ನಾ ದಿವಾಕರ್ ನೇರ ನುಡಿ: ರಾಷ್ಟ್ರಪತಿಗಳೋ ಪಕ್ಷಪ(ಪಾ)ತಿಗಳೊ ?

ಸಾಮಾನ್ಯವಾಗಿ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿಗಳು ದೇಶದ ಪ್ರಜೆಗಳನ್ನುದ್ದೇಶಿಸಿ ಭಾಷಣ ಮಾಡುವಾಗ, ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನಸಾಮಾನ್ಯರಿಗೆ, ದೇಶದ ಶೋಷಿತ, ಬಡ ಜನತೆಗೆ ಮತ್ತು ಸಾಮಾಜಿಕ ಹಾಗೂ ಆಥರ್ಿಕ ತಾರತಮ್ಯಗಳಿಂದ ಅವಕಾಶವಂಚಿತರಾಗಿರುವ ಜನಸಮುದಾಯಗಳಿಗೆ ಸಾಂತ್ವನ ಹೇಳುವುದನ್ನು ಕಾಣುತ್ತೇವೆ. ಇದು ಪಾರಂಪರಿಕವಾಗಿ ನಡೆದು ಬಂದಿದ್ದು, ತಮ್ಮ ಭಾಷಣದ ಮೂಲಕ ದೇಶದ ಸಾರ್ವಭೌಮ ಪ್ರಜೆಗಳ ನೋವು, ಸಂಕಷ್ಟಗಳಿಗೆ ಸ್ಪಂದಿಸುವ ರಾಷ್ಟ್ರಪತಿಗಳ ಭಾಷಣ ಜನತೆಯಲ್ಲಿ ಭರವಸೆ ಮೂಡಿಸುವಂತಿರುವುದು ಸಹಜ. ಆಳ್ವಿಕರ ಆಲೋಚನೆ ಮತ್ತು ಧೋರಣೆಗನುಗುಣವಾಗಿ ಅಧಿಕಾರಶಾಹಿ ಚೌಕಟ್ಟಿನಲ್ಲಿ ಸಿದ್ಧಪಡಿಸುವ ಈ ಭಾಷಣದಿಂದ ಯಾವುದೇ ಬದಲಾವಣೆ ಉಂಟಾಗುತ್ತದೆ ಎಂಬ ಭ್ರಮೆಯಾಗಲಿ, ಭ್ರಾಂತಿಯಾಗಲೀ ಭಾರತೀಯ ಪ್ರಜ್ಞಾವಂತ ಪ್ರಜೆಗಳಿಗೆ ಇರಲಿಕ್ಕಿಲ್ಲ. ಏಕೆಂದರೆ ಈ ಶುಷ್ಕ, ಸತ್ವಹೀನ ಮತ್ತು ಯಾವುದೇ ಪರಿಣಾಮ ಬೀರದ ಭಾಷಣಗಳನ್ನು ಈ ದೇಶದ ಜನತೆ 66ನೆಯ ಬಾರಿ ಆಲಿಸುತ್ತಿದ್ದಾರೆ.

ಆದರೆ ಈ ಬಾರಿ ನೂತನ ರಾಷ್ಟ್ರಪತಿ ಮಾನ್ಯ ಪ್ರಣಬ್ ಮುಖಜರ್ಿ ತಮ್ಮ ಭಾಷಣದಲ್ಲಿ ವಿಭಿನ್ನ ಧೋರಣೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಮಾಜವನ್ನು ಕಾಡುತ್ತಿರುವ ಜಾತಿ ವ್ಯವಸ್ಥೆ, ಕೋಮುವಾದ, ಭಯೋತ್ಪಾದನೆ ಮತ್ತಿತರ ಸಮಾಜಘಾತುಕ ವಿದ್ಯಮಾನಗಳನ್ನು ಪ್ರಸ್ತಾಪಿಸಿ, ದೇಶದ ಸ್ವಾಭಿಮಾನ ಮತ್ತು ಸಾರ್ವಭೌಮತೆಗೆ ಧಕ್ಕೆ ಉಂಟುಮಾಡುವ ಶಕ್ತಿಗಳಿಗೆ ಎಚ್ಚರಿಕೆ ನೀಡಬಹುದೆಂದು ಅಪೇಕ್ಷಿಸಿದ್ದ ದೇಶದ ಜನತೆಗೆ ಶಾಕ್ ನೀಡಿರುವ ರಾಷ್ಟ್ರಪತಿಗಳು, ಈ ದೇಶದಲ್ಲಿ ಸರ್ವವ್ಯಾಪಿಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹರಡಿ ಇಡೀ ವ್ಯವಸ್ಥೆಯನ್ನೇ ಶಿಥಿಲಗೊಳಿಸುತ್ತಿರುವ ಭ್ರಷ್ಟಾಚಾರ ಎಂಬ ವ್ಯಾಧಿಯ ವಿರುದ್ಧ ದನಿ ಎತ್ತಿರುವ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಿಡಿದೇಳುವುದರಲ್ಲಿ ತಪ್ಪೇನೂ ಇಲ್ಲ ಆದರೆ ಪ್ರತಿಭಟನೆ ವ್ಯಾಧಿಯಾಗಬಾರದು , ಹಾಗಾದಾಗ ಇಡೀ ವ್ಯವಸ್ಥೆ ಹಳಿ ತಪ್ಪುತ್ತದೆ ಎಂದು ಎಚ್ಚರಿಕೆ ನೀಡಿರುವ ರಾಷ್ಟ್ರಪತಿಗಳು ಜನರ ಆಕ್ರೋಶಗಳು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ನಿಜ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾದರೂ, ಸಾಂವಿಧಾನಿಕ ಘನತೆ ಗೌರವಗಳನ್ನೂ ಮನ್ನಿಸಬೇಕಾಗುತ್ತದೆ. ದೇಶದ ಸಂವಿಧಾನದ ರಕ್ಷಣೆಗೆ ಉತ್ತರದಾಯಿತ್ವ ಹೊತ್ತಿರುವ ಸಂಸತ್ತಿನ ಉಭಯ ಸದನಗಳು ಈ ನಿಟ್ಟಿನಲ್ಲಿ ಗೌರವ ಮಾನ್ಯವಾಗುತ್ತವೆ. ಈ ಸಾಂವಿಧಾನಿಕ ಸಂಸ್ಥೆಗಳನ್ನು ಮೀರಿ ನಿಲ್ಲುವ ಯಾವುದೇ ಪ್ರಯತ್ನ ಅಪೇಕ್ಷಣೀಯವೂ ಅಲ್ಲ. ಆದರೆ ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ವಿಶೇಷವಾದ ಸ್ಥಾನ ಕಲ್ಪಿಸಲಾಗಿದೆ. ಸಂವಿಧಾನ ರಕ್ಷಣೆಯ ಹೊಣೆಗಾರಿಕೆಯನ್ನು ಪ್ರಜೆಗಳಿಗೂ ನೀಡಲಾಗಿದೆ. ಜನರಿಂದಲೇ ಆಯ್ಕೆಯಾಗಿ ಅಧಿಕಾರದ ಗದ್ದುಗೆ ಏರುವ ರಾಜಕೀಯ ಪಕ್ಷಗಳು ಗಾಜಿನ ಮನೆಯಲ್ಲಿ ಕುಳಿತು ಆಡಳಿತ ನಡೆಸುವವರಂತೆ ಎಚ್ಚರಿಕೆಯ ಹೆಜ್ಜೆಗಳನ್ನಿರಿಸುವಂತಹ ನಿಯಮಗಳನ್ನು ಸಂವಿಧಾನ ರೂಪಿಸಿದೆ. ಆಳ್ವಿಕರು ಮಾಡುವ ತಪ್ಪುಗಳನ್ನು ಕಾಲಕಾಲಕ್ಕೆ ಸರಿಪಡಿಸುವ ಹಕ್ಕನ್ನೂ ಪ್ರಜೆಗಳಿಗೆ ನೀಡಲಾಗಿದೆ. ಸಕರ್ಾರದ ನೀತಿಗಳನ್ನು ವಿರೋಧಿಸುವುದು ಪ್ರಭುತ್ವವನ್ನೇ ಧಿಕ್ಕರಿಸಿದಂತೆ ಎಂದು ಭಾವಿಸುವ ಅಗತ್ಯವಿಲ್ಲದಂತೆ ಸಂವಿಧಾನ ಪ್ರಜೆಗಳ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಸಿದ್ಧಪಡಿಸಿದೆ. ಈ ಸಾಂವಿಧಾನಿಕ ಹಕ್ಕುಗಳ ಪೈಕಿ ಪ್ರಜೆಗಳ ಪ್ರತಿಭಟನೆಯ ಹಕ್ಕೂ ಒಂದಾಗಿದೆ. ಆದರೆ ಬಹುಶಃ ಪ್ರಣಬ್ ದಾ ತಮ್ಮ ರಾಷ್ಟ್ರಪತಿಗಳಾದರೂ ತಮ್ಮ ರಾಜಕೀಯ ಚೌಕಟ್ಟಿನಿಂದ ಇನ್ನೂ ಹೊರಬಂದಿಲ್ಲವೆಂದು ತೋರುತ್ತದೆ. ಜನಸಾಮಾನ್ಯರ ಪ್ರತಿಭಟನೆ, ಪ್ರತಿರೋಧಗಳನ್ನು ಪ್ರಜಾತಂತ್ರದ ಮೇಲಿನ ಸವಾರಿ ಎಂದು ಭಾವಿಸುವುದು ಆಳುವ ವರ್ಗಗಳ ಅಪರಾಧಿ ಪ್ರಜ್ಞೆಯ ಸಂಕೇತವಾಗಿ ಕಾಣುತ್ತದೆ. ವಾಸ್ತವ ಸಂಗತಿ ಎಂದರೆ ಈ ದೇಶದ ವ್ಯವಸ್ಥೆ ಹಳಿ ತಪ್ಪಿ ಎಷ್ಟೋ ವರ್ಷಗಳಾಗಿವೆ. ಹಳಿಗಳನ್ನು ಸರಿಪಡಿಸಲು ಆಳ್ವಿಕರು ಶ್ರಮಪಡದಿದ್ದರೂ ಮುಗ್ಗರಿಸಿ ಮುನ್ನಡೆಯುತ್ತಿರುವ ಬಂಡಿಯನ್ನು ಸರಿದಾರಿಗೆ ತರಲು ಈ ದೇಶದ ಸಾರ್ವಭೌಮ ಪ್ರಜೆಗಳು ಪ್ರಯತ್ನಿಸುತ್ತಲೇ ಇದ್ದಾರೆ. ಈ ಪ್ರಯತ್ನದಲ್ಲಿ ಕೆಲವು ಅತಿರೇಕಗಳು ಸಂಭವಿಸಿರಬಹುದು, ಪ್ರಮಾದಗಳೂ ನಡೆದಿರಬಹುದು. ಇಲ್ಲಿ ಜೆಪಿ, ಹಜಾರೆ, ರಾಂದೇವ್ ಎಲ್ಲರೂ ಅಪ್ರಸ್ತುತ. ಈ ನೇತಾರರು ನಿರ್ವಹಿಸಿದ ಹೋರಾಟಗಳ ವೈಖರಿ ಅಥವಾ ಸಾಫಲ್ಯ ವೈಫಲ್ಯಗಳೂ ಅಪ್ರಸ್ತುತ. ಇವುಗಳ ಸತ್ಯಾಸತ್ಯತೆಗಳನ್ನು, ಸಾರ್ಥಕತೆಯನ್ನು ಇತಿಹಾಸವೇ ನಿರ್ಧರಿಸುತ್ತದೆ. ಆದರೆ ಒಬ್ಬ ರಾಂದೇವ್, ಒಬ್ಬ ಹಜಾರೆ ಇಡೀ ದೇಶದ ಸಾರ್ವಭೌಮ ಪ್ರಜೆಗಳನ್ನು ಪ್ರತಿನಿಧಿಸುವ ಏಕಮಾದ್ವಿತೀಯ ಪ್ರತಿನಿಧಿಯಾಗುವುದಿಲ್ಲ. ಹೋರಾಟದ ಹಾದಿಯಲ್ಲಿ ಕಂಡುಬರಬಹುದಾದ ಸರಿ ತಪ್ಪುಗಳನ್ನು ಒಪ್ಪಿಕೊಳ್ಳುತ್ತಲೇ ಜನಸಾಮಾನ್ಯರನ್ನು ಬಾಧಿಸುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಸಾಮಥ್ರ್ಯ ಯಾವುದೇ ಪ್ರಜ್ಞಾವಂತ ಸಮಾಜಕ್ಕೆ ಇದ್ದೇ ಇರುತ್ತದೆ. 1967ರಲ್ಲಿ ದೇಶದ ಆಡಳಿತ ಯಂತ್ರವನ್ನೇ ಅಲುಗಾಡಿಸಿ, ಆಳುವ ವರ್ಗಗಳನ್ನು ಚಿಂತಾಕ್ರಾಂತರನ್ನಾಗಿ ಮಾಡಿದ ನಕ್ಸಲ್ ಚಳುವಳಿ ಇಂದಿಗೂ ತನ್ನ ಸಂಪೂರ್ಣ ಪ್ರಭಾವ ಬೀರುವಲ್ಲಿ ವಿಫಲವಾಗಿರುವುದೇ ಜನಸಮೂಹಗಳ ಪ್ರಜ್ಞೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಭಾರತದ ಜನತೆ ಆಳುವ ವರ್ಗಗಳ ತಪ್ಪು ಒಪ್ಪುಗಳನ್ನು ಪರಾಮಶರ್ಿಸುವಂತೆಯೇ ಹೋರಾಟಗಳ ರೂಪುರೇಷೆಗಳನ್ನು ಪರಾಮಶರ್ಿಸುವ ಸಾಮಥ್ರ್ಯವನ್ನೂ ಹೊಂದಿದ್ದಾರೆ. ಹಾಗಾಗಿಯೇ ಟೀಂ ಅಣ್ಣಾ ಅಥವಾ ರಾಂದೇವ್ ಸಹ ತಮ್ಮ ಹೋರಾಟದ ಮಾರ್ಗಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಒಂದು ಪ್ರಬುದ್ಧ ಪ್ರಜ್ಞಾವಂತ ಸಮಾಜವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು ಜನರ ಪ್ರತಿಭಟನೆಗಳು ವ್ಯವಸ್ಥೆಯ ಹಳಿ ತಪ್ಪಿಸುತ್ತವೆ ಎಂದು ಹೇಳಿರುವುದನ್ನು ನೋಡಿದರೆ, ಮಾನ್ಯ ಪ್ರಣಬ್ ಮುಖಜರ್ಿಯವರು ಇನ್ನೂ ಕಾಂಗ್ರೆಸ್ ಛಾಯೆಯಿಂದ ಹೊರಬಂದಿಲ್ಲ ಎಂದು ಸ್ಪಷ್ಟವಾಗುತ್ತದೆ. ತಪ್ಪು ಹಳಿಗಳ ಮೇಲೆ ಚಲಿಸುತ್ತಿರುವ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನಗಳನ್ನೇ ದೇಶವಿರೋಧಿ ಎಂದು ಬಿಂಬಿಸುವ ಮೂಲಕ ಈ ದೇಶದ ಪ್ರಭುತ್ವ ಪ್ರತಿಭಟನೆಯ ದನಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದ ಪ್ರಥಮ ಪ್ರಜೆಯಾಗಿ ರಾಷ್ಟ್ರಪತಿಗಳು ಸಂವಿಧಾನ ಪ್ರಜೆಗಳಿಗೆ ನೀಡಿರುವ ಸಾರ್ವಭೌಮ ಹಕ್ಕುಗಳನ್ನು ನಿರಾಕರಿಸುವ ರೀತಿಯಲ್ಲಿ ಮಾತನಾಡುವುದು ವಿಪಯರ್ಾಸ. ಇಲ್ಲಿ ವ್ಯಾಧಿಯಾಗಿ ಕಾಣುವುದು ಈ ದೇಶದ ರಾಜಕೀಯ-ಆಡಳಿತ ವ್ಯವಸ್ಥೆಯೋ ಅಥವಾ ಜನತೆಯ ಪ್ರತಿಭಟನೆಯ ದನಿಯೋ ಎನ್ನುವುದನ್ನು ಇತಿಹಾಸವೇ ನಿರ್ಧರಿಸುತ್ತದೆ.]]>

‍ಲೇಖಕರು G

August 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

೧ ಪ್ರತಿಕ್ರಿಯೆ

 1. shashidhar

  what we can expect from the series of the rubber stamps…miracle..? atleast in their BHASHANA…?
  ……………Fools are with tremendous confidence and the genius are with full of doubts…..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: