ನಾ ದಿವಾಕರ್ ಕಾಲ೦ : ಇವರಿಗೆ ನೈತಿಕತೆಯೇ ಇಲ್ಲವೇ?

ಇವರಿಗೆ ನೈತಿಕತೆಯೇ ಇಲ್ಲವೇ ?

– ನಾ ದಿವಾಕರ್

ಒಂದು ಕಾಲದಲ್ಲಿ ಹೈಕಮಾಂಡ್ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಪಯರ್ಾಯ ಪದವಾಗಿತ್ತು. ಎಲ್ಲ ಪಕ್ಷಗಳಲ್ಲೂ ಕೇಂದ್ರ ನಾಯಕತ್ವವನ್ನು ಹೀಗೆಯೇ ಸಂಬೋಧಿಸುತ್ತಿದ್ದರೂ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ಹೈಕಮಾಂಡ್ ಸಂಸ್ಕೃತಿ ಒಂದು ರಾಜಕೀಯ ವಿದ್ಯಮಾನವಾಗಿ ರೂಪುಗೊಂಡಿದ್ದು ಮಾತ್ರ ಸತ್ಯ. ರಾಷ್ಟ್ರಮಟ್ಟದಲ್ಲಿ ಒಂದು ಪಕ್ಷವಾಗಿ ಕಾರ್ಯನಿರ್ವಹಿಸುವಾಗ ರಾಜ್ಯಗಳ ಘಟಕಗಳನ್ನು ನಿಯಂತ್ತಿಸುವುದು ಅನಿವಾರ್ಯವೇ ಆದರೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯಲ್ಲಿ ರಾಜ್ಯ ಘಟಕಗಳಿಗೆ ಅಥವಾ ಎರಡನೆ ಹಂತದ ನಾಯಕರುಗಳಿಗೆ ಉಸಿರೆತ್ತಲೂ ಅಧಿಕಾರವಿರಲಿಲ್ಲ. ಸಚಿವ ಸಂಪುಟ ವಿಸ್ತರಣೆಯಿಂದ ಹಿಡಿದು, ರಾಜ್ಯಪಾಲರ ನೇಮಕದವರೆಗೆ ರಾಜ್ಯ ಘಟಕಗಳು ಹೈಕಮಾಂಡ್ ಆದೇಶ ಪಾಲಿಸುವುದು ಅನಿವಾರ್ಯವಾಗಿತ್ತು. ಇಂದಿರಾ ನಂತರದಲ್ಲಿ ಕಾಂಗ್ರೆಸ್ನ ಪ್ರಾಬಲ್ಯ ಕ್ಷೀಣಿಸಿ ಪ್ರಾದೇಶಿಕ ಪಕ್ಷಗಳು ಹೆಚ್ಚು ಜನಪ್ರಿಯತೆ ಗಳಿಸತೊಡಗಿದ ನಂತರ ಹೈಕಮಾಂಡ್ ಸಂಸ್ಕೃತಿಯೂ ತನ್ನ ಮೊನಚನ್ನು ಕಳೆದುಕೊಂಡಿತ್ತು. ಕಾರಣ ಅತೃಪ್ತ ರಾಜಕಾರಣಿಗಳಿಗೆ ಅವಕಾಶಗಳು ವಿಪುಲವಾಗಿದ್ದವು. ವ್ಯ೦ಗ್ಯ ಚಿತ್ರ ಕೃಪೆ : ಆರ್ ಕೆ ಲಕ್ಷ್ಮಣ್   ಈ ಕಾಲಘಟ್ಟದಲ್ಲಿ ಹೊಸ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಉದಯಿಸಿದ ಬಿಜೆಪಿ ತನ್ನ ಜನಸಂಘದ ಮುಖವಾಡವನ್ನು ಕಳಚಿ ಹೊಸ ಚಹರೆಯೊಂದಿಗೆ ವಿಭಿನ್ನವಾದ ಪಕ್ಷವಾಗಿ ಹೊರಹೊಮ್ಮಿತ್ತು. ವಿಡಂಬನೆಯೋ ವಿಪಯರ್ಾಸವೋ ಕಳೆದ ಮೂರು ದಶಕಗಳಲ್ಲಿ (ಬಿಜೆಪಿ ಜನಿಸಿದ್ದು 1982ರಲ್ಲಿ) ಅಧಿಕಾರದ ಸವಿಯುಂಡಿರುವ ಬಿಜೆಪಿ ಕಾಂಗ್ರೆಸ್ಗಿಂತಲೂ ಪ್ರಬಲವಾದ ಹೈಕಮಾಂಡ್ ಸಂಸ್ಕೃತಿಯನ್ನು ಸೃಷ್ಟಿಮಾಡಿದೆ. ಇದು ಕನರ್ಾಟಕದ ರಾಜಕಾರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಜೆಪಿಯನ್ನು ನಿಯಂತ್ತಿಸುವ ಸೂಪರ್ ಹೈಕಮಾಂಡ್, ಸಂಘಪರಿವಾರವನ್ನು ಬದಿಗಿಟ್ಟು ನೋಡಿದರೂ ಬಿಜೆಪಿ ಕೇಂದ್ರ ನಾಯಕತ್ವ ಕನರ್ಾಟಕದ ರಾಜಕಾರಣದಲ್ಲಿ ವಹಿಸುತ್ತಿರುವ ಪಾತ್ರವನ್ನು ನೋಡಿದರೆ 70ರ ದಶಕದ ಕಾಂಗ್ರೆಸ್ ಆಡಳಿತ ನೆನಪಾಗುತ್ತದೆ. ಭಾರತದ ರಾಜಕಾರಣದಲ್ಲಿ ಕೆಸರಿನ ರಾಡಿ ಸೃಷ್ಟಿಯಾಗಿದೆ, ಈ ಕೆಸರಿನಲ್ಲಿ ಅರಳಿದ ಕಮಲದಂತೆ ಭಾರತೀಯ ಜನತಾ ಪಕ್ಷ ಒಂದು ವಿಭಿನ್ನ ಪಕ್ಷವಾಗಿ ಪಾಟರ್ಿ ವಿತ್ ಎ ಡಿಫರೆನ್ಸ್ ಎಂಬ ಘೋಷಣೆಯೊಂದಿಗೆ ಹುಟ್ಟಿಕೊಂಡಿತ್ತು. ವಾಜಪೇಯಿಯವರ ಸೌಮ್ಯ ಮುಖವಾಡದ ಹಿಂದೆ ಅಡ್ವಾಣಿಯವರ ಸಮರಶೀಲತೆ, ಜೋಷಿ, ಉಮಾಭಾರತಿ ಮುಂತಾದವರ ಧೂರ್ತ ಮುಖಗಳನ್ನು ಹೊತ್ತು ದೇಶದ ರಾಜಕಾರಣದಲ್ಲಿ ಸುಭದ್ರ ನೆಲೆ ಸ್ಥಾಪಿಸಿದ ಬಿಜೆಪಿ , ತನ್ನ ಫ್ಯಾಸಿಸ್ಟ್ ಸ್ವರೂಪವನ್ನು ಬಗಲಲ್ಲಿ ಹೊತ್ತುಕೊಂಡೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೆಲೆ ಕಂಡುಕೊಂಡಿತ್ತು. ಈ ತನ್ನ ಹೊಂದಾಣಿಕೆಯ ಲಕ್ಷಣಗಳಿಂದಲೇ ಅನ್ಯ ಪಕ್ಷಗಳ ಮತ್ತು ಸೆಕ್ಯುಲರ್ ನಾಯಕರುಗಳ ಬೆಂಬಲ ಗಳಿಸುವುದರಲ್ಲೂ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿ ಮಾತ್ರವಲ್ಲದೆ ಇತರ ರಾಜಕೀಯ ತಂತ್ರಗಳನ್ನೂ ಯಥಾವತ್ತಾಗಿ ಅನುಸರಿಸಿದ ಬಿಜೆಪಿ ಇಂದು ಅಧಿಕಾರ ರಾಜಕಾರಣದ ಹೊಸ ಆಯಾಮವನ್ನೇ ಸೃಷ್ಟಿಸಿರುವುದು ಕನರ್ಾಟಕದಲ್ಲಿ ಸ್ಪಷ್ಟವಾಗಿ ನಿರೂಪಿತವಾಗಿದೆ. ದಕ್ಷಿಣ ಭಾರತದ ಪ್ರಥಮ ಸಕರ್ಾರವನ್ನು ಕನರ್ಾಟಕದಲ್ಲಿ ಸ್ಥಾಪಿಸಿದಾಗ, ನಿಚ್ಚಳ ಬಹುಮತ ಗಳಿಸಿದ್ದ ವಿಶ್ವಾಸದಲ್ಲಿ 20 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿ ರಾಜ್ಯವನ್ನು ಗುಜರಾತ್ ಮಾಡುತ್ತೇವೆ, ಸಿಂಗಪುರ ಮಾಡುತ್ತೇವೆ ಎಂದು ಘೋಷಿಸಿದ್ದ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಎರಡನೆ ಬಾರಿಗೆ ಜೈಲುವಾಸ ಅನುಭವಿಸಲು ಸಿದ್ಧರಾಗುತ್ತಿದ್ದಾರೆ. ಮೂರೂವರೆ ವರ್ಷಗಳ ನಂತರ ಈ ರಾಜ್ಯ ಗುಜರಾತ್ ಆಗುವ ಬದಲು ಗುಜರಿ ರಾಜ್ಯವಾಗಿದೆ. ಇಲ್ಲಿ ಶಾಸಕರಿಂದ ಸಂಸದರವರೆಗೆ, ವಿಧಾನಸಭೆಯಿಂದ ವಿಧಾನಪರಿಷತ್ವರೆಗೆ ಎಲ್ಲವೂ ಮೌಲ್ಯಾಧಾರಿತವೇ, ಮಾರುಕಟ್ಟೆ ಮೌಲ್ಯಾಧಾರಿತ. ಎಲ್ಲವೂ ಬಿಕರಿಗಿವೆ. ಮತಗಳನ್ನು ಖರೀದಿಸುವ ಬದಲು ಮತದಾರರನ್ನೇ ಖರೀದಿಸುವ ಸಂಸ್ಕೃತಿ ಕೇವಲ ಶಾಸಕಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಹಿತ್ಯ ಪರಿಷತ್ ಚುನಾವಣೆಗಳಿಗೂ ವ್ಯಾಪಿಸಿದೆ. ರಾಜ್ಯವನ್ನು ಸುಂದರ ವಿಹಂಗಮ ಸಿಂಗಪೂರವನ್ನಾಗಿ ಮಾಡಲು ಹೊರಟ ಮಹಾರಥಿಗಳು ರಾಜ್ಯವನ್ನು ಸಿಂಗಲೀಕಪುರವನ್ನಾಗಿ ಮಾಡಿದ್ದಾರೆ. ರಾಜ್ಯದ ಈಗಿನ ಪರಿಸ್ಥಿತಿಯನ್ನು ನೋಡಿದರೆ ಆಳ್ವಿಕರಿಗೆ ಆಳುವ ಇಚ್ಚಾಶಕ್ತಿ, ಸಾಮಥ್ರ್ಯವೇ ಇಲ್ಲವೇನೋ ಎನ್ನುವಂತಾಗಿದೆ. ಯಡಿಯೂರಪ್ಪ ಸ್ಥಾನವನ್ನು ಅಲಂಕರಿಸಿದ ಸದಾನಂದಗೌಡರು ತಮ್ಮ ಹತ್ತು ತಿಂಗಳ ಅಧಿಕಾರಾವಧಿಯಲ್ಲಿ ಭಿನ್ನಮತವನ್ನು ಶಮನಗೊಳಿಸುವುದರಲ್ಲೇ ಕಾಲ ಕಳೆದಿದ್ದು ಸಚಿವ ಸಂಪುಟವನ್ನೂ ವಿಸ್ತರಿಸದೆ, ಆಡಳಿತ ಯಂತ್ರವನ್ನೇ ನಿಷ್ಕ್ರಿಯಗೊಳಿಸಿದ್ದಾರೆ. ಹತ್ತೊಂಬತ್ತು ಇಲಾಖೆಗಳನ್ನು ತಮ್ಮ ಮಗ್ಗುಲಲ್ಲಿ ಹೊತ್ತುಕೊಂಡು ಯಾವ ಮುಖ್ಯಮಂತ್ರಿ ತಾನೇ ದಕ್ಷ ಆಡಳಿತ ನೀಡಲು ಸಾಧ್ಯ. ಅದರಲ್ಲೂ ಅಧಿಕಾರವನ್ನು ಉಳಿಸಿಕೊಳ್ಳಲು ಒಂದು ಬಣ ಹೆಣಗಾಡುತ್ತಿದ್ದರೆ, ಕಸಿದುಕೊಳ್ಳಲು ಮತ್ತೊಂದು ಬಣ ಶ್ರಮಿಸುತ್ತಿದೆ. ಈ ಹಗ್ಗ ಜಗ್ಗಾಟದಲ್ಲಿ ಜಾತಿ ರಾಜಕಾರಣ ಒಂದು ಸ್ಪಷ್ಟ ಆಯಾಮವನ್ನು ಪಡೆದುಕೊಳ್ಳುತ್ತಿದ್ದು ಗುಜರಾತ್ ಆಗಬೇಕಿದ್ದ ಕನರ್ಾಟಕ ಬಿಹಾರ ಆಗುತ್ತಿದೆ. ಆಗುತ್ತಿರುವುದೇನು ಆಗಿಯೇ ಹೋಗಿದೆ. ಒಂದೆಡೆ ಬರಗಾಲ, ಮೇವಿನ ಕೊರತೆ, ನೀರಿನ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ, ಬೆಳೆ ನಾಶ, ಬಣಗುಡುತ್ತಿರುವ ಕೃಷಿ ಭೂಮಿ, ಇವೇ ಮುಂತಾದ ಸಮಸ್ಯೆಗಳು ಜನಸಾಮಾನ್ಯರನ್ನು ಕಂಗೆಡಿಸುತ್ತಿದ್ದರೆ ಮತ್ತೊಂದೆಡೆ ರೋಮ್ ಸಾಮ್ರಾಜ್ಯದ ನೀರೋಗಳಂತೆ ಬಿಜೆಪಿ ನಾಯಕರು ಅಧಿಕಾರ ಲಾಲಸೆಯಲ್ಲಿ ಪಿಟೀಲು ಬಾರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಅಸಹ್ಯಕರ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆದಿದ್ದು ಜಾತಿ ರಾಜಕಾರಣದ ಪರಾಕಾಷ್ಠೆಯನ್ನು ಜನತೆ ವೀಕ್ಷಿಸುತ್ತಿದ್ದಾರೆ. ಲಿಂಗಾಯತ-ಒಕ್ಕಲಿಗ-ಕುರುಬ ಸಮುದಾಯಗಳನ್ನು ಹೊರತುಪಡಿಸಿ ಅನ್ಯರಿಗೆ ಆಡಳಿತ ನಡೆಸಲು ಅವಕಾಶವೇ ಇಲ್ಲದಂತೆ ಜಾತಿ ಸಮಾವೇಶಗಳನ್ನು ನಡೆಸಿ, ಮಠೋದ್ಯಮಿಗಳ ಆಶೀರ್ವಚನ ಪಡೆದಿರುವ ರಾಜಕೀಯ ನಾಯಕರುಗಳು ಪಕ್ಷ ಬೇಧವನ್ನು ಮರೆತು ಜಾತಿ ಪ್ರಜ್ಞೆಯನ್ನು ಬೆಳೆಸುತ್ತಿರುವುದು ಪ್ರಜಾಸತ್ತೆಗೆ ಮಾರಕವಾದ ಸಂಗತಿಯಾಗಿದೆ. ಈಗ ಬಿಜೆಪಿ ಹೈಕಮಾಂಡ್ ರಂಗಪ್ರವೇಶ ಮಾಡಲಿದ್ದು ಈ ಮೂರೂ ಜಾತಿಗಳ ನಾಯಕರುಗಳ, ಶೆಟ್ಟರ್ (ಅಂದರೆ ಯಡಿಯೂರಪ್ಪ), ಈಶ್ವರಪ್ಪ ಮತ್ತು ಸದಾನಂದಗೌಡರ ಪೈಕಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಿದೆ. ಇಲ್ಲಿ ಆಯ್ಕೆ ಇರುವುದು ಜಾತಿಗಳದ್ದೇ ಹೊರತು ಸಮರ್ಥ, ಅರ್ಹ ನಾಯಕರದ್ದಲ್ಲ. ಮುಖ್ಯಮಂತ್ರಿಯ ಆಯ್ಕೆಯ ಮಾನದಂಡ ಜನಾನುರಾಗಿ ನೀತಿಗಳಲ್ಲ, ಜನರನ್ನು ಒಡೆದಾಳುವ ಜಾತಿಗಳಾಗಿರುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ. ಈ ದುರಂತಕ್ಕೆ ಅಧಿಕೃತ ಮೊಹರು ಒತ್ತಿರುವುದು ಬಿಜೆಪಿಯ ಕೊಡುಗೆ. ಭ್ರಷ್ಟ, ಅಕ್ರಮ, ಅಸಮರ್ಥ ಆಡಳಿತದ ವಿರಾಟ್ ಸ್ವರೂಪವನ್ನು ಪ್ರಜೆಗಳಿಗೆ ಪ್ರದಶರ್ಿಸಿರುವ ಬಿಜೆಪಿ ಆಳುವ ಅರ್ಹತೆಯನ್ನೇ ಕಳೆದುಕೊಂಡಿದೆ. 20 ವರ್ಷ ಇರಲಿ ಒಂದು ದಿನವೂ ಅಧಿಕಾರದಲ್ಲಿರಲು ಅರ್ಹವಲ್ಲದ ಬಿಜೆಪಿ ನೈತಿಕತೆ ಇದ್ದರೆ ಜನರ ಬಳಿ ಹೋಗುವುದು ಒಳಿತು.  ]]>

‍ಲೇಖಕರು G

June 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

೧ ಪ್ರತಿಕ್ರಿಯೆ

  1. ವಸಂತ

    ಸಾರ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಆಂದೋಲನ ಪತ್ರಿಕೆಯಲ್ಲಿ ನಿಮ್ಮ ಲೇಖನಗಳನ್ನು ಓದುವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: