ನಾ ದಿವಾಕರ ಕಾಲ೦ : ಭ್ರಷ್ಟೋ ರಕ್ಷತಿ ರಕ್ಷಿತಃ …

ಭ್ರಷ್ಟೋ ರಕ್ಷತಿ ರಕ್ಷಿತಃ ರಾಜಕಾರಣದ ಹೊಸ ಮಂತ್ರ

– ನಾ ದಿವಾಕರ್ ನೀನು ಧರ್ಮವನ್ನು ರಕ್ಷಿಸಿದರೆ ಧರ್ಮ ನಿನ್ನನ್ನು ರಕ್ಷಿಸುತ್ತದೆ ಎಂಬುದು ವೇದಗಳಲ್ಲಿ ಹೇಳಿರಬಹುದಾದ ಒಂದು ಘೋಷಣೆ. ಇದನ್ನೇ ಪರಿಸರವಾದಿಗಳು ವೃಕ್ಷಗಳಿಗೂ ಅನ್ವಯಿಸಿ ವೃಕ್ಷೊ ರಕ್ಷತಿ ರಕ್ಷಿತಃ ಅಂದರೆ ನಾವು ಮರಗಳನ್ನು ರಕ್ಷಿಸಿದರೆ ಮರಗಳು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳುತ್ತಾರೆ. ಇದೇ ಜಾಡಿನಲ್ಲಿ ನಮ್ಮ ರಾಜಕೀಯ ನೇತಾರರು ಈಗ ಭ್ರಷ್ಟೋ ರಕ್ಷತಿ ರಕ್ಷಿತಃ ಎಂಬ ಹೊಸ ವೇದಘೋಷವನ್ನು ಹುಟ್ಟುಹಾಕಿದ್ದಾರೆ. ಸಕರ್ಾರಗಳು ಭ್ರಷ್ಟರನ್ನು ರಕ್ಷಿಸಿದರೆ ಭ್ರಷ್ಟರು ಸಕರ್ಾರವನ್ನು ಕಾಪಾಡುತ್ತಾರೆ. ಮುಳುಗುವ ಜೀವಕ್ಕೆ ಹುಲ್ಲುಕಡ್ಡಿಯೂ ಆಸರೆಯಾಗುವಂತೆ ರಾಜಕೀಯ ಭ್ರಷ್ಟತೆಯಿಂದ ಕಲುಷಿತಗೊಂಡು, ಅನೈತಿಕತೆಯಿಂದ ಮಲಿನಗೊಂಡು, ಅಸಭ್ಯತೆಯಿಂದ ಪ್ರಕ್ಷುಬ್ಧವಾಗಿ, ಅರಾಜಕತೆಯಿಂದ ಅಲ್ಲೋಲಕಲ್ಲೋಲವಾಗಿರುವ ಅಧಿಕಾರ ರಾಜಕಾರಣ ಎಂಬ ನದಿಯಲ್ಲಿ ಮುಳುಗುತ್ತಿರುವ ರಾಜಕೀಯ ಪಕ್ಷಗಳನ್ನು ಜೀವಂತವಾಗಿರಿಸಲು, ದಡ ಸೇರಿಸಲು ಪ್ರತಿಯೊಬ್ಬ ಶಾಸಕರೂ ಆಸರೆಯಾಗುತ್ತಾರೆ. ಇಲ್ಲಿ ಯಾರೂ ಸಹ ನಾಚಿಕೆಯಿಂದ ತಲೆ ತಗ್ಗಿಸುವ ಅವಶ್ಯಕತೆ ಇಲ್ಲ. ಎಲ್ಲವೂ ಅನಿವಾರ್ಯ. ಪಾಪ ಅವರು ತಾನೇ ಏನು ಮಾಡಿಯಾರು. ವ್ಯವಸ್ಥೆಯೇ ಕುಲಗೆಟ್ಟು ಹೋಗಿದೆ. ನಮ್ಮ ನಗರಗಳ ರಸ್ತೆ, ಚರಂಡಿಗಳಂತೆ. ಎಷ್ಟು ದುರಸ್ತಿ ಮಾಡಿದರೂ ಅಷ್ಟೇ. ಸಾರ್ವಭೌಮ ಪ್ರಜೆಗಳೂ ಒಮ್ಮೆ ಕುಳಿತು ಯೋಚಿಸಬೇಕು. ನಾವು ನಮ್ಮ ಪ್ರತಿನಿಧಿಗಳನ್ನು ಚುನಾಯಿಸುವುದಾದರೂ ಏಕೆ ? ಐದು ವರ್ಷಕ್ಕೊಮ್ಮೆ ನಮ್ಮ ಬಳಿ ಮತಯಾಚನೆಗೆ ಬರುವ ರಾಜಕೀಯ ನೇತಾರರಿಗೆ ಯಾವ ವಿಶ್ವಾಸದ ಮೇಲೆ ಮತ ನೀಡುತ್ತೇವೆ ? ಪಕ್ಷ ನಿಷ್ಠೆ, ಜಾತಿ ನಿಷ್ಠೆ, ಪ್ರಾದೇಶಿಕ ನಿಷ್ಠೆ ಹೀಗೆ ನಿಷ್ಠೆಯ ಸ್ವರೂಪ ಏನೇ ಇರಲಿ, ಇವ ನಮ್ಮವ ಎಂಬ ಭಾವನೆ ನಮ್ಮೊಳಗೂ ಹಾಸುಹೊಕ್ಕಿದೆಯೇ ? ಇರಲಿ, ಎಲ್ಲರೂ ನಮ್ಮವರೇ. ಎಷ್ಟಾದರೂ ವಸುದೈವ ಕುಟುಂಬಕಂ ಪರಂಪರೆಯವರಲ್ಲವೇ ? ಎಲ್ಲಿಯವರೆಗೂ ನಮ್ಮವರೆಂದು ರಿಯಾಯಿತಿ ನೀಡಲು ಸಾಧ್ಯ ? ಜಾತಿ ರಾಜಕಾರಣದ ಬೇರುಗಳು ಎಷ್ಟು ಆಳವಾಗಿ ಬೇರೂರಿವೆ ಎಂದರೆ ಸುನಾಮಿ ಆದರೂ ಕಿತ್ತುಹೋಗಲಾರದು. ಇದಕ್ಕೆ ಕಾರಣರಾರು ? ಎಲ್ಲೋ ಒಂದೆಡೆ ಮತದಾರ ಪ್ರಭುಗಳು ಅಸ್ಮಿತೆಗಳ ಜಾಡಿನಲ್ಲಿ ಸಿಲುಕಿದ್ದಾರೆ ಎನಿಸುವುದಿಲ್ಲವೇ ? ಪಕ್ಷ, ಸಿದ್ಧಾಂತ, ತತ್ವಗಳೇನೇ ಇದ್ದರೂ ವಾಸ್ತವ ಸನ್ನಿವೇಶದಲ್ಲಿ ಜನರನ್ನು ಪ್ರತಿನಿಧಿಸುವ ರಾಜಕಾರಣಿಗಳಲ್ಲಿ ಈ ತತ್ವಗಳು ಕಾಣುತ್ತವೆಯೇ ಎಂದು ಒಮ್ಮೆಯಾದರೂ ನಾವು ಯೋಚಿಸುತ್ತೇವೆಯೇ ? ವಾಜಪೇಯಿಯವರ ಮುಖ ನೋಡಿ ಯಡಿಯೂರಪ್ಪನವರಿಗೆ ಮತ ನೀಡಿದ ಕನರ್ಾಟಕದ ಜನತೆಗೆ ಈಗ ಜ್ಞಾನೋದಯವಾಗಿರಬೇಕಲ್ಲವೇ ? ಇಲ್ಲಿ ವಿಶಿಷ್ಟ ರಾಜಕಾರಣ ನಡೆಯುತ್ತಿದೆ. ಮುಖ್ಯಮಂತ್ರಿ ಎಂಬ ಸಂವಿಧಾನದತ್ತ ಹುದ್ದೆ ಮಾರುಕಟ್ಟೆಯಲ್ಲಿನ ಕೊಳೆತ ತರಕಾರಿಯಂತಾಗಿದೆ. ಕೆಲವರಿಗೆ ಅಪಥ್ಯ, ಕೆಲವರಿಗೆ ಅದೇ ಪ್ರಿಯ. ಕೊಳೆತಿದ್ದರೂ ಪರವಾಗಿಲ್ಲ ತೊಳೆದು ತಿಂದರಾಯಿತು ಎಂದು ಹೇಳುವವರೂ ಇದ್ದಾರೆ. ಈ ತರಕಾರಿಯನ್ನು ಹಂಚಲು ಪಕ್ಷದ ನಾಯಕರುಗಳು ದಲ್ಲಾಳಿಗಳಂತೆ ಹರಾಜು ಕೂಗುತ್ತಾರೆ. ಅತಿ ಹೆಚ್ಚು ಬೆಲೆ ನೀಡುವವರಿಗೆ ಇದು ಲಭ್ಯವಾಗುತ್ತದೆ. ಒಂದುಸಾರಿ, ಎರಡು ಸಾರಿ, ಮೂರು ಸಾರಿ ಎಂದು ಕೂಗುವಷ್ಟರಲ್ಲಿ ಪದಾರ್ಥದ ಮೌಲ್ಯ ವೃದ್ಧಿಯಾಗಿ, ಗುಣಮಟ್ಟ ಮತ್ತಷ್ಟು ಕೆಟ್ಟುಹೋಗಿರುತ್ತದೆ. ಇದು ಪ್ರಜಾತಂತ್ರ, ಇಲ್ಲಿ ಜನತೆಯ ಅಭಿಪ್ರಾಯಕ್ಕೂ ಮನ್ನಣೆ ಇದೆ, ಸಾರ್ವಭೌಮ ಪ್ರಜೆಗಳು ತಮ್ಮನ್ನು ಚುನಾಯಿಸಿದ್ದಾರೆ ಎಂಬ ಕನಿಷ್ಠ ಸೌಜನ್ಯಯುತ ಗೌರವವೂ ಇಲ್ಲದೆ ವತರ್ಿಸುವ ರಾಜಕೀಯ ಪಕ್ಷಗಳು ರಾಜ್ಯದ ಆಡಳಿತ ಚುಕ್ಕಾಣಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕಾದವರಿಗೆ ನೀಡುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯ ಅಪಹಾಸ್ಯವಲ್ಲದೆ ಮತ್ತೇನು ? ಹೇಗಿದ್ದ ಹೇಗಾದ ನಮ್ಮ ಪುಟ್ನಂಜ ಎಂಬಂತೆ ನಮ್ಮ ಪ್ರಜಾತಂತ್ರ ಹೇಗಾಗಿದೆ ನೋಡಿ. ಪ್ರಜಾತಂತ್ರದ ವ್ಯಾಖ್ಯಾನವೇ ಬದಲಾಗಿ ಹೋಗಿದೆ. ಪ್ರಜೆಗಳನ್ನು ಅತಂತ್ರ ಸ್ಥಿತಿಯಲ್ಲಿರಿಸುವುದು, ಪ್ರಜೆಗಳ ವಿರುದ್ಧವೇ ತಂತ್ರ ಹೂಡುವುದು ಪ್ರಜಾತಂತ್ರದ ಆಶಯವಾಗಿ ಹೋಗಿದೆ. ಕೇಳುವವರಾರಿದ್ದಾರೆ ? ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಆಡಳಿತವೇ ಇಲ್ಲವಾಗಿದೆ. ಈಗ ಹಠಾತ್ತನೆ ಮೂವರು ಮುಖ್ಯಮಂತ್ರಿಗಳು ! ಅದರಲ್ಲಿ ಇಬ್ಬರು ಉಪ ಎಂಬ ಉಪನಾಮ ಹೊತ್ತ ಮುಖ್ಯಮಂತ್ರಿಗಳು. ಬೊಕ್ಕಸದ ಪಾಲಿಗೆ ಬಿಳಿ ಆನೆಗಳು, ಜನರ ಪಾಲಿಗೆ ಏನೂ ಅಲ್ಲದವರು. ಮುಖ್ಯಮಂತ್ರಿಗಳು ಇಲ್ಲದೆಯೇ ಹಲವು ತಿಂಗಳುಗಳ ಕಾಲ ರಾಜ್ಯಭಾರ ನಡೆದ ರಾಜ್ಯಕ್ಕೆ ಮೂವರು ಸಾರಥಿಗಳು ಬೇಕೇ ? ಹೌದು ಬೇಕು, ಕಾರಣ ರಾಜ್ಯದ ಪ್ರಗತಿ, ಜನರ ಹಿತಾಸಕ್ತಿ ಏನೂ ಅಲ್ಲ. ಕಾರಣ ಜಾತಿ, ಜಾತಿ ಮತ್ತು ಜಾತಿ. ವಿಪಯರ್ಾಸವೆಂದರೆ ಕನರ್ಾಟಕದ ರಾಜಕಾರಣದಲ್ಲಿ ಇಂದು ವ್ಯಕ್ತಿಗಳಿಗೆ ಬೆಲೆಯೇ ಇಲ್ಲ. ಜಾತಿಗಳಿಗೆ ಮಾತ್ರ ಬೆಲೆ. ಮುಖ್ಯಮಂತ್ರಿ ಪದವಿಗೆ ಲಿಂಗಾಯತರೇ ಅರ್ಹರು. ಪಕ್ಷದ ಅಧ್ಯಕ್ಷ ಪದವಿಗೆ ಗೌಡರೇ ಅರ್ಹರು, ಹೀಗೆ ಎಲ್ಲವೂ ಜಾತಿ ಲೆಕ್ಕಾಚಾರ. ನಾವೆಲ್ಲರೂ ಹಿಂದು ನಾವೆಲ್ಲರೂ ಒಂದು ಎಂಬ ಮಂತ್ರ ಜಪಿಸುತ್ತಲೇ ಅಧಿಕಾರದ ಗದ್ದುಗೆ ಏರಿದ ಹಿಂದುತ್ವವಾದಿಗಳ ಸಕರ್ಾರ ಇಂದು ಎಲ್ಕೆಜಿ ಸಕರ್ಾರವನ್ನು ರಚಿಸಿ, ಲಿಂಗಾಯತ-ಕುರುಬ-ಗೌಡರ ತ್ರಿಮುಖ ಬ್ರಹ್ಮನನ್ನು ಸೃಷ್ಟಿಸಿದೆ. ಉಪಮುಖ್ಯಮಂತ್ರಿಗಳ ಕಾರ್ಯವ್ಯಾಪ್ತಿಯೇನು, ಕರ್ತವ್ಯಗಳೇನು ಇದರಿಂದ ಯಾರಿಗೆ ಉಪಯೋಗ ಇದಾವುದರ ಪರಿವೆಯೂ ಆಳ್ವಿಕರಿಗಿಲ್ಲ. ಇರುವುದೊಂದೇ ಕಾಳಜಿ, ಇನ್ನು ಹನ್ನೊಂದು ತಿಂಗಳು ಅಧಿಕಾರದಲ್ಲಿರುವುದು. ಇಡೀ ಸಂಪುಟವನ್ನೇ ಮುಖ್ಯಮಂತ್ರಿಗಳನ್ನಾಗಿ ಮಾಡಿದರೂ ನಡೆದೀತು, ಏಕೆಂದರೆ ಪ್ರಜೆಗಳು ಪ್ರಶ್ನಿಸುತ್ತಿಲ್ಲ. ವಿರೋಧ ಪಕ್ಷಗಳು ಎಚ್ಚೆತ್ತೇ ಇಲ್ಲ. ನೂತನ ಮುಖ್ಯಮಂತ್ರಿಗಳಿಗೆ ಪರಾಕ್ ಹೇಳುವ ಪ್ರಕ್ರಿಯೆ ಇನ್ನು ಆರಂಭವಾಗುತ್ತದೆ. ಹನ್ನೊಂದು ತಿಂಗಳ ಹಿಂದೆ ಭ್ರಷ್ಟಾತಿಭ್ರಷ್ಟ ಮುಖ್ಯಮಂತ್ರಿಯ ಕೃಪೆಯಿಂದ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಸದಾನಂದಗೌಡರನ್ನು ಇಂದಿಗೂ ಸಜ್ಜನ ರಾಜಕಾರಣಿ, ಸ್ವಚ್ಚ ಆಡಳಿತಗಾರ, ನಿಷ್ಠಾವಂತ ಜನಸೇವಕ ಎಂದೆಲ್ಲಾ ಬಣ್ಣಿಸಲಾಗುತ್ತಿದೆ. ಹಿಂದುತ್ವದ ಪ್ರತಿಪಾದಕರಾಗಿದ್ದ ಸದಾನಂದರು ಹಠಾತ್ತನೆ ಒಕ್ಕಲಿಗರ ಕಣ್ಮಣಿಯಾಗಿಬಿಟ್ಟಿದ್ದಾರೆ. ಈಗ ಅದೇ ಭ್ರಷ್ಟಾತಿಭ್ರಷ್ಟ ಮಾಜಿ ಸಿಎಂ ಮತ್ತೊಂದು ಸೂತ್ರದ ಗೊಂಬೆಯನ್ನು ಗದ್ದುಗೆಯ ಮೇಲೆ ಕೂರಿಸಿದ್ದಾರೆ. ಇವರ ಬಗ್ಗೆಯೂ ಅದೇ ಭೋಪರಾಕ್ ಹೇಳಲಾಗುತ್ತಿದೆ. ಆದರೆ ಇಲ್ಲಿ ವಸ್ತುನಿಷ್ಠವಾದ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ರಾಜ್ಯದ ರಾಜಕೀಯ ಕ್ಷೇತ್ರವನ್ನು ಸರಕು ಮಾರುಕಟ್ಟೆಯಂತೆ ಮಾಡಿ, ಪಕ್ಷಾಂತರ ಪ್ರಕ್ರಿಯೆಗೆ ಅಧಿಕೃತ ಮೊಹರು ಒತ್ತಿದ ಆಪರೇಷನ್ ಕಮಲ ಎಂಬ ಮಾರುಕಟ್ಟೆ ಪ್ರಕ್ರಿಯೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಸುಸೂತ್ರವಾಗಿ ನೆರವೇರಿಸಿದ ಸದಾನಂದಗೌಡ ಸ್ವಚ್ಚ-ಪ್ರಾಮಾಣಿಕ ಆಡಳಿತಗಾರ ಹೇಗಾಗುತ್ತಾರೆ. ಯಡಿಯೂರಪ್ಪ ಮಂತ್ರಿಮಂಡಲದ ಭ್ರಷ್ಟಾಚಾರ ಹಗರಣಗಳನ್ನು, ಜನಾರ್ಧನರೆಡ್ಡಿಯವರಂತಹ ಭ್ರಷ್ಟ ಮಂತ್ರಿಗಳನ್ನು ಸಹಿಸಿಕೊಂಡು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸದಾನಂದಗೌಡ ನಿಜಕ್ಕೂ ಸಂವಿಧಾನಕ್ಕೆ ನಿಷ್ಠರಾಗಿದ್ದಲ್ಲಿ ಆಗಲೇ ತಮ್ಮ ಪದವಿಗೆ ರಾಜೀನಾಮೆ ನೀಡುತ್ತಿದ್ದರು. ಆದರೆ ನಡೆದದ್ದೇ ಬೇರೆ. ತಮ್ಮ ಆಪರೇಷನ್ ಹೇಗೆ ನಡೆದಿದೆ ಎಂದು ನೋಡಲು ತಾವೇ ಅಧಿಕಾರದ ಗದ್ದುಗೆ ಏರಿದರು. ಭ್ರಷ್ಟರನ್ನು ವಿರೋಧಿಸಿದರೆ ಸಾಲದು, ಭ್ರಷ್ಟರ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದು ಅಕ್ಷಮ್ಯ ಅಪರಾಧವೇ ಆಗುತ್ತದೆ. ಇನ್ನು ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಇದೇ ರೀತಿ ಹಾಡಿ ಹೊಗಳಲಾಗುತ್ತಿದೆ. ಮುಂದೆಯೂ ಹೊಗಳಲಾಗುತ್ತದೆ. ಆದರೆ ಹುಬ್ಬಳ್ಳಿಯ ಈದ್ಗಾ ವಿವಾದ ತಲೆದೋರಿದಾಗ, ಬಾಬಾಬುಡನ್ ಗಿರಿ ವಿವಾದದಲ್ಲಿ ಶೆಟ್ಟರ್ ಯಾವ ನಿಲುವು ತಾಳಿದ್ದರು ? ಇದು ಎಲ್ಲಾದರೂ ಪ್ರಸ್ತಾಪವಾಗಿದೆಯೇ ? ಅಥವಾ ಮತ್ತೊಬ್ಬ ವಾಜಪೇಯಿಯನ್ನು ಕನರ್ಾಟಕದಲ್ಲಿ ಹುಡುಕುತ್ತಿದ್ದೇವೆಯೇ ? ಇವರೂ ಆಪರೇಷನ್ ಕಮಲ ಮತ್ತು ರೆಡ್ಡಿ ಧಣಿಗಳನ್ನು ಸಹಿಸಿಕೊಂಡವರೇ ಅಲ್ಲವೇ ? ಆದರೂ ಪ್ರಾಮಾಣಿಕರೆಂದೇ ಪರಿಗಣಿಸಲು ಕನರ್ಾಟಕದ ಜನ ಅಬ್ಬೇಪಾರಿಗಳೇ ? ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಅನಂತಕುಮಾರ್ ಎಲ್ಲರೂ ಚಡ್ಡಿ ಧರಿಸಿ ಕೋಮುವಾದಿ ರಾಜಕೀಯದಲ್ಲಿ ಮೆರೆದವರೇ. ಇವರೆಲ್ಲರನ್ನೂ ಬಂಧಿಸುವ ಒಂದು ಸೂತ್ರ ನಾಗಪುರದಲ್ಲಿದೆ. ಈ ನಾಯಕರುಗಳ ನಿಷ್ಠೆ ಇರುವುದು ಸಂಘಪರಿವಾರ ಮತ್ತು ಭಗವದ್ವಜಕ್ಕೇ ಹೊರತು, ಪ್ರಜಾಸತ್ತಾತ್ಮಕ ವ್ಯವಸ್ಥೆಗಲ್ಲ. ಮೇಲಾಗಿ ಈ ಎಲ್ಲ ನಾಯಕರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಭ್ರಷ್ಟರನ್ನು ರಕ್ಷಿಸಿದವರೇ. ಹಾಗಾಗಿಯೇ ಭ್ರಷ್ಟತೆ ಇವರನ್ನು ರಕ್ಷಿಸುತ್ತಿದೆ. ಭ್ರಷ್ಟೋ ರಕ್ಷತಿ ರಕ್ಷಿತಃ !    ]]>

‍ಲೇಖಕರು G

July 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

೧ ಪ್ರತಿಕ್ರಿಯೆ

  1. u s mahesh

    ಸದಾನಂದಗೌಡರು ಜನತೆಗೆ,ಮಾದ್ಯಮಕ್ಕೆ ಎಸಗಿದ ಮಂಕುಬೂದಿಯನ್ನು ಚನ್ನಾಗಿ ಆನಾವರಣಗೋಳಿಸಿದ್ದೀರಿ. ಓಟ್ಟಾರೆ ಎಲ್ಲಾ ಬಿಜೆಪಿ ನಾಯಕಮಣಿಗಳು ಸೇರಿ ಕರ್ನಾಟಕದ ಜನತೆಗೆ ಅವಮಾನ ಮಾಡಿದ್ದಾರೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ u s maheshCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: