ನಾ ದಿವಾಕರ್ ಕಾಲ೦ : ಏನೆಂದು ಸ್ವಾಗತಿಸೋಣ?

– ನಾ ದಿವಾಕರ

ಏನೆಂದು ಸ್ವಾಗತಿಸೋಣ ?

ವ್ಯ೦ಗ್ಯ ಚಿತ್ರ ಕೃಪೆ : ಆರ್ ಕೆ ಲಕ್ಷ್ಮಣ್ ಮತ್ತೊಂದು ಯುಗಾದಿಯನ್ನು ಸ್ವಾಗತಿಸೋಣ. ನಿಸರ್ಗ ತನ್ನ ಹಳೆಯದನ್ನೆಲ್ಲಾ ಮರೆಯಲು ಪೊರೆ ಕಳಚಿ, ಹೊಸ ರೂಪ ಧರಿಸುವ ಋತುವಿನಲ್ಲಿ ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಾಥರ್ಿಸುತ್ತಾ ನವ ವರ್ಷದ ಸ್ವಾಗತಕ್ಕೆ ಸಿದ್ಧರಾಗೋಣ. ಏನೆಲ್ಲಾ ಅಡಗಿದೆ ಈ ಯುಗಾದಿಯ ಸಂಭ್ರಮದಲ್ಲಿ. ಅನಕ್ಷರಸ್ಥರಿಂದ ಹಿಡಿದು ವಿದ್ವಾಂಸರವರೆಗೆ, ಕವಿವರ್ಯರವರೆಗೆ ಸಮಾನವಾಗಿ ಆಕಷರ್ಿಸುವ ಈ ಹಬ್ಬದ ವೈಶಿಷ್ಟ್ಯ ಎಂದರೆ ಅದರ ಸಾರ್ವತ್ರಿಕತೆ ಮತ್ತು ಯುಗಾದಿಯ ಹಿಂದೆ ಅಡಗಿರುವ ಭಾವುಕತೆ. ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿ ಯುಗಾದಿ ಒಂದು ವಿಶಿಷ್ಟವಾದ ಹಬ್ಬ. ನವ ವರ್ಷವನ್ನು ಹಷರ್ೋಲ್ಲಾಸಗಳಿಂದ ಸ್ವಾಗತಿಸುವ ಈ ಹಬ್ಬ ಸಾರ್ವತ್ರಿಕವಾದದ್ದು. ಆದರೂ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರೀತಿಗಳಲ್ಲಿ ಆಚರಿಸಲಾಗುತ್ತದೆ. ಜನಸಮುದಾಯಗಳು ಹೊಸ ವರ್ಷವನ್ನು ಸ್ವಾಗತಿಸಲು ತಮ್ಮದೇ ಆದ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಸಂಸ್ಕೃತಿ, ಸಂಪ್ರದಾಯ ಮತ್ತು ಧಾಮರ್ಿಕತೆಯ ನಡುವೆಯೇ ಜನಸಮುದಾಯಗಳ ಜೀವನ ಶೈಲಿಯೂ ಯುಗಾದಿಯ ವೈಭವವನ್ನು ಸಾರುತ್ತವೆ. ವಸಂತ ಋತುವಿನ ಕರೆಗೆ ಓಗೊಟ್ಟು ತರಗೆಲೆಗಳು ಉದುರಿ, ಚಿಗುರೆಲೆಗಳು ಕಂಗೊಳಿಸುವ ನಿಸರ್ಗದ ಚೆಲುವಿನ ನಡುವೆ ಜೀವನದ ಸಿಹಿ ಕಹಿಗಳನ್ನು ಸಮನಾಗಿ ಹಂಚಿಕೊಂಡು ಭ್ರಾತೃತ್ವ-ಸೌಹಾರ್ದತೆ ಮತ್ತು ಸಮಾನತೆಗಳನ್ನು ಸಾರುವ ಒಂದು ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ನಿಸರ್ಗ ತನ್ನದೇ ಆದ ವೈಜ್ಞಾನಿಕ ರೀತಿಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಕಾಲಕಾಲಕ್ಕೆ ಬದಲಾಯಿಸುತ್ತಾ ಮುನ್ನಡೆಯುತ್ತದೆ. ಮಾನವ ಸಮಾಜ ಎಷ್ಟೇ ಕ್ರೌರ್ಯ ಪ್ರದಶರ್ಿಸಿದರೂ ಅವೆಲ್ಲವನ್ನೂ ತನ್ನ ವಿಶಾಲ ಒಡಲಲ್ಲಿ ಅಡಗಿಸಿಕೊಂಡು ತನ್ನದೇ ಆದ ಗಜಗಾಂಭೀರ್ಯದ ನಡೆಯಲ್ಲಿ ಮುನ್ನಡೆಯುವ ನಿಸರ್ಗದ ಶಕ್ತಿ ಅಪಾರ. ತನ್ನೊಡಲ ಒಳಗಿನ ಬೇಗುದಿಯನ್ನು ತಾನೇ ಸರಿಪಡಿಸಿಕೊಂಡು ಮಾನವ ಸಮಾಜದ ಉಳಿವಿಗೆ ಸುಭದ್ರ ಬುನಾದಿ ಒದಗಿಸುವ ನಿಸರ್ಗದ ತಾಳ್ಮೆಯ ಮುಂದೆ ಮಾನವ ಸಮಾಜ ತಲೆತಗ್ಗಿಸುವುದು ಅನಿವಾರ್ಯ. ಆದರೂ ಮನುಕುಲದ ಅಹಂಕಾರ ನಿಸರ್ಗವನ್ನು ಸದಾ ಹಾಳುಮಾಡುತ್ತಲೇ ಬಂದಿದೆ. ಆದರೂ ನಿಸರ್ಗ ತನ್ನ ಸ್ವಂತಿಕೆಯನ್ನು ಬಿಟ್ಟುಕೊಡದೆ ವರ್ಷದಿಂದ ವರ್ಷಕ್ಕೆ ಮಾನವ ಸಮಾಜ ಎದುರಿಸುತ್ತಿರುವ ಅಪಾಯಗಳ ಮುನ್ಸೂಚನೆಯನ್ನು ನೀಡುತ್ತಲೇ ಇದೆ. ಯುಗಾದಿ ಇಂತಹ ಮುನ್ಸೂಚನೆಯ ಒಂದು ಸಂಭ್ರಮದ ಆಚರಣೆ. ಆದರೆ ಹಾಗಾಗಿಯೇ ಕವಿವರ್ಯರು ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂದಿದ್ದಾರೆ. ಹೌದು ನಾವು ಒಂದು ಯುಗವನ್ನು ಪೂರೈಸಿ ಮತ್ತೊಂದು ಯುಗದ ಆದಿಯನ್ನು ಸ್ವಾಗತಿಸುತ್ತಿದ್ದೇವೆ. ಗತ ಯುಗದ ಎಲ್ಲ ನ್ಯೂನತೆಗಳನ್ನು, ಲೋಪಗಳನ್ನು, ಭಾವನೆಗಳನ್ನು ಸರಿಪಡಿಸಿಕೊಳ್ಳುತ್ತಾ ಮುಂದಿನ ದಿನಗಳನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಲು ಯುಗಾದಿ ಮಾರ್ಗದರ್ಶಕವಾಗಿ ಆಗಮಿಸುತ್ತದೆ. ಹಾಗಾಗಿಯೇ ತಳಿರು ತೋರಣ, ಬೇವು ಬೆಲ್ಲಗಳ ನಡುವೆ ಸೌಹಾರ್ದ ಸಮಾಜದ ನಿಮರ್ಾಣಕ್ಕಾಗಿ ಪಣತೊಟ್ಟು ಸ್ವಾಗತಿಸುತ್ತಿದ್ದೇವೆ. ಮಾನವ ಸಮಾಜ ಕೂಡಿ ಬಾಳುವುದನ್ನು ನಿಸರ್ಗದಿಂದ ಕಲಿಯಲು ಇದೊಂದು ಸದಾವಕಾಶ. ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ನೋಡಿದಾಗ ಇದು ಯುಗದ ಆದಿಯೋ ಅಥವಾ ಪ್ರಬುದ್ಧ, ಪ್ರಜ್ಞಾವಂತ ಯುಗದ ಅಂತ್ಯವೋ ಎಂಬ ಅನುಮಾನ ಮೂಡುವುದು ಸಹಜ. ಸೌಹಾರ್ದತೆ, ಭ್ರಾತೃತ್ವ, ಬಾಂಧವ್ಯ, ಜೀವನ ಮೌಲ್ಯ, ನೈತಿಕತೆ, ಪ್ರಾಮಾಣಿಕತೆ ಇವೆಲ್ಲವೂ ಇನ್ನೂ ಮಾನವ ಸಮಾಜದಲ್ಲಿ ಜೀವಂತವಾಗಿದೆಯೋ ಇಲ್ಲವೋ ಎಂಬ ಅನುಮಾನದ ನಡುವೆಯೇ ಯುಗಾದಿಯ ಸಂಭ್ರಮವನ್ನು ಸ್ವಾಗತಿಸಬೇಕಾಗಿದೆ. ಈ ಮೌಲ್ಯಗಳನ್ನು ಎಲ್ಲೆಂದು ಹುಡುಕಲು ಸಾಧ್ಯ ? ಭಾರತೀಯ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಹೊಣೆಗಾರಿಕೆ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಗಳು ತನ್ನೆಲ್ಲಾ ಲೋಪದೋಷಗಳನ್ನು ಮೇಲ್ನೋಟಕ್ಕೇ ಪ್ರದಶರ್ಿಸುತ್ತಾ, ಜನಸಾಮಾನ್ಯರ ಮುಂದೆ ನಗ್ನವಾಗಿ ನಿಂತುಬಿಟ್ಟಿದೆ. ರಾಜಕೀಯ ಕ್ಷೇತ್ರವೇನೋ ಹದಗೆಟ್ಟು ಹಲವು ದಶಕಗಳೇ ಕಳೆಯಿತೆನ್ನೋಣ. ಆದರೆ ಇತರ ಸಾರ್ವಜನಿಕ ಕ್ಷೇತ್ರಗಳ ಪಾಡೇನಾಗಿದೆ. ? ನಮ್ಮ ಸಮಾಜದಲ್ಲೂ ಮೌಲ್ಯ ಎನ್ನುವ ಒಂದು ಪದ ಚಾಲ್ತಿಯಲ್ಲಿತ್ತು, ಮೌಲ್ಯಾಧಾರಿತ ರಾಜಕಾರಣ ಎಂಬ ವಿದ್ಯಮಾನ ಇತ್ತು, ನಿಷ್ಠಾವಂತ ರಾಜಕಾರಣಿಗಳಿದ್ದರು ಎಂದು ಇಂದಿನ ಪೀಳಿಗೆಗೆ ಹೇಳಿದರೆ, ಬಹುಶಃ ಇದು ಕಾಗಕ್ಕ ಗೂಬಕ್ಕನ ಕಥೆ ಇರಬಹುದೆಂದು ನಕ್ಕುಬಿಟ್ಟಾರು. ರಾಜಕಾರಣ ಎಂದರೆ ಠಕ್ಕರ ಅಂತಿಮ ಆಶ್ರಯ ತಾಣ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ರಾಜಕಾರಣ ಠಕ್ಕರ, ವಂಚಕರ, ಮಾಫಿಯಾಗಳ, ಪಾತಕಿಗಳ, ಭ್ರಷ್ಟರ ಪ್ರಾಥಮಿಕ ಶಾಲೆಯಂತಾಗಿಬಿಟ್ಟಿದೆ. ಕನರ್ಾಟಕದ ರಾಜಕಾರಣವಂತೂ ನೆನೆಯಲೂ ಅಸಹ್ಯ ಬರುವ ಮಟ್ಟಿಗೆ ಹದಗೆಟ್ಟಿದೆ. ಕೊಳೆತು ನಾರುತ್ತಿರುವ ರಾಜಕೀಯ ವ್ಯವಸ್ಥೆಯ ದುನರ್ಾತದಿಂದ ವಸಂತ ಋತುವಿನ ಚಿಗುರಿದ ಹಸಿರು ವನಗಳೂ ತಮ್ಮ ಸೌಂದರ್ಯವನ್ನು ಕಳೆದುಕೊಂಡು ನಿಸ್ಸಾರವಾದಂತೆ ಕಾಣುತ್ತಿದೆ. ಒಂದೆಡೆ ರಾಜಕೀಯ ಪಕ್ಷಗಳು ತಮ್ಮ ಅನೈತಿಕತೆ, ಅಪ್ರಾಮಾಣಿಕತೆ ಮತ್ತು ಮೌಲ್ಯರಹಿತ ರಾಜಕಾರಣವನ್ನು ಖುಲ್ಲಂಖುಲ್ಲಾ ಪ್ರದಶರ್ಿಸುತ್ತಿದ್ದರೆ ಮತ್ತೊಂದೆಡೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಸಾಂವಿಧಾನಿಕ ಸಂಸ್ಥೆಗಳು ಮೌಲ್ಯರಹಿತವಾಗಿ ಕಳೆಗುಂದುತ್ತಿವೆ. ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಬೇಕಾದ ವೃತ್ತಿಪರರು, ವಕೀಲರು, ಪೊಲೀಸರು ಮತ್ತು ಮಾಧ್ಯಮಗಳು ಪರಸ್ಪರ ದೋಷಾರೋಪಗಳಲ್ಲಿ ತೊಡಗಿ, ಸಮಾಜದ ಸ್ವಾಸ್ಥ್ಯವನ್ನೇ ಹದಗೆಡಿಸುವ ಹೀನ ಮಟ್ಟಕ್ಕೆ ಇಳಿದಿವೆ. ದೇಶದ ನ್ಯಾಯ ವ್ಯವಸ್ಥೆಯನ್ನು ಪ್ರತಿನಿಧಿಸುವ ವಕೀಲರು ಮತ್ತು ಪೊಲೀಸರು ಜನಸಾಮಾನ್ಯರ ದೃಷ್ಟಿಯಲ್ಲಿ ಅಪರಾಧಿಗಳಾಗಿದ್ದರೆ, ಸಂವಿಧಾನ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಜನಪ್ರತಿನಿಧಿಗಳು ತಮ್ಮ ಅನೈತಿಕ ವರ್ತನೆಯಿಂದ ಇಡೀ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಜನತಾ ಜನಾರ್ಧನರ ಹಿತಾಸಕ್ತಿಗಳನ್ನು ಕಾಪಾಡುವ, ದೇಶದ ಸಂವಿಧಾನದ ಆಶಯಗಳನ್ನು ರಕ್ಷಿಸುವ ಗುರುತರ ಹೊಣೆಗಾರಿಕೆ, ಸಾಂವಿಧಾನಿಕ ಕರ್ತವ್ಯ, ರಾಜಕೀಯ ಜವಾಬ್ದಾರಿಯನ್ನು ಹೊತ್ತಿರುವ ರಾಜಕಾರಣಿಗಳು ಶಾಸನಸಭೆಗಳ ಪಾವಿತ್ರ್ಯತೆಯನ್ನೇ ಹಾಳು ಮಾಡುವ ಹೀನ ಮಟ್ಟಕ್ಕೆ ಇಳಿದಿದ್ದಾರೆ. ಜನತಾ ಜನಾರ್ಧನರು ಅತ್ತ ಜನರೂ ಅಲ್ಲದೆ ಇತ್ತ ಜನಾರ್ಧನರೂ ಅಲ್ಲದೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ನಿಸರ್ಗ ತನ್ನೊಡಲಿನ ಬೇಗುದಿಯನ್ನು ತನ್ನೊಳಗೇ ಬಚ್ಚಿಟ್ಟುಕೊಂಡು ತನ್ನ ಕರ್ತವ್ಯವನ್ನು ನಿಭಾಯಿಸುತ್ತಿರುತ್ತದೆ. ಆದರೆ ಮನುಕುಲ ತನ್ನ ಬೇಗುದಿಯ ಮೂಲಕ ತನ್ನನ್ನು ಮಾತ್ರವಲ್ಲದೆ ನಿಸರ್ಗವನ್ನೂ ಧ್ವಂಸ ಮಾಡುವಲ್ಲಿ ತೊಡಗಿದೆ. ಆದರೂ ನಿಸರ್ಗದ ಸೃಷ್ಟಿ ಮಹತ್ವವಾದದ್ದು. ತರಗೆಲೆಗಳ ನಡುವೆ ಹಸಿರೆಲೆಗಳು ಕಂಗೊಳಿಸುತ್ತವೆ, ಮರುಭೂಮಿಯಲ್ಲಿ ಓಯಸಿಸ್ ಕಾಣುತ್ತದೆ, ಕೊಳೆತ ಹಣ್ಣುಗಳ ನಡುವೆಯೇ ರುಚಿಕರ ಹಣ್ಣುಗಳು ಇರುತ್ತವೆ. ಹಾಗೆಯೇ ನಮ್ಮ ಸಾಮಾಜಿಕ ರಾಜಕೀಯ ವಲಯದಲ್ಲೂ ಇದೇ ರೀತಿಯ ಕೆಲವು ವೈವಿಧ್ಯತೆಗಳಿವೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಭಾರತದ ರಾಜಕಾರಣವನ್ನು ಸಂಪೂರ್ಣವಾಗಿ ಆವರಿಸಿದ್ದು ಪ್ರಜೆಗಳಲ್ಲಿ ಹತಾಶೆ, ನಿರಾಸೆ ಬೇರೂರಿದ್ದು ಭ್ರಮನಿರಸನ ಉಂಟಾಗುತ್ತಿದೆ. ಆದರೂ ಎಲ್ಲೋ ಒಂದೆಡೆ ಓಯಸಿಸ್ ಗೋಚರಿಸುತ್ತಿದೆ. ನೀರಿಲ್ಲದೆ ಸೊರಗಿದ ಗಿಡಕ್ಕೆ ಯಾವುದೋ ಒಂದು ಬಳ್ಳಿ ಆಶ್ರಯ ನೀಡುತ್ತಿದೆ. ಆ ಬಳ್ಳಿಯೇ ಈ ದೇಶದ ಸಾರ್ವಭೌಮ ಪ್ರಜೆಗಳ ರಾಜಕೀಯ ಪ್ರಜ್ಞೆ ಮತ್ತು ಸಾಮಾಜಿಕ ಪ್ರಬುದ್ಧತೆ. ಈ ಅಮೂಲ್ಯ ಬಳ್ಳಿಯನ್ನು ನೀರೆರೆದು ಪೋಷಿಸುವುದು ಈ ದೇಶದ ಯುವ ಪೀಳಿಗೆಯ ಆದ್ಯತೆಯಾದಲ್ಲಿ ಮಾತ್ರ ನವ ವಸಂತದ ಆಗಮನವನ್ನು ಯುಗದ ಆದಿಯೆಂದು ಪೋಷಿಸಿ ಸ್ವಾಗತಿಸಬಹುದು. ಇಲ್ಲವಾದಲ್ಲಿ, ಇಂತಹ ವಿಷಮ ಪರಿಸರದಲ್ಲಿ ಯುಗಾದಿಯನ್ನು ಏನೆಂದು ಸ್ವಾಗತಿಸೋಣ ?  ]]>

‍ಲೇಖಕರು G

March 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This