ನಾ ದಿವಾಕರ್ ನೇರ ನುಡಿ: ನೀತಿಯೂ ಇಲ್ಲ, ಸಂಹಿತೆಯೂ ಇಲ್ಲ

– ನಾ. ದಿವಾಕರ್

ಆಳ್ವಿಕರಿಗೆ ನೀತಿಯೂ ಇಲ್ಲ ಸಂಹಿತೆಯೂ ಇಲ್ಲ

ಕನರ್ಾಟಕದಲ್ಲಿ ಸಂಭವಿಸುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಎಂತಹ ದಿಟ್ಟ ಆಶಾವಾದಿಯೂ ಸಹ ಹತಾಶನಾಗುವ ಸಂಭವವೇ ಹೆಚ್ಚು. ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆ ಸಮ್ಮಿಶ್ರ ಸಕರ್ಾರಗಳಿಂದ ಹತಾಶರಾಗಿ ಏಕಪಕ್ಷ ಆಳ್ವಿಕೆಯನ್ನು ಬಯಸಿ, ಬದಲಾವಣೆಯ ನಿರೀಕ್ಷೆಯಲ್ಲಿ, ವಿಭಿನ್ನ ಪಕ್ಷ ಎನಿಸಿದ ಭಾರತೀಯ ಜನತಾ ಪಕ್ಷವನ್ನು ಆಯ್ಕೆ ಮಾಡಿದಾಗ ರಾಜ್ಯದ ಜನತೆಯ ಮನದಲ್ಲಿದ್ದುದು ಒಂದು ಭರವಸೆಯಷ್ಟೆ. ಎರಡು ಸಮ್ಮಿಶ್ರ ಸಕರ್ಾರಗಳ ಆಡಳಿತದಿಂದ ಬೇಸತ್ತಿದ್ದ ಜನತೆಗೆ ಬಿಜೆಪಿಯಲ್ಲಿ ಒಂದು ಬೆಳಕಿನ ಕಿಂಡಿ ಕಂಡುಬಂದಿದ್ದರೆ ಅಚ್ಚರಿಯೇನಿಲ್ಲ. ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಜನವಿರೋಧಿ ನೀತಿಗಳು ಹತಾಶತೆಯನ್ನು ಮೂಡಿಸಿದ್ದವು. ಬಿಜೆಪಿಯಲ್ಲಿ ಭರವಸೆ ಇರಿಸಿದ್ದ ಕನರ್ಾಟಕದ ಜನತೆಗೆ ಆ ಪಕ್ಷದ ಮೂಲ ಸಿದ್ಧಾಂತವಾಗಲೀ, ಕೋಮುವಾದಿ ದೃಷ್ಟಿಕೋನವಾಗಲಿ, ಸಂಘಪರಿವಾರದ ಪೋಷಣೆಯಾಗಲೀ ಪ್ರಧಾನ ವಿಚಾರವಾಗಲಿಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಸಕರ್ಾರ ಇರಲಿ ಎಂಬುದೊಂದೇ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಒಂದು ಅವಧಿ ಮುಗಿಸುವ ಮುನ್ನವೇ ಭ್ರಮನಿರಸನ ಉಂಟುಮಾಡಿರುವುದು ರಾಜ್ಯದ ಭವಿಷ್ಯವನ್ನೇ ಕತ್ತಲೆಯಲ್ಲಿರಿಸಿದೆ. ರೇಣುಕಾಚಾರ್ಯ, ಹಾಲಪ್ಪ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್. ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಜನಾರ್ಧನರೆಡ್ಡಿ ಹೀಗೆ ಕಳಂಕಿತ ಸಚಿವ ಮಹಾಶಯರ ದಂಡನ್ನೇ ಕಟ್ಟಿಕೊಂಡು ಮುನ್ನಡೆಯುತ್ತಿರುವ ಬಿಜೆಪಿ ಸಕರ್ಾರ ರಾಜ್ಯದ ಜನತೆಗೆ ನೀಡಿರುವ ಕೊಡುಗೆಯಾದರೂ ಏನು ? ಅಲ್ಪಸಂಖ್ಯಾತರ ಚಚರ್ುಗಳ ಮೇಲಿನ ದಾಳಿಗಳು, ರಾಜ್ಯದೆಲ್ಲೆಡೆ ಅನಧಿಕೃತ ಸಾಂಸ್ಕೃತಿಕ ಆರಕ್ಷಕರ ನೇಮಕ, ಧರ್ಮ-ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ, ಶಿಕ್ಷಣ ಕ್ಷೇತ್ರದ ಕೇಸರೀಕರಣ, ಜಾತಿ ದೌರ್ಜನ್ಯಗಳ ಬಗ್ಗೆ ದಿವ್ಯ ಮೌನ ಇತ್ಯಾದಿ ಇತ್ಯಾದಿ. ಇದು ಸಾಲದೆಂಬಂತೆ ರಾಜ್ಯದ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ಆವಾಹನೆ ಮಾಡಿಕೊಂಡಿರುವ ಒಂದು ಭ್ರಷ್ಟ ವ್ಯವಸ್ಥೆ. ಭ್ರಷ್ಟಾಚಾರ ಮತ್ತು ಅನೈತಿಕತೆ ರಾಜ್ಯದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಸದನದಲ್ಲಿ ಬ್ಲೂಫಿಲಂ ನೋಡಿದ ಸಚಿವರ ವರ್ತನೆಯನ್ನು ಸಮಥರ್ಿಸಿಕೊಳ್ಳುವವರೂ ಹೇರಳವಾಗಿದ್ದಾರೆ. ಭ್ರಷ್ಟ ಸಚಿವರಿಗೆ ಶಿಕ್ಷೆ ನೀಡುವುದಿರಲಿ, ಭ್ರಷ್ಟರನ್ನು ಪಕ್ಷದಿಂದ ಉಚ್ಚಾಟಿಸುವಷ್ಟು ಸಂವೇದನೆಯನ್ನೂ ರಾಜಕೀಯ ಪಕ್ಷಗಳು ಕಳೆದುಕೊಂಡಿವೆ. ಪರಸ್ಪರ ದೋಷಾರೋಪಣೆ ಮಾಡುವುದರ ಮೂಲಕವೇ ತಮ್ಮ ನಿರಪರಾಧಿತ್ವವನ್ನು ನಿರೂಪಿಸಲು ಯತ್ನಿಸುತ್ತಿರುವ ಮುಖ್ಯವಾಹಿನಿಯ ಪಕ್ಷಗಳು ತೆರೆಮರೆಯಲ್ಲೇ ಈ ಭ್ರಷ್ಟ ವ್ಯವಸ್ಥೆಗೆ ಒಂದು ಸುಭದ್ರ ಬುನಾದಿ ನಿಮರ್ಿಸುತ್ತಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ವಿರುದ್ಧ ಎಷ್ಟೇ ಆರೋಪಗಳನ್ನು ಮಾಡಿದರೂ, ರಾಜಕೀಯ ಅನಿವಾರ್ಯತೆಗಳು ಎದುರಾದರೆ ಭ್ರಷ್ಟ ರಾಜಕಾರಣಿಗಳೊಡನೆ ಕೈಜೋಡಿಸಲು ಹಿಂಜರಿಯುವುದಿಲ್ಲ ಎಂಬುದು ಖಚಿತವಾಗಿದೆ. ಇಂತಹ ಸನ್ನಿವೇಶದಲ್ಲಿ ಶ್ರೀಸಾಮಾನ್ಯನ ಪಾತ್ರವೇನು ? ತನ್ನ ಅಮೂಲ್ಯ ಮತವನ್ನು ತ್ಯಾಜ್ಯ ವಸ್ತುವಿನಂತೆ ಉಪಯೋಗಿಸಿ ಬಿಸಾಡುವ ಆಳ್ವಿಕರಿಗೆ ಜನಸಾಮಾನ್ಯರು ಹೇಗೆ ಪ್ರತಿಕ್ರಯಿಸಬೇಕು ? ಈ ಹಲವು ಪ್ರಶ್ನೆಗಳು ಪ್ರಜ್ಞಾವಂತರನ್ನು ಕಾಡುತ್ತಿದ್ದು ಉತ್ತರಗಳನ್ನು ಕೆಲವೇ ಪ್ರಗತಿಪರ ಚಳುವಳಿಗಳ ಮೂಲಕ ಕಂಡುಕೊಳ್ಳಲಾಗುತ್ತಿದೆ. ಆದರೆ ಮೂಲಭೂತ ಸಮಸ್ಯೆ ಇರುವುದು ರಾಜಕೀಯ-ಸಾಮಾಜಿಕ ವ್ಯವಸ್ಥೆಯಲ್ಲಿ ಮತ್ತು ಅದು ಪೋಷಿಸುವ ಸಾಂಸ್ಕೃತಿಕ ಬದುಕಿನಲ್ಲಿ. ಕನರ್ಾಟಕದ ಇತ್ತೀಚಿನ ಇತಿಹಾಸದಲ್ಲಿ ಕೇಳರಿಯದ ಗೌರವಹತ್ಯೆ ಮತ್ತು ನರಬಲಿಯ ಪ್ರಕರಣಗಳು ಈಗ ಬಯಲಿಗೆ ಬರುತ್ತಿವೆ. ಜಾತಿ ಪ್ರಜ್ಞೆ ದಟ್ಟವಾಗುತ್ತಿರುವಂತೆಲ್ಲಾ ಜಾತಿ ದೌರ್ಜನ್ಯಗಳು ತೀವ್ರವಾಗುತ್ತಿವೆ. ಬಿಹಾರದ ಸಮಾಜವನ್ನೂ ನಾಚಿಸುವ ರೀತಿಯಲ್ಲಿ ರಾಜ್ಯದ ಜಾತಿ ವ್ಯವಸ್ಥೆ ಮೆರೆಯುತ್ತಿದ್ದು, ದಲಿತ, ಅಲ್ಪಸಂಖ್ಯಾತರ ಮೇಲಿನ ದಾಳಿ ಅವ್ಯಾಹತವಾಗಿ ನಡೆಯುತ್ತಿದೆ. ಮತ್ತೊಂದೆಡೆ ರಾಜ್ಯದ ಶಾಂತಿ ಭಂಗ ಮಾಡುವ, ಸೌಹಾರ್ದತೆಯನ್ನು ಹಾಳು ಮಾಡುವ ವಿಚ್ಚಿದ್ರಕಾರಕ ಶಕ್ತಿಗಳಿಗೆ ಶಿಕ್ಷೆಯಾಗದೆ, ಮಾನವ ಹಕ್ಕುಗಳಿಗಾಗಿ ಹೋರಾಡುವ, ಪ್ರಜಾತಂತ್ರಕ್ಕಾಗಿ ಮಿಡಿಯುವ ಸಂಘಟನೆಗಳ ವಿರುದ್ಧ, ವ್ಯಕ್ತಿಗಳ ವಿರುದ್ಧ ಪ್ರಭುತ್ವ ದಮನಕಾರಿ ನೀತಿಗಳನ್ನು ಅನುಸರಿಸುತ್ತಿದೆ. ಪ್ರತಿಭಟನೆಗೂ ಪರವಾನಗಿ ಪಡೆಯಬೇಕಾಗಿರುವುದು ಈ ಬೆಳವಣಿಗೆಗೆ ಸಾಕ್ಷಿಯಾಗಿದೆ. ಈ ಗಂಭೀರ ಸಮಸ್ಯೆಗಳ ವಿರುದ್ಧ ಜನತೆಯಲ್ಲಿ ಪ್ರಜ್ಞೆ ಮೂಡಿಸಿ, ಜನಾಂದೋಲನವನ್ನು ರೂಪಿಸಬೇಕಾದ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥತೆಯ ಗುಂಗಿನಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತಿರುವುದು ರಾಜ್ಯದ ಜನತೆಯ ದುದರ್ೈವ. ಬಿಜೆಪಿ ಸಕರ್ಾರ ಮಾಡುತ್ತಿರುವ ಪ್ರಮಾದಗಳು ಕೇವಲ ಮುಂಬರುವ ಚುನಾವಣೆಗಳಲ್ಲಿ ಮತಗಳಿಸಲು ನೆರವಾಗುವ ಅಸ್ತ್ರಗಳೆಂದೇ ವಿರೋಧ ಪಕ್ಷಗಳು ಭಾವಿಸುತ್ತಿವೆ. ಆದರೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಘಟನೆಗಳು, ವಿದ್ಯಮಾನಗಳು ಇಡೀ ಸಾಮಾಜಿಕ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸುವ ವ್ಯವಸ್ಥಿತ ಸಂಚಿನಂತೆ ಭಾಸವಾಗುತ್ತವೆ. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಲ್ಲಿ ಇರಬೇಕಾಗಿದ್ದ ಪ್ರಬುದ್ಧತೆ ಮತ್ತು ರಾಜಕೀಯ ಮುತ್ಸದ್ದಿತನ ಇಲ್ಲದಿರುವುದು ರಾಜ್ಯದ ಪ್ರಮುಖ ಸಮಸ್ಯೆಯಾಗಿದೆ. ಆಳುವ ಪಕ್ಷ ಮಾತ್ರವಲ್ಲ, ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸುವ ಇಡೀ ರಾಜಕೀಯ ವರ್ಗಕ್ಕೇ ಒಂದು ನಿದರ್ಿಷ್ಟ ನೀತಿ ಸಂಹಿತೆಯ ಅವಶ್ಯಕತೆ ಇಂದು ಹೆಚ್ಚಾಗಿದೆ. ಈ ನೀತಿ ಸಂಹಿತೆಯ ಮೂಲ ರೂಪುರೇಷೆಗಳು ರಾಜ್ಯದ ರಾಜಕೀಯ ಇತಿಹಾಸದ ಪುಟಗಳಲ್ಲೇ ದೊರೆಯುತ್ತದೆ. ಅವುಗಳನ್ನು ಹೆಕ್ಕಿ ತೆಗೆಯುವ ದಾರ್ಶನಿಕತೆ ಮತ್ತು ಪ್ರಜ್ಞಾವಂತ ಮನೋಭಾವ ನಮ್ಮೊಳಗೆ ಇರಬೇಕಷ್ಟೆ. ಈ ಮಹತ್ತರ ಕಾರ್ಯವನ್ನು ನಿರ್ವಹಿಸಲು ಜನತೆ ಮುಂದಾಗದಿದ್ದರೆ, ಭವಿಷ್ಯದ ದಿನಗಳು ಆಶಾದಾಯಕವಾಗಿರುವ ಯಾವುದೇ ಭರವಸೆ ಸಾಧ್ಯವಿಲ್ಲ. ಜನತೆಯ ಮುಂದೆ ಚುನಾವಣೆ ಒಂದು ಪ್ರಮುಖ ಅಸ್ತ್ರವಾದರೆ, ಜನಾಂದೋಲನಗಳ ಮಾರ್ಗ ಮತ್ತೊಂದು ಪ್ರಬಲ ಅಸ್ತ್ರ. ಬಳಸುವ ಇಚ್ಚಾಶಕ್ತಿ ಇದ್ದಲ್ಲಿ ಬತ್ತಳಿಕೆ ಬರಿದಾಗುವುದೇ ಇಲ್ಲ.]]>

‍ಲೇಖಕರು G

February 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

3 ಪ್ರತಿಕ್ರಿಯೆಗಳು

 1. gunashekara murthy

  manuShyaralli nirIkShisabEkAddu amanuSharalli nirIkShisidaMtide
  modalu avaru manuShyarAgali muMde rAjyabhAramADuvudAguttade.

  ಪ್ರತಿಕ್ರಿಯೆ
  • shanthakumari

   imtaha hIna avastheyiMda nammannu naavu bidisikoLLuva yaava prayatnavannu janate naMbuva sthitiyalli illa. vakra drusti namage abhyasavaagide. yaavudE janaamdOlanada hiMde yaariddaare maadyamagaLu Enu hELuttave eMbudE heccu mukhyavaaguttave. I bhraShTa vyavasteyalli naavU shaamIlaagade dani ettiddeve ennuvudaShTE namaguLiyuva samaadhaana.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: