ನಾನು ಬಿ ಟಿ ಬದನೆ ವಿರೋಧ ಇರುವವರ ಪರ. ಬೀದಿ ಬೀದಿಯಲ್ಲಿ ತಳ್ಳು ಗಾಡಿಗಳಲ್ಲಿ ತರಕಾರಿ ಮಾರುತ್ತಾ ಬರುವ ವ್ಯಕ್ತಿ ಹೇಳುತ್ತಾನೆ ಇದು ‘ಸ್ಥಳದ್ದು’ ಕೊಳ್ಳೀಮ್ಮ ಅಂತ. ಹಾಗೆ ಹೇಳುವಾಗ ಇದು ಒಳ್ಳೆಯದು ಇದನ್ನ ತೆಗೆದುಕೊಳ್ಳಿ ಅಂತ ಮನವರಿಕೆ ಮಾಡಿಕೊಡುತ್ತಾನೆ.
‘ಸ್ಥಳದ್ದು’ ಒಳ್ಳೆಯದು ಎನ್ನುವ ನಮ್ಮ ನಂಬಿಕೆಯನ್ನು ಅಲುಗಾಡಿಸಬೇಡಿ. ಯಾವುದೋ ಕಾರ್ಪೋರೇಶನ್ ಗಳಿಗೆ ಬದನೆಯನ್ನು ಕೊಟ್ಟು ಆ ತಳ್ಳು ಗಾಡಿಯವನ, ಆ ಕೊಳ್ಳುವವರ ನೆಮ್ಮದಿ ಕಲಕಬೇಡಿ.
ರೈತನಿಗೂ ಒಂದಿಷ್ಟು ಜ್ಞಾನವಿದೆ. ಆದರೆ ಆತ ತಜ್ಞರು ಎಂದು ನಾವು ಹಣೆಪಟ್ಟಿ ಅಂಟಿಸಿರುವವರ ಹಿಂದೆ ಹೋಗುವಂತೆ ಮಾಡಬೇಡಿ.
-ಇಂದು ಬೆಂಗಳೂರಿನಲ್ಲಿ ಜರುಗಿದ ಬಿ ಟಿ ಬದನೆ ಅಹವಾಲು ಆಲಿಕೆಯಲ್ಲಿ
ಅನಂತಮೂರ್ತಿ ಅವರು ಆಡಿದ ಮಾತು
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ಅನಂತಮೂರ್ತಿಯವರು ಸರಿಯಾಗಿಯೇ ನಿರ್ವಚಿಸಿದ್ದಾರೆ. ಬಡ ವರ್ತಕರು, ಗೂಡಂಗಡಿ ವ್ಯಾಪಾರದಿಂದ ತಮ್ಮ ಅನ್ನ ಸಂಪಾದಿಸುತ್ತಿರುವ ಬಗುಸಂಖ್ಯೆಯ ಜನತೆ ಮಾಲ್ ಮಳಿಗೆಗಳಿಂದಾಗಿ ಕನಿಷ್ಟ ವ್ಯಪಾರವೂ ಇಲ್ಲದೆ ಕಂಗಾಲಾಗುತ್ತಿದ್ದಾರೆ. ಕೃಷಿಕರು ಬೆಳೆಯುವ ಯಾವುದೇ ಬೆಳೆಗಳಿಗೆ ನ್ಯಾಯೋಚಿತ ಬೆಲೆ ಸಿಗದೆ ಕೃಷಿಕರು ಸಂಕಷ್ಟದಲ್ಲಿಯೇ ಜೀವನ ನಿರ್ವಹಿಸುವುದು ಮಾಮೂಲಾಗಿದೆ. ಬಿ.ಟಿ.ಬದನೆ ಯಾರನ್ನಾದರೂ ಉದ್ದಾರ ಮಾಡೀತು ಎಂದು ಯಾರಾದರೂ ಭಾವಿಸಿದ್ದರೆ ಅದು ಬರೇ ಹಗಲುಗನಸು ಮಾತ್ರವಾದೀತು. ನಮ್ಮದೇ ಮಣ್ಣಿನ ತಳಿಗಳಿಗೆ ಪ್ರೋತ್ಸಾಹ ನೀಡಬೇಕೇ ಹೊರತು ಬೊಗಳೆ ತಜ್ಞರ ಹುಂಬ ಮಾತುಗಳಿಗೆ ಆಸ್ಪದ ಕೊಡಬೇಕಾಗಿಲ್ಲ.
mooru- nalku dashakada hinde lohiawaadavemba bhrameyannu bittida namma saahitigalu indigoo idereetiya Bhrmeyinda horabandilla.Bahuraasrteeya companigala masalattu ee badaneyalli irabahudu. aadare halliya raitana badane ee B.T. badaneyannu Eduriseetu yembudu hagalu kanasu. EE Talemaarannu Inthaha Sullu kanasige nookabediri yendu nanna mecchina Anantamoortiyavarannu vinantisuttene.