ನಾ ದಿವಾಕರ್ ಕಾಲ೦ : ಎಲ್ಲೆಲ್ಲೂ ನಿತ್ಯಾನಂದರೇ ತುಂಬಿದ್ದಾರೆ

ಎಲ್ಲೆಲ್ಲೂ ನಿತ್ಯಾನಂದರೇ ತುಂಬಿದ್ದಾರೆ

ನಾ ದಿವಾಕರ

ಕಳೆದ ವರ್ಷ ಸಿನಿಮಾ ನಟಿಯೊಡನೆ ಅಕ್ರಮ ಸಂಬಂಧ ಇರುವ ಹಿನ್ನೆಲೆಯಲ್ಲಿ ಸಿಡಿಗಳು ಬಯಲಾಗಿ ರಾದ್ಧಾಂತ ಮಾಡಿಕೊಂಡು, ರಾಜ್ಯದಿಂದ ಓಡಿ ಹೋಗಿ ವಿವಾದ ತಣ್ಣಗಾದ ನಂತರ ಮರಳಿ ಆಶ್ರಮ ಸೇರಿದ ನಿತ್ಯಾನಂದ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ವಿವಾದಗಳಲ್ಲಿ ಸಿಲುಕುವುದು ಒಂದು ಕಲೆ. ವಿವಾದಗಳ ಹಿನ್ನೆಲೆಯಲ್ಲೇ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಪ್ರಚಾರ ಪಡೆದು ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುವ ಈ ಕಲೆ ಸಿದ್ಧಿಸುವುದು ಸಿನಿಮಾ ನಟ-ನಟಿಯರಿಗೆ, ರಾಜಕಾರಣಿಗಳಿಗೆ ಮತ್ತು ನಮ್ಮ ರಾಜ್ಯದಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಧರ್ಮಗುರು, ಆಧ್ಯಾತ್ಮಗುರು ಮತ್ತು ಜ್ಯೋತಿಷಿಗಳಿಗೆ. ಆಧುನಿಕ ಸಮಾಜದ ಬೌದ್ಧಿಕ ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನೂ ಮಾಡುವ ಈ ಮೂರು ವರ್ಗಗಳು ತಮ್ಮ ಭಕ್ತಾದಿಗಳನ್ನು, ಅನುಯಾಯಿಗಳನ್ನು, ಅಭಿಮಾನಿಗಳನ್ನು ಆಕಷರ್ಿಸಲು ವಿವಾದಗಳನ್ನು ಬಯಸುತ್ತಾರೆ. ಏನೇ ವಿವಾದ ಸೃಷ್ಟಿಯಾದರೂ ತಾವು ಸೃಷ್ಟಿಸಿಕೊಂಡಿರುವ ಭದ್ರ ನೆಲೆ ಅಲುಗಾಡುವುದಿಲ್ಲ ಎಂಬ ನಂಬಿಕೆ ಇವರಿಗೆ ಇರುತ್ತದೆ. ಏಕೆಂದರೆ ಮಠಾಧೀಶರು, ಆಧ್ಯಾತ್ಮ ಗುರುಗಳಿಗೆ ರಾಜಕೀಯ ಶಕ್ತಿಗಳ ಕೃಪಾಕಟಾಕ್ಷ ಇದ್ದೇ ಇರುತ್ತದೆ. ನಿತ್ಯಾನಂದನ ಆಶ್ರಮದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ, ಬಾಲಕಿಯರ ಶೋಷಣೆ ನಡೆಯುತ್ತದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳು, ಆಶ್ರಮದ ಬೀಗಮುದ್ರೆಯಲ್ಲಿ ಕೊನೆಗೊಂಡಿದೆ. ಕನ್ನಡಪರ ಸಂಘಟನೆಗಳು ಮತ್ತು ನಿತ್ಯಾನಂದನ ನಡುವೆ ನಡೆದ ಘರ್ಷಣೆ ತೀವ್ರವಾಗಿದ್ದು, ಢೋಂಗಿ ಸ್ವಾಮಿಯ ಗಡೀಪಾರಿಗೆ ಹಲವ ಸಂಘಟನೆಗಳು ಆಗ್ರಹಿಸಿವೆ. ಮತ್ತೊಂದೆಡೆ ಆಶ್ರಮದ ಮೇಲೆ ದಾಳಿ ನಡೆಸಿರುವ ಪೊಲೀಸರು ಹಲವು ಮಾಹಿತಿಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ನ್ಯಾಯಾಲಯದಿಂದ ಜಾಮೀನು ಪಡೆದ ನಿತ್ಯಾನಂದ ಮುಖ್ಯಮಂತ್ರಿಗಳ ವಿರುದ್ಧವೇ ಮೊಕದ್ದಮೆ ಹೂಡಿದ್ದು ತಮ್ಮ ಆಶ್ರಮದ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿಯನ್ನು ಹಾಳು ಮಾಡಿದ ಆರೋಪದ ಮೇಲ ಹತ್ತು ಕೋಟಿ ರೂಗಳ ಪರಿಹಾರ ಕೋರಿದ್ದಾರೆ. ಈ ಸ್ವಾಮೀಜಿಗೆ ಪ್ರಾಣಭೀತಿ ಇದೆ ಎಂಬ ಕಾರಣ ಒಡ್ಡಿ ಪುನಃ ಬಂಧಿಸಿದ ರಾಜ್ಯ ಪೊಲೀಸರು ಈಗ ನಿತ್ಯಾನಂದನನ್ನು ಮಧುರೈಗೆ ರವಾನಿಸಿದ್ದಾರೆ. ಇದು ನಿತ್ಯಾನಂದನ ಕಥೆ. ಇರಲಿ, ಇದೊಂದು ವಿವಾದಾಸ್ಪದ ವಿಚಾರ. ಸತ್ಯಾಸತ್ಯತೆಗಳು ತಿಳಿಯಲು ತನಿಖೆ ಮುಗಿಯಬೇಕು. ಆದರೆ ಇಲ್ಲಿ ಪ್ರಶ್ನೆ ಉದ್ಭವಿಸಿಸುವುದು ಬೌದ್ಧಿಕ ಜಗತ್ತಿನ ಮೌಲ್ಯಗಳು, ಮಾಧ್ಯಮಗಳ ಹೊಣೆಗಾರಿಕೆ ಮತ್ತು ಧರ್ಮ-ಆಧ್ಯಾತ್ಮದ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯ ಬಗ್ಗೆ. ನಿತ್ಯಾನಂದನ ಬಂಧನ, ಬಿಡುಗಡೆ, ಜಾಮೀನು, ಮರುಬಂಧನ ಇವೆಲ್ಲವೂ ಮುಗಿದ ನಂತರವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಿತ್ಯಾನಂದನ ನಿತ್ಯ ಭಜನೆ ಮಾಡುತ್ತಿರುವುದನ್ನು ನೋಡಿದರೆ, ಎಲ್ಲವೂ ಪೂರ್ವನಿಯೋಜಿತವೇನೋ ಎನಿಸುತ್ತದೆ. ಮಾಧ್ಯಮಗಳಿಗೆ ವಿಷಯಗಳನ್ನು ಜನತೆಗೆ ತಿಳಿಸುವ ಹೊಣೆಗಾರಿಕೆ ಇರುತ್ತದೆ ನಿಜ, ಆದರೆ ಯಾವುದೇ ಒಂದು ವಿಚಾರವನ್ನು ಜನತೆಗೆ ಮನದಟ್ಟುಮಾಡಿದ ನಂತರ ಅದನ್ನು ದಾಟಿ ಮುನ್ನಡೆಯಬೇಕಾದ ಹೊಣೆಗಾರಿಕೆಯೂ ಇರುತ್ತದೆ. ಆದರೆ ಟಿಆರ್ಪಿ ರೇಟಿಂಗ್ ಹೆಚ್ಚಿಸಲು ಸದ ಹೊಂಚುಹಾಕುತ್ತಿರುವ ಮಾಧ್ಯಮಗಳಿಗೆ ನಿತ್ಯಾನಂದನಂತಹ ರೋಚಕ ಕಥೆಗಳು ದೊರೆತರೆ, ಬೇರೆಲ್ಲಾ ಸಮಸ್ಯೆಗಳು ನಗಣ್ಯವಾಗಿಬಿಡುತ್ತವೆ. ಆರತಿ ಎಂಬ ಮಹಿಳೆ ನಿತ್ಯಾನಂದನ ಮೇಲೆ ಕೆಲವು ಆರೋಪಗಳನ್ನು ಮಾಡಿದ್ದಾರೆ. ಆದರೆ ಸಾರ್ವಜನಿಕವಾಗಿ ಮಾಡಿದ ಆರೋಪಗಳನ್ನು ಸಮಥರ್ಿಸಿಕೊಂಡು ಜನತೆಗೆ ಸತ್ಯ ಹೇಳುವ ಸೌಜನ್ಯವೂ ಇಲ್ಲದ ಆ ಮಹಿಳೆ ಹಠಾತ್ತನೆ ತಲೆಮರೆಸಿಕೊಂಡಿದ್ದಾರೆ. ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳ ವೈರ ಕಟ್ಟುಕೊಂಡಿರುವ ನಿತ್ಯಾನಂದ ತನಗೆ ಜೀವ ಭಯ ಇದೆ ಎಂದು ಹೇಳಿ ಮಧುರೈನಲ್ಲಿ ತಂಗಿದ್ದಾರೆ. ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು, ಮತ್ತೊಮ್ಮೆ ಬಂಧನಕ್ಕೊಳಗಾಗಿ ಬಿಡುಗಡೆ ಹೊಂದಿ ರಾಜ್ಯದಿಂದ ಪರಾರಿಯಾಗಿರುವ ನಿತ್ಯಾನಂದ ತಪ್ಪು ಮಾಡಿರುವುದೇ ಆದರೆ ಅವರಿಗೆ ಮಧುರೈಗೆ ಹೋಗಲು ಅನುಮತಿ ನೀಡಿದ್ದೇಕೆ ? ಇಲ್ಲಿಯೇ ಅವರಿಗೆ ರಕ್ಷಣೆ ಕೊಡಲಾಗುತ್ತಿರಲಿಲ್ಲವೇ ? ಕಳೆದ ಬಾರಿ ಅಶ್ಲೀಲ ಸಿಡಿ ಪ್ರಕರಣ ನಡೆದಾಗಲೂ ಇದೇ ರೀತಿ ರಾಜ್ಯದಿಂದ ಹೊರಹೋಗಿದ್ದ ನಿತ್ಯಾನಂದ ಪುನಃ ತಮ್ಮ ಆಶ್ರಮಕ್ಕೆ ಬಂದು ನೆಲೆಸಿದ್ದನ್ನು ಗಮನಿಸಿದರೆ ಈ ಬಾರಿಯೂ ಸಾರ್ವಜನಿಕರು ಈ ಘಟನೆಗಳನ್ನು ಮರೆತ ನಂತರ ಹಿಂದಿರುಗಿ ಬಂದು ತಮ್ಮ ನಿತ್ಯಕರ್ಮಗಳನ್ನು ಆರಂಭಿಸುತ್ತಾರೆ. ಸಾರ್ವಜನಿಕರ ನೆನಪು ಅಲ್ಪಕಾಲಿಕವಲ್ಲವೇ ? ಈ ಸತ್ಯ ನಿತ್ಯಾನಂದರಿಗೂ ತಿಳಿದಿದೆ. ನಿತ್ಯಾನಂದನ ಅಕ್ರಮಗಳನ್ನು ಪ್ರತಿರೋಧಿಸಿ ರಾಜ್ಯದಿಂದ ಗಡೀಪಾರು ಮಾಡಲು ಆಗ್ರಹಿಸುತ್ತಿರುವ ಕನ್ನಡಪರ ಸಂಘಟನೆಗಳು ಸ್ವಾಮೀಜಿಯ ಜೈಲುವಾಸದಿಂದ ಮೈಸೂರಿನ ಜೈಲಿನ ಪಾವಿತ್ರ್ಯತೆ ಹಾಳಾಗಿದೆ ಎಂದು ಹೇಳಿ, ಜೈಲಿನ ಆವರಣವನ್ನು ಗಂಜಲದಿಂದ ತೊಳೆದು ಶುದ್ಧೀಕರಿಸಿರುವುದು ಹಾಸ್ಯಾಸ್ಪದವಷ್ಟೇ ಅಲ್ಲ, ಖಂಡನಾರ್ಹವೂ ಹೌದು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಉದಾತ್ತ ಚಿಂತನೆಗಳನ್ನು ಹೊಂದಿರುವ ಸಂಘಟನೆಗಳು ಕೊಂಚವಾದರೂ ಪ್ರಬುದ್ಧತೆ ಹೊಂದಿರುವುದು ಅಗತ್ಯ. ಜೈಲಿನ ಪಾವಿತ್ರ್ಯತೆ ಹಾಳಾಗಿದೆ ಎಂದು ಹೇಳುವುದು ಎಷ್ಟು ಅಪ್ರಬುದ್ಧವಾಗಿ ಕಾಣುತ್ತದೆ. ಪಾತಕಿಗಳು, ಕೊಲೆಗಾರರು, ಅಪರಾಧಿಗಳು, ಅತ್ಯಾಚಾರಿಗಳು ಶಿಕ್ಷೆ ಅನುಭವಿಸುವ ಒಂದು ಸ್ಥಳವನ್ನು ಪವಿತ್ರ ಎಂದು ಹೇಗೆ ಭಾವಿಸಲು ಸಾಧ್ಯ ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದ ಸಂಗ್ರಾಮಿಗಳು ತಂಗಿದ್ದ ಜೈಲುಗಳು ಸಾಂದಭರ್ಿಕ ನೆಲೆಗಟ್ಟಿನಲ್ಲಿ ಪವಿತ್ರ ಎನಿಸಿಕೊಳ್ಳುತ್ತವೆ , ಆದರೆ ಅದು ಸಾರ್ವಕಾಲಿಕ ಲಕ್ಷಣವಾಗುವುದಿಲ್ಲ. ನಿತ್ಯಾನಂದನನ್ನು ವಿರೋಧಿಸುವ ಭರಾಟೆಯಲ್ಲಿ ಕನ್ನಡ ಹೋರಾಟಗಾರರು ತಮ್ಮ ಅಪ್ರಬುದ್ಧತೆಯನ್ನು ಪ್ರದಶರ್ಿಸಿರುವುದು ವಿಷಾದನೀಯ. ಇನ್ನು ವಿದ್ಯುನ್ಮಾನ ಮಾಧ್ಯಮಗಳಿಗೆ, ಕೆಲವು ನಿದರ್ಿಷ್ಟ ಚಾನಲ್ಗಳಿಗೆ ಕಳೆದ ಒಂದು ವಾರದಿಂದ ನಿತ್ಯಾನಂದನದ್ದೇ ಚಿಂತೆಯಾಗಿರುವುದು ಅನಗತ್ಯ ಎನಿಸುತ್ತದೆ. ನಿಜ, ನಿತ್ಯಾನಂದ ಅಕ್ರಮಗಳನ್ನು ಎಸಗಿದ್ದಾರೆ, ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ, ವಿವಾದ ಸೃಷ್ಟಿಸಿ ಪರಾರಿಯಾಗಿದ್ದಾರೆ. ಆದರೆ ಸತ್ಯಾಸತ್ಯತೆಗಳನ್ನು ನಿರ್ಧರಿಸಲು ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ ಇದೆ. ಜನತೆಗೆ ಸತ್ಯವನ್ನು ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಿವೆ. ಆದರೆ ಆರತಿ-ನಿತ್ಯಾನಂದರ ಸಂಬಂಧಗಳನ್ನೇ ರಂಜನೀಯವಾಗಿ ಚಿತ್ರಿಸಿ, ದಿನವಿಡೀ ನಿತ್ಯಾನಂದನ ಸುದ್ದಿಯನ್ನೇ ಬಿತ್ತರಿಸಿ, ತೋರಿದ್ದನ್ನೇ ತೋರಿಸಿ ಜನರ ಮನದಲ್ಲಿ ನಿತ್ಯಾನಂದನನ್ನು ಶಾಶ್ವತವಾಗಿ ಉಳಿಯುವಂತೆ ಮಾಡುವ ಅವಶ್ಯಕತೆ ಇರಲಿಲ್ಲವೆನಿಸುತ್ತದೆ. ನಿತ್ಯಾನಂದರಂತಹ ವಿವಾದ-ಪ್ರಚಾರ ಪ್ರಿಯ ಸ್ವಾಮಿಗಳಿಗೆ ಇದು ವರದಾನವಿದ್ದಂತೆ. ಏಕೆಂದರೆ ಕೆಲ ದಿನಗಳ ಬಳಿಕ ಈ ಘಟನೆಗಳು ನೇಪಥ್ಯಕ್ಕೆ ಸರಿದಿರುತ್ತವೆ, ಪ್ರಕರಣ ನ್ಯಾಯಾಲಯಗಳಲ್ಲಿ ಕುಂಟುತ್ತಾ ಸಾಗುತ್ತಿರುತ್ತವೆ, ನಿತ್ಯಾನಂದ ಮತ್ತೊಮ್ಮೆ ಆಶ್ರಮದಲ್ಲಿ ವಿರಾಜಮಾನರಾಗಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸುತ್ತಿರುತ್ತಾರೆ. ವಿವಾದಕ್ಕೆ ಸಿಲುಕಿದ ಯಾವುದೇ ಧಾಮರ್ಿಕ ಮಠಗಳೂ ಸಹ ಕಣ್ಮರೆಯಾಗಿಲ್ಲ. ಕಣ್ಮರೆಯಾಗಿರುವುದು ಅದರ ಹಿಂದಿನ ಸತ್ಯಾಂಶಗಳಷ್ಟೇ. ಕಾರಣ ಸ್ಪಷ್ಟ. ಧರ್ಮ-ಆಧ್ಯಾತ್ಮಗಳ ಹಿಂದೆ ಇರುವುದು ಹಣದ ಬಲ, ರಾಜಕೀಯ ಪ್ರಾಬಲ್ಯ, ಸಾಮಾಜಿಕ ಸ್ವೀಕೃತಿ ಮತ್ತು ಜನಸಮುದಾಯಗಳ ಅಜ್ಞಾನಭರಿತ ನಂಬಿಕೆಗಳು. ನಿತ್ಯಾನಂದರು ಎಲ್ಲೆಡೆಯೂ ಇದ್ದಾರೆ. ಧರ್ಮ ಕೇಂದ್ರಗಳ ಹೆಸರಿನಲ್ಲಿ ನೂರಾರು ಎಕರೆ ಭೂಮಿಯನ್ನು ಖರೀದಿಸಿ, ಶಿಕ್ಷಣ, ಆರೋಗ್ಯ, ಆಧ್ಯಾತ್ಮ, ಯೋಗ ಮುಂತಾದ ಜನೋಪಯೋಗಿ ಚಟುವಟಿಕೆಗಳ ನೆಪದಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ನಿಮರ್ಿಸಿಕೊಳ್ಳುವ ಮಠಮಾನ್ಯಗಳು, ಆಶ್ರಮಗಳು ಕ್ರಮೇಣ ತಮ್ಮ ರಾಜಕೀಯ ಪ್ರಭಾವಳಿಯನ್ನೂ ನಿಮರ್ಿಸಿಕೊಂಡು ಆಳ್ವಿಕೆ ನಡೆಸುತ್ತವೆ. ಈ ಮಠಮಾನ್ಯಗಳಲ್ಲಿ ಅಡಗಿರುವ ಅಪಾರ ಧನಸಂಪತ್ತು, ಸ್ಥಿರಾಸ್ತಿಗಳು ಯಾವುದೇ ಸಿಬಿಐ-ಲೋಕಾಯುಕ್ತಗಳ ಕಣ್ಣಿಗೆ ಬೀಳುವುದಿಲ್ಲ. ಬಿದ್ದರೂ ರಾಜಕೀಯ ಪ್ರಭಾವದಿಂದ ನಗಣ್ಯವಾಗುತ್ತದೆ. ಮಾಧ್ಯಮಗಳು ಮತ್ತು ಕನ್ನಡ ವೇದಿಕೆಗಳ ಹೋರಾಟದ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಒಪ್ಪಿಕೊಳ್ಳುತ್ತಲೇ ಹೇಳುವುದಾದರೆ, ನಮ್ಮಲ್ಲಿ ನಿತ್ಯಾನಂದರು ಅನೇಕರಿದ್ದಾರೆ. ಪರಿಶೋಧಿಸಬೇಕಷ್ಟೆ.      ]]>

‍ಲೇಖಕರು G

June 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: