್ರೆಯವರ ಮೊದಲ ನಾಟಕ. ‘ಲಗ್ನಾಚಿ ಬೇಡಿ’ (ಮದುವೆಯ ಬಂಧನ) ಎಂಬ ಅವರ ಇನ್ನೊಂದು ನಾಟಕವೂ ಅಷ್ಟೇ ಹೆಸರು ಪಡೆಯಿತು. ಅತ್ರೆ ಅಪ್ಪಟ ಭಾಷಾಭಿಮಾನಿ. ಯಾವುದೋ ಒಂದು ಸಂದರ್ಭದಲ್ಲಿ ಒಬ್ಬರು ಅವರನ್ನು ”ನಿಮ್ಮ ಜೀವನದ ಮೇಲೆ ‘ರಂಗಭೂಮಿಯ ಪ್ರಭಾವ’ ಏನು?” ಎಂದು ಕೇಳಿದರಂತೆ. ಆಗ ಆಚಾರ್ಯ ಅತ್ರೆ ಮುಗುಳ್ನಗೆ ಚೆಲ್ಲಿ, ”ನಾನೇ ರಂಗಭೂಮಿ. ಬದುಕಿದ್ದು ರಂಗಭೂಮಿಯಿಂದಲೇ. ನಾನು ಸತ್ತ ಮೇಲೆಯೂ ರಂಗಭೂಮಿಯಾಗಿಯೇ ಇರುತ್ತೇನೆ… ಅಂದಮೇಲೆ ರಂಗಭೂಮಿಯ ಪ್ರಭಾವವೇನು ಎಂದು ನೀವೇ ಅರ್ಥ ಮಾಡಿಕೊಳ್ಳಿ,” ಎಂದು ಕಣ್ಣು ಮಿಟುಕಿಸಿದರಂತೆ. ”ಸತ್ತ ಮೇಲೆಯೂ ‘ರಂಗಭೂಮಿಯಾಗಿಯೇ’ ಇರುತ್ತೀರಾ…?! ಅದು ಹೇಗೆ…?” ಎಂದು, ಪ್ರಶ್ನೆ ಕೇಳಿದ್ದವರು ಗಲಿಬಿಲಿಗೊಂಡರು. ”ಸತ್ತ ಮೇಲೆ ನಾನು ದಿ. ಅತ್ರೆ ಅಲ್ವೇನ್ರೀ…? ಇದನ್ನೇ ಇಂಗ್ಲೀಷಿನಲ್ಲಿ ಬರೆದು ನೋಡಿ. THE ATRE ಎರಡೂ ಪದಗಳನಡುವಿನಸ್ಪೇಸ್ ತೆಗೆದು ಹಾಕಿದರೆ THEATRE ಆಗುತ್ತದೆ ಅಲ್ಲವೇ?” ಎಂದು ನಕ್ಕು ಅಲ್ಲಿಂದ ಎದ್ದರಂತೆ ಆಚಾರ್ಯ ಅತ್ರೆ]]>

‍ಲೇಖಕರು G

September 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

11 ಪ್ರತಿಕ್ರಿಯೆಗಳು

 1. D.RAVI VARMA

  ”ಸತ್ತ ಮೇಲೆಯೂ ‘ರಂಗಭೂಮಿಯಾಗಿಯೇ’ ಇರುತ್ತೀರಾ…?! ಅದು ಹೇಗೆ…?” ಎಂದು, ಪ್ರಶ್ನೆ ಕೇಳಿದ್ದವರು ಗಲಿಬಿಲಿಗೊಂಡರು.
  ”ಸತ್ತ ಮೇಲೆ ನಾನು ದಿ. ಅತ್ರೆ ಅಲ್ವೇನ್ರೀ…? ಇದನ್ನೇ ಇಂಗ್ಲೀಷಿನಲ್ಲಿ ಬರೆದು ನೋಡಿ. THE ATRE ಎರಡೂ ಪದಗಳನಡುವಿನಸ್ಪೇಸ್ ತೆಗೆದು ಹಾಕಿದರೆ THEATRE ಆಗುತ್ತದೆ ಅಲ್ಲವೇ?” ಎಂದು ನಕ್ಕು ಅಲ್ಲಿಂದ ಎದ್ದರಂತೆ ಆಚಾರ್ಯ ಅತ್ರೆ
  ultimate sir…ii rangajeevigondu hrudayapurvaka namaskaara…

  ಪ್ರತಿಕ್ರಿಯೆ
 2. ಹಿಪ್ಪರಗಿ ಸಿದ್ದರಾಮ್

  ಗೋ.ವಾಜಪೇಯಿ ಸರ್, ಉತ್ತಮವಾದ ಲೇಖನ, ರಂಗಭೂಮಿ ಕುರಿತಾದ ಹಲವಾರು ಲೇಖನಗಳನ್ನು ಓದುವಾಗ ಮರಾಠಿ ರಂಗಭೂಮಿಯ ದಿಗ್ಗಜ ಶ್ರೀ ಅತ್ರೆಯವರ ಕುರಿತು ಉಲ್ಲೇಖಗಳು ಬರುತ್ತಿದ್ದವು. ಈ ನಿಮ್ಮ ಲೇಖನದಿಂದ ಅವರ ಹಾಸ್ಯಪ್ರಜ್ಞೆಯ ಪ್ರಸಂಗವೊಂದು ವಿವರವೊಂದನ್ನು ಚೆನ್ನಾಗಿ ಹೇಳಿದ್ದೀರಿ. ಈ ಪ್ರಸಂಗವನ್ನು ನಾನು ಕೆಲವು ವರ್ಷಗಳ ಹಿಂದೆ “ಕಸ್ತೂರಿ” ಮಾಸ ಪತ್ರಿಕೆಯಲ್ಲಿ ಓದಿದ ನೆನಪು. ಮತ್ತೊಮ್ಮೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು ಸರ್…ಶುಭದಿನ.

  ಪ್ರತಿಕ್ರಿಯೆ
 3. naresh mayya

  ಕನ್ನಡ ಹವ್ಯಾಸಿ ರಂಗಭೂಮಿಯ ಬಹು ಹಿರಿಯ ವ್ಯಕ್ತಿ ನೀವು, ನಿಮ್ಮಕಾಲದ ಇಂಥಾ ಅದೆಷ್ಟೋ ಅನುಭವಗಳು, ಒಳನೋಟಗಳು ಮುಂದಿನ ತಲೆಮಾರಿನವರಿಗೆ ಲಭ್ಯವಾಗಬೇಕು, ದಯಮಾಡಿ ರಂಗದೊಂದಿಗಿನ ಹಲವಾರು ವರ್ಷಗಳ ನಿಮ್ಮ ಯಾನದ ಸರಣಿ ಲೇಖನ ಮಾಲೆಯೊಂದನ್ನ ಬರೆಯಿರೆಂದು ನನ್ನ ಮನವಿ.
  ಅತ್ರೆಯವರ ಕುರಿತಾಗಿ ತಿಳಿದಿರಲಿಲ್ಲ, ಖುಷಿಯಾಯಿತು.
  ನರೇಶ ಮಯ್ಯ

  ಪ್ರತಿಕ್ರಿಯೆ
 4. N Rekha pradeep

  thumba chennagide, inthaha adheshtu jeevagalu rangabhoomi indha rangabhoomiyalle, rangabhoomigoskara jeevisiddharo….

  ಪ್ರತಿಕ್ರಿಯೆ
 5. Atmananda

  ಅತ್ರೆ ಯವರಷ್ಟೇ ಸೊಗಸಾಗಿ ಬಂದಿದೆ ಸರ್ ಲೇಖನ…. ಅಂತ ಕಲಾವಿದರ ನಟನೆ ನೋಡಲು ಆಗ್ಲಿಲ್ಲ ಅನ್ನೋ ಒಂದು ಕೊರಗು…ಸರ್, ಈ ಥರ ಲೇಖನ ಬರೀತಾ ಇರಿ..

  ಪ್ರತಿಕ್ರಿಯೆ
 6. ಆನಂದ ಯಾದವಾಡ

  ಸೊಗಸಾದ ಲೇಖನ. ಇಂತಹ ಸಾವಿರಾರು ಜನರು ದುಡಿದಿರುವಂತಹ ರಂಗಭೂಮಿ ಇಂದು ಕ್ಷೀಣಿಸುತ್ತಿರುವುದನ್ನು ನೋಡಿ ಖೇದವಾಗುತ್ತದೆ. ಜೀವ ಇರುವುದೇ ರಂಗಭೂಮಿಯಲ್ಲಿ, ಉಳಿದೆಲ್ಲ ಮಾಧ್ಯಮಗಳು ಜೀವವಿಲ್ಲದ ಪ್ಲಾಸ್ಟಿಕ್ ಹೂಗಳಂತೆ…

  ಪ್ರತಿಕ್ರಿಯೆ
 7. umesh desai

  ಇವ್ರು “ತೋ ಮಿ ನವ್ಹೇ” ಅನ್ನುವ ನಾಟಕ ಬರದಿದ್ರಲ್ಲ..? ಲೆಖನ ಸೊಗಸಾಗಿದೆ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: