ನಾ ದಿವಾಕರ್ ಕಾಲ೦ : ದೇಶಾದ್ಯಂತ ರಾಮಲೀಲಾ ಮೈದಾನಗಳಿವೆ

– ನಾ ದಿವಾಕರ

ದೇಶಾದ್ಯಂತ ರಾಮಲೀಲಾ ಮೈದಾನಗಳಿವೆ

ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಅಂದೋಲನದ ಲಾಭ ಪಡೆದು ತಮ್ಮ ರಾಜಕೀಯ ಮಾರ್ಗಕ್ಕೆ ಸುಭದ್ರ ಬುನಾದಿ ನಿಮರ್ಿಸುವ ದೃಷ್ಟಿಯಿಂದ ಯೋಗ ಗುರು ಬಾಬಾ ರಾಮ್ದೇವ್ ಕಳೆದ ವರ್ಷ ಜೂನ್ ತಿಂಗಳಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು ಈಗ ಇತಿಹಾಸ. ಆದರೆ ಈ ಸಮಾವೇಶದಲ್ಲಿ ನೆರೆದಿದ್ದ ಜನಸಾಮಾನ್ಯರ ಮೇಲೆ ದೆಹಲಿಯ ಪೊಲೀಸರು ರಾತ್ರೋರಾತ್ರಿ ಏಕಾಏಕಿ ಆಕ್ರಮಣ ನಡೆಸಿದ್ದು ಈಗ ಪುನಃ ಚಚರ್ೆಗೆ ಗ್ರಾಸವಾಗಿದೆ. ದೆಹಲಿ ಪೊಲೀಸರ ದೌರ್ಜನ್ಯವನ್ನು ಸವರ್ೋಚ್ಚ ನ್ಯಾಯಾಲಯ ತೀವ್ರವಾಗಿ ಖಂಡಿಸಿದ್ದು ಪೊಲೀಸರ ಕ್ರಮ ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಬಣ್ಣಿಸಿದೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಜನಸಾಮಾನ್ಯರ ಮೇಲೆ ಏಕಾಏಕಿ ದಾಳಿ ನಡೆಸುವ ಮೂಲಕ ಪೊಲೀಸರು ಶಾಂತಿ ಕಾಪಾಡುವ ಬದಲು ಹಿಂಸಾಚಾರದಲ್ಲಿ ತೊಡಗಿದ್ದು ಪ್ರಜಾಸತ್ತೆಯ ಮೂಲ ಆಶಯಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಸವರ್ೋಚ್ಚ ನ್ಯಾಯಾಲಯ ತೀಪರ್ು ನೀಡಿದೆ. ಈ ತೀಪರ್ು ಸ್ವಾಗತಾರ್ಹವಷ್ಟೇ ಅಲ್ಲ, ಶ್ಲಾಘನೀಯವೂ ಹೌದು. ಸುಪ್ರೀಂ ಕೋಟರ್್ನ ಈ ತೀಪರ್ು ಕೇವಲ ಬಾಬಾ ರಾಮ್ದೇವ್ ಮತ್ತು ರಾಮಲೀಲಾ ಮೈದಾನದ ಘಟನೆಗಳಿಗೆ ಸೀಮಿತಗೊಳಿಸಲಾಗುವುದಿಲ್ಲ. ರಾಮ್ದೇವ್ ಒಬ್ಬ ಪ್ರತಿಷ್ಠಿತ, ಪ್ರಭಾವಿ ವ್ಯಕ್ತಿ. ಅವರ ಹಿಂದೆ ಲಕ್ಷಾಂತರ ಬೆಂಬಲಿಗರ ದಂಡೇ ಇದೆ. ರಾಜಕೀಯವಾಗಿಯೂ ಪಕ್ಷಾತೀತವಾಗಿ ಆದರಿಸಲ್ಪಡುವ ವ್ಯಕ್ತಿ. ಹಾಗಾಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಮತ್ತು ಅದರ ವಿರುದ್ಧ ಪೊಲೀಸ್ ಕಾಯರ್ಾಚರಣೆ ದೊಡ್ಡ ಸುದ್ದಿಯಾಗುತ್ತದೆ. ಮಾಧ್ಯಮಗಳಲ್ಲಿ ಚಚರ್ೆಗೊಳಗಾಗುತ್ತವೆ. ಆದರೆ ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿರುವ ವಿದ್ಯಮಾನಗಳನ್ನು ಪರಿಗಣಿಸಿದಾಗ, ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯ ಈ ದೌರ್ಜನ್ಯ ಎಲ್ಲಡೆ ಸಂಭವಿಸುತ್ತಿರುವುದನ್ನು ಗಮನಿಸಬಹುದು. ಇಂತಹ ಹಲವಾರು ಘಟನೆಗಳು ಸುದ್ದಿಯಾಗುವುದೇ ಇಲ್ಲ. ಉದಾಹರಣೆಗೆ ಇತ್ತೀಚೆಗೆ ಒರಿಸ್ಸಾದ ಕೋರಪುಟ್ ಜಿಲ್ಲೆಯ ನಾರಾಯಣಪಟ್ಟಣ ಮತ್ತು ಬಂಧುಗಾನ್ ಬ್ಲಾಕ್ಗಳಲ್ಲಿ ಆದಿವಾಸಿಗಳ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಕೋರಪುಟ್ ಜಿಲ್ಲೆಯಾದ್ಯಂತ ಹನ್ನೆರಡು ವಿವಿಧ ಆದಿವಾಸಿ ಸಮುದಾಯದ ಸುಮಾರು 10 ಸಾವಿರ ಜನ ಇಲ್ಲಿ ಸೇರುವ ಸಾಧ್ಯತೆಯಿತ್ತು. ಆದಿವಾಸಿಗಳ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಯನ್ನು ಕುರಿತು ಈ ಸಮಾವೇಶದಲ್ಲಿ ಚಚರ್ಿಸಲು ತೀಮರ್ಾನಿಸಲಾಗಿತ್ತು. ಇದು ಯಾವುದೇ ಹಕ್ಕೊತ್ತಾಯದ ಸಮಾವೇಶವಾಗಿರಲಿಲ್ಲ. ಸಕರ್ಾರದ ನೀತಿಯ ವಿರುದ್ಧ ಪ್ರತಿಭಟನೆಯೂ ಆಗಿರಲಿಲ್ಲ. ರಾಜಕೀಯದ ಸೋಂಕು ಸಹ ಇಲ್ಲಿರಲಿಲ್ಲ. ಆದರೂ ಸಶಸ್ತ್ರ ಭದ್ರತಾ ಪಡೆಗಳು ಈ ಸಮಾವೇಶಕ್ಕೆ ಆಗಮಿಸಲಿದ್ದ 5 ಸಾವಿರ ಆದಿವಾಸಿಗಳನ್ನು ಎಲ್ಲೆಡೆ ತಡೆಗಟ್ಟುವಲ್ಲಿ ತೊಡಗಿದ್ದರು. ಜಿಲ್ಲಾಡಳಿತ ಮತ್ತು ಭದ್ರತಾಪಡೆಗಳು ಈ ಆದಿವಾಸಿಗಳ ಮೇಲೆ ಬಲಪ್ರಯೋಗ ಮಾಡಿದ್ದೇ ಅಲ್ಲದೆ, ಹಿಂಸಾತ್ಮಕ ರೀತಿಯಲ್ಲಿ ಜನರ ದನಿಯನ್ನು ದಮನಿಸಲು ಎಲ್ಲ ತಂತ್ರಗಳನ್ನೂ ಅನುಸರಿಸಿದ್ದರು. ಈ ಘಟನೆಯಲ್ಲಿ ನಡೆದ ಲಾಠಿ ಚಾಜರ್್ನಲ್ಲಿ ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪ್ರತ್ಯಕ್ಷ ದಶರ್ಿಗಳ ಪ್ರಕಾರ ಪೊಲೀಸರ ಆಕ್ರಮಣಕ್ಕೆ ನಲುಗಿಹೋದ ಸಾವಿರಕ್ಕೂ ಹೆಚ್ಚು ಆದಿವಾಸಿಗಳು ಬೆಟ್ಟಗಳ ಹಿಂದೆ ಅವಿತುಕೊಂಡು ಬೇರೊಂದು ಮಾರ್ಗದಲ್ಲಿ ಹೋಗಲು ಯತ್ನಿಸಿದ್ದಾರೆ. ಅಲ್ಲಿಯೂ ಪ್ರತ್ಯಕ್ಷರಾದ ಭದ್ರತಾ ಪಡೆಗಳು ಒಬ್ಬ ಯುವಕನನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಭಯಭೀತರಾದ ಆದಿವಾಸಿಗಳು ತಮ್ಮ ಮನೆಗಳಿಗೆ ತೆರಳಿದ್ದಾರೆ. ಏತನ್ಮಧ್ಯೆ ಸಮಾವೇಶ ನಡೆಯುವ ಸ್ಥಳದಲ್ಲಿ 200ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಬೆಳಿಗ್ಗೆಯಿಂದಲೇ ಹಾಜರಿದ್ದು ಯಾರೂ ಭಾಗವಹಿಸದಂತೆ ಎಚ್ಚರ ವಹಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಸಮಾವೇಶದ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಭೋಜನಶಾಲೆ ಮತ್ತು ತಂಗುದಾಣಗಳು ಬೆಂಕಿಗೆ ಆಹುತಿಯಾಗಿವೆ. ಒಂಭತ್ತು ಆದಿವಾಸಿಗಳನ್ನು ಬಂಧಿಸಿರುವ ಗಡಿ ಭದ್ರತಾ ಪಡೆಯ ಸಿಬ್ಬಂದಿ ಅವರಿಗೆ ಚಿತ್ರಹಿಂಸೆ ನೀಡಿರುವುದಾಗಿ ಅವರ ಕುಟುಂಬದ ಸದಸ್ಯರು ದೂರು ಸಲ್ಲಿಸಿದ್ದಾರೆ. ಇದು ಇತ್ತೀಚಿನ ನಿದರ್ಶನವಷ್ಟೆ. ಕಳೆದ ಎರಡು ಮೂರು ದಶಕಗಳಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ದಮನ ಅವ್ಯಾಹತವಾಗಿ ನಡೆಯುತ್ತಿದ್ದು ಸಾರ್ವಭೌಮ ಪ್ರಜೆಗಳು ತಮ್ಮ ಪ್ರತಿಭಟನೆಯ ಹಕ್ಕುಗಳನ್ನೂ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಅತ್ಯಂದ ದಕ್ಷ ಮುಖ್ಯಮಂತ್ರಿಗಳೆಂದು ಪ್ರಸಿದ್ಧಿಯಾಗಿರುವ ನೀತಿಶ್ ಕುಮಾರ್ ಮತ್ತು ನರೇಂದ್ರ ಮೋದಿಯವರ ರಾಜ್ಯಗಳಲ್ಲೂ ಸಹ ಅಘೋಷಿತ ತುತರ್ುಪರಿಸ್ಥಿತಿಯ ಸನ್ನಿವೇಶ ಇರುವುದು ವರದಿಯಾಗಿದೆ. ಇತ್ತೀಚೆಗೆ ಬಿಹಾರಕ್ಕೆ ಭೇಟಿ ನೀಡಿರುವ ಪ್ರೆಸ್ ಕೌನ್ಸಿಲ್ ಅಧ್ಯಕ್ಷ ಹಾಗೂ ಮಾಜಿ ನ್ಯಾಯಮೂತರ್ಿಗಳಾದ ಮಾರ್ಕಂಡೇಯ ಕಟ್ಜು ಸ್ವತಃ ಈ ಮಾತುಗಳನ್ನು ಹೇಳಿದ್ದು ಬಿಹಾರದಲ್ಲಿ ಮಾಧ್ಯಮಗಳು ನಿಭರ್ೀತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಕೇವಲ ಬಿಹಾರದ ಸಂಗತಿಯಲ್ಲ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದೇ ವಿದ್ಯಮಾನ ಪ್ರಚಲಿತವಾಗಿದ್ದು ಆಡಳಿತಾರೂಢ ಸಕರ್ಾರಗಳು ತಮ್ಮ ರಾಜಕೀಯ ಪ್ರಾಬಲ್ಯ ಮತ್ತು ಮಾಫಿಯಾ ಬೆಂಬಲ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿವೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಪ್ರಜಾವಾಣಿ ಕಚೇರಿಯ ಮೇಲೆ ನಡೆದ ದಾಳಿ ನಿದರ್ಶನವಷ್ಟೆ. ಮತ್ತೊಂದೆಡೆ ಜನಸಾಮಾನ್ಯರು ತಮ್ಮ ಹಕ್ಕೊತ್ತಾಯಗಳಿಗಾಗಿ ಮೌನ ಪ್ರತಿಭಟನೆ ನಡೆಸಲೂ ಸಹ ಪೂವರ್ಾನುಮತಿ ಪಡೆಯುವ ಸಂದರ್ಭ ಎದುರಾಗಿದೆ. ಬೆಂಗಳೂರು, ಮುಂಬೈ, ಕೊಲ್ಕತ್ತಾ, ಅಷ್ಟೇಕೆ ಮೈಸೂರಿನಂತಹ ಚಿಕ್ಕ ನಗರಗಳಲ್ಲೂ ಸಹ ಜನಸಾಮಾನ್ಯರಿಗೆ ಪ್ರತಿಭಟನೆ ಮಾಡಲು ನಿದರ್ಿಷ್ಟ ಜಾಗಗಳನ್ನು ಗೊತ್ತುಮಾಡಲಾಗಿದೆ. ತಮ್ಮ ಹಕ್ಕೊತ್ತಾಯಗಳಿಗಾಗಿ ಪ್ರತಿಭಟಿಸಲೂ ಜನರು ಅಜರ್ಿ ಸಲ್ಲಿಸಿ, ಅನುಮತಿ ಪಡೆಯಬೇಕಾದ ಸಂದರ್ಭ ಎದುರಾಗಿದೆ. ನಗರದ ಕೇಂದ್ರ ಪ್ರದೇಶಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಮೌನ ಪ್ರತಿಭಟನೆ ನಡೆಸಲೂ ಅನುಮತಿ ನಿರಾಕರಿಸಲಾಗುತ್ತದೆ. ಶಾಂತಿಯುತವಾಗಿ ಪ್ರತಿಭಟಿಸುವ ಜನತೆಯ ವಿರುದ್ಧ ಲಾಠಿ ಪ್ರಹಾರ ನಡೆಸಲಾಗುತ್ತದೆ. ಅಥವಾ ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಗೂ ಮಾವೋವಾದಿಗಳ ಹಣೆಪಟ್ಟಿ ಲಗತ್ತಿಸುವ ಮೂಲಕ ಹತ್ತಿಕ್ಕಲು ಯತ್ನಿಸಲಾಗುತ್ತದೆ. ಈಗ ಕೂಡಂಕುಲಂನಲ್ಲಿ ಅಣುಸ್ಥಾವರದ ವಿರುದ್ಧ ಹೋರಾಡುತ್ತಿರುವ ಜನತೆಯ ದನಿಯನ್ನು ದಮನಿಸಲು ಎನ್ಜಿಒಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ವಿದೇಶಿ ಹಣ ಪಡೆಯುವ ಎನ್ಜಿಒಗಳ ಅಕ್ರಮಗಳ ವಿರುದ್ಧ ತನಿಖೆ ನಡೆಸುವುದೇ ಆದರೆ ಸಹಸ್ರಾರು ಪ್ರಕರಣಗಳು ಎದುರಾಗುತ್ತವೆ. ಆದರೆ ಪ್ರಧಾನಿಗಳಿಗೆ ಕೂಡಂಕುಲಂನಲ್ಲಿ ಮಾತ್ರ ಈ ವಿದ್ಯಮಾನ ಕಾಣುತ್ತಿರುವುದು ರಾಜಕೀಯ ದುರುದ್ದೇಶದ ಸಂಕೇತವಾಗಿಯೇ ಕಾಣುತ್ತದೆ. ಬಹುಶಃ ಶೀಘ್ರದಲ್ಲೇ ಅಲ್ಲಿನ ಪ್ರತಿಭಟನಕಾರರ ಮೇಲೆ ಪೊಲೀಸ್ ದಾಳಿ ನಡೆದರೂ ಅಚ್ಚರಿಯೇನಿಲ್ಲ. ಮತ್ತೊಂದು ರಾಮಲೀಲಾ ಮೈದಾನ ಸೃಷ್ಟಿಯಾಗುತ್ತದೆ. ಸವರ್ೋಚ್ಚ ನ್ಯಾಯಾಲಯ ರಾಮಲೀಲಾ ಮೈದಾನದ ಘಟನೆಗೆ ಪೊಲೀಸರ ಕ್ರೌರ್ಯವನ್ನು ಖಂಡಿಸಿರುವುದು ಸ್ವಾಗತಾರ್ಹವೇ ಆದರೂ, ಪೊಲೀಸರ ಕ್ರೌರ್ಯಕ್ಕೆ ಮೂಲ ಕಾರಣವಾದ ಆಳ್ವಿಕರ ಜನವಿರೋಧಿ ನೀತಿಗಳನ್ನು ಕುರಿತು ಪ್ರಸ್ತಾಪಿಸದಿರುವುದು ಅಚ್ಚರಿ ಮೂಡಿಸುತ್ತದೆ. ತಮ್ಮ ಮೇಲಧಿಕಾರಿಗಳ ಮತ್ತು ರಾಜಕೀಯ ನಾಯಕರ ಆದೇಶಗಳನ್ನು ಪಾಲಿಸಲೇಬೇಕಾದ ಪರಿಸ್ಥಿತಿಯಲ್ಲಿ ಜೀವ ಒತ್ತೆ ಇಟ್ಟು ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯನ್ನೇ ದೂಷಿಸುತ್ತಾ ಕುಳಿತರೆ, ಬಹುಶಃ ಆಳ್ವಿಕರ ಜನವಿರೋಧಿ ನೀತಿಗಳು ಜನರ ಕಣ್ಣಿಗೆ ಗೋಚರಿಸುವುದೇ ಇಲ್ಲ. ಭಾರತದ ಸಾರ್ವಭೌಮ ಪ್ರಜೆಗಳು ರಾಮಲೀಲಾ ಮೈದಾನದಲ್ಲಿ ಆಳ್ವಿಕರ ದಮನಕಾರಿ ಪ್ರವೃತ್ತಿಯ ಒಂದು ಆಯಾಮವನ್ನು ಕಂಡಿವೆ. ಆದರೆ ದೇಶಾದ್ಯಂತ ಇಂತಹ ರಾಮಲೀಲಾ ಮೈದಾನಗಳು ಹರಡಿದ್ದು, ವಿಭಿನ್ನ ಆಯಾಮಗಳಲ್ಲಿ ವ್ಯಕ್ತವಾಗುತ್ತಿವೆ. ಆಳುವ ವರ್ಗದ ಪ್ರತಿನಿಧಿಗಳು ಮತ್ತು ಕಾಪರ್ೋರೇಟ್ ಉದ್ಯಮಿಗಳು ಮಾಧ್ಯಮಗಳ, ಸಮಾಜ ಕಾರ್ಯಕರ್ತರ ದನಿ ಅಡಗಿಸಲು ತಂತ್ರಗಳನ್ನು ಹೂಡುತ್ತಿರುವಂತೆಯೇ, ಜನಸಾಮಾನ್ಯರ ಪ್ರತಿಭಟನೆಯ ಹಕ್ಕುಗಳನ್ನು ಹತ್ತಿಕ್ಕಲು ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಕಣ್ಣಿಗೆ ಕಾಣುವ ಅಪರಾಧಿಗಳು ಪೊಲೀಸ್ ಅಧಿಕಾರಿಗಳೇ ಆದರೂ ಅಗೋಚರ ಅಪರಾಧಿಗಳು ಜನಪ್ರತಿನಿಧಿಗಳೇ ಆಗಿರುತ್ತಾರೆ. ಪೊಲೀಸ್ ಅಧಿಕಾರಿಗಳನ್ನು ಕ್ರಿಮಿನಲ್ಸ್ ಇನ್ ಖಾಕಿ ಯೂನಿಫಾರಂ ಎಂದು ನ್ಯಾಯಾಲಯವೊಂದರಲ್ಲಿ ಬಣ್ಣಿಸಿರುವ ಹಿನ್ನೆಲೆಯಲ್ಲಿ, ಈ ಕ್ರಿಮಿನಲ್ಗಳನ್ನು ಸೃಷ್ಟಿಸುವ ನಮ್ಮ ರಾಜಕೀಯ ವ್ಯವಸ್ಥೆಯ ಅಪರಾಧವನ್ನು ಗ್ರಹಿಸದೆ ಹೋದಲ್ಲಿ ಭಾರತೀಯ ಸಮಾಜ ಮತ್ತೊಂದು ತುತರ್ುಪರಿಸ್ಥಿತಿಯನ್ನು ಎದುರಿಸಬೇಕಾದೀತು. ಬಾಬಾ ರಾಂದೇವ್ ಅವರ ಜನಪ್ರಿಯತೆ ರಾಮಲೀಲಾ ಮೈದಾನದ ಪ್ರಕರಣವನ್ನು ಜಗಜ್ಜಾಹೀರು ಮಾಡಿದೆ. ಆದರೆ ಇಂತಹ ಘಟನೆಗಳು ಎಷ್ಟೋ ನಡೆಯುತ್ತಲೇ ಇವೆ. ನೊಯಿಡಾ, ಕಾಶ್ಮೀರ, ಮಣಿಪುರ, ತೆಲಂಗಾಣ, ಕೈಗಾ, ಕೂಡಂಕುಲಂ, ಒರಿಸ್ಸಾ, ಛತ್ತಿಸ್ಘಡ ಹೀಗೆ ಹಲವಾರು, ಹಲವೆಡೆ, ಹಲವು ರೀತಿಗಳಲ್ಲಿ ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ದಮನ ನಡೆಯುತ್ತಿದೆ. ದೇಶದ ಸಾಂವಿಧಾನಿಕ ಪ್ರಜಾತಾಂತ್ರಿಕ ಮೌಲ್ಯಗಳನ್ನು ರಕ್ಷಿಸಲು ಜನತೆ ಮುಂದಾಗಬೇಕಿದೆ.]]>

‍ಲೇಖಕರು G

March 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: