ನಾನೂ..ನನ್ನ ಸಿನಿಮಾ..

ಮಾಲತಿ ಶೆಣೈ

ನೆನಪಿನ ಸಂಚಿಯಿಂದ

W O R L D C I N E M A

Fancy title ಗು ನನ್ನ ಬರಹಕ್ಕೂ ಯಾವುದೇ ಸಂಬಂಧ ಇಲ್ಲ… ಶ್ರೀನಿಧಿ ಡಿ ಏಸ್. world cinema ಎನ್ನುವ ಫೇಸ್ ಬುಕ್ ಪೇಜ್ ಒಂದನ್ನು ಮಾಡಿದ್ದಾರೆ. ಮತ್ತು ನನ್ನನ್ನು ಅದರಲ್ಲಿ ಸೇರಿಸಿದ್ದಾರೆ!!
ಅದಕ್ಕೆ ನನ್ನ ಮತ್ತು ಸಿನಿಮಾ ನಂಟಿನ ಬಗ್ಗೆ ಕೆಲವು  ನೆನಪುಗಳು. just some jottings. disjointed ಅನ್ನಿಸಬಹುದು..
ಮುಂಬಯಿನಲ್ಲಿ ನಮ್ಮ ಮನೆ ಇದ್ದಿದ್ದು (ಈಗಲೂ ತಮ್ಮ ಅಲ್ಲಿದ್ದಾನೆ ಅಥವ ಅವನ ಮನೆ ಅಲ್ಲಿದೆ ಬಟ್ ಅವನು ಈಗ ಕೆಲಸದ ಮೇಲೆ ಅನಿರ್ದಿಷ್ಟಿತ ಅವಧಿಗೆ UAE ನಲ್ಲಿದ್ದಾನೆ. ಮನೆಗೆ ಬೀಗ)..ಅಂಧೇರಿ – ವರ್ಸೋವ ಮಧ್ಯದಲ್ಲಿ ಬೀಚ್ ಬಳಿ. ಬೀಚ್ ಹತ್ತಿರ ಒಂದು ಪುಟ್ಟ ಬಂಗಲೆ. ಅಲ್ಲೇ ಹೆಚ್ಚು ಕಡಿಮೆ ಸಿನಿಮಾ ಶೂಟಿಂಗ್ ಆಗ್ತಿದ್ದವು. ಆದರೂ ನನಗೆ ಅದರಲ್ಲಿ ಏನೂ ಕುತೂಹಲ ಇರಲಿಲ್ಲ. ಜನರಿಂದ ಶೂಟಿಂಗ್ ಸ್ಥಳತುಂಬಿರುತ್ತಿತ್ತು. ಪ್ರತಿ ಎರಡು ನಿಮಿಶದ ಶಾಟ್ ಗೆ ವಾಹ್ ವಾಹ್ ಅಂತ ಚಪ್ಪಾಳೆ. it looked so silly. ಮೂಕಿ ಚಿತ್ರದ ತರಹ…ಫೈಂಟಿಂಗ್ ಸೀನ್ ಅಂತೂ ……ಏನೆ ಆಗಲೀ ಚಿತ್ರ ಪೂರ್ಣಗೊಂಡ ನಂತರ ನೋಡುವುದೇ ಮಜಾ!!
ಮನೆಯಲ್ಲಿ ನಮಗೆ ಸಿನಿಮಾಗೆ ಹೋಗುವ ಅನುಮತಿಯಿರಲಿಲ್ಲ. ಹೋದರೆ ಕುಟುಂಬದ ಜತೆ..ಅದೂ ಅಪ್ಪ ಅಜ್ಜ ನಿಗೆ ಫ್ರೀ ಪಾಸ್ ಇರುತ್ತಿತ್ತು..ಮತ್ತು ಉಳಿದ  ಜನರ ಜತೆ ಅಲ್ಲ screening room ನಲ್ಲಿ ಕುರ್ಚಿ ಹಾಕಿಕೊಡುತ್ತಿದ್ದರು.
ನಮ್ಮ ಮನೆಗೆ ಸಿನಿಮಾದ ಕೆಲ ಜನ ಬರುತ್ತಿದ್ದರು. ಅದರಲ್ಲಿ ನನಗೆ ತುಂಬ ಇಷ್ಟವಾದವರು ಮ್ಯಾಕ್ ಮೋಹನ್ . ನನ್ನ ತಂದೆ ಅವರನ್ನು ಪ್ರೀತಿಯಿಂದ ಮಾಕಿ ಜಾನಿ ಅಂತ ಕರೆಯೋದು. ನಮ್ಮ ತಂದೆ ಬ್ಯಾಂಕ್ ನಲ್ಲಿದ್ದುದರಿಂದ ಸಿನಿಮಾ ಫೈನಾಂಸಿಂಗ್ ವಿಭಾಗದಲ್ಲಿ ಸ್ವಲ್ಪ್ಸ್ ಸಮಯ ಇದ್ದರು. ಬ್ಯಾಂಕ್ ಗೆ ಫಿಲ್ಮ್ ಸ್ಟಾರ್ ಗಳು ಬಂದಾಗ ಕಿರಿಕಿರಿಯಾಗುತ್ತೆ ಅಂತ ಅವರಿಗೆ ಸಾಧಾರಣ ಮಧ್ಯಾಹ್ನ 2.30 ನಂತರ ಬ್ಯಾಂಕಿನ ಮುಖ್ಯ ದ್ವಾರ ಬಂದ್ ಆದ ಮೇಲೆ ಬರಲು ಹೇಳಲಾಗುತ್ತಿತ್ತು. ಮಾಕಿ ಜಾನಿ ಯನ್ನು ತಂದೆ ಊಟಕ್ಕೆ ಮನೆಗೆ ಕರೆದುಕೊಂಡು ಬರುತ್ತಿದ್ದರು. ನಾನಂತೂ ಹೊರಗೆ ಬರುತ್ತಿರಲಿಲ್ಲ. ನನ್ನ ತಮ್ಮ ಕೆಳಗೆ ಪ್ರೇಮ್ ಕಲ್ಪನ (ಇನ್ನೂ ಇದೆ ಆ ಹೋಟಲ್ ..ಈಗ ದೊಡ್ಡದು ಮಾಡಿಕೊಂಡಿದ್ದಾರೆ) ದಿಂದ ಮಟನ್ ಕರಿ ತರ್ತಿದ್ದ. ಮನೆಯಲ್ಲಿ ನಾವು ನಾನ್ ವೆಜ್ ಮಾಡ್ತಿರಲಿಲ್ಲ. ಅಮ್ಮ ಬಿಸಿ ಬಿಸಿ ಫುಲ್ಕ್ ಮಾಡಿಕೊಡುತ್ತಿದ್ದರು. ಅಮ್ಮನಿಗೆ ’ನಮಸ್ತೆ ಭಾಬಿ’ ಅಂತ ಮಾತನಾಡಿಸಿ ಸುಮ್ಮನಾಗುತ್ತಿದರು ಮಾಕಿ ಜಾನಿ. ಆಮೇಲೆ ಊಟ ಮಾಡ್ತ ಅಪ್ಪ. ಅವರು ಘುಸು ಪುಸು ಮಾತನಾಡುತ್ತ ಇರ್ತಿದ್ದರು. ರಾತ್ರಿ ನಾವೆಲ್ಲ ಒಟ್ಟಿಗೆ ಕೂತು ಊಟ ಮಾಡುವಾಗ ಅಪ್ಪ ಮಾಕಿ ಜಾನಿ ಜತೆ ನಡೆದ ಮಾತುಕತೆಗಳನ್ನೆಲ್ಲ ನಮಗೆ ರವಾನಿಸುತ್ತಿದ್ದರು ಸಿನಿಮಾ ದಲ್ಲಿ ವಿಲ್ಲನ್ ಪಾತ್ರ ಮಾಡುವ ಮಾಕಿ ಜಾನಿ ನಿಜ ಜೀವನದಲ್ಲಿ ತುಂಬ ಸಾಧು. ಆಗ ನಮ್ಮನೆಗೆ ಬರುತ್ತಿದ್ದಾಗೆ ಅವರಿಗಿನ್ನೂ ಮದುವೆಯಾಗಿರಲಿಲ್ಲ. ಅವರ ಅಣ್ಣನಿಗೆ ಹುಶಾರಿಲ್ಲದೆ, ಎರಡು ಕಿಡ್ನಿ ಫೈಲ್ ಆಗಿ ಆಗಿನ ಕಾಲದಲ್ಲಿ dialysis ಗೆ ಒಳಗಾಗುತ್ತಿದ್ದರು. ಅದರ ಖರ್ಚು ಹೆಚ್ಚು. ದುಡ್ಡಿಗೆ ಅವರಿಗೆ ಯಾವಾಗಲೂ ಅಡಚಣೆಯಿತ್ತು. ಅವರ ಕುಟುಂಬದ ಸುಖ ದುಃಖ, ಸಿನಿಮಾ ಜಗತ್ತಿನ exploitation ಬಗ್ಗೆ ಹೇಳುತ್ತಿದ್ದರು. ಅವರು ಜೀವನದಲ್ಲಿ ತುಂಬ ಲೇಟಾಗಿ ಮದುವೆ ಮಾಡಿಕೊಂಡಿದ್ದು ಸಂತೋಷವಾಗಿತ್ತು ತೀರಿಕೊಂಡಾಗ ತುಂಬ ಸಂಕಟ ಪಟ್ಟಿದ್ದೆ. ಮಕ್ಕಳಿನ್ನೂ ಚಿಕ್ಕವರು…atleast ಕೊನೆಯಲ್ಲಿ ದುಡ್ಡಿಗೆ ಅವರಿಗೆ ಏನೂ ತೊಂದರೆಯಾಗಿರಲಿಲ್ಲ. ಅದೇ ನೆಮ್ಮದಿ. he was gentle man villain
ಕ್ಲಾಸ್ ಮೇಟ್ ಗೆ ಒಂದೊಮ್ಮೆ ನನ್ನ ನೋಟ್ ಪುಸ್ತಕ ಮನೆಗೆ ಒಯ್ಯಲು ಕೊಟ್ಟಿದ್ದೆ. ಮರುದಿನ ಅವಳು ಅದನ್ನು ತರಲು ಮರೆತಿದ್ದಳು. ನಾನು ನೆನಪಿಸಿದಾಗ ’ಚಲ್ ಮೆರಾ ಘರ್ ಪಾಸ್ ಹಿ ಮೆ ಹೈ..ಸಾಥ ಚಲ ಕೆ ಲೇ ಆತೆ ಹೈಂ ಅಂದಾಗ ಅವಳ ಜತೆ ಹೊರಟೆ. ನಾನು ಅಜ್ಜನ ದೊಡ್ಡ ಮನೆ, ಅಪ್ಪನ ಸಾಕಷ್ಟು ದೊಡ್ಡ ಬ್ಯಾಂಕ್ ನ ಫ್ಲ್ಯಾಟ್ ನಲ್ಲಿದ್ದವಳು ಅವಳ ಮನೆಯನ್ನು ನೋಡಿ ದಂಗಾಗಿದ್ದೆ. ಅವಳಿದ್ದಿದ್ದು ಚಾಲ್ (chawl) ನಲ್ಲಿ. ನಮ್ಮ ಮನೆಯ ಬಾಥರೂಮ್ ಗಿಂತ ಕೊಂಚ ದೊಡ್ಡ ರೂಮ್…ಅದರಲ್ಲಿ ಒಂದು ಬದಿ ಬಟ್ಟೆಯಿಂದ ಮುಚ್ಚಿ ಅಡಿಗೆ ಮನೆ. ಮನೆಯ ಮಧ್ಯದಲ್ಲಿ ಒಂದು ನೈಲಾನ್ ದಾರ ಕಟ್ಟಿದ್ದು ಅದರ ಮೇಲೆ ಪೇರಿಸಿದ್ದ ಬಟ್ಟೆಗಳ ರಾಶಿ. ನಾವು ಹೋದಾಗ ಅವಳ ಅಪ್ಪ ಪಟ್ಟೆ ಪಟ್ಟೇ ಚಡ್ಡಿ ಹಾಕ್ಕೊಂಡು, ಕುಕ್ಕರುಗಾಲಲ್ಲಿ ಕೂತು ಬೀಡಿ ಸೇದ್ತಾ ಇದ್ದರು. ಅವರ ಸುತ್ತ ಮುತ್ತ ಕೆಲವು ಜನ. ಅಷ್ಟರಲ್ಲಿ ಒಬ್ಬ ಯೇ ಜರಾ matchbox ದೇನಾ ಅಂತ ಹೇಳಿ ಅದರ ಮೇಲೆ ಟಕ ಟಕ ಬಡಿದು..ಯೆ beats ಕೈಸಾ ರಹೇಗಾ…ಅಂದಾಗ ನನಗೂ ಇಷ್ಟ ಆಗಿತ್ತು,,,ಕೆಲವರು ಚಲೇಗಾ ಅಂದಿದಕ್ಕೆ ಇನ್ನೊಬ್ಬ ;ಚಲೇಗಾ ನಹಿ ದೌಡೇಗಾ..ಎಕ್ ದಮ್ ಮಸ್ತ್ ಹೈ ಅಂತ ಸಿನಿಮಾ ಮಾಡಿ ಆಗಲೇ ಗೆದ್ದವರ ತರಹ ಖುಶಿ ಮೂಡಿತ್ತು ಅವರ ಮುಖದಲ್ಲಿ. ಒಳಗಡೆ ನನ್ನ ಕ್ಲಾಸ್ ಮೇಟ್ ನ ಅಮ್ಮ ಸುಸ್ತಾದ, ಮುಖ ನಿಸ್ತೇಜ ಕಣ್ಣುಗಳ ಜತೆ ಬಿಸಿ ಬಿಸಿ ಟೀ ಮಾಡಿಕೊಂಡು ತಂದು ಕೊಟ್ಟಳು ಅಲ್ಲಿ ಜಮಾಯಿಸಿದ 5 ಮಂದಿಗೆ. ನನ್ನ ಮುಖದಲ್ಲಿನ ಕುತೂಹಲ ನೋಡಿ ಅವಳು ನನಗೆ ಹೇಳಿದ್ದು ..ಅವಳ ತಂದೆ ಸಿನಿಮಾ ನಿರ್ಮಾಪಕರೆಂದು…ಐದು ಚಿತ್ರ ಮಾಡಿ ಒಂದು ಗೆದ್ದು….ಗೆದ್ದಾಗ ಅವರೂ ದೊಡ್ಡ ಮನೆಯಲ್ಲಿದ್ದರಂತೆ…ಈಗ ತುಂಬ ಲಾಸ್ ಎಲ್ಲ ಮಾಡಿಕೊಂಡು ಈ ಚಾಳ್ ನಲ್ಲಿ ಬಂದಿದ್ದರಂತೆ. ನನಗಂತು ಅದು ಬೇರೆ ಲೋಕ ಕಂಡ ಹಾಗೆ ಆಗಿತ್ತು.
ಟಿ.ವಿ. ಬಂದ ಮೇಲಂತು ನನಗಿಷ್ಟ ಆಗ್ತಿದ್ದಿದ್ದು ಸ್ಲೋ ಸಿನಿಮಾಗಳು. ನನ್ನದು ಮತ್ತು ಮನೆಯ ಉಳಿದ ಸದಸ್ಯರ ಟೇಸ್ಟ್ ನನ್ನ ಜತೆ ಮ್ಯಾಚ್ ಆಗ್ತಿರಲಿಲ್ಲ. ಅದಕ್ಕೆ ಹೆಚ್ಚಾಗಿ ನಾನು ಆಗ ಸಿನಿಮಾ ನೋಡ್ತಿರಲಿಲ್ಲ.
ಸಿನಿಮಾ ಅಂತೂ ಇತ್ತೀಚಿಗೆ ನನ್ನ ಮಕ್ಕಳು ದೊಡ್ಡವರಾದ ಮೇಲೆ Computer ನಲ್ಲಿ ನೋಡಲು ಶುರುಮಾಡಿದ್ದೇನೆ. (ನಮ್ಮ ಮನೆಯಲ್ಲಿ ಟಿ.ವಿ. ಇಲ್ಲ ನನ್ನ initials ನಲ್ಲ್ಲಿ ಮಾತ್ರ) ಅದಕ್ಕೆ ಮಾಲತಿ ಅಕ್ಕನ ಸಿನಿಮಾ ಯಾನ ಇತ್ತೀಚಿಗೆ ಶುರು ಆಗಿದೆ ಮಾತ್ರವಲ್ಲ ಮಕ್ಕಳ, ಶ್ರೀಕಾಂತ ಟೇಸ್ಟ್ perfect match…ಅಪರೂಪಕ್ಕೆ ಕೆಲವೊಂದು ಬಿಟ್ಟು….
ಸುಮಾರು ವಷಗಳ ಹಿಂದೆ ಅಂದರೆ 22 ವರ್ಷಗಳೆ ಕಳೆದು ಹೋಗಿದ್ದವು ನಾನು ದೊಡ್ಡ ಪರದೆಯಲ್ಲಿ ಸಿನಿಮಾ ನೋಡಿ. ನೋಡಿದ್ದು titanic….ಬೆಂಗಳೂರಿಗೆ ಬಂದು ಐದು ವರ್ಷದ ನಂತರ ’ಮಾತಾಡ್ ಮಾತಾಡ್ ಮಲ್ಲಿಗೆ’ ಚಲನ ಚಿತ್ರ ನಮ್ಮ ಮನೆ ಬಳಿಯಿರುವ ನಂದಿನಿ ಟಾಕೀಸ್ ಗೆ ಬಂದಿತ್ತು. ಅದರ review ಶ್ರೀಕಾಂತ ಓದಿ, ’ಬಾ ಹೋಗಿ ಬರುವ’ ಅಂದ್ರು…ಮಕ್ಕಳು ಕನ್ನಡ ಸಿನಿಮಾ ನಾವು ಬರಲ್ಲ ಅಂದ್ರು..ನಾನು- ಬೇಡ ಹಾಡುಗಳಿರುತ್ತವೆ ಬರಲ್ಲ ಅಂದ್ರೂ ನನಗೆ ಚಾಕಲೇಟ್, ಶೇಂಗಾದ ಆಮಿಷ ತೋರಿಸಿ ಕರೆದುಕೊಂಡು ಹೋದ್ರು. ಬಾಲ್ಕನಿ ಟಿಕಿಟ್….ನೋಡಿದ್ರೆ ಬಾಲ್ಕನಿಯಲ್ಲಿ ನಾವೇ ಇಬ್ರೂ…ಹಾಹಾಹಾ….ನಾನು ಆರಾಮಾಗಿ ಕೈಚೀಲ ಪಕ್ಕದಲ್ಲಿಟ್ಟು, ಎರಡು ಕಾಲನ್ನು ಚಕ್ಕ ಮಕ್ಕಳ ಹಾಕ್ಕೊಂಡು ಕೂತು ಬಿಟ್ಟೆ. ಸಿನಿಮ ಒಂದು ತರಹ ಚೆನ್ನಾಗಿತ್ತು..of course i didnot like the songs…ಇಂಟರ್ ವೆಲ್ ನಂತರ ಸುಮಾರು ಜೋಡಿಗಳು ಮೇಲೆ ಬಾಲ್ಕನಿ ಗೆ ಬಂದರು ನನಗೆ ಆಶ್ಚರ್ಯ…ನೋಡಿದ್ರೆ ಯಾರೂ ಸಿನಿಮಾ ನೋಡಲಿಕ್ಕೆ ಬಂದಿರಲಿಲ್ಲ. yucks it was so irritating…ನಮ್ಮ ರಾಯರಿಗಂತೂ ಡಬಲ್ ಸಿನಿಮಾ..ನಾನೆ ಚಿವುಟಿ ಅಕ್ಕ ಪಕ್ಕ ನೋಡ ಬೇಡಿ ಸುಮ್ಮನೆ ಪರದೆ ಮಾತ್ರ ನೋಡಿದ್ರೆ ಸಾಕು ಅಂದೆ. 🙂 ಸಿನಿಮಾ ದ ಅಂತ್ಯ ಮಾತ್ರ ಚೂರು ಚೆನ್ನಾಗಿರಲಿಲ್ಲ…ಬರೀ melodramatic…
ಆ ಮೇಲೆ ಇದೇ ಚಿತ್ರಮಂದಿರ ಕಿಕ್ಕಿರಿದು ತುಂಬಿದ್ದು ನಾವು ಎದ್ದೇಳು ಮಂಜುನಾಥ ನೋಡಿದಾಗ. ಸುಧನ್ವಾ ದೇರಾಜೆಯವರು ಆ ಸಿನಿಮಾ ಬಗ್ಗೆ ಬರೆದ ಬ್ಲಾಗ್ ಪೋಸ್ಟ್  ಓದಿದ ನಂತರ ನಾನು minimize ಮಾಡಿಟ್ಟಿದ್ದೆ. ಅದನ್ನು ಶ್ರೀಕಾಂತ ಓದಿ ಬಿಟ್ರು. ಜಗ್ಗೇಶ ಶ್ರೀಕಾಂತ ರ fav ಸ್ಟಾರ್…ಸರಿ ಪುನ: ಪೂಸಿ ಹೊಡೆದು…ಕರಕೊಂಡು ಹೋದ್ರು…ಅಬ್ಬಬ್ಬಾ ಆ ಸಿನಿಮ ಎಷ್ಟೊಂದು cacophonous ಇತ್ತಂದ್ರೆ (sorry Raghu Apara)*….ಸಿನಿಮಾ ಶುರು ಆದ ಹತ್ತೇ ನಿಮಿಷಕ್ಕೆ ತಲೆ ಸಿಡಿಯುತ್ತಿತ್ತು…ಯಾವಾಗ ಮುಗಿಯುತ್ತೆ ಅಂತ ಕಾಯ್ತಾ ಇದ್ದೆ.. ಆ ಮೇಲೆ ಅದೇ ಥಿಯೇಟರ್ ನಲ್ಲಿ ನೋಡಿದ್ದು ’ರಮೇಶ ನಟಿಸಿದ್ದ Accident’ ಕೊಲೆಮಾಡಿದವರು ಯಾರೆಂದು ಗೊತ್ತಾದ ತಕ್ಷಣ…ನನ್ನ ಮೂಡ್ ಆಫ್ ಆಗಿ ಹೋಯ್ತು…otherwise that was a sufficiently good movie.. ಆ ಮೇಲೆ ರಮೇಶ ನಟಿಸಿರುವ ಕಾಮೆಡಿ ಸಿನಿಮಾ ಅಂತೆ ’ಒಂದು ಸುಳ್ಳು ಮೂರು ನಿಜ’ or something like that..ಹೆಸರೂ ಸರಿ ನೆನಪಿಲ್ಲ..ಯಪ್ಪ what a kachaDa movie…ಹತ್ತೆ ನಿಮಿಷ ನಾನು ವಾಪಸ್ ಮನೆಗೆ…ಇನ್ನು ದೊಡ್ಡ ಪರದೆಯಲ್ಲು ಸಿನಿಮಾ ನೋಡಲ್ಲ ಅಂತ ಅಂದುಕೊಂಡಿದ್ದರೂ ಅದೇ ಸಿನಿಮ ಹಾಲ್ ನಲ್ಲಿ three idiots ಮಕ್ಕಳ ಜತೆ enjoy ಮಾಡ್ದೆ. ಆಮೇಲೆ ಮಾಲವಿಕ ಕೆಲಸಕ್ಕೆ ಸೇರಿದ ಮೇಲೆ ಮೂರು ತಿಂಗಳ ಹಿಂದೆ for the first time multiplex ನಲ್ಲಿ dirty picture ನೋಡಿದೆ. ನನಗದೂ ಇಷ್ಟ ಆಯ್ತು…especially dialogues…. ನಾವು ನಾಲ್ಕು ಜನ ಸೇರಿ ದೊಡ್ಡ ಪರದೆಯ ಮೇಲೆ  ನೋಡಿದ ಒಂದೇ ಒಂದು ಕನ್ನಡ ಸಿನಿಮಾ ’ನಾನು ನನ್ನ ಕನಸು’.almost .ಚೆನ್ನಾಗಿತ್ತು
ಸುಮ್ನೆ ತೋಚಿದ್ದು ಗೀಚಿದ್ದೇನೆ ಅಷ್ಟೆ
ಹಾಂ ಮರೆಯುವ ಮುನ್ನ:
ಮತ್ತೆ ನನ್ನ ಕ್ಲಾಸ್ ಮೇಟ್ ತಬಸ್ಸುಮ್ ಹಾಷ್ಮಿ..ನಿಮಗೆಲ್ಲ ತಬ್ಬೂ (tabu) ಅಂತ ಹೆಚ್ಚಿನ ಎಲ್ಲರಿಗೂ ಗೊತ್ತಲ್ಲವಾ?ನನಗೂ ಅವಳಿಗೆ ಎಣ್ಣೆ ಸೀಗೆಕಾಯಿ….
ನನಗೆ puc ಆದಕೂಡಲೆ ಮದುವೆಯಾಗಿ ತೀರ್ಥಹಳ್ಳಿಗೆ ಬಂದೆ. ಆದರೆ ನನ್ನ graduation ನ್ನು ನಾನು ಬಾಂಬೆ ಯುನಿವರ್ಸಿಟಿಯ distance education ಮೂಲಕ ಪೋರೈಸಿದೆ. ಆಗ ಫೈನಲ್ ಡಿಗ್ರೀ ಪರೀಕ್ಷೆಗೆ ನನ್ನ ಜತೆ  ಪರೀಕ್ಷಾ ಕೊಟಡಿ ಶೇರ್ ಮಾಡಿಕೊಂಡವರು ಭಾಗ್ಯಶ್ರೀ ಪಟವರ್ಧನ್ (ಮೈನೆ ಪ್ಯಾರ್ ಕಿಯಾ ನೆನಪಿದೆಯಾ ಯಾರಿಗೂ), ಜೂಹಿ ಚಾವ್ಲಾ( ಪರೀಕ್ಷೆ ಬರೆಯೋದಕ್ಕಿಂತ ನಕ್ಕಿದ್ದೆ ಹೆಚ್ಚು ಆಕೆ……..
ನಮ್ಮ ಬಚ್ ಪನ್ ಶೇರ್ ಮಾಡಿಕೊಂಡಿದ್ದು ಸಾಜಿದ್ ಖಾನ್ -ನನ್ನ ತಮ್ಮನ ಫ್ರೆಂಡ್, ಲೇಟ್ ದಿವ್ಯಾ ಭಾರತಿ , ಆಯೇಶ ಝುಲ್ಕ್ (ನನಗೆ ತುಂಬ ಇಷ್ಟ ಅವಳು) ನಮ್ಮ ಮನೆಯ ಹಿಂಬದಿ ವಾಸಿಸುತ್ತಿದ್ದ ಮಂದಾಕಿನಿ (ಖಂಡಿತ ಎಲ್ಲರಿಗೂ ಗೊತ್ತು 100%),,but ನಾನು ಫ್ರೆಂಡ್ ಆಗಿದ್ದು ಅವಳ downs syndrome ನಿಂದ ಬಳಲುತ್ತಿದ್ದ ತಮ್ಮನೊಂದಿಗೆ…ಸ್ಕೂಲ್ ಗೆ ಹೋಗುವಾಗ ಬರುವಾಗ ಅವನು ಬಾಲ್ಕನಿಯಲ್ಲಿ ನಿಂತು ಕೈ ಯಾಡಿಸುತ್ತಿದ್ದ….ಮತ್ತೆ ನಮ್ಮ ಬಿಲ್ಡಿಂಗ್ ಹತ್ತಿರ ಇದ್ದವರು ದೀಪ್ತಿ ನವಲ್, ಸಾಯಿ ಪರಾಂಜಪೆ, ಶಾಹೀನ್ (ಸಾಯಿರಾ ಬಾನು neice),ಅರ್ಚನಾ ಪೂರನಸಿಂಗ್, ಬಿಸ್ವಜೀತ್ (ಹಳೆ ಸಿನಿಮಾ)……
ಆದ್ರೂ ಮಾಲತಿ ಮೇಡಂ ಸಿನಿಮಾ ಪ್ರಪಂಚಕ್ಕೆ (  ನೋಡೊದ್ರಲ್ಲಿ ಮಾತ್ರ) ಕಾಲಿಟ್ಟಿದ್ದು ಲೇಟ್ almost at the age of 35….
ಎಂಜಾಯ್ ಮಾಡಿದ್ರಾ?? Sorry Raghu Apara* = ನಾನು ಸಿನಿಮಾ ಒಂಚೂರು ಚೆನ್ನಾಗಿರಲಿಲ್ಲ ಅಂದಿದಕ್ಕೆ ಅದರ plus point ಬಗ್ಗೆ ದೋssssssಡ್ಡ ಲೆಕ್ಚರ್ ಕೇಳಿಸಿಕೊಂಡಿದ್ದೆ 🙂 ಹಲವಾರು ಮಿತ್ರರು ನನಗೆ ಒಳ್ಳೆಯ ಸಿನಿಮಾಗಳ ಬಗ್ಗೆ ಟಿಪ್ಸ್ ಕೊಡುತ್ತಿದ್ದಾರೆ. ಒಟ್ಟಾರೆ ಎಂಜಾಯಿಂಗ್…
😉
 ]]>

‍ಲೇಖಕರು G

February 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

  1. Srivathsa Joshi

    Cinema World ಬಗ್ಗೆ ಒಳ್ಳೆಯದೊಂದು ಲಹರಿ, ಮಾಲತಿ ಶೆಣೈ ಅವರಿಂದ! ಅವರಿಗೆ ಸಿನೆಮಾ ಕ್ರೇಜ್ ಇಲ್ಲ ಎಂದಿದ್ದಾರೆ, otherwise ಸಿನೆಮಾಲತಿ ಎಂದು ಹೆಸರಿಸಬಹುದಿತ್ತು 🙂
    ಇನ್ನೊಂದು ವಿಚಾರ. ಚಿಕ್ಕಚಿಕ್ಕ ವಾಕ್ಯಗಳ ಇಂಥ ಬರಹಗಳು podcast (ಧ್ವನಿರೂಪ)ಕ್ಕೆ ಹೇಳಿಮಾಡಿಸಿದಂಥವು! ಮಾಲತಿ, ಇದೇ ಬರಹವನ್ನು ಧ್ವನಿಮುದ್ರಿಸಿ ಇಂಟರ್‌ನೆಟ್‌ನಲ್ಲಿ ತೇಲಿಬಿಡಿ. ಚೆನ್ನಾಗಿರುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: