ನಾವು ಬಂದೇವ..ನಾವು ಬಂದೇವ..


ಈ ಹುಡುಗರ ಉತ್ಸಾಹ ನಮನ್ನೂ ದಂಗು ಬಡಿಸಿದೆ. ಎಲೆಕ್ಟ್ರಾನಿಕ್ ಮೀಡಿಯಾದ ಮೂವರು ಹಾಗೂ ಸಿನೆಮೆಟೋಗ್ರಫಿ ಕಲಿಯುತ್ತಿರುವ ಒಬ್ಬ ಕಟ್ಟಿಕೊಂಡ ಗ್ಯಾಂಗ್ ವಸ್ತುಶಃ ಇರುವೆ ಬಳಗದಂತೆ ಕೆಲಸ ಮಾಡುತ್ತಿದೆ. ರಾತ್ರಿಯೆಲ್ಲಾ ಎಗ್ಸಾಮ್ ಗೆ ಓದಿ, ಬೆಳಗ್ಗೆ ಎಗ್ಸಾಮ್ ಬರೆದು ಮಧ್ಯಾಹ್ನ ಕನ್ನಡ ಸಮ್ಮೇಳನಕ್ಕೆ ತಮ್ಮದೂ ಒಂದಿಷ್ಟು ಅಕ್ಷರ ನೆರವು ಸಲ್ಲಿಸುತ್ತಿದ್ದಾರೆ.
ಪರೀಕ್ಷೆಗಳಿಲ್ಲದೆ ಹೋಗಿದ್ದರೆ ಈ ನಾಲ್ವರ ಉತ್ಸಾಹ ಇನ್ನೂ ಏನೇನು ಮಾಡುತ್ತಿತ್ತೋ..? ಆದರೆ ತಮ್ಮ ಸಮಯ ಮಿತಿಯಲ್ಲೇ ‘ ನುಡಿ ನಮನ’ ಕಟ್ಟಿ ಕೊಟ್ಟಿದ್ದಾರೆ. ಇದು ‘ಅವಧಿ’ಯಲ್ಲಿ, ‘ಓದುಬ ಜಾರ್’ ನಲ್ಲಿ ಅಷ್ಟೇ ಅಲ್ಲ ಟ್ವಿಟರ್ ನಲ್ಲಿ, ಫೇಸ್ ಬುಕ್ ನಲ್ಲಿ ಕಾಣಿಸಿಕೊಳ್ಳುತ್ತದೆ.
ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸ ಮಾಧ್ಯಮಗಳಲ್ಲಿ ಕಟ್ಟಿಕೊಡುವ ಪ್ರಯತ್ನ ‘ಅವಧಿ’ಯಿಂದ ಆಗುತ್ತಿದೆ. ಕಳೆದ ಬಾರಿ ಒಂದು ಸಾವಿರಕ್ಕೂ ಹೆಚ್ಚು ಫೋಟೋಗಳು ನಾಡಿನ, ಹೊರನಾಡಿನ ಎಲ್ಲರಿಗೂ ಸಂತಸ ನೀಡಿತ್ತು. ಈ ಬಾರಿ ಆಲೆಮನೆ ಬಳಗ ನಮ್ಮೊಂದಿಗಿದೆ. ಹಾಗಾಗಿ ಇನ್ನಷ್ಟು ಹೆಚ್ಚಿನ ಕವರೇಜ್ ಕಾಣಿಸಿಕೊಳ್ಳುತ್ತದೆ. ಸೋ ಆಲ್ ದಿ ಬೆಸ್ಟ್ ಆದಿತ್ಯ, ಚಾಣಕ್ಯ, ಪ್ರುಥ್ವಿ , ಹೇಮಂತ್..
ಆ ನಾಲ್ವರ ಮಾತುಗಳು ಇಲ್ಲಿವೆ
ಆದಿತ್ಯ ಭಾರದ್ವಾಜ್ ನಾ ಹೇಮಂತ ಕುಮಾರ
ಚಾಣಕ್ಯ ಸಿ ಎನ್  ಪೃಥ್ವಿ
ಕನ್ನಡ ಸಾಹಿತ್ಯ ಲೋಕಕ್ಕೆ’ ಅ’ ಮತ್ತು ‘ಆ’ ಪ್ರವೇಶಿಸಿದೆ. ಗದಗದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ಲಾಗ್ ಲೋಕದ ಬಾಗಿನ ನೀಡಬೇಕೆಂದು ನಿರ್ಧರಿಸಿದಾಗ ಕೈಗೂಡಿಸಿದ್ದು ಈ ‘ಅ’ ಮತ್ತು ‘ಆ’- ಅವಧಿ ಮತ್ತು ಆಲೆಮನೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ..ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ.
ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’ ಎಂಬ ಹೊಸ ಬ್ಲಾಗ್ .ಕನ್ನಡ ಸಾಹಿತ್ಯ ಸಮ್ಮೇಳನವೆನ್ನುವುದು ಸಾಹಿತ್ಯ ಜಾತ್ರೆಯೋ? ಜನ ಜಾತ್ರೆಯೋ? ಎಂಬ ಪ್ರಶ್ನೆಗಳಿವೆಯಾದರೂ ಕನ್ನಡ ಜಾತ್ರೆ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಕೆಲವರಿಗಿದು ಸೆಮಿನಾರು-ಘೋಷ್ಠಿಗಳ ಗಂಭೀರ ಚಿಂತನವಾದರೆ, ಮತ್ತೆ ಕೆಲವರಿಗಿದು ಮಿತ್ರಮಂಡಳಿ, ಇನ್ನೂ ಕೆಲವರಿಗಿದು ಪುಸ್ತಕ ಸಂತೆ, ಇನ್ನುಳಿದವರಿಗೆ ಪ್ರವಾಸದ ಮೋಜು! ಇನ್ನೂ ಕೆಲವರಿರುತ್ತಾರೆ ಅವರಿಗಿದು ಭರ್ಜರಿ ವ್ಯಾಪಾರ, ಮತ್ತೊಂದು ವಿಶೇಷ ವರ್ಗವಿದೆ ಅವರಿಗಿದು ಉರವಣಿಗೆಯ ವೇದಿಕೆ. ಹೀಗೆ ಅವರವರ ಭಾವಕ್ಕೆ ಅವರ ಭಕುತಿಗೆ ಎಂಬಂತೆ ನಡೆದುಕೊಂಡು ಬಂದಿರುವ ಸಾಹಿತ್ಯ ಸಮ್ಮೇಳನದ ಫುಲ್ ಸಚಿತ್ರ ಕ್ಷಣ ಕ್ಷಣದ ವರದಿ ನಿಮ್ಮ ಮುಂದೆ, ನಾಳೆಯಿಂದ….
‘ಅವಧಿ’ ಚಿತ್ರದುರ್ಗದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿಮ್ಮ ಮುಂದಿಟ್ಟ ರೀತಿ ನಿಮಗೆಲ್ಲರಿಗೂ ಗೊತ್ತಿದೆ. ಪ್ರತೀ ಘಂಟೆ ‘ಅವಧಿ’ ತನ್ನ ಬ್ಲಾಗ್ ಅನ್ನು ಅಪ್ಡೇಟ್ ಮಾಡಿತ್ತು. ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಪ್ರಕಟಿಸಿತ್ತು. ಆ ಧೂಳು, ಆ ಗೋಳು, ಆ ಜ್ಹಳ , ಆ ಜಗಳ ಎಲ್ಲವೂ ನಿಮ್ಮ ಕಣ್ಣಿಗೆ ಸಿಕ್ಕಿತು. ಈಗ ಇಲ್ಲಿ ಇದ್ದರಲ್ಲಾ ಎನ್ನುವಷ್ಟರ ವೇಳೆಯಲ್ಲಿ ‘ಅವಧಿ’ ತಂಡ ತನ್ನದೇ ಮೇಫ್ಲವರ್ ಮೀಡಿಯಾ ಹೌಸ್ ಸ್ಟಾಲ್ ನಿಂದ ಆಗಲೇ ಜಗತ್ತಿಗೆ ಸಮ್ಮೇಳನದ ಸುದ್ದಿ ಅಪ್ಲೋಡ್ ಮಾಡಿ ಮುಗಿಸುತ್ತಿತ್ತು.
ಈ ಬಾರಿ ಇನ್ನಷ್ಟು ರುಚಿಕರವಾಗಿ ಸಮ್ಮೇಳನವನ್ನು ಬಡಿಸಲು ‘ಅವಧಿ – ಆಲೆಮನೆ’ ಸಜ್ಜಾಗಿದೆ. ಹೀಗಾಗಿ ಈ ಬಾರಿಯ ಸಮ್ಮೇಳನ ಅವಧಿ- ಆಲೆಮನೆ ನುಡಿನಮನ ಅಂತ ಹೆಸರಿಟ್ಟುಕೊಂಡಿದೆ. ಇಂದು ರಾತ್ರಿಯೇ ನಮ್ಮ ನಾಲ್ಕು ಜನರ ತಂದ ಗದಗಕ್ಕೆ ಹೊರಟು ನಿಂತಿದೆ. ನಾಳೆ ಬೆಳಗಿನ ಜಾವಕ್ಕೆಲ್ಲ ಈ ತಂಡ ಗದುಗಿನ ಗಡಿ ಮುಟ್ಟಿರುತ್ತದೆ. ತಗೊಳ್ಳಿ ಇನ್ನು ಶುರು…
ಸತತ ನಾಲ್ಕು ದಿನಗಳ ಕಾಲ ಈ ಕನ್ನಡ ಹಬ್ಬದ ಎಲ್ಲ ಸವಿಯೂಟವನ್ನು ಅದರ ಎಲ್ಲ ರಸಗಳೊಂದಿಗೆ ನಿಮಗೆ ಉಣಬಡಿಸುತ್ತೇವೆ.
ತಯಾರಾಗಿರಿ, ನಾಳೆ ಬೆಳಿಗ್ಗೆಯಿಂದಲೇ ನೇರ ವರದಿಗಾರಿಕೆ ಶುರು…

‍ಲೇಖಕರು avadhi

February 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: