ನಾನು ಡಾಕ್ಟರ್ ಮುಂದೆ ನಿಂತಿದ್ದೆ…

docter1.jpgurmile.jpg“ರಾಗಿರೊಟ್ಟಿ” ಕಾಲಂ 

ಊರ್ಮಿಳೆ

ಬ್ಲಡ್ ಟೆಸ್ಟ್ ರಿಪೋರ್ಟ್ ಬೇಕಂತೆ-
ನನ್ನ ಎದುರಿಗೆ ಕುಳಿತ ಸ್ಫುರದ್ರೂಪಿ ತರುಣನ ಮುಖ ಬಾಡಿಹೋಗಿತ್ತು. ಮುಖದಲ್ಲಿ ಕಳವಳದ ಗೆರೆಗಳಿದ್ದವು. “ಯಾಕಂತೆ, ಯಾರಿಗೆ” ಅಂತ ಕೇಳಿದೆ. ನನ್ನ ವುಡ್ ಬಿಗೆ, ಭಾವಿ ಮಾವ ಕೇಳುತ್ತಿದ್ದಾರೆ ಎಂದ.

ಮದುವೆ ಎಂದಾಕ್ಷಣ ಮಾತುಕತೆ. ಮಾತುಕತೆ ಎಂದಾಕ್ಷಣ ಇನ್ನೇನಿರುತ್ತೆ ಕೊಡೋದು ತಗೊಳ್ಳೋದರ ಬಗ್ಗೆ ಬಿಟ್ಟು ಎನ್ನುವ ಕಾಲ ಬದಲಾಗಿದೆ. ಗಂಡು ಯಾವ ಯಾವ ರೀತಿಯ ಟೆಸ್ಟ್ ಗಳಿಗೆ ಒಳಪಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ.

ಎದುರಿಗಿದ್ದ ಆ ಬೆಂಗಾಲಿ ಹುಡುಗನನ್ನೇ ನೋಡುತ್ತಿದ್ದೆ. ಅವ ಷಾಕ್ ಗೊಳಗಾಗಿದ್ದ. ಈ ಜಗತ್ತಿನಲ್ಲಿ ಹೀಗೂ ಉಂಟೆ? ಎನ್ನುವುದರಿಂದ ಆತನಿಗೆ ಚೇತರಿಸಿಕೊಳ್ಳಲೇ ಸಾಧ್ಯವಾಗಿಲ್ಲವೇನೋ ಎನ್ನುವಂತಾಗಿದ್ದ. ಹುಡುಗಿ ಸ್ಪಷ್ಟವಾಗಿ ಹೇಳಿದ್ದಳು. ಡೋಂಟ್ ವರಿ. ಈಗ ಇದೆಲ್ಲಾ ಬೇಕಾಗುತ್ತೆ. ನನ್ನ ಬ್ಲಡ್ ಕೂಡಾ ಟೆಸ್ಟ್ ಮಾಡಿಸುತ್ತಿದ್ದೇನೆ.

ಬೆಂಗಾಲಿ ಕ್ಷಣ ಕ್ಷಣಕ್ಕೂ ಕದಲುತ್ತಿದ್ದ. ಟೆಸ್ಟ್ ಮಾಡಿಸುತ್ತೇನೆ. ರಿಪೋರ್ಟ್ ಕೊಡುತ್ತೇನೆ. ಆದರೆ ಮದುವೆ ರಿಜೆಕ್ಟ್ ಮಾಡುತ್ತೇನೆ. ಈತ ಕದಲುತ್ತಿಲ್ಲ ಕುದಿಯುತ್ತಿದ್ದಾನೆ ಅಂದುಕೊಂಡೆ.

ಯಾಕೆ? ಕೇಳಿದೆ. ಅಲ್ಲಾ, ಸೀ ದ ಅರೋಗೆನ್ಸಿ. ನನ್ನ ಬ್ಲಡ್ ರಿಪೋರ್ಟ್ ಕೇಳುತ್ತಾರೆ ಅಂದರೇನು? ನನ್ನ ಬಗ್ಗೆಯೇ ಇವರಿಗೆ ಅನುಮಾನ. ಅವನಿಗೆ ಇನ್ನೂ ಷಾಕ್ ಆಗಿತ್ತು. ಅಪ್ಪ ಕೂಡಾ ಟೆಸ್ಟ್ ಆಗ್ಲೇ ಬೇಕು ಅಂತಾ ಕೂತಿದ್ದಾರೆ. ಮಾಡಿಸ್ಕೋ, ಈಗ ಮಾಡಿಸ್ಕೊಳ್ಲೇಬೇಕು. ನೀನು ಬೇರೆ ಆ ಅಮೇರಿಕಾದವಳ ಜೊತೆ ಸುತ್ತುತಾ ಇದ್ದೆ.

ಅವನ “ಮೂಡ್ಸ್” ಬದಲಾಗುತ್ತಿತ್ತು. ಸ್ವಲ್ಪ ಹೊತ್ತು ಮೌನವಾಗಿದ್ದು ಕೇಳಿದ. ನಾನು ಟೆಸ್ಟ್ ನಲ್ಲಿ ಪಾಸಾಗ್ತೀನಾ?

“ಸೆಕ್ಸ್ ಟೈಮಲ್ಲಿ ಕಾಂಡೋಂ ಬಳಸ್ರಪ್ಪಾ” ಅಂತ ನೇರವಾಗಿ ಹೇಳೋದು ಬಿಟ್ಟು ಲೈಂಗಿಕ ಸುರಕ್ಷಿತತೆ ಅಂತಾ ಸರ್ಕಾರಿ docter11.jpgಜಾಹೀರಾತುಗಳು ಬಡ್ಕೊಂಡ್ರೆ ಯಾರಿಗೆ ಅರ್ಥ ಆಗುತ್ತೆ.

ಎಲ್ಲಾ ಓಕೆ ಅನ್ನೋದಾದ್ರೆ ನನ್ನ ಫ್ರೆಂಡ್ ಗೆ ಈ ವರಿ ಯಾಕೆ? ಆಗ್ಲೇ ನನಗೆ ಕನ್ವಿನ್ಸ್ ಆಗಿದ್ದು ಯಸ್, ಬ್ಲಡ್ ರಿಪೋರ್ಟ್ ಬೇಕು. ಹೆಣ್ಣಿನ ಕಡೇವ್ರೂ ಮುಲಾಜಿಲ್ಲದೆ ಕೇಳ್ಬೇಕು. ಗಂಡಿನ ಕಡೇವ್ರೂ ಮುಲಾಜಿಲ್ಲದೆ ಕೇಳ್ಬೇಕು. ಅಪ್ಪ ಅಮ್ಮಂದಿರೂ ಈ ಬಗ್ಗೆ ತಾಕೀತು ಮಾಡ್ಬೇಕು ಅಂತ.

ಇನ್ನೂ ಇದೆಲ್ಲಾ ಯೋಚಿಸ್ತಾ ಇರೋವಾಗ್ಲೇನೆ ಆತ ಮತ್ತೆ ಕೇಳಿದ. ಏಡ್ಸ್ ಲಕ್ಷಣಗಳೇನು? ನನಗೇನೂ ಸುಸ್ತಾಗ್ತಿಲ್ಲ, ಬೆವರು ಬರ್ತಿಲ್ಲ. ಐ ಆಮ್ ಆಲ್ ರೈಟ್.

ಅಯ್ಯೋ ಗುರು ಬ್ಲಡ್ ಟೆಸ್ಟ್ ರಿಪೋರ್ಟ್ ಕೇಳಿದ್ದಕ್ಕೆ ಮದುವೇನೇ ರಿಜೆಕ್ಟ್ ಮಾಡ್ತೀನಿ ಅಂತ ಬಲೂನ್ ಹಾರಿಬಿಡ್ತಾ ಇದ್ದೆಯಲ್ಲ. ಈಗ್ಯಾಕಪ್ಪಾ ಏಡ್ಸ್ ಅಂದ್ರೆ ಹೆಂಗಿರುತ್ತೆ ಅನ್ನೋ ಪ್ರಶ್ನೆ.

ಇನ್ನು ಸುತ್ತಿ ಬಳಸಿ ಒದ್ದಾಡೋದು ಯಾಕೆ ಗೌರ್ನಮೆಂಟ್ ಅಡ್ವಟೈಸ್ ಮೆಂಟ್ ಥರಾ ಅಂತ ಅನಿಸಿ-
“ಆರ್ ಯು ವರ್ಜಿನ್” ಎಂದೆ. ಇಲ್ಲಾ ಅಂದ. ತಕ್ಷಣ ಅದಕ್ಕೊಂದು ಬಾಲಾನೂ ಸೇರಿಸ್ದ, ಆದ್ರೆ ೭ ತಿಂಗಳು ಆಗೋಗಿದೆ ಅಂತಾ.

ವರ್ಜಿನ್ ಅಲ್ಲಾ ಅಂದ್ಮೇಲೆ, ಹಾಸಿಗೆಯಲ್ಲಿ ಕಾಂಡೋಂ ಬಳಸ್ದೇ ಇದ್ಮೇಲೆ ಟೆಸ್ಟ್ ಗೆ ಒದ್ದಾಡೋದು ಯಾಕೆ. ಸೆಕ್ಸ್ ಗೆ ಇಲ್ಲದ ಸಂಕೋಚ ಟೆಸ್ಟ್ ಗೆ ಯಾಕೆ? ಡೋಂಟ್ ವರಿ, ಗೋ ಅಹೆಡ್ ಅಂದೆ. ನನ್ನ ತಲೆಯಲ್ಲಿ ಎಚ್ ಐವಿ ಪಾಸಿಟಿವ್ ಆಗಿ ನನ್ನ ಮುಂದೆ ಯಾವಯಾವಾಗಲೋ, ತಮ್ಮ ಕಥೆ ಹೇಳಿದ್ದ ಎಷ್ಟೋ ಜನ ಸುಳಿದು ಹೋದ್ರು.
 
ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಎಜ್ಯುಕೇಟೆಡ್, ದೊಡ್ಡ ಆಫೀಸರ್ ಆಗಿರೋ ಗಂಡನಿಂದ “ಬಿಲ್ ಕುಲ್ ಮುಫ್ತ್” ಆಗಿ ಏಡ್ಸ್ ಪಡೆದಿದ್ದ ಆಕೆ ನೆನಪಾದರು. ಎಲ್ಲರಿಗೂ ಈಗ ಏಡ್ಸ್ ಪಾಠ ಮಾಡೋ ಆಕೆ, ಅಂತಹ ನೂರಾರು ಜನ ಎದುರಾದರು.

ಹೇಳಿದೆ. ಡೋಂಟ್ ವರಿ, ಯು ಆರ್ ಪಾಸಿಟಿವ್ ಫೆಲೋ.

ತುಂಬಾ ಖುಷಿಯಾದ. ತಕ್ಷಣ ಹೇಳಿದೆ. ಈ ಖುಷಿ ನೀನು ಎಚ್ ಐವ್ ಪಾಸಿಟಿವ್ ಅಂತ ಗೊತ್ತಾದಾಗ್ಲೂ ಇರಲಿ. ಬಿ ಪಾಸಿಟಿವ್ ಟು ರಿಸೀವ್ ಪಾಸಿಟೀವ್ ಅಂದೆ.

ಒಳ್ಳೆ ಹಗ್ ಕೊಟ್ಟ.

೧೯೮೭-

ನಾನು ಎದೆಯಾಳದಿಂದ ಪ್ರೀತಿಸಿದ ಹುಡುಗೀನ ಮದುವೆ ಮಾಡ್ಕೋ ಅಂತ ಗೋಗರೆದಿದ್ದೆ. ಆಕೆ ಅದಕ್ಕೆ ಪಾಸಿಟಿವ್ ಉತ್ತರ ಹೇಳೋಕೆ ಮುಂಚೆ ಯಾಕೋ ನನಗನಿಸಿತು. ತುಂಬಾ ಪಾಸಿಟಿವ್ ಆಗಿ ಯೋಚ್ನೆ ಮಾಡಿ ನಾನು ಪಾಸಿಟೀವಾ ಅಂತ ಟೆಸ್ಟ್ ಮಾಡಿಸೋಕೆ ಡಾಕ್ಟರ್ ಮುಂದೆ ನಿಂತಿದ್ದೆ.

“ಬರಕೋ ಪದಾ ಬರಕೋ” ಅಂತಾ ಫ್ರೆಂಡ್ ಗೆ ಹೇಳ್ಬೇಕು ಅನ್ನಿಸ್ತು.

‍ಲೇಖಕರು avadhi

July 1, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. ಜೋಗಿ

    ಅಸೂಯೆ ಪಡುವಷ್ಟು ಸೊಗಸಾಗಿದೆ. ನಿತ್ಯ ಒಮ್ಮೆ ಭೇಟಿ ಕೊಡುತ್ತಿದ್ದೇನೆ. ಲವಲವಿಕೆಯ ಟೀಮು, ಲವಲವಿಕೆಯ ಬರಹ. ಖ್ಯಾತನಾಮರನೆಲ್ಲ ನೂಕಾಚೆ ದೂರ, ತರುಣ ಬರಹಗಾರರೇ ಸೊಗಸು, ಅವರ ಓದುತಿರುವ ಬಾರಾ.
    ಜೋಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: