ನಾ ದಿವಾಕರ್ ನೇರನೋಟ : ಕಾಮ್ರೇಡ್ ಲಕ್ಷ್ಮಿಗೆ ಲಾಲ್ ಸಲಾಂ

ಅಂತ್ಯವಾದ ದಿಟ್ಟ ಹೋರಾಟಗಾರ್ತಿಯ ಪಯಣ

– ನಾ ದಿವಾಕರ್

ತಮ್ಮ 92ನೆಯ ಇಳಿ ವಯಸ್ಸಿನಲ್ಲೂ ದಿನನಿತ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ದಿಟ್ಟ ಹೋರಾಟಗಾತರ್ಿ, ಕ್ರಾಂತಿಕಾರಿ ಕಮ್ಯುನಿಸ್ಟ್, ವೈದ್ಯೆ, ಭಾರತದ ಮೊಟ್ಟ ಮೊದಲ ಮಹಿಳಾ ಸೇನಾ ಕ್ಯಾಪ್ಟನ್, ಸುಭಾಷ್ ಚಂದ್ರ ಬೋಸ್ ಅವರ ನಿಕಟವತರ್ಿ ಮತ್ತು ಆಪ್ತ ಸಹವತರ್ಿ ಲಕ್ಷ್ಮಿ ಸೆಹಗಲ್ ತಮ್ಮ ಇಹಲೋಕದ ಪಯಣವನ್ನು ಮೌನವಾಗಿಯೇ ಮುಗಿಸಿ ನಡೆದಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ವಿದ್ಯುನ್ಮಾನ ಮಾಧ್ಯಮಗಳಲ್ಲಿ, ಕೆಲವು ಚಾನಲ್ಗಳಲ್ಲಿ ಗ್ರೇಟೆಸ್ಟ್ ಇಂಡಿಯನ್ ಅಂದರೆ ಮಹಾನ್ ಭಾರತೀಯ ವ್ಯಕ್ತಿಗಾಗಿ ಶೋಧ ನಡೆದಿದೆ. ಇಲ್ಲಿ ಬಂದು ಹೋದ ಹೆಸರುಗಳು ನಗಣ್ಯವೇನಲ್ಲ ಅಥವಾ ಅನರ್ಹವೂ ಅಲ್ಲ. ಅಬ್ದುಲ್ ಕಲಾಂ, ಮದರ್ ಥೆರೆಸಾ ಅವರಿಂದ ಹಿಡಿದು ಸಚಿನ್ ತೆಂಡೂಲ್ಕರ್ವರೆಗೂ ಹೆಸರುಗಳು ಕೇಳಿಬಂದಿವೆ. ಆದರೆ ಅದೇಕೋ ಲಕ್ಷ್ಮಿ ಸೆಹಗಲ್ ಅವರ ಹೆಸರಿನ ಸೂಚನೆಯೂ ಇರಲಿಲ್ಲ. ಆದರೆ ಮಾಧ್ಯಮ ಪ್ರೇರಿತ, ಕಾಪರ್ೋರೇಟ್ ಸೂಚಿತ ಮಹಾನತೆಗಿಂತಲೂ ಹೆಚ್ಚಿನ ಘನತೆ, ಗೌರವ ಪಡೆದಿರುವ ಧೀರ ಮಹಿಳೆ ಲಕ್ಷ್ಮಿ ಸೆಹಗಲ್ ಸ್ವತಃ ಒಂದು ದಂತಕಥೆ. ಕ್ಯಾಪ್ಟನ್ ಲಕ್ಷ್ಮಿ, ಡಾ. ಲಕ್ಷಿ, ಕಾಮ್ರೇಡ್ ಲಕ್ಷ್ಮಿ ಇಂದು ನಮ್ಮೊಡನಿಲ್ಲ. ಆದರೆ ಅವರ ಹೆಜ್ಜೆ ಗುರುತುಗಳು ಸ್ಪಷ್ಟವಾಗಿವೆ. ಗಾಢವಾಗಿವೆ. ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಹೊಸತನವನ್ನು ಮೈಗೂಡಿಸಿಕೊಂಡು ರಾಜಕೀಯ ಜೀವನದಲ್ಲಿ ಕಾಲ ಸವೆಸಿದ ಲಕ್ಷ್ಮಿ ವೈದ್ಯಕೀಯ ವಿದ್ಯಾಥರ್ಿಯಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ್ದರು. ನಂತರ ಇಂಡಿಯನ್ ನ್ಯಾಷನಲ್ ಆಮರ್ಿಯ ರಾಣಿ ಝಾನ್ಸಿ ತಂಡದ ಕ್ಯಾಪ್ಟನ್ ಆಗಿದ್ದರು. ಸ್ವಾತಂತ್ರ್ಯಾನಂತರ ಕಾನ್ಪುರದಲ್ಲಿ ತಮ್ಮ ವೃತ್ತಿಯಲ್ಲಿ ನಿರತರಾದ ಸೆಹಗಲ್ ಸಮಾಜದ ಶೋಷಿತ ವರ್ಗಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಸಿಪಿಎಂ ಮತ್ತು ಪಕ್ಷದ ಮಹಿಳಾ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜ ಸೇವೆಯಲ್ಲಿ ನಿರತರಾಗಿದ್ದರು. 1914ರ ಅಕ್ಟೋಬರ್ 24ರಂದು ಮದ್ರಾಸಿನ ಪ್ರಸಿದ್ಧ ವಕೀಲರಾಗಿದ್ದ ಸ್ವಾಮಿನಾಥನ್ ಅವರ ಪುತ್ರಿಯಾಗಿ ಜನಿಸಿದ ಲಕ್ಷ್ಮಿ ತಮ್ಮ ಬಾಲ್ಯ ಜೀವನದಲ್ಲೇ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತಿದ್ದರು. ಕೇರಳದಲ್ಲಿ ತಮ್ಮ ಅಜ್ಜಿಯ ಮನೆಯಲ್ಲಿ ನೆಲೆಸಿದ್ದಾಗ ಅಲ್ಲಿನ ಆದಿವಾಸಿಗಳ ನೆರಳನ್ನೂ ಸಹಿಸದಂತಹ ಅಸ್ಪೃಶ್ಯತೆಯ ಕರಾಳ ದರ್ಶನ ಅನುಭವಿಸಿದ್ದ ಲಕ್ಷ್ಮಿ ಆದಿವಾಸಿ ಹುಡುಗಿಯೊಬ್ಬಳೊಡನೆ ಕೈಹಿಡಿದು ಆಟ ಆಡಿದ ತಪ್ಪಿಗೆ ಅಜ್ಜಿಯೊಡನೆ ಜಗಳವಾಡಿದ್ದೂ ಉಂಟು. 1938ರಲ್ಲಿ ವೈದ್ಯಕೀಯ ಪದವಿ ಗಳಿಸಿದ ಲಕ್ಷ್ಮಿಗೆ ಈ ಅವಧಿಯಲ್ಲಿ ತನ್ನ ಕುಟುಂಬದ ಸದಸ್ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿದ್ದುದು ಒಂದು ಪ್ರೇರೇಪಣೆಯಾಗಿತ್ತು. ತನ್ನ ತಾಯಿ ಅಮ್ಮುಕುಟ್ಟಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ವಿದೇಶಿ ವಸ್ತ್ರಗಳನ್ನು ದಹಿಸುವ ಆಂದೋಲನದಲ್ಲಿ ಭಾಗಿಯಾದಾಗ ಲಕ್ಷ್ಮಿ ತಮ್ಮ ಹೋರಾಟದ ಜೀವನದ ಆರಂಭದ ಹೆಜ್ಜೆಗಳನ್ನು ಕಂಡುಕೊಂಡಿದ್ದರು. ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮದೊಡನೆಯೇ ಸಾಮಾಜಿಕ ಸುಧಾರಣೆಯ ಆಂದೋಲನಗಳನ್ನೂ ಲಕ್ಷ್ಮಿ ಕಂಡಿದ್ದರು. ದಲಿತರ ದೇವಾಲಯ ಪ್ರವೇಶ, ಬಾಲ್ಯ ವಿವಾಹ ಮತ್ತು ವರದಕ್ಷಿಣೆಯ ವಿರುದ್ಧ ಆಂದೋಲನಗಳು ಲಕ್ಷ್ಮಿಸೆಹಗಲ್ ಅವರನ್ನು ಕಮ್ಯುನಿಸ್ಟ್ ಚಳುವಳಿಯ ಕಡೆಗೂ ಆಕಷರ್ಿಸಿದ್ದವು. ಸರೋಜಿನಿ ನಾಯ್ಡು ಅವರ ಸೋದರೆ ಸುಹಾಸಿನಿ ನಂಬಿಯಾರ್ ಅವರ ಪ್ರೇರಣೆಯಿಂದ ಕಮ್ಯುನಿಸ್ಟ್ ಚಳುವಳಿಗೆ ಧುಮುಕಿದ ಲಕ್ಷ್ಮಿ ಎಡ್ಗರ್ ಸ್ನೋ ಅವರ ರೆಡ್ ಸ್ಟಾರ್ ಓವರ್ ಚೈನಾ ಕೃತಿಯನ್ನು ಓದಿದ ನಂತರ ಮಾಕ್ಸರ್್ವಾದವನ್ನು ಸ್ವೀಕರಿಸಿದ್ದರು. ಒಂದು ವಿಭಿನ್ನ ಹಾದಿಯತ್ತ 1940ರಲ್ಲಿ ತಮ್ಮ 26ನೆಯ ವಯಸ್ಸಿನಲ್ಲೇ ವೈದ್ಯಕೀಯ ವೃತ್ತಿ ಆರಂಭಿಸಲು ಸಿಂಗಪೂರಿಗೆ ತೆರಳಿದ ಲಕ್ಷ್ಮಿ ಮೂರು ವರ್ಷಗಳ ನಂತರ ಸುಭಾಷ್ ಚಂದ್ರ ಬೋಸ್ ಅವರನ್ನು ಭೇಟಿಯಾದದ್ದು ಅವರ ಜೀವನದಲ್ಲಿ ಮಹತ್ತರ ತಿರುವು ನೀಡಿತ್ತು. ಸಿಂಗಪೂರದಲ್ಲಿದ್ದ ರಾಷ್ಟ್ರೀಯವಾದಿ ನಾಯಕರುಗಳಿಂದ ಪ್ರೇರೇಪಣೆ ಪಡೆದ ಲಕ್ಷ್ಮಿ ಅವರಿಗೆ ಮುಂದಿನ ಹಾದಿ ವಿಭಿನ್ನವಾಗಿತ್ತು. ಐಎನ್ಎ ಸೇನೆಗೆ ಹೇಗೆ ಮುನ್ನಡೆಯಬೇಕು, ಯಾವ ಮಾರ್ಗ ಅನುಸರಿಸಬೇಕು, ಸಮರದಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬ ಯಾವುದೇ ಮಾಹಿತಿಯನ್ನು ನೀಡದೆ ಜಪಾನ್ ಸಕರ್ಾರ ವಿತಂಡ ನೀತಿಯನ್ನು ಅನುಸರಿಸುತ್ತಿತ್ತು. ಈ ಸಂದರ್ಭದಲ್ಲಿ ಬೋಸ್ ಸೇನೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವ ಚಿಂತನೆ ಮಾಡುತ್ತಿದ್ದುದು ಲಕ್ಷ್ಮಿ ಅವರ ಗಮನಕ್ಕೆ ಬಂದಿತ್ತು. ಬೋಸ್ ಅವರೊಡನೆ ಸಮಾಲೋಚನೆ ನಡೆಸಿದ ಬಳಿಕ ಲಕ್ಷ್ಮಿ ಮಹಿಳಾ ಪಡೆಯೊಂದನ್ನು ರಚಿಸಲು ಬದ್ಧರಾಗಿ ಹೊರಹೊಮ್ಮಿದ್ದರು. ಮಹಿಳೆಯರನ್ನೇ ಒಳಗೊಂಡ ರಾಣಿ ಝಾನ್ಸಿ ಪಡೆಗೆ ಸೇರಿಕೊಳ್ಳಲು ಹೆಚ್ಚು ಹೆಚ್ಚು ಮಹಿಳೆಯರು ಉತ್ಸುಕರಾಗಿದ್ದರು. ಡಾ. ಲಕ್ಷ್ಮಿ ಸ್ವಾಮಿನಾಥನ್ ಕ್ಯಾಪ್ಟನ್ ಲಕ್ಷ್ಮಿಯಾಗಿ ಪರಿವತರ್ಿತವಾಗಿದ್ದರು. 1945ರಲ್ಲಿ ಬ್ರಿಟೀಷ್ ಸೇನೆಯಿಂದ ಬಂಧಿತರಾದ ಲಕ್ಷ್ಮಿ 1946ರ ಮಾಚರ್್ವರೆಗೂ ಬಮರ್ಾದ ಅರಣ್ಯಗಳಲ್ಲಿ ಗೃಹಬಂಧನದಲ್ಲಿ ಕಳೆಯಬೇಕಾಯಿತು. ಇದೇ ವೇಳೆಗೆ ಭಾರತದಲ್ಲಿ ಐಎನ್ಎ ಸೇನೆಯ ಆಂದೋಲನದ ಪರಿಣಾಮವಾಗಿ ವಸಾಹತು ಆಳ್ವಿಕೆಯ ವಿರುದ್ಧ ಜನತೆಯ ಆಕ್ರೋಶ ತೀವ್ರವಾಗುತ್ತಿತ್ತು. ಇದೇ ಸಂದರ್ಭದಲ್ಲಿ ಐಎನ್ಎ ಸೇನೆಯ ಪ್ರಮುಖ ಸದಸ್ಯರಾದ ಪ್ರೇಮ್ ಕುಮಾರ್ ಸೆಹಗಲ್ ಅವರನ್ನು ವರಿಸಿದ ಲಕ್ಷ್ಮಿ 1947ರಲ್ಲಿ ಕಾನ್ಪುರಕ್ಕೆ ಬಂದು ನೆಲೆಸಿ ತಮ್ಮ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ್ದರು. ದೇಶದ ವಿಭಜನೆ ಸೃಷ್ಟಿಸಿದ ನಿರಾಶ್ರಿತರ ಸೇವೆ ಮಾಡುವ ಮೂಲಕ ಹಿಂದೂ ಮತ್ತು ಮುಸ್ಲಿಮರ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದರು. 1970-71ರ ಬಾಂಗ್ಲಾ ಯುದ್ಧದ ಸಂದರ್ಭದಲ್ಲಿ ನಿರಾಶ್ರಿತರಿಗೆ ವೈದ್ಯಕೀಯ ಸೌಲಭ್ಯಗಳ ಅವಶ್ಯಕತೆ ಇದೆ ಎಂದು ತಿಳಿದಾಗ ಕೊಲ್ಕತ್ತಾಗೆ ಧಾವಿಸಿದ ಲಕ್ಷ್ಮಿ ಸೆಹಗಲ್ ಗಡಿ ಪ್ರದೇಶಗಳಲ್ಲಿ ಐದು ವಾರಗಳ ಕಾಲ ಉಚಿತ ಸೇವೆ ಸಲ್ಲಿಸಿದ್ದರು. ತಮ್ಮ 57ನೆಯ ವಯಸ್ಸಿನಲ್ಲಿ ಸಿಪಿಎಂ ಪಕ್ಷದ ಸದಸ್ಯತ್ವ ಪಡೆದ ಲಕ್ಷ್ಮಿ ಸೆಹಗಲ್ 1981ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ ಸಂಸ್ಥಾಪಕರಲ್ಲೊಬ್ಬರಾಗಿದ್ದರು. 1984ರಲ್ಲಿ ಭೂಪಾಲ್ ಅನಿಲ ದುರಂತ ಸಂಭವಿಸಿದಾಗ ಅಲ್ಲಿಗೆ ತಮ್ಮ ಸೇವೆ ಸಲ್ಲಿಸಲು ಧಾವಿಸಿದ ಲಕ್ಷ್ಮಿ ಸೆಹಗಲ್ ಗಭರ್ಿಣಿ ಮಹಿಳೆಯರ ಮೇಲೆ ಈ ದುರಂತದ ಪ್ರಭಾವದ ಬಗ್ಗೆ ವರದಿಯನ್ನೂ ಸಲ್ಲಿಸಿದ್ದರು. 1984ರಲ್ಲಿ ಇಂದಿರಾ ಹತ್ಯೆಯ ನಂತರ ಪಂಜಾಬ್ನಲ್ಲಿ ಉಂಟಾದ ಕೋಮು ಸಂಘರ್ಷದ ಸಂದರ್ಭದಲ್ಲಿ ನೇರವಾಗಿ ಬೀದಿಗಿಳಿದ ಕ್ಯಾ.. ಲಕ್ಷ್ಮಿ ಸಿಖ್ ಸಮುದಾಯದವರಿಗಾಗಲಿ, ಸಿಖ್ ವಿರೋಧಿಗಳಿಗಾಗಲಿ ಕೊಂಚವೂ ಹಾನಿಯಾಗದಂತೆ ಎಚ್ಚರ ವಹಿಸಿದ್ದರು. ಅವರ ಕ್ಲಿನಿಕ್ ಇದ್ದ ರಸ್ತೆಯಲ್ಲಿ ಒಂದೇ ಒಂದು ಘಟನೆಯೂ ಸಂಭವಿಸದಿರುವುದು ಕ್ಯಾ. ಲಕ್ಷ್ಮಿಯವರ ನೈತಿಕ ಸ್ಥಾನಮಾನಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. 2002ರಲ್ಲಿ ಅಬ್ದುಲ್ ಕಲಾಂ ವಿರುದ್ಧ ಎಡಪಕ್ಷಗಳ ಅಭ್ಯಥರ್ಿಯಾಗಿ ರಾಷ್ಟ್ರಪತಿ ಚುನಾವಣೆಗೆ ಸ್ಪಧರ್ಿಸಿದ್ದ ಲಕ್ಷ್ಮಿ ಸೆಹಗಲ್ ಈ ಅವಕಾಶವನ್ನು ಬಳಸಿಕೊಂಡು ಜನರಲ್ಲಿ ಬಡತನ ಮತ್ತು ದಾರಿದ್ರ್ಯತೆಯ ಬಗ್ಗೆ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. 20 ಮತ್ತು 21ನೆಯ ಶತಮಾನದ ಭಾರತದ ಇತಿಹಾಸದಲ್ಲಿ ಒಂದು ವಿಶಿಷ್ಟ ಪಾತ್ರ ನಿರ್ವಹಿಸಿದ ಕ್ಯಾ. ಲಕ್ಷ್ಮಿ ಸೆಹಗಲ್ 65 ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ನಿರತರಾಗಿದ್ದು ಇದೀಗ ನಮ್ಮೆಲ್ಲರನ್ನು ಅಗಲಿ ನಿರ್ಗಮಿಸಿದ್ದಾರೆ. ಸದಾ ಬಡಜನತೆ ಮತ್ತು ಅವಕಾಶವಂಚಿತ, ಶೋಷಿತ ಸಮುದಾಯಗಳೊಡನೆ ಗುರುತಿಸಿಕೊಂಡಿದ್ದ ಕ್ಯಾ, ಕಾಮ್ರೇಡ್, ಡಾಕ್ಟರ್ ಲಕ್ಷ್ಮಿ ಸೆಹಗಲ್ ವೈದ್ಯಕೀಯ ವೃತ್ತಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಆದರೆ ಈ ಎರಡು ವಿದ್ಯಮಾನಗಳ ನಡುವೆ ಮಾನವ ಜೀವಿ ನಡೆಸುವ ಪಯಣದ ಹೆಜ್ಜೆ ಗುರುತುಗಳು ಮಾತ್ರ ಎಂದೆಂದಿಗೂ ಅಜರಾಮರ. ಈ ಹೆಜ್ಜೆ ಗುರುತುಗಳನ್ನು ಉಳಿಯುವಂತೆ ಮಾಡುವುದು ಮಹತ್ತರವಾದ ಸಾಧನೆ. ಕ್ಯಾ. ಲಕ್ಷ್ಮಿ ಸೆಹಗಲ್ ತಮ್ಮ ಹೆಜ್ಜೆ ಗುರುತುಗಳನ್ನು ಅಳಿಸಲಾಗದ ರೀತಿಯಲ್ಲಿ ಉಳಿಸಿ ಹೋಗಿದ್ದಾರೆ. ವೈವಿಧ್ಯಮಯ ಕಾಮ್ರೇಡ್ ಲಕ್ಷ್ಮಿಗೆ ಲಾಲ್ ಸಲಾಂ !  ]]>

‍ಲೇಖಕರು G

July 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

2 ಪ್ರತಿಕ್ರಿಯೆಗಳು

  1. ಛಾಯಾ

    ಆದರ್ಶಮಯ ಜೀವನ. ಒಳ್ಳೆಯ ಲೇಖನ. ಧನ್ಯವಾದಗಳು ಗುರುಗಳೇ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: