‘ನಾನು ನಿಮ್ಮೊಂದಿಗೆ ಸ್ವಲ್ಪ ಹೊತ್ತು ಅಳಲು ಬಂದಿದ್ದೇನೆ ಅಷ್ಟೇ’

ತಸ್ಲೀಮಾ ನಸ್ರೀನ್ ಎರಡು ಅನುವಾದಿತ ಕವನಗಳು

ಬಂಗಾಳಿಮೂಲ: ತಸ್ಲೀಮಾ ನಸ್ರೀನ್

ಕನ್ನಡಕ್ಕೆ: ಉದಯ್ ಇಟಗಿ

ಪರಿಚಿತ

ನಾನಂದುಕೊಂಡಷ್ಟು ಅವನು ಗಂಡಸಾಗಿಲ್ಲ ಅರ್ಧ ನಪುಂಸಕ ಅರ್ಧ ಗಂಡಸು! ಬದುಕು ಸವೆಯುತ್ತಾ ಹೋಗುತ್ತದೆ ನಾನು ಅದೇ ಗಂಡಸಿನೊಟ್ಟಿಗೆ ಕುಳಿತುಕೊಳ್ಳುತ್ತೇನೆ, ಮಲಗುತ್ತೇನೆ ಆದರೆ ನಿಜವಾಗಿ ಅವನೇನೆಂಬುದು ಗೊತ್ತೇ ಆಗುವದಿಲ್ಲ. ನಾನು ಬಹಳ ದಿವಸಗಳಿಂದ ನೋಡಿದ ಮನುಷ್ಯ ‘ಅವನು’ ಅವನಲ್ಲ ನಿಜ ಹೇಳಬೇಕೆಂದರೆ ನನಗೆ ಗೊತ್ತಿರುವ ಮನುಷ್ಯ ಇವನಲ್ಲವೇಅಲ್ಲ! ನಾನಂದುಕೊಂಡಷ್ಟು ಅವನು ಮನುಷ್ಯನಾಗಿಲ್ಲ ಅರ್ಧಮೃಗ ಅರ್ಧಮನುಷ್ಯ!

ಸ್ವಿಟರ್ಜ್‍ರ್ಲ್ಯಾಂಡಿನ ಹುಡುಗಿ

ರಾತ್ರಿಯ ಔತಣ ಕೂಟವೊಂದರಲ್ಲಿ ಎಲ್ಲರ ಕೈಯಲ್ಲೊಂದು ಶ್ಯಾಂಪೇನ್ ಇಲ್ಲವೇ ಬಿಳಿ ಮಧ್ಯದ ಗ್ಲಾಸು. ಎಲ್ಲರೂ ಸಾಲು ಸಾಲಾಗಿ ನಿಂತಿದ್ದರು ಮೊದಲಿಗೆ ದೊಡ್ದವರು ನನ್ನ ಕೈ ಕುಲುಕಿ ಅಭಿನಂದಿಸಲು ಬಂದರು, ಕೆಲವರು ನನ್ನ ಅನುಭವಗಳನ್ನು ಹಂಚಿಕೊಳ್ಳಲು ಬಂದರು, ಕೆಲವರು ನಾನ್ಹೇಗೆ ಆನರ ವಾನರರ ಗುಹೆಯಿಂದ ಜೀವಂತವಾಗಿ ಹೊರಬಂದೆ ಎಂದು ಕೇಳಲು ಬಂದರು, ಕೆಲವರು ನನ್ನ ಆಟೋಗ್ರಾಫ್ಪಡೆಯಲು ಬಂದರು, ಕೆಲವರು ನನ್ನ ನೋಡಿ ಕಣ್ಣರಳಿಸಿ ಮೆಚ್ಚುಗೆ ಸೂಚಿಸಲು ಬಂದರು, ಕೆಲವರು ಮುತ್ತನ್ನಿಡಲು ಬಂದರು, ಕೆಲವರು ಹೂಗುಚ್ಛಗಳನ್ನು ಕೊಡಲು ಬಂದರು. ಇವರೆಲ್ಲರ ಮಧ್ಯ ಬಂಗಾರಗೂದಲಿನ ಹುಡುಗಿಯೊಬ್ಬಳು ಬಂದಳು ನನ್ನ ಕೈಕುಲುಕಲಲ್ಲ, ಅಥವಾ ನನ್ನ ಕಣ್ಣೀರ ಕಥೆಗಳನ್ನು ಕೇಳಲಲ್ಲ ‘ನಾನು ನಿಮ್ಮೊಂದಿಗೆ ಸ್ವಲ್ಪ ಹೊತ್ತು ಅಳಲು ಬಂದಿದ್ದೇನೆ ಅಷ್ಟೇ’ಎಂದುಹೇಳಿದಳು ಅವಳು ಅಷ್ಟು ಹೇಳಿದ್ದೇ ತಡ ಇಡಿ ಬ್ರಹ್ಮಪುತ್ರೆ ನನ್ನ ಕಣ್ಣೊಳಗಿಂದ ಉಕ್ಕಿ ಹರಿದಳು ಹೃದಯ ಬಿರಿಯುವಂತೆ ಅತ್ತುಬಿಟ್ಟೆ! ನಾನು ಪೂರ್ವದವಳು ಅವಳು ಪಶ್ಚಿಮದವಳು ಆದರೂ ನಾವಿಬ್ಬರು ಸಮಾನ ದುಃಖಿಗಳು ನಾನು ಕರಿಯಳು, ಅವಳು ಕೆಂಬಣ್ಣದವಳು ಆದರೆ ನಮ್ಮಿಬ್ಬರ ನೋವುಗಳು ಸರಿಸಮನಾಗಿ ನೀಲಿಗಟ್ಟಿದ್ದವು. ನಾವಿಬ್ಬರು ಅಳುವ ಮುನ್ನ ನಮ್ಮಿಬ್ಬರ ನೋವಿನ ಕಥೆಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳಬೇಕಾಗಿರಲಿಲ್ಲ. ಏಕೆಂದರೆ ಅವೇನೆಂದು ನಮ್ಮಿಬ್ಬರಿಗೂ ಚನ್ನಾಗಿ ಗೊತ್ತಿದ್ದವು!]]>

‍ಲೇಖಕರು G

April 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

ನೀನೆಂದರೆ ಭಯ ಅಲ್ಲ…

ನೀನೆಂದರೆ ಭಯ ಅಲ್ಲ…

ರೇಷ್ಮಾ ಗುಳೇದಗುಡ್ಡಾಕರ್  ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ...

ಮುಸ್ಸಂಜೆ

ಮುಸ್ಸಂಜೆ

ಜಿತೇಂದ್ರ ಬೇದೂರು ೧ ಮುಸ್ಸಂಜೆ ಯೌವ್ವನದ ಕ್ಷಣದಲ್ಲಿ ಎಷ್ಟೊಂದು ಉರಿದಿದ್ದಸೂರ್ಯ, ಈಗೇಕೋ ತಣ್ಣಗಾಗಿ ಹೋದ.ಯಾರು ಸರಿಸಿದರೋ ಏನೋಪಡುವಣ ಅಂಚ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This