ನಾ ದಿವಾಕರ್ ನೇರ ನುಡಿ: ಕರ್ನಾಟಕಕ್ಕೆ ಉಳಿಗಾಲವಿಲ್ಲ..

– ನಾ ದಿವಾಕರ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಸರ್ಕಾರ ರಚಿಸಿದ ಸಂದರ್ಭದಲ್ಲಿ ರಾಜ್ಯವನ್ನು ಗುಜರಾತ್ ಮಾಡುತ್ತೇವೆ, ಸಿಂಗಾಪೂರ್-ಹಾಂಕಾಂಗ್ ಮಾಡುತ್ತೇವೆ, ಇನ್ನು ಇಪ್ಪತ್ತು ವರ್ಷಗಳ ಕಾಲ ಸತತ ರಾಜ್ಯಭಾರ ಮಾಡುವ ಮೂಲಕ ಕರ್ನಾಟಕವನ್ನು  ಸ್ವರ್ಗ ಮಾಡುತ್ತೇವೆ ಎಂದೆಲ್ಲಾ ಬೀಗಿದ ಬಿಜೆಪಿ, ಕೇವಲ ಮೂರೇ ವರ್ಷಗಳಲ್ಲಿ ಕರ್ನಾಟಕದ ಪರಿಸ್ಥಿತಿಯನ್ನು ಮೂರಾಬಟ್ಟೆ ಮಾಡಿಬಿಟ್ಟಿದೆ. ಅತಿಯಾದ ಆತ್ಮ ವಿಶ್ವಾಸವೋ ಅಥವಾ ಜನತೆ ತಮ್ಮ ಮಾತುಗಳನ್ನು ನಂಬುತ್ತಾರೆ ಎಂಬ ವಿಶ್ವಾಸವೋ, ಬಿಜೆಪಿ ನಾಯಕರನ್ನು ಕಾಡಿರಬೇಕು. ಹಾಗಾಗಿ ವಾಸ್ತವ ಭಿನ್ನವಾಗಿದೆ. ಬಿಜೆಪಿ ತನ್ನನ್ನು Party with a difference  ಎಂದು ಗುರುತಿಸಿಕೊಂಡಿತ್ತು. ಆದರೆ ಪಕ್ಷದ ದುರಾಡಳಿತಕ್ಕೆ ಸಿಲುಕಿ ಇಂದು ನಮ್ಮ ರಾಜ್ಯ ಸ್ಟೇಟ್ ವಿದ್ ಎ ಡಿಫರೆನ್ಸ್ ಆಗಿಹೋಗಿದೆ. ಇತ್ತೀಚೆಗೆ ಬಿಜೆಪಿ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ತಮ್ಮ ಪಕ್ಷವನ್ನು ಮಹಾಭಾರತದ ಸಂದರ್ಭಕ್ಕೆ ಹೋಲಿಸಿಕೊಂಡು, ನಮ್ಮಲ್ಲಿ ಪಾಂಡವರು ಕೌರವರು ಭಿನ್ನಮತದಿಂದಲೇ ಒಟ್ಟಾಗಿದ್ದು, ರಾಜ್ಯದ ಹಿತದೃಷ್ಟಿಯಿಂದ ಸಮಯ ಬಂದಲ್ಲಿ ಒಟ್ಟಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ. ಬಹುಶಃ ಈಶ್ವರಪ್ಪನವರಿಗೆ ಮಹಾಭಾರತ ತಿಳಿಯದಿರಬಹುದು, ಕೌರವ-ಪಾಂಡವರು ಯಾವುದೇ ಪರಿಸ್ಥಿತಿಯಲ್ಲೂ ಒಟ್ಟಾಗಿ ಹೋರಾಡಿಲ್ಲ.

ಸತೀಶ್  ಆಚಾರ್ಯ

ಅದಿರಲಿ, ಈ ಆಧುನಿಕ ಕಲಿಯುಗದ ಕೌರವ-ಪಾಂಡವ ಮೈತ್ರಿಕೂಟ ತಮ್ಮ ಸ್ವಹಿತಾಸಕ್ತಿಗಾಗಿ, ರಾಜಕೀಯ ಉಳಿವಿಗಾಗಿ, ಅಸ್ತಿತ್ವಕ್ಕಾಗಿ ಒಗ್ಗಟ್ಟಾಗಿಯೇ ಇರಬಹುದು ಆದರೆ ಈ ಮೈತ್ರಿ ಕೂಟದಲ್ಲಿನ ಹಲವಾರು ದುಷ್ಯಾಸನರಿಂದ ವಸ್ತ್ರಾಪಹರಣಕ್ಕೊಳಗಾಗಿರುವ ದ್ರೌಪದಿಯ ಪಾಡೇನು ? ಇಲ್ಲಿ ದ್ರೌಪದಿ ಎಂದರೆ ನಮ್ಮ ಕನ್ನಡನಾಡು ಎಂದು ಹೇಳಬೇಕಿಲ್ಲ. ವಿವಸ್ತ್ರಳಾಗಿರುವ ದ್ರೌಪದಿಗೆ ವಸ್ತ್ರದಾನ ಮಾಡುವ ಶ್ರೀಕೃಷ್ಣಾದಿಗಳೂ ದೆಹಲಿಯಲ್ಲಿ ಡೋಲಾಯಮಾನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ದುರ್ಯೋಧನ , ಧರ್ಮರಾಯ, ಅರ್ಜುನ , ಭೀಮ, ಕರ್ನಾಟಕ  ತಮ್ಮ ರಾಜಕೀಯ ಪ್ರಾಬಲ್ಯವನ್ನು ಸ್ಥಾಪಿಸಲು ಹರಸಾಹಸ ಮಾಡುತ್ತಿರುವಂತೆಯೇ ಹತಾಶಳಾಗಿರುವ ದ್ರೌಪದಿ ಅನಾಥ ಪ್ರಜ್ಞೆಯಿಂದ ಖಿನ್ನಳಾಗಿ ಕಾಣುತ್ತಿದ್ದಾಳೆ. ಸಮಕಾಲೀನ ಮಹಾಭಾರತದ ಶೀತಲ ಯುದ್ಧದಲ್ಲಿ ಕನ್ನಡಿಗರ ಆಶಯಗಳು ಭಸ್ಮವಾಗಿ, ಕನರ್ಾಟಕ ಮಾತೆ ತಾಯಿ ಭುವನೇಶ್ವರಿ ಭೀಷ್ಮನ ಹಾಗೆ ಶರಮಂಚದ ಮೇಲೆ ಪವಡಿಸಿದ್ದಾಳೆ. ಇದು ರಾಜ್ಯದ ಇಂದಿನ ಪರಿಸ್ಥಿತಿ. ಏನೆಲ್ಲಾ ನಡೆದಿದೆ ಈ ರಾಜ್ಯದಲ್ಲಿ. ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ರಾಜ್ಯ ಎಂದು ಭ್ರಷ್ಟರ ಆಶ್ರಯ ತಾಣವಾಗಿದೆ, ಅವಕಾಶವಾದದ ಬೀಡಾಗಿದೆ, ಸಮಯಸಾಧಕರ ತವರುಮನೆಯಾಗಿದೆ, ಹಗರಣಗಳ ಗೂಡಾಗಿದೆ, ಅಪ್ರಮಾಣಿಕತೆಯ ಆಗರವಾಗಿದೆ, ವಂಚನೆಯ ನೆಲೆಯಾಗಿದೆ. ರಾಜಕಾರಣದಲ್ಲೇನೋ ಭ್ರಷ್ಟಾಚಾರ ಎನ್ನುವುದು ಸಹಜ ಪ್ರವೃತ್ತಿಯಂತಾಗಿದೆ. ಆದರೆ ಇಲ್ಲಿ ಅದು ಪರಾಕಾಷ್ಠೆ ತಲುಪಿದೆ. ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆ, ನ್ಯಾಯಪರಿಪಾಲನೆ ಮಾಡುವ ನ್ಯಾಯಾಂಗ, ನ್ಯಾಯ ರಕ್ಷಣೆ ಮಾಡುವ ವಕೀಲ ವೃತ್ತಿ ಎಲ್ಲವೂ ಹಗರಣಗಳಿಂದ ಆವೃತವಾಗಿದೆ. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ನಡೆಯುವ ಲೋಪಗಳನ್ನು, ಪ್ರಮಾದಗಳನ್ನು ತಡೆಗಟ್ಟಬೇಕಾದ ಲೋಕಾಯುಕ್ತದಂತಹ ಮಹತ್ವದ ಸಾಂವಿಧಾನಿಕ ಸಂಸ್ಥೆ ಇಂದು ಜೀವನ್ಮರಣದ ಪರಿಸ್ಥಿತಿ ಎದುರಿಸುತ್ತಿದೆ. ನ್ಯಾ. ಸಂತೋಷ್ ಹೆಗ್ಡೆ ಆಳ್ವಿಕರ ವಿರುದ್ಧ ದಿಟ್ಟತನದಿಂದ ಭ್ರಷ್ಟಾಚಾರದ ಆರೋಪ ಹೊರಿಸಿದ ನಂತರ, ವ್ಯವಸ್ಥಿತವಾಗಿ ಈ ಸಂಸ್ಥೆಗೆ ದಯಾಮರಣವನ್ನು ಪಾಲಿಸುವ ನಿಟ್ಟಿನಲ್ಲಿ ಆಳುವ ವರ್ಗಗಳು ಸಕ್ರಿಯವಾಗಿವೆ. ಹಾಗಾಗಿಯೇ ನೂತನ ಲೋಕಾಯುಕ್ತ ನೇಮಕದ ವಿಚಾರದಲ್ಲೂ ವಿಳಂಬ, ವಿವಾದಗಳು ಕಾಣುತ್ತಿವೆ. ಲೋಕಾಯುಕ್ತರ ನೇಮಕ ಮಾಡಲು ಜಾತಿ, ಸ್ವಜನ ಪಕ್ಷಪಾತ , ರಾಜಕೀಯ ಲೆಕ್ಕಾಚಾರಗಳೇ ಪ್ರಧಾನವಾಗುತ್ತಿದ್ದು, ಅರ್ಹತೆ, ಪ್ರಾಮಾಣಿಕತೆ ಮತ್ತು ಸಾಂವಿಧಾನಿಕ ಅವಶ್ಯಕತೆಗಳು ಪರಿಗಣನೆಗೆ ಬರುತ್ತಿಲ್ಲ. ಹಾಗಾಗಿ ಜಾತಿ ರಾಜಕಾರಣ ಲೋಕಾಯುಕ್ತವನ್ನೂ ಆವರಿಸಿದೆ. ಲೋಕಾಯುಕ್ತ ಸ್ಥಾನಕ್ಕೆ ನೇಮಿಸಲಾಗಿದ್ದ ಒಬ್ಬರು ನಿವೇಶನ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದರೆ, ಮತ್ತೊಬ್ಬರನ್ನು ಇದೇ ಕಾರಣಕ್ಕೆ ನೇಮಿಸುವುದೇ ಅಸಾಧ್ಯವಾಯಿತು. ಇನ್ನು ಉಪಲೋಕಾಯುಕ್ತರಾಗಿ ನ್ಯಾ. ಚಂದ್ರಶೇಖರಯ್ಯ ಅವರನ್ನು ನೇಮಿಸಿದ್ದನ್ನು ಹೈಕೋರ್ಟ್   ತಿರಸ್ಕರಿಸಿರುವುದು ಸರ್ಕಾರಕ್ಕೆ  ಮುಖಭಂಗವಾಗಿದೆ. ಸಂಸ್ಥೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಆಮ್ಲಜನಕ ಪೂರೈಸುವ ಕೊಳವೆಯನ್ನು ತೆಗೆದುಹಾಕುವುದೊಂದೇ ಬಾಕಿ. ಮತ್ತೊಂದೆಡೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯಲ್ಲಿ ಡಿಜಿಪಿಯವರ ನೇಮಕವನ್ನೇ ರಾಜ್ಯ ಹೈಕೋರ್ಟ್  ಅನುರ್ಜಿತಗೊಳಿಸಿರುವುದು ಮತ್ತು ಈ ಸಂಬಂಧ ಸರ್ಕಾರದ  ಮೇಲ್ಮನವಿಯನ್ನು ಸುಪ್ರೀಂ ಕೋಟರ್್ ತಿರಸ್ಕರಿಸಿರುವುದು ರಾಜ್ಯದಲ್ಲಿನ ಅರಾಜಕತೆಯ ಸಂಕೇತವಾಗಿದೆ. ಶಂಕರ್ ಬಿದರಿಯವರ ನೇಮಕವನ್ನು ರದ್ದುಪಡಿಸುವ ತೀಪರ್ಿನಲ್ಲಿ ನ್ಯಾಯಾಧೀಶರು ವ್ಯಕ್ತಪಡಿಸಿರುವ ನಿಷ್ಠುರ ಅಭಿಪ್ರಾಯಗಳು, ಬಿದರಿಯವರನ್ನು ಸದ್ದಾಂ-ಗಡಾಫಿಯವರಿಗೆ ಹೋಲಿಸಿರುವುದು ಚಚರ್ಾಸ್ಪದವೇ ಆದರೂ, ಈ ತೀಪರ್ಿನ ಹಿಂದಿರುವ ಮಾನವೀಯ ಸಂವೇದನೆ ಮತ್ತು ತೀಪರ್ಿಗೆ ಕಾರಣವಾದ ಆಳ್ವಿಕರ ನಿಷ್ಕ್ರಿಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಒಂದು ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರನ್ನು ನೇಮಿಸುವ ಮುನ್ನ, ರಾಜ್ಯದ ಸುರಕ್ಷತೆಗೆ ಹೊಣೆಯಾದ ಪೊಲೀಸ್ ಮುಖ್ಯಸ್ಥರನ್ನು ಆಯ್ಕೆ ಮಾಡುವ ಮುನ್ನ ಒಂದು ಜವಾಬ್ದಾರಿಯುತ ಸಕರ್ಾರ ಅನುಸರಿಸಬೇಕಾದ ಕನಿಷ್ಠ ನಿಯಮಗಳನ್ನೂ ಪಾಲಿಸದ ಸಕರ್ಾರವನ್ನು ಪ್ರಬುದ್ಧ ಸಕರ್ಾರ ಎಂದು ಹೇಗೆ ಕರೆಯಲಾದೀತು ? ಕನರ್ಾಟಕದ ಈ ಪರಿಸ್ಥಿತಿಗೆ ಕೇವಲ ರಾಜಕೀಯ ಬೆಳವಣಿಗೆಗಳೇ ಕಾರಣ ಎಂದು ಹೇಳುವುದು ಅರ್ಧ ಸತ್ಯವಾದೀತು. ಇಲ್ಲಿನ ಸಮಸ್ಯೆಗಳಿಗೆ ಮೂಲ ಕಾರಣ ಇಂದು ರಾಜ್ಯದ ರಾಜಕೀಯವನ್ನು ನಿರ್ವಹಿಸುತ್ತಿರುವುದು ಹಣಕಾಸು ಬಂಡವಾಳ ಮತ್ತು ಈ ಬಂಡವಾಳದ ಮೂಲ ಒಡೆಯರಾದ ಕಾಪರ್ೋರೇಟ್ ಉದ್ಯಮಿಗಳು. ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ತಮ್ಮನ್ನು ಮಾತ್ರ ಮಾರಿಕೊಳ್ಳದೆ, ಇಡೀ ರಾಜ್ಯದ ಹಿತಾಸಕ್ತಿಯನ್ನೇ ಬಂಡವಾಳಿಗರಿಗೆ ಮಾರಾಟ ಮಾಡಿರುವ ರಾಜಕೀಯ ಪಕ್ಷಗಳು ತಮ್ಮ ಕೌರವ-ಪಾಂಡವ ಥಿಯರಿಗಳ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿವೆ. ಸಮರ್ಥವಾದ ನೂತನ ಲೋಕಾಯುಕ್ತರ ನೇಮಕ ಮಾಡುವಂತೆ ಯಾವುದೇ ರಾಜಕೀಯ ಪಕ್ಷವೂ ಜನರನ್ನು ಸಂಘಟಿಸುತ್ತಿಲ್ಲ. ಶಂಕರ್ ಬಿದರಿಯವರ ಮೇಲಿನ ಆರೋಪಗಳು ತಿಳಿದಿದ್ದರೂ ಅವರ ನೇಮಕವನ್ನು ಯಾವ ಪಕ್ಷವೂ ಗಟ್ಟಿಯಾಗಿ ಪ್ರಶ್ನಿಸಲಿಲ್ಲ. ಕಾರಣ ಸ್ಪಷ್ಟ, ಆಳುವ ವರ್ಗಗಳ ಬಣ್ಣ ಒಂದೇ, ಎಲ್ಲರಿಗೂ ತಮ್ಮ ಸ್ವಹಿತಾಸಕ್ತಿಯ ರಕ್ಷಣೆಯೇ ಪ್ರಧಾನ, ರಾಜ್ಯದ ಹಿತಾಸಕ್ತಿಯಲ್ಲ. ಈ ವಿಷಮ ಸನ್ನಿವೇಶದಲ್ಲಿ ರಾಜ್ಯದ ಜನತೆ ಏನು ಮಾಡಬೇಕು ? ಇದು ಪ್ರಜ್ಞಾವಂತರ ಮುಂದಿರುವ ಪ್ರಶ್ನೆ. ಒಂದು ಸಮರ್ಥ ಪಯರ್ಾಯ ಇಲ್ಲದ ಸನ್ನಿವೇಶ ರಾಜ್ಯದಲ್ಲಿದೆ. ಅತ್ತ ದರಿ ಇತ್ತ ಪುಲಿ ಎಂಬಂತೆ ಎತ್ತ ನೋಡಿದರೂ ಭ್ರಷ್ಟತೆ ತಾಂಡವಾಡುತ್ತಿದೆ. ಬದಲಾವಣೆಯಾದರೂ ಸಕರ್ಾರಗಳ ಬದಲಾವಣೆಯಾಗುತ್ತದೆ, ಪರಿಸ್ಥಿತಿಯಲ್ಲ. ಪಕ್ಷಗಳ ಬದಲಾವಣೆಯಾಗುತ್ತದೆ, ಜನತೆಯ ಸ್ಥಿತಿಗತಿಗಳಲ್ಲ. ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ಕನರ್ಾಟಕ ಇಂದು ಅರಾಜಕತೆಯ ಸಂಕೇತವಾಗಿ ಕಾಣುತ್ತಿದ್ದರೆ, ಅದಕ್ಕೆ ಕಾರಣರಾರು ? ಒಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿಗೆ ಮತ ನೀಡಿದ ಮತದಾರರೇ ? ಭಿನ್ನವಾದ ಆಡಳಿತ ನೀಡುತ್ತೇವೆ ಎಂದು ಜನತೆಯನ್ನು ವಂಚಿಸಿರುವ ಬಿಜೆಪಿ ಪಕ್ಷವೇ ? ಬಿಜೆಪಿ ಸಕರ್ಾರದ ಅವಲಕ್ಷಣಗಳನ್ನು ಜನತೆಗೆ ಮನದಟ್ಟು ಮಾಡುವಲ್ಲಿ ವಿಫಲವಾಗಿ, ಈಗಲೂ ಒಂದು ನಿದರ್ಿಷ್ಟ ಪಯರ್ಾಯವನ್ನು ಜನತೆಯ ಮುಂದಿಡದ ಕಾಂಗ್ರೆಸ್ ಪಕ್ಷವೇ? ಯಾರು ಕಾರಣ ? ಮುಂದಿನ ಚುನಾವಣೆಗಳೊಳಗಾಗಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದಿದ್ದರೆ ಕನರ್ಾಟಕಕ್ಕೆ ಉಳಿಗಾಲವಿಲ್ಲ.]]>

‍ಲೇಖಕರು G

April 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

ನನ್ನ ’ಎದೆಗೆ ಬಿದ್ದ ಅಕ್ಷರ’

ನನ್ನ ’ಎದೆಗೆ ಬಿದ್ದ ಅಕ್ಷರ’

ಡಾ.ಬಿ.ಆರ್.ಸತ್ಯನಾರಾಯಣ ಮೊನ್ನೆ ರಾತ್ರಿ ನನ್ನ ತೋಟದ ಮನೆಯಲ್ಲಿದ್ದೆ. ತುಂತುರು ಮಳೆ ಬೀಳುತ್ತಿತ್ತು. ಕರೆಂಟು ಮಾಯವಾಗಿತ್ತು. ಮರು ಓದಿಗೆಂದು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: