ನಾ ದಿವಾಕರ್ ಕಾಲ೦ : ಕುಸ್ಮಾಕರರ ಕೊಳೆಗೇರಿ ಮನಸುಗಳು

– ನಾ ದಿವಾಕರ್

ಸಮಾಜದ ಉನ್ನತ ಮೇಲ್ವರ್ಗದ ಮತ್ತು ಶ್ರೀಮಂತರ ಮಕ್ಕಳು ವ್ಯಾಸಂಗ ಮಾಡುವ ಖಾಸಗಿ ಶಾಲೆಗಳು ಪರಿಶುದ್ಧ ಸಮುದ್ರವಂತೆ, ಉಳಿದ ಬಡ ಮಕ್ಕಳು, ಸಮಾಜದ ಅಲಕ್ಷಿತ ಸಮುದಾಯಗಳು, ಅವಕಾಶವಂಚಿತ ಜನರು, ನಿಮ್ನ ವರ್ಗದವರು ಕೊಳಚೆಯಂತೆ. ಈ ಎರಡೂ ವರ್ಗಗಳ ಸಮಾಗಮವಾದಲ್ಲಿ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಸುನಾಮಿ ಉಂಟಾಗಬಹುದು. ಕೊಳಚೆ ಎಲ್ಲಾದರೂ ಸಮುದ್ರ ಸೇರುವುದುಂಟೇ ? ಸೇರಿದರೆ ಪಾಪ ಶತಮಾನಗಳಿಂದ ತಮ್ಮ ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿರುವ ಮಡಿವಂತ ಕುಸ್ಮಾಕರರು ಬಾಳುವುದುಂಟೇ ? ಎಷ್ಟು ಪರಿಶ್ರಮ ವಹಿಸಿ ತಮ್ಮ ಸಮುದ್ರದ ಪರಿಶುದ್ಧತೆಯನ್ನು ರಕ್ಷಿಸಲಾಗಿದೆ ಎಂದು ಭಾರತೀಯರಿಗೆ ತಿಳಿದಿದೆಯೇ ? ಕುಸ್ಮಾಕರರು ಉಟ್ಟಿರುವ ಮಡಿಪಂಚೆಯ ಪ್ರತಿಯೊಂದು ನೂಲಿನಲ್ಲೂ ಪಾವಿತ್ರ್ಯತೆ ತುಂಬಿ ತುಳುಕುತ್ತಿದೆಯಂತೆ. ಅದನ್ನು ಇತರರು ಸ್ಪಶರ್ಿಸುವುದೇ ಮಹಾಪಾಪ. ಇವರೆಲ್ಲರೂ ಪಡೆದುಬಂದವರಲ್ಲವೇ ? ಜನ್ಮತಃ ಶ್ರೇಷ್ಠತೆಯನ್ನು ಪಡೆದುಕೊಂಡು ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿರಲೆಂದೇ ಸೃಷ್ಟಿಸಲ್ಪಟ್ಟಿರುವ ಆತ್ಮಗಳು. ಇವರೊಡನೆ ಛೆ, ಕೊಳಚೆ ಸೇರಿಸುವುದೇ ? ಬೇಡ ಬಿಡಿ. ಪಾಪ ಮಾನ್ಯ ಜಿ.ಎಸ್. ಶಮರ್ಾರವರು ಆತ್ಮಹತ್ಯೆ ಮಾಡಿಕೊಂಡಾರು ! ಎಷ್ಟು ಶ್ರಮ ವಹಿಸಿ ನಿಮರ್ಿಸಿದ್ದಾರೆ ತಮ್ಮ ಕೋಟೆ ಕೊತ್ತಲಗಳನ್ನು. ದೇಶದ ಜನಸಾಮಾನ್ಯರ ಭವಿಷ್ಯವನ್ನು ನಿರ್ಧರಿಸುವ ಒಂದು ಸಾಮಾಜಿಕ-ಸಾಂಸ್ಕೃತಿಕ ಪರಿಕರವಾದ ವಿದ್ಯೆ ಅಥವಾ ಶಿಕ್ಷಣ ಎಂಬುದನ್ನು ಮಾರುಕಟ್ಟೆ ಸರಕಿನಂತೆ ಪರಿವತರ್ಿಸಲು ತಮ್ಮ ಪ್ರಯೋಗಾಲಯದಲ್ಲಿ ಏನೆಲ್ಲಾ ಸಾಹಸಗಳನ್ನು ಮಾಡಿರಬೇಡ ಈ ಶುದ್ಧಾತ್ಮರು. ದೇಶದ ಪವಿತ್ರ ಸಂವಿಧಾನದಲ್ಲಿ ಎಲ್ಲ ಮಕ್ಕಳಿಗೂ ಕಡ್ಡಾಯ ಉಚಿತ ಶಿಕ್ಷಣ ನೀಡಬೇಕೆಂಬ ಆದೇಶ ಇದ್ದರೂ ಅದನ್ನು ಉಲ್ಲಂಘಿಸಲು ಏನೆಲ್ಲಾ ರಣತಂತ್ರಗಳನ್ನು ಹೂಡಿದ್ದಾರೆ. ಒಮ್ಮೆ ಯೋಚಿಸಿ ನೋಡಿ ಪ್ರತಿಭಟನಾಕಾರರೇ ! ಕುಸ್ಮಾಕರರು ಆರಂಭಿಸುವ ಶಾಲೆಗಳಿಗೆ ಪರವಾನಗಿ ಪಡೆಯಲು ಎಷ್ಟು ಮಂತ್ರಿಗಳ, ರಾಜಕಾರಣಿಗಳ, ಅಧಿಕಾರಿಗಳ ಕೈ ಬೆಚ್ಚಗೆ ಮಾಡಬೇಕು ? ಇವರು ಖಾಸಗಿ, ಐಷಾರಾಮಿ ಶಾಲಾ ಕಟ್ಟಡಗಳ ನಿಮರ್ಾಣಕ್ಕೆ ಎಷ್ಟು ಬಂಡವಾಳ ಹೂಡಬೇಕು. ಯಾವುದೋ ಉದ್ಯಮದಲ್ಲಿ ಅಕ್ರಮವಾಗಿಯೋ, ಸಕ್ರಮವಾಗಿಯೋ, ತೆರಿಗೆ ವಂಚಿಸಿಯೋ ಅಥವಾ ಸುಳ್ಳು ಲೆಕ್ಕ ಪತ್ರಗಳನ್ನು ಸಲ್ಲಿಸಿಯೋ ಸಂಪಾದಿಸಿ ಕೂಡಿಟ್ಟಿರುವ ಕಪ್ಪು ಹಣವನ್ನೆಲ್ಲಾ ತಮ್ಮ ಹೊಸ ಶೈಕ್ಷಣಿಕ ಉದ್ಯಮದಲ್ಲಿ ಹೂಡಬೇಕು, ಅದೂ ಲಾಭದಾಯಕ ರೀತಿಯಲ್ಲಿ ! ಎಳೆ ವಯಸ್ಸಿನ ಮಕ್ಕಳನ್ನು ಓದಿ-ಬರೆದು-ಕಂಠಪಾಠ ಮಾಡಿ ಹಾಳೆಯ ಮೇಲೆ ಭಟ್ಟಿ ಇಳಿಸುವ ಯಂತ್ರಗಳನ್ನಾಗಿ ಪರಿವತರ್ಿಸಲು ಕುಸ್ಮಾಕರರು ಎಷ್ಟು ಶ್ರಮ ವಹಿಸಿರಬೇಡ. ವಿದ್ಯಾರ್ಜನೆ ಎಂದರೆ ಮಾಕ್ಸರ್್ ಗಳಿಸುವುದು ಎಂದು ಜನಸಾಮಾನ್ಯರಲ್ಲಿ, ವಿಶೇಷವಾಗಿ ಮಧ್ಯಮವರ್ಗಗಳಲ್ಲಿ ನಂಬಿಕೆ ಮೂಡಿಸಿರುವ ಈ ಉದ್ಯಮಿಗಳು ಈ ರೀತಿಯ ಕೋಟ್ಯಾಂತರ ಯಂತ್ರಗಳನ್ನು ಸೃಷ್ಟಿಸುತ್ತಿಲ್ಲವೇ ? ಮಾಕ್ಸರ್್ವಾದ ಸತ್ತಿದೆ ಎಂದು ಬೊಬ್ಬೆ ಹೊಡೆಯಬೇಡಿ, ಕುಸ್ಮಾಕರರು ತಮ್ಮದೇ ಆದ ರೀತಿಯಲ್ಲಿ ಮಾಕ್ಸರ್್ವಾದಿಗಳನ್ನು ( ಮಾಕ್ಸರ್್ ಎಂದರೆ ಅಂಕಗಳು) ಸೃಷ್ಟಿಸಿದ್ದಾರೆ. ಪ್ರತಿಭೆ ಎಂದರೆ ಇದೇ ಎಂದು ಪ್ರಸಾರ ಮಾಡುತ್ತಾ ಮಾಕ್ಸರ್್ವಾದಿಗಳಲ್ಲದವರನ್ನು ನಿಕೃಷ್ಟವಾಗಿ ಕಾಣುವ ಒಂದು ಪರಂಪರೆಯನ್ನೇ ಸೃಷ್ಟಿಸಿದ್ದಾರೆ. ಪ್ರತಿಭಾ ಪುರಸ್ಕಾರ ಸಮಾರಂಭಗಳನ್ನು ನೋಡಿ. ಅದೂ ಜಾತ್ಯಾವಾರು ನಡೆಯುತ್ತದೆ, ಪ್ರತಿ ವರ್ಷ. ಇಲ್ಲಿ ಪುರಸ್ಕೃತರಾಗುವವರೆಲ್ಲರೂ ಮಾಕ್ಸರ್್ವಾದಿಗಳೇ. ಅಂದರೆ ಮಾಕ್ಸರ್್ ಪಡೆಯದಿರುವವರಲ್ಲಿ ಪ್ರತಿಭೆ ಇರುವುದಿಲ್ಲ ಎಂದು ನಿರ್ಧರಿಸಿದಂತಿದೆ ಈ ಕುಸ್ಮಾಕರರು ಮತ್ತು ಅವರ ಸಂಗಾತಿಗಳು. ಇವರ ಶಾಲೆಗಳಲ್ಲಿ ಏನೆಲ್ಲಾ ಹೇಳಿಕೊಡುತ್ತಾರೆ. ಮಕ್ಕಳನ್ನು ಒಮ್ಮೆ ಒಳಕ್ಕೆ ಧೂಕಿಬಿಟ್ಟರೆ ಹೊರಬರುವ ವೇಳೆಗೆ ಸಕಲ ವಿದ್ಯಾಪಾರಂಗತರಾಗಿರುತ್ತಾರೆ ಎಂದು ನಂಬಿಸಲಾಗಿದೆ. ಡೊನೇಷನ್ ನೀಡಬೇಕಷ್ಟೇ. ಗುಣಮಟ್ಟ ಬೇಕಾದರೆ ಡೊನೇಷನ್ ನೀಡಿ. ಇದು ಮಾರುಕಟ್ಟೆ ಮಂತ್ರ. ಶುದ್ಧೀಕರಿಸಲಾದ ದಿನಸಿ ಬೇಕೆಂದರೆ ರಿಲೈಯ್ಯನ್ಸ್ , ಬಿಗ್ ಬಜಾರ್, ಮೋರ್ಗಳಿಗೆ ಹೋಗುವುದಿಲ್ಲವೇ. ಹಾಗೆಯೇ ಉತ್ತಮ (?) ಗುಣಮಟ್ಟದ ಶಿಕ್ಷಣ ಬೇಕೆಂದರೆ ಈ ಶೈಕ್ಷಣಿಕ ಷಾಪಿಂಗ್ ಮಾಲ್ಗಳಿಗೆ ಹೋಗಲೇಬೇಕು. ಅತ್ಯಾಧುನಿಕ ಷಾಪಿಂಗ್ ಮಾಲ್ಗಳಿಗೆ ನಮ್ಮ ಬೋರಯ್ಯ, ತಿಮ್ಮಯ್ಯ ಹೋಗಲು ಸಾಧ್ಯವೇ ? ಪಾಪ ದಿಕ್ಕು ತಪ್ಪಿಬಿಡುತ್ತಾರೆ. ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿರುತ್ತಾರೆ. ನಾವು ಬೆಳೆದ ಫಸಲು ಇಲ್ಲಿ ಹೇಗೆ ಬಿಕರಿಯಾಗುತ್ತಿದೆಯಲ್ಲಾ ಎಂದು ದೇಶದ ಕೃಷಿಕ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾನೆ. ಹಾಗೆಯೇ ಈ ಶೈಕ್ಷಣಿಕಷಾಪಿಂಗ್ ಮಾಲ್ಗಳು. ಈ ಮಾಲ್ಗಳಿಗೆ ನಮ್ಮ ಸಮಾಜದ ಶ್ರಮಿಕ ವರ್ಗಗಳು ಪ್ರವೇಶಿಸಿದರೆ, ವಿಟ್ರಿಫೈಡ್ ಟೈಲ್ಸ್ಗಳ ಮೇಲೆ ಕಾಲಿಟ್ಟು ಜಾರಿ ಬಿದ್ದುಹೋಗುತ್ತಾರೆ ಎಂದು ಕುಸ್ಮಾಕರರಿಗೆ ಭಯ. ಬೀಳುವವರ ಬಗ್ಗೆ ಕಾಳಜಿಯಲ್ಲ. ತಮ್ಮ ನೆಲಹಾಸಿನ ಟೈಲ್ಸ್ ಒಡೆದುಹೋಗುತ್ತದೆ ಎಂಬ ಭೀತಿ. ಎಷ್ಟಾದರೂ ಲಾಭ ನಷ್ಟಗಳ ಲೆಕ್ಕಾಚಾರ ಅಲ್ಲವೇ ? ಇರಲಿ, ತಮ್ಮ ಸುತ್ತಲಿನ ಕೊಳಚೆಯಿಂದ ದೂರ ಇರಲು ಕುಸ್ಮಾಕರರು ದೃಢ ನಿಧರ್ಾರ ಮಾಡಿದಂತಿದೆ. ತಾವು, ತಮ್ಮ ಮಕ್ಕಳು ಜನಿಸಿದಾಗ ತಾಯಿಯ ಪ್ರಸವವೇದನೆಯನ್ನು ದೂರ ಮಾಡಲು ನೆರವಾಗುವವರು, ತಮ್ಮ ದೈನಂದಿನ ಜೀವನದ ತ್ಯಾಜ್ಯಗಳನ್ನು ಶುದ್ಧೀಕರಿಸುವವರು, ತಮ್ಮ ನಿತ್ಯಾಹಾರವನ್ನು ಉತ್ಪಾದಿಸುವವರು, ತಮ್ಮ ನಿತ್ಯ ಚಟುವಟಿಕೆಗಳ ಪ್ರತಿಹಂತಕ್ಕೂ ಪರಿಕರಗಳನ್ನು ಒದಗಿಸುವವರು, ತಾವು ಇಹಲೋಕ ತ್ಯಜಿಸಿದ ನಂತರವೂ ತಮ್ಮ ಪರಿಶುದ್ಧ ದೇಹಗಳ ಪಳೆಯುಳಿಕೆಗಳನ್ನು ನಿರ್ವಹಿಸುವವರು, ತಮ್ಮ ಕಾಲಿಗೆ ಮೆಟ್ಟು ನೀಡುವವರು, ಹೊಟ್ಟೆಗೆ ಅನ್ನ ನೀಡುವವರು, ತಲೆಗೆ ಅಂದ ನೀಡುವವರು, ತಮ್ಮ ನಗ್ನ ದೇಹಗಳನ್ನು ಮುಚ್ಚಲು ವಸ್ತ್ರಗಳನ್ನು ಪೂರೈಸುವವರು ಇವರೆಲ್ಲರೂ ಕುಸ್ಮಾಕರರ ದೃಷ್ಟಿಯಲ್ಲಿ ಕೊಳಚೆ ಇದ್ದಂತೆ. ಎಷ್ಟು ಸುಂದರ ಕಲ್ಪನೆ. ಮಾನ್ಯ ಶಮರ್ಾ ಅವರ ಹೇಳಿಕೆಯಿಂದ ಪ್ರಜ್ಞಾವಂತರೇನೂ ವಿಚಲಿತರಾಗಬೇಕಿಲ್ಲ. ಅವರ ಹೇಳಿಕೆ ಕೇವಲ ಸಾಂಕೇತಿಕವಾದದ್ದು. ಭಾರತೀಯ ಸಮಾಜವನ್ನು ಕಾಡುತ್ತಿರುವ ಅಮಾನವೀಯ ಜಾತಿ ವ್ಯವಸ್ಥೆಯ ಒಂದು ಆಯಾಮವನ್ನು ಶಮರ್ಾ ತಮ್ಮ ಹೇಳಿಕೆಯ ಮೂಲಕ ಅನಾವರಣಗೊಳಿಸಿದ್ದಾರೆ. ಇದು ಕೇವಲ ಸೂಚಕವಷ್ಟೆ. ಅಂತರಂಗದ ಭಾವನೆಯನ್ನು ಶಮರ್ಾ ಹೊರಗೆಡಹಿದ್ದಾರೆ. ನಮ್ಮ ಸಮಾಜದ ಆಂತರ್ಯದಲ್ಲಿ ಈ ಮನೋಭಾವ ಶತಮಾನಗಳಿಂದ ಅಡಗಿದೆ. ಕೋಟ್ಯಾಂತರ ಶಮರ್ಾಗಳು, ಕುಸ್ಮಾಕರರು ನಮ್ಮೊಳಗಿದ್ದಾರೆ. ನಾಜೂಕಯ್ಯನಂತೆ. ದುರಂತವೆಂದರೆ ಈ ಪರಿಶುದ್ಧಾತ್ಮಗಳು ದೇಶದ ಭವಿಷ್ಯವನ್ನು ನಿರ್ಧರಿಸುವ ಶಿಕ್ಷಣ ಕ್ಷೇತ್ರವನ್ನು ಆಕ್ರಮಿಸಿದ್ದಾರೆ. ತಪ್ಪು ಯಾರದು. ಇವರನ್ನು ಇಲ್ಲಿಯವರೆಗೆ ಬೆಳೆಯಲು ಬಿಟ್ಟ ಪ್ರಭುತ್ವದ್ದೇ ಅಥವಾ ಇಂತಹ ಶುದ್ಧಾತ್ಮಗಳನ್ನು ಸಹಿಸಿಕೊಂಡಿರುವ ಕೊಳಚೆಗಳದ್ದೇ ? ಸಮುದ್ರ ಎಷ್ಟೇ ಪರಿಶುದ್ಧವಾದರು ನುಂಗಲಾಗದ ನೀರನ್ನು ಹೊತ್ತಿರುವುದು ಮಾತ್ರ ಸತ್ಯವಲ್ಲವೇ ? ಕುಸ್ಮಾಕರರೂ ನಮ್ಮ ಸಮಾಜಕ್ಕೆ ನುಂಗಲಾರದ ತುತ್ತು ಇದ್ದಂತೆಯೇ. ಉಗಿಯುವುದೋ ನುಂಗುವುದೋ ನಮ್ಮ ಸಮಾಜದ, ಪ್ರಭುತ್ವದ, ಪ್ರಜ್ಞಾವಂತರ ವಿವೇಚನೆಗೆ ಬಿಟ್ಟಿದ್ದು.  ]]>

‍ಲೇಖಕರು G

July 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This