ನಾ ದಿವಾಕರ
ಜನ್ಮ ದಿನದಂದು ಮಾತ್ರ ಮಹಾತ್ಮರ ಚಿಂತನೆಗಳನ್ನು ನೆನೆದು ಪುಂಖಾನುಪುಂಖವಾಗಿ ಭಾಷಣಗಳನ್ನು ಮಾಡುತ್ತಾ ವಿಜೃಂಭಿಸುವುದು ಭಾರತೀಯ ಸಮಾಜದ ವೈಶಿಷ್ಟ್ಯ . ವರ್ಷಕ್ಕೊಮ್ಮೆ ಪ್ರತಿಮೆಗಳನ್ನು ಹಾರ ತುರಾಯಿಗಳಿಂದ ಅಲಂಕರಿಸಿ, ಮಹಾತ್ಮರ ಧೋರಣೆಗಳನ್ನು ಶ್ಲಾಘಿಸಿ ಸಂಘಟನಾತ್ಮಕವಾದ ಮೆರವಣಿಗೆ ಮತ್ತು ವೇದಿಕೆಯ ಮೇಲಿನ ಉಪನ್ಯಾಸಗಳ ಮೂಲಕ ಈ ದೇಶದ ಮಹಾನ್ ಚಿಂತಕರ ಆಲೋಚನಾ ಕ್ರಮಗಳನ್ನು ನಮ್ಮದೆಂದು ಒಪ್ಪಿಕೊಂಡು, ನಂತರ ವರ್ಷವಿಡೀ ಈ ಧೋರಣೆಗಳ ವಿರುದ್ಧವಾಗಿಯೇ ನಡೆದುಕೊಳ್ಳುವುದು ಸ್ವತಂತ್ರ ಭಾರತ ಕಂಡಿರುವ ವೈಪರೀತ್ಯವೂ ಹೌದು. ಈ ಪ್ರವೃತ್ತಿಗೆ ಗಾಂಧೀಜಿಯೂ ಬಲಿಯಾಗಿದ್ದಾರೆ, ವಿವೇಕಾನಂದರೂ ಬಲಿಯಾಗಿದ್ದಾರೆ, ಇನ್ನು ಅಂಬೇಡ್ಕರ್ ಹೇಗೆ ತಪ್ಪಿಸಿಕೊಂಡಾರು. ಈ ವೈಪರೀತ್ಯದ ಹಿನ್ನೆಲೆಯಲ್ಲೇ ಅಂಬೇಡ್ಕರ್ ಜಯಂತಿಯ ಸಂದರ್ಭದ ಚಿಂತನೆಗಳನ್ನು ಒರೆ ಹಚ್ಚಿ ನೋಡಬೇಕಿದೆ. ಇಲ್ಲಿ ಇತ್ತೀಚಿನ ಹಲವು ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಮೊದಲನೆಯದಾಗಿ ಅಂಬೇಡ್ಕರ್ ಭವನ ನಿಮರ್ಾಣಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳು ಇದೇ ಕಾರಣಕ್ಕಾಗಿ ಅಂಬೇಡ್ಕರ್ ಜಯಂತಿಯನ್ನು ಬಹಿಷ್ಕರಿಸಿರುವುದು. ಎರಡನೆಯದು 75 ವರ್ಷಗಳ ದಲಿತ ರಾಜಕಾರಣ ಎಂಬ ವಿಚಾರ ಸಂಕಿರಣ ಏರ್ಪಡಿಸಿರುವುದು ಮತ್ತು ಮೂರನೆಯದು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳನ್ನು ಸೇರಿಸಲಿಚ್ಚಿಸಿದ ದಲಿತ ಕವಿ ಸಿದ್ಧಲಿಂಗಯ್ಯನವರು ಯಡಿಯೂರಪ್ಪನವರಿಗೆ ಪರಾಕ್ ಹೇಳಿರುವುದು. ಈ ಮೂರೂ ವಿದ್ಯಮಾನಗಳು ದಲಿತ ಸಂಘಟನೆಗಳ ವೈಕಲ್ಯಗಳನ್ನು, ನ್ಯೂನತೆಗಳನ್ನು, ದ್ವಂದ್ವಗಳನ್ನು ಸ್ಪಷ್ಟವಾಗಿ ತೋರಿಸುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ನಿಜ, ಅಂಬೇಡ್ಕರ್ ಭವನದ ನಿಮರ್ಾಣಕ್ಕಾಗಿ ಹೋರಾಡುವುದು ದಲಿತ ಸಂಘಟನೆಗಳ ಆದ್ಯತೆಯಾಗಿರಬಹುದು. ಆದರೆ ಅಂಬೇಡ್ಕರ್ ಜಯಂತಿಯನ್ನು ಬಹಿಷ್ಕರಿಸುವ ಮೂಲಕ ದಲಿತ ಸಮುದಾಯಗಳ ಮೇಲಿನ ದೌರ್ಜನ್ಯವನ್ನು ಎತ್ತಿ ತೋರಿಸುವುದೇ ಆದಲ್ಲಿ ಇನ್ನೂ ಹೆಚ್ಚು ಮೌಲ್ಯಯುತವಾದ ಕಾರಣಗಳಿಲ್ಲವೇ ? ಕುಕ್ಕೆ ಸುಬ್ರಮಣ್ಯದ ಮಡೆಸ್ನಾನ, ಗೌರವ ಹತ್ಯೆ, ಅಂತಜರ್ಾತಿ ವಿವಾಹಗಳು, ಮಲ ತಿನ್ನಿಸುವ ಪ್ರಕರಣಗಳು ಇತ್ಯಾದಿ, ಇತ್ಯಾದಿ. ಇಂತಹ ಅನೇಕ ಘಟನೆಗಳು ಕನರ್ಾಟದಲ್ಲೂ ಸಂಭವಿಸುತ್ತಿವೆ. ಆಳುವ ವರ್ಗಗಳು ಈ ಘಟನೆಗಳನ್ನು ಸಾಮಾನ್ಯ ಕಾನೂನು ಸುವ್ಯವಸ್ಥೆಯ ವಿಷಯಗಳಾಗಿ ಪರಿಗಣಿಸಿ ನಿರ್ಲಕ್ಷಿಸುತ್ತಿವೆ. ಆದರೆ ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳಿಗೆ ಈ ವಿಷಯಗಳು ಒಂದು ಸಮಗ್ರ ಹೋರಾಟದ ವಿಷಯವಾಗಲೇ ಇಲ್ಲ. ಅಲ್ಲಲ್ಲಿ ವ್ಯಕ್ತವಾದ ಪ್ರತಿರೋಧಗಳನ್ನು ಹೊರತುಪಡಿಸಿದರೆ ದಲಿತ ಸಮುದಾಯಗಳನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಾಗಲಿ, ದಲಿತರ ಮೇಲಿನ ದೌರ್ಜನ್ಯಗಳಾಗಲಿ ಒಂದು ರಾಜ್ಯವ್ಯಾಪಿ ಹೋರಾಟದ ಕಾವು ಪಡೆಯಲೇ ಇಲ್ಲ. ಕಾರಣ ಸ್ಪಷ್ಟ ದಲಿತ ಸಂಘಟನೆಗಳು ರಾಜಕೀಯ ಪಕ್ಷಗಳಲ್ಲಿ ವಿಲೀನಗೊಂಡು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುವಂತೆಯೇ, ದಲಿತ ಸಮುದಾಯಗಳೂ ತಮ್ಮ ಅಸ್ಮಿತೆಗಳನ್ನು ನಿದರ್ಿಷ್ಟ ರಾಜಕೀಯ ಪಕ್ಷಗಳಿಗೆ ಒತ್ತೆ ಇಟ್ಟು ತಮ್ಮತನವನ್ನು ಕಳೆದುಕೊಂಡಿವೆ. ಈ ವಿದ್ಯಮಾನದ ಒಂದು ಆಯಾಮವನ್ನು ಖ್ಯಾತ ಕ್ರಾಂತಿ ಕವಿ ಸಿದ್ಧಲಿಂಗಯ್ಯನವರ ಪರಾಕ್ನಲ್ಲಿ ಕಾಣಬಹುದು. ಶಿವಮೊಗ್ಗದಲ್ಲಿ ನಡೆದ ಮಾಜಿ ಸಿಎಂ ಯಡಿಯೂರಪ್ಪನವರ ಅಭಿನಂದನಾ ಸಮಾರಂಭದಲ್ಲಿ ಮಾನ್ಯ ಕವಿಗಳು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಯನ್ನು ಶ್ಲಾಘಿಸಿರುವುದು ಅವರ ವ್ಯಕ್ತಿಗತ ನಿಲುವೇ ಆಗಿರಬಹುದು. ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವೂ ಆಗಿರಬಹುದು. ಆದರೆ ದಲಿತ ಸಮುದಾಯಗಳ ಆಶಯಗಳಿಗೆ ಒಂದು ಸ್ಪಷ್ಟ ಆಯಾಮ ನೀಡುವ ಮೂಲಕ ಸಂಘಟನಾತ್ಮಕ ಶಕ್ತಿಯನ್ನು ಒದಗಿಸಿದ ಒಬ್ಬ ವ್ಯಕ್ತಿ ತನ್ನೆಲ್ಲಾ ಹೊಣೆಗಾರಿಕೆಯನ್ನೂ ಮರೆತು, ಒಂದು ಕೋಮುವಾದಿ ಫ್ಯಾಸಿಸ್ಟ್ ಪಕ್ಷದ ನಾಯಕರಿಗೆ ಪರಾಕ್ ಹೇಳುವುದು ಏನನ್ನು ಸಾರುತ್ತದೆ ? ಇದು ಕೇವಲ ಸಿದ್ಧಲಿಂಗಯ್ಯನವರ ವ್ಯಕ್ತಿಗತ ನಿಲುವಿಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಇಲ್ಲಿ ಸಿದ್ಧಲಿಂಗಯ್ಯ ಕೇವಲ ಸಂಕೇತವಾಗಿ ನಿಲ್ಲುತ್ತಾರೆ. ಇದು ದಲಿತ ಚಳುವಳಿಯನ್ನು ಕಾಡುತ್ತಿರುವ ಸಮಸ್ಯೆಯ ಒಂದು ಆಯಾಮ. ಆಳುವ ವರ್ಗಗಳ ತೋಳ ತೆಕ್ಕೆಯೊಳಗೆ ಸಿಲುಕಿ ಸ್ವಚ್ಚಂದತೆಯನ್ನು ಅನುಭವಿಸುತ್ತಿರುವ ದಲಿತ ಚಳುವಳಿಯ ಒಂದು ವರ್ಗವನ್ನು ಪ್ರತಿನಿಧಿಸುವ ದಿಕ್ಕಿನಲ್ಲಿ ಸಿದ್ಧಲಿಂಗಯ್ಯನವರ ಇತ್ತೀಚಿನ ಧೋರಣೆಯನ್ನು ವಿಶ್ಲೇಷಿಸಬಹುದು. ಹೋರಾಟದ ಸಾಗರಕ್ಕೆ ಸೇರುವ ಸಾವಿರಾರು ನದಿಗಳು ಬತ್ತಿಲ್ಲ ನಿಜ, ಆದರೆ ಕಲುಷಿತಗೊಂಡಿವೆ, ಮಲಿನವಾಗಿವೆ, ಹಾದಿ ತಪ್ಪಿವೆ ಎಂದು ಮಾತ್ರ ಹೇಳಬಹುದು. ಈ ಎರಡೂ ವಿದ್ಯಮಾನಗಳ ಹಿನ್ನೆಲೆಯಲ್ಲಿ 75 ವರ್ಷಗಳ ದಲಿತ ರಾಜಕಾರಣ ಎಂಬ ವಿಚಾರ ಸಂಕಿರಣದ ಆಶಯಗಳನ್ನೂ ವಿಶ್ಲೇಷಿಸಬೇಕಾಗಿದೆ. ಈ ವಿಚಾರ ಸಂಕಿರಣದ ಮೂಲ ವಿಚಾರವೇ ದಾರಿ ತಪ್ಪಿಸುವಂತಿದೆ. ಭಾರತೀಯ ರಾಜಕಾರಣದಲ್ಲಿ ದಲಿತರ ಸಕ್ರಿಯ ಪಾತ್ರವಿದೆ, ನಿಜ. ಆದರೆ ಭಾರತದಲ್ಲಿ ದಲಿತ ರಾಜಕಾರಣ ಎಂಬ ವಿದ್ಯಮಾನ ಇದೆಯೇ ಎಂಬುದು ಅನುಮಾನ. ಅದೂ 75 ವರ್ಷಗಳ ದಲಿತ ರಾಜಕಾರಣ ಎಂದರೆ ಪೂನಾ ಒಪ್ಪಂದದ ದಿನದಿಂದ ಇಂದಿನವರೆಗೆ. ಇದು ಒಂದು ರೀತಿ ವಿಡಂಬನೆ ಎನಿಸುವುದಿಲ್ಲವೇ. ಅಂಬೇಡ್ಕರ್ ಅವರ ಕಾಲದಲ್ಲೂ ಸಹ ದಲಿತ ರಾಜಕಾರಣ ತನ್ನದೇ ಆದ ಸ್ಪಷ್ಟ ಸ್ವರೂಪ ಪಡೆದುಕೊಳ್ಳಲಿಲ್ಲ ಎಂಬುದು ಸರ್ವವಿಧಿತ. ಕಾಂಶೀರಾಂ-ಮಾಯಾವತಿಯ ರಾಜಕಾರಣ ಮೇಲ್ನೋಟಕ್ಕೆ ದಲಿತ ರಾಜಕಾರಣ ಎಂದು ಕಂಡುಬಂದರೂ ಅದು ವಾಸ್ತವವಾಗಿ ದಲಿತರನ್ನು ಬಳಸಿಕೊಂಡು ಮಾಡಲಾಗುತ್ತಿರುವ ರಾಜಕಾರಣದ ಒಂದು ಆಯಾಮವಷ್ಟೆ. ಇದು ಇತರ ಬೂಷ್ವರ್ಾ ರಾಜಕೀಯ ಪಕ್ಷಗಳ ಧೋರಣೆಯ ಮತ್ತೊಂದು ಸ್ವರೂಪವಾಗಿ ಮಾತ್ರ ಕಾಣುತ್ತದೆ. ಹಾಗಾಗಿ ದಲಿತ ರಾಜಕಾರಣದ ಬಗ್ಗೆ ವಿಶ್ಲೇಷಣೆ ನಡೆಸುವ ಸಂದರ್ಭದಲ್ಲಿ ಭಾರತದಲ್ಲಿ ಈದಿನದವರೆಗೂ ದಲಿತ ರಾಜಕಾರಣ ಎಂಬ ವಿದ್ಯಮಾನ ಕಂಡುಬಂದಿಲ್ಲ ಎಂದು ಭಾವಿಸುವುದೇ ಸೂಕ್ತ. ಹಾಗಾದಲ್ಲಿ ಮಾತ್ರ ಒಂದು ಸ್ಪಷ್ಟ ದಿಕ್ಸೂಚಿ ದೊರೆಯುವ ಸಾಧ್ಯತೆಗಳಿರುತ್ತವೆ. ಈ ಮೂರು ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಜಯಂತಿಯ ಸಂದರ್ಭವನ್ನು ಬಳಸಿಕೊಳ್ಳುತ್ತಾ ದಲಿತ ಚಳುವಳಿಯ ಹೊಸ ಆಯಾಮಗಳತ್ತ ಮುನ್ನಡೆಯಬೇಕಾಗುತ್ತದೆ. ದೇಶದ ಶೇ. 80ರಷ್ಟು ದಲಿತರು ಶ್ರಮಜೀವಿಗಳಾಗಿರುವಾಗ, ಭೂಮಿಯನ್ನೇ ನಂಬಿ ಬಾಳುತ್ತಿರುವಾಗ, ಅವರ ಆಶಯಗಳನ್ನು ಪೂರೈಸುವ ನಿಟ್ಟಿನಲ್ಲಿ ಹೋರಾಡುವ ಸಾವಿರಾರು ನದಿಗಳು, ತಾವು ನೆಲೆಕಂಡ ಭೂಮಿಯನ್ನೇ ಮರೆತು ಹರಿಯುತ್ತಿರುವುದು ದಲಿತ ಚಳುವಳಿಯ ವೈಫಲ್ಯದ ಸಂಕೇತವಾಗಿ ಕಾಣುತ್ತದೆ. ಅಂಬೇಡ್ಕರ್ ಜನ್ಮದಿನದ ಈ ಸಂದರ್ಭದಲ್ಲಿ ಅಗತ್ಯವಾಗಿರುವುದು ದಲಿತ ಸಂಘಟನೆಗಳ ಐಕ್ಯತೆಯಲ್ಲ, ಅದು ಕೇವಲ ಅಲಂಕಾರಿಕ ಪ್ರತಿಮೆಯಾಗಿ ಕಾಣುತ್ತದೆ. ದಲಿತ ಚಿಂತನೆಗಳು ಮತ್ತು ದಲಿತ ಹೋರಾಟದ ವಿಭಿನ್ನ ಧೋರಣೆಗಳು ಒಗ್ಗಟ್ಟಿನತ್ತ ದಿಟ್ಟ ಹೆಜ್ಜೆ ಇಡುವುದು ಇಂದಿನ ತುತರ್ು ಅಗತ್ಯತೆ. ಅಂಬೇಡ್ಕರ್ ದಿನಾಚರಣೆಯ ಸಾರ್ಥಕತೆಯೂ ಇದರಲ್ಲೇ ಅಡಗಿದೆ.]]>
ಕ್ರಾಂತಿಕಾರಿ ಕವಿ ಸಿದ್ಧಲಿಂಗಯ್ಯನವರು ಕರ್ನಾಟಕ ಕಂಡ ಭ್ರಷ್ಟಾತಿಭ್ರಷ್ಟ ಮಾಜಿ ಮುಖ್ಯಮಂತ್ರಿ ಹಾಗೂ ದಲಿತರ ಶೋಷಣೆಯಲ್ಲಿ ಮುಖ್ಯ ಪಾತ್ರ ವಹಿಸಿದ ಪುರೋಹಿತಶಾಹಿಯ ಅಡಿಯಾಲಿನಂತೆ ನಡೆದುಕೊಳ್ಳುವ ವ್ಯಕ್ತಿಯೊಬ್ಬರ ಬಹುಪರಾಕಿಗೆ ತೊಡಗಿರುವುದು ನಮ್ಮ ಕಾಲದ ಬಹಳ ದೊಡ್ಡ ವ್ಯಂಗ್ಯವಾಗಿದೆ. ಇದು ಅವರು ತಲುಪಿರುವ ಸೈದ್ಧಾಂತಿಕ ಅಧ:ಪತನದ ರಸಾತಳವೆನ್ನದೆ ವಿಧಿಯಿಲ್ಲ. ಹೇಗಿದ್ದ ವ್ಯಕ್ತಿ ಹೇಗಾಗಿಹೋದರು? “ಎಲ್ಲಿಗೆ ಬಂತು, ಯಾರಿಗೆ ಬಂತು ನಲುವತ್ತೇಳರ ಸ್ವಾತಂತ್ರ್ಯ” ಎಂದು ಬಂಡಾಯವೆದ್ದ ವ್ಯಕ್ತಿಯ ಈ ರೀತಿಯ ಸೈದ್ಧಾಂತಿಕ ಅಧಃಪತನ ಶೋಚನೀಯ.