ನಾ ದಿವಾಕರ್ ಕಾಲ೦ : ಆತ್ಮಾವಲೋಕನದಲ್ಲೂ ಕಪಟ ಇರುವುದುಂಟೇ ?

ಆತ್ಮಾವಲೋಕನದಲ್ಲೂ ಕಪಟ ಇರುವುದುಂಟೇ ?

– ನಾ ದಿವಾಕರ್

ವ್ಯ೦ಗ್ಯ ಚಿತ್ರ  : ರಘುಪತಿ ಶೃ೦ಗೇರಿ ದಾರ್ಶನಿಕರು ನುಡಿಯುವ ಪ್ರತಿಯೊಂದು ನುಡಿಗೂ ಒಂದು ನಿದರ್ಿಷ್ಟ ಆಯಾಮ, ಅರ್ಥ, ತತ್ವ ಮತ್ತು ಮೌಲ್ಯ ಇರುತ್ತದೆ. ಇದಕ್ಕೆ ತದ್ವಿರುದ್ಧವಾದ ಯಾವುದಾದರೊಂದು ವಿದ್ಯಮಾನ ಇದೆಯೇ ? ಇದೆ. ರಾಜಕಾರಣಿಗಳ ನುಡಿಯುವ ಯಾವುದೇ ಮಾತುಗಳಿಗೂ ಆಯಾಮವೂ ಇರದು, ಆರ್ಥವೂ ಇರದು, ತತ್ವ ಮೌಲ್ಯಗಳಂತೂ ಸುಳಿವೇ ಇರದು. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಆತ್ಮಾವಲೋಕನದ ನುಡಿಗಳನ್ನಾಡಿದರೆ ಅದರ ಹಿಂದೆ ಸೂಕ್ಷ್ಮ ಸತ್ಯಗಳಿರುತ್ತವೆ. ಪ್ರಾಯಶ್ಚಿತ್ತದ ಛಾಯೆ ಇರುತ್ತದೆ. ಇಲ್ಲವಾದಲ್ಲಿ ಆತ್ಮ ಮತ್ತು ಅವಲೋಕನಕ್ಕೆ ಅರ್ಥವೇ ಇರುವುದಿಲ್ಲ. ಕನರ್ಾಟಕ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪನವರ ಆತ್ಮಾವಲೋಕನದ ನುಡಿಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಹಾದಿ ಬೀದಿಯಲ್ಲಿ ಹೋಗುವವರನ್ನೆಲ್ಲ್ಲಾ ದುಡ್ಡು ಕೊಟ್ಟು ಪಕ್ಷಕ್ಕೆ ಕರೆತಂದು ತಪ್ಪು ಮಾಡಿದೆವು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರ ಈ ಆತ್ಮಾವಲೋಕನದ ನುಡಿಗಳು ನೈತಿಕ ರಾಜಕಾರಣದ ಅನಿವಾರ್ಯತೆಗಳಿಂದ ಮೂಡಿದ ಮಾತುಗಳಲ್ಲ. ಬದಲಾಗಿ ರಾಜ್ಯದ ಜನತೆಯಲ್ಲಿ ಬಿಜೆಪಿಯ ನಾಯಕರುಗಳ ಬಗ್ಗೆ ಮೂಡಿರುವ ಆಕ್ರೋಶ, ಜಿಗುಪ್ಸೆಯ ಪರಿಣಾಮವಾಗಿ ಪಕ್ಷದಲ್ಲಿ ಮೂಡಿರುವ ಹತಾಶೆ ಮತ್ತು ಆತಂಕಗಳಿಗೆ ಪ್ರತಿಕ್ರಿಯೆಯಾಗಿ ಆಡಿದ ಮಾತುಗಳು. ಈಶ್ವರಪ್ಪ ಬಳಸಿರುವ ಪದಗಳು ಅಥವಾ ಭಾಷೆ ಶಾಸಕರನ್ನು ಅಪಮಾನಗೊಳಿಸುತ್ತದೆ. ನಿಜ. ಕೆರಳಿಸುವುದೂ ಸಹಜ. ಏಕೆಂದರೆ ಎಷ್ಟೇ ಭ್ರಷ್ಟರಾದರೂ, ಅಧಿಕಾರ ದಾಹಿಗಳಾದರೂ, ಶಾಸಕರು ಜನಪ್ರತಿನಿಧಿಗಳು. ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ಹೊತ್ತವರು. ಖರೀದಿಸಲ್ಪಟ್ಟವರಾದರೂ ಸಾರ್ವಜನಿಕರ ದೃಷ್ಟಿಯಲ್ಲಿ ಸಾರ್ವತ್ರಿಕ ಮಾನ್ಯತೆ ಪಡೆದವರು. ಹಾಗಾಗಿ ಬಿಜೆಪಿಗೆ ಸೇರಿದ ಹಲವು ಶಾಸಕರು ಖರೀದಿಸಲ್ಪಟ್ಟವರಾದರೂ, ಆಪರೇಷನ್ ಕಮಲ ಎಂಬ ಖೆಡ್ಡಾ ಕಾಯರ್ಾಚರಣೆಗೆ ಬಿದ್ದ ಶಾಸಕರನ್ನು ಅಲ್ಪರಂತೆ ಬಣ್ಣಿಸಲಾಗುವುದಿಲ್ಲ. ಇದು ಈಶ್ವರಪ್ಪನವರ ತಪ್ಪು. ಆದರೆ ಅವರ ಮಾತಿನ ಹಿಂದಿರುವ ಮರ್ಮವನ್ನು ಅಲ್ಪವೆಂದು ನಿರ್ಲಕ್ಷಿಸಲಾಗುವುದಿಲ್ಲ. ಆಪರೇಷನ್ ಕಮಲ ಕಾಯರ್ಾಚರಣೆಯ ಮೂಲಕ ಚುನಾಯಿತ ಸದಸ್ಯರನ್ನು ಮಾರುಕಟ್ಟೆ ಸರಕುಗಳಂತೆ ರಾಜಕೀಯ ಸಂತೆಯಲ್ಲಿ ನಿಲ್ಲಿಸಿ ಖರೀದಿಸಿದ ಬಿಜೆಪಿ ನಾಯಕರಿಗೆ ಅಧಿಕಾರದ ಅಮಲು ಮತ್ತು ಆಳುವ ಅನಿವಾರ್ಯತೆ ಹೆಚ್ಚಾಗಿರುವುದು ಸ್ಪಷ್ಟವಾಗುತ್ತಿದೆ. ಹೇಗಾದರೂ ಮಾಡಿ ಸಕರ್ಾರವನ್ನು ಪೂಣರ್ಾವಧಿಯವರೆಗೆ ಮುನ್ನಡೆಸುವ ದೃಢ ಸಂಕಲ್ಪ ಮಾಡಿರುವ ಬಿಜೆಪಿಗೆ ಈಶ್ವರಪ್ಪನವರ ಸತ್ಯಪ್ರಿಯತೆ (?) ತೊಡಕಾಗಲೂಬಹುದು. ಆದರೆ ಶಾಸಕರನ್ನು ಖರೀದಿಸಿದ ಬಗ್ಗೆ ಈಶ್ವರಪ್ಪ ಸತ್ಯಾಂಶವನ್ನು ಹೊರಗೆಡಹಿರುವುದು ಪಕ್ಷೇತರ-ಪಕ್ಷಾಂತರಿ ಶಾಸಕರನ್ನು ಸಹಜವಾಗಿಯೇ ಕೆರಳಿಸಿದೆ. ಗೂಳಿಹಟ್ಟಿ ಶೇಖರ್, ಸೋಮಣ್ಣ, ಉಮೇಶ್ ಕತ್ತಿ ಮುಂತಾದ ಶಾಸಕರೂಪಿ ಸರಕುಗಳು ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲಿ ಅಡಗಿರುವುದು ವ್ಯಕ್ತಿಗತ ಪ್ರತಿಷ್ಠೆಯ ಪ್ರಶ್ನೆಯಲ್ಲ. ರಾಜಕೀಯ ಮೌಲ್ಯ ಮತ್ತು ನೈತಿಕತೆಯ ಪ್ರಶ್ನೆ. ಖರೀದಿಸಲ್ಪಟ್ಟ ಶಾಸಕರು ಹಣ ಪಡೆಯದಿರಬಹುದು ಆದರೆ ಸಚಿವ ಸ್ಥಾನ ಪಡೆದಿಲ್ಲವೇ ? ತಮ್ಮ ಪಾಲಿನ ಲಾಭಾಂಶಕ್ಕಾಗಿ ರೆಸಾಟರ್್ ರಾಜಕಾರಣ ಮಾಡಲಿಲ್ಲವೇ ? ಅಧಿಕಾರ ಕಳೆದುಕೊಳ್ಳುವ ಹತಾಶೆಯಿಂದ ವಿಧಾನಸಭೆಯಲ್ಲಿ ಅಂಗಿಯನ್ನು ಹರಿದುಕೊಂಡು ಅರಚಾಡಿದ್ದನ್ನೂ ರಾಜ್ಯದ ಜನತೆ ನೋಡಿದ್ದಾರೆ. ಮೌಲ್ಯಾಧಾರಿತ ರಾಜಕಾರಣ ಎಂದರೆ ನೈತಿಕ ಮೌಲ್ಯಗಳನ್ನು ಕುರಿತಾದದ್ದು ಎಂದು ಭಾವಿಸಿದ್ದ ಕನರ್ಾಟಕದ ಜನತೆಗೆ, ಮೌಲ್ಯ ಎಂದರೆ ಮಾರುಕಟ್ಟೆ ಮೌಲ್ಯ, ಧನಾತ್ಮಕ ಮೌಲ್ಯ ಎಂಬ ವಾಸ್ತವವನ್ನು ಮನದಟ್ಟು ಮಾಡಿದ ಶ್ರೇಯಸ್ಸು ಬಿಜೆಪಿಗೇ ಸಲ್ಲಬೇಕು. ಚುನಾಯಿತ ಜನಪ್ರತಿನಿಧಿಗಳನ್ನು ಧನ ಪ್ರತಿನಿಧಿಗಳನ್ನಾಗಿ ಪರಿವತರ್ಿಸಿದ ಕೀತರ್ಿಯೂ ಬಿಜೆಪಿ ನಾಯಕರಿಗೇ ಸಲ್ಲಬೇಕು. ಪಕ್ಷಾಂತರ ರಾಜಕಾರಣ ಹೊಸತೇನಲ್ಲ. ಎಷ್ಟೇ ಮೌಲ್ಯಾಧಾರಿತ ರಾಜಕಾರಣ ಇದ್ದರೂ ಕನರ್ಾಟಕದಲ್ಲಿ ಪಕ್ಷಾಂತರ ಪಿತಾಮಹರ ದೊಡ್ಡ ದಂಡೇ ಇದೆ. ಆದರೆ ಪಕ್ಷಾಂತರಕ್ಕೆ ಒಂದು ಅಧಿಕೃತ ಮೊಹರನ್ನು ಒತ್ತಿ, ಶಾಸಕರನ್ನೂ ಸಹ ಆಮಿಷಗಳ ಮೂಲಕ ಖರೀದಿಸಬಹುದು ಎಂದು ಬಿಜೆಪಿ ನಿರೂಪಿಸಿದೆ. ಆಪರೇಷನ್ ಕಮಲ ಎಂಬ ರಾಜಕೀಯ ಕಾಯರ್ಾಚರಣೆಯ ಹಿಂದೆ ಹರಿದಿರುವ ಹಣದ ಹೊಳೆ ಗುಪ್ತ ನದಿಯಂತೇನಲ್ಲ. ಈ ಹಣದ ಹೊಳೆಯಲ್ಲಿ ಮಿಂದು, ತೇಲಿ, ಈಜಾಡಿ ಎದ್ದುಬಂದಿರುವ ರಾಜಕಾರಣಿಗಳು ಇಂದು ಕನರ್ಾಟಕವನ್ನು ದೇಶದ ನಂಬರ್ ಒನ್ ಭ್ರಷ್ಟ ರಾಜ್ಯವನ್ನಾಗಿ ಮಾಡಿದ್ದಾರೆ. ಈಶ್ವರಪ್ಪನವರ ನುಡಿಗಳ ಹಿಂದೆ ಕನರ್ಾಟಕದ ಕರಾಳ ರಾಜಕಾರಣದ ಛಾಯೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆಳುವ ವರ್ಗಗಳ ಅಧಿಕಾರ ವ್ಯಾಮೋಹ ಪರಾಕಾಷ್ಠೆ ತಲುಪಿದ್ದು ಪಕ್ಷ ಎನ್ನುವುದು ತಾತ್ಕಾಲಿಕ ಆಶ್ರಯ ತಾಣವಾಗಿದೆ. ಸಿದ್ಧಾಂತ ಎನ್ನುವುದು ಅನುಕೂಲಕರ ತತ್ವವಾಗಿದೆ. ಮೌಲ್ಯ ಎಂಬ ಪದ ರಾಜಕೀಯ ನಿಘಂಟಿನಿಂದಲೇ ಮಾಯವಾಗಿದೆ. ತಮ್ಮ ಅಭ್ಯಥರ್ಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಿದ್ಧರಾಮಯ್ಯನವರಿಗೂ ಸಚಿವ ಪದವಿ ನೀಡಲಿಲ್ಲ ಎಂದು ಪಕ್ಷ ತ್ಯಜಿಸುವ ಶ್ರೀರಾಮುಲು ಅವರಿಗೂ ಇರುವ ವ್ಯತ್ಯಾಸವೇನು ? ಅಧಿಕಾರ ರಾಜಕಾರಣದ ಅಮಲು ಎಲ್ಲ ರಾಜಕಾರಣಿಗಳ ನೆತ್ತಿಗೇರಿದೆ. ಹಾಗಾಗಿಯೇ ರಾಜಕೀಯ ನಾಯಕರುಗಳು ಸಾಮುದಾಯಿಕ ಹಿತಾಸಕ್ತಿಗಳನ್ನೇ ತಮ್ಮ ರಾಜಕೀಯ ಭವಿಷ್ಯದ ಚಿಮ್ಮುಹಲಗೆಯನ್ನಾಗಿ ಮಾಡಿಕೊಂಡು ಜಾತಿ ರಾಜಕಾರಣಕ್ಕೂ ಒಂದು ಹೊಸ ಆಯಾಮ ಒದಗಿಸುತ್ತಿದ್ದಾರೆ. ಇಂದು ಕನರ್ಾಟಕದಲ್ಲಿ ಮುಖ್ಯಮಂತ್ರಿಗಳಾಗಲಿ, ವಿರೋಧ ಪಕ್ಷದ ನಾಯಕರಾಗಲಿ, ಯಾವುದೇ ರಾಜಕೀಯ ಸ್ಥಾನ ಮಾನ ಪಡೆಯಲು ವ್ಯಕ್ತಿಗತ ಅರ್ಹತೆ, ಸಾಮಥ್ರ್ಯ, ಪ್ರಾಮಾಣಿಕತೆ, ಶ್ರದ್ಧೆ, ಸಂವಿಧಾನಬದ್ಧತೆ ಇದಾವುದೂ ಬೇಕಿಲ್ಲ. ತಮ್ಮ ಮೂಲ ಜಾತಿಯ ಬೇರುಗಳನ್ನು ಗಟ್ಟಿಗೊಳಿಸುವ ಛಾತಿ ಇರಬೇಕು, ತಮ್ಮ ಸಮುದಾಯದ ಬೆಂಬಲ ಇರಬೇಕು ಮತ್ತು ಸಾಮುದಾಯಿಕ ಅಸ್ಮಿತೆಯನ್ನು ಎತ್ತಿಹಿಡಿಯಬೇಕು. ಈಶ್ವರಪ್ಪನವರ ಹೇಳಿಕೆ ಕೇವಲ ಬಿಜೆಪಿಗೆ ಸೇರ್ಪಡೆಯಾದ ಪಕ್ಷಾಂತರಿಗಳನ್ನು ಕುರಿತಾದದ್ದು. ಆದರೆ ಕನರ್ಾಟಕದ ಜನತೆಯೂ ಸಹ ಇದೇ ದಿಕ್ಕಿನಲ್ಲಿ ಯೋಚಿಸುವ ಕಾಲ ಬಂದಿದೆ. ಹಾದಿ ಬೀದಿಯಲ್ಲಿ ಹೋಗುವವರೆಲ್ಲರಿಗೂ ಮತ ನೀಡಿ ಅಧಿಕಾರಕ್ಕೆ ತಂದ ತಪ್ಪಿಗಾಗಿ ಕನರ್ಾಟಕದ ಜನತೆ ಪರಿತಪಿಸುವಂತಾಗಿದೆ ಎಂದು ಹೇಳಿದರೂ ತಪ್ಪಾಗಲಾರದೇನೋ. ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಿರುವುದು ರಾಜ್ಯದ ಜನತೆಯೇ ಹೊರತು, ಈಶ್ವರಪ್ಪ, ಯಡಿಯೂರಪ್ಪ, ಸದಾನಂದಗೌಡರಲ್ಲ. ಈ ಅಧಿಕಾರಯುತ ರಾಜಕಾರಣದ ವಿಭಿನ್ನ (ಕರಾಳ) ಆಯಾಮಗಳನ್ನು ಜನತೆಗೆ ಪರಿಚಯಿಸಿರುವ ಬಿಜೆಪಿ ನಿಜಕ್ಕೂ ಎ ಪಾರ್ಟಿ ವಿತ್ ಡಿಫರೆನ್ಸ್, ಅಲ್ಲವೇ ?        ]]>

‍ಲೇಖಕರು G

June 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ManjulaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: