ನಾನು ಬಿ ಟಿ ಬದನೆ ವಿರೋಧಿ: ಅನಂತಮೂರ್ತಿ

ನಾನು ಬಿ ಟಿ ಬದನೆ ವಿರೋಧ ಇರುವವರ ಪರ. ಬೀದಿ ಬೀದಿಯಲ್ಲಿ ತಳ್ಳು ಗಾಡಿಗಳಲ್ಲಿ ತರಕಾರಿ ಮಾರುತ್ತಾ ಬರುವ ವ್ಯಕ್ತಿ ಹೇಳುತ್ತಾನೆ ಇದು ‘ಸ್ಥಳದ್ದು’ ಕೊಳ್ಳೀಮ್ಮ  ಅಂತ. ಹಾಗೆ ಹೇಳುವಾಗ ಇದು ಒಳ್ಳೆಯದು ಇದನ್ನ ತೆಗೆದುಕೊಳ್ಳಿ ಅಂತ ಮನವರಿಕೆ ಮಾಡಿಕೊಡುತ್ತಾನೆ.
‘ಸ್ಥಳದ್ದು’ ಒಳ್ಳೆಯದು ಎನ್ನುವ ನಮ್ಮ ನಂಬಿಕೆಯನ್ನು ಅಲುಗಾಡಿಸಬೇಡಿ. ಯಾವುದೋ ಕಾರ್ಪೋರೇಶನ್ ಗಳಿಗೆ ಬದನೆಯನ್ನು ಕೊಟ್ಟು ಆ ತಳ್ಳು ಗಾಡಿಯವನ, ಆ ಕೊಳ್ಳುವವರ ನೆಮ್ಮದಿ ಕಲಕಬೇಡಿ.
ರೈತನಿಗೂ ಒಂದಿಷ್ಟು ಜ್ಞಾನವಿದೆ. ಆದರೆ ಆತ ತಜ್ಞರು ಎಂದು ನಾವು ಹಣೆಪಟ್ಟಿ ಅಂಟಿಸಿರುವವರ ಹಿಂದೆ ಹೋಗುವಂತೆ ಮಾಡಬೇಡಿ.
-ಇಂದು ಬೆಂಗಳೂರಿನಲ್ಲಿ ಜರುಗಿದ ಬಿ ಟಿ ಬದನೆ ಅಹವಾಲು ಆಲಿಕೆಯಲ್ಲಿ
ಅನಂತಮೂರ್ತಿ  ಅವರು ಆಡಿದ ಮಾತು

‍ಲೇಖಕರು avadhi

February 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಆನಂದ ಕೋಡಿಂಬಳ

    ಅನಂತಮೂರ್ತಿಯವರು ಸರಿಯಾಗಿಯೇ ನಿರ್ವಚಿಸಿದ್ದಾರೆ. ಬಡ ವರ್ತಕರು, ಗೂಡಂಗಡಿ ವ್ಯಾಪಾರದಿಂದ ತಮ್ಮ ಅನ್ನ ಸಂಪಾದಿಸುತ್ತಿರುವ ಬಗುಸಂಖ್ಯೆಯ ಜನತೆ ಮಾಲ್ ಮಳಿಗೆಗಳಿಂದಾಗಿ ಕನಿಷ್ಟ ವ್ಯಪಾರವೂ ಇಲ್ಲದೆ ಕಂಗಾಲಾಗುತ್ತಿದ್ದಾರೆ. ಕೃಷಿಕರು ಬೆಳೆಯುವ ಯಾವುದೇ ಬೆಳೆಗಳಿಗೆ ನ್ಯಾಯೋಚಿತ ಬೆಲೆ ಸಿಗದೆ ಕೃಷಿಕರು ಸಂಕಷ್ಟದಲ್ಲಿಯೇ ಜೀವನ ನಿರ್ವಹಿಸುವುದು ಮಾಮೂಲಾಗಿದೆ. ಬಿ.ಟಿ.ಬದನೆ ಯಾರನ್ನಾದರೂ ಉದ್ದಾರ ಮಾಡೀತು ಎಂದು ಯಾರಾದರೂ ಭಾವಿಸಿದ್ದರೆ ಅದು ಬರೇ ಹಗಲುಗನಸು ಮಾತ್ರವಾದೀತು. ನಮ್ಮದೇ ಮಣ್ಣಿನ ತಳಿಗಳಿಗೆ ಪ್ರೋತ್ಸಾಹ ನೀಡಬೇಕೇ ಹೊರತು ಬೊಗಳೆ ತಜ್ಞರ ಹುಂಬ ಮಾತುಗಳಿಗೆ ಆಸ್ಪದ ಕೊಡಬೇಕಾಗಿಲ್ಲ.

    ಪ್ರತಿಕ್ರಿಯೆ
  2. H.Gangadhar

    mooru- nalku dashakada hinde lohiawaadavemba bhrameyannu bittida namma saahitigalu indigoo idereetiya Bhrmeyinda horabandilla.Bahuraasrteeya companigala masalattu ee badaneyalli irabahudu. aadare halliya raitana badane ee B.T. badaneyannu Eduriseetu yembudu hagalu kanasu. EE Talemaarannu Inthaha Sullu kanasige nookabediri yendu nanna mecchina Anantamoortiyavarannu vinantisuttene.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ H.GangadharCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: