ನಾ ದಿವಾಕರ ನೇರ ನುಡಿ: ಆತ್ಮಸಾಕ್ಷಿ ಸತ್ತುಹೋಗಿದೆಯೇ ?

ನಾ ದಿವಾಕರ ಆರು ದಶಕಗಳ ಸ್ವಾತಂತ್ರ್ಯ ಮತ್ತು ಸಾರ್ವಭೌಮ ಆಡಳಿತದ ನಂತರ ಭಾರತೀಯ ಸಮಾಜ ಒಂದು ಪ್ರಬುದ್ಧ ಸಮಾಜವಾಗುವತ್ತ ದಿಟ್ಟ ಹೆಜ್ಜೆ ಹಾಕುತ್ತಿದೆ ಎಂದು ಭಾವಿಸಿರುವ ಆಶಾವಾದಿಗಳಿಗೆ ಕಳೆದ ಒಂದು ವರ್ಷದ ಘಟನೆಗಳು ನಿರಾಸೆ ಮೂಡಿಸಿದರೆ ಅಚ್ಚರಿಯೇನಿಲ್ಲ. ಇತ್ತೀಚಿನ ದಿನಗಳಲ್ಲಿ ನಾಗರೀಕ ಸಮಾಜದಲ್ಲಿ ಸಂಭವಿಸುತ್ತಿರುವ ಕೆಲವು ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಘಟನೆಗಳು, ಪ್ರಬುದ್ಧ, ಪ್ರಜ್ಞಾವಂತ ಜನತೆಯ ಸುಪ್ತ ಪ್ರಜ್ಞೆಯನ್ನೇ ಬಡಿದೆಬ್ಬಿಸುವಂತಿವೆ. ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳಾದ ನಾವು ಒಂದು ಸುಶಿಕ್ಷಿತ, ಮೌಲ್ಯಯುತ ಸಮಾಜದಲ್ಲಿ ಬಾಳುತ್ತಿದ್ದೇವೆ ಎಂದು ಹೇಳಿಕೊಳ್ಳಲೂ ಹಿಂಜರಿಯುವಂತಹ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ ಎನಿಸುತ್ತದೆ. ಭಾರತೀಯ ಸಮಾಜ ಭ್ರಷ್ಟಾಚಾರ, ಜಾತಿ ದೌರ್ಜನ್ಯ , ಸಾಂಸ್ಕೃತಿಕ ಅನೈತಿಕತೆ, ಅಮಾನವೀಯ ಆಚರಣೆ ಇಂತಹ ಹಲವು ಋಣಾತ್ಮಕ ವಿದ್ಯಮಾನಗಳಿಗೆ ಒಗ್ಗಿಹೋಗಿದೆ. ಈ ಅನಿಷ್ಟಗಳೆಲ್ಲವೂ ತೊಡೆದುಹಾಕಬೇಕಾದ ಸಾಂಕ್ರಾಮಿಕ ರೋಗಗಳು ಎಂಬ ಅನಿಸಿಕೆ ಗಾಢವಾಗುತ್ತಿದ್ದಾಗ್ಯೂ ಎಲ್ಲೊ ಒಂದೆಡೆ ಸಾರ್ವತ್ರಿಕ ಹತಾಶೆ, ಸಿನಿಕತೆ ಆವರಿಸಿದೆ. ಯಾವುದೇ ಒಂದು ಆಧುನಿಕ, ಸುಶಿಕ್ಷಿತ ಪ್ರಬುದ್ಧ ಸಮಾಜದಲ್ಲಿ ಕೆಲವು ಮಾದರಿಗಳು, ಆದರ್ಶಗಳು, ಮೌಲ್ಯಗಳು ಪ್ರಧಾನ ಭೂಮಿಕೆ ನಿರ್ವಹಿಸುತ್ತವೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಲು, ಜನಸಾಮಾನ್ಯರ ನಡೆನುಡಿಗಳಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಲು, ಮಾನವ ಸಮಾಜದ ಪ್ರಗತಿಗೆ ಅಡ್ಡಿಯಾಗುವಂತಹ ಕೆಲವು ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಲು ಈ ಮೌಲ್ಯಗಳು, ಅದರ್ಶಗಳು ನೆರವಾಗುತ್ತವೆ. ಇಂತಹ ನೈತಿಕ ಮೌಲ್ಯಗಳನ್ನು ಜನಸಾಮಾನ್ಯರ ಮನದಾಳದಲ್ಲಿ ಬಿತ್ತುವ ಕೆಲವೇ ಆದರ್ಶಪ್ರಾಯ ದಾರ್ಶನಿಕರು ಭಾರತೀಯ ಸಮಾಜದಲ್ಲಿ ಆಗಿಹೋಗಿದ್ದಾರೆ. ಇಂತಹ ದಾರ್ಶನಿಕರ ಜೀವನ ಗಾಥೆಗಳೇ ಸಮಾಜಕ್ಕೆ ಜೀವನ ಸಂದೇಶವಾಗಿ ಪರಿಣಮಿಸುತ್ತವೆ. ಭಾರತದ ಸಂದರ್ಭದಲ್ಲೇ ನೋಡಿದರೆ ಇಂತಹ ದಾರ್ಶನಿಕರ ಸಂಖ್ಯೆ ಹೇರಳವಾಗಿದೆ. ಆದರೂ ಮೌಲ್ಯಾಧಾರಿತ ಎಂದಾಕ್ಷಣ ಥಟ್ಟನೆ ನಮಗೆ ರಾಜಕಾರಣ ಎದುರಾಗುತ್ತದೆ. ರಾಜಕಾರಣವನ್ನು ಹೊರತುಪಡಿಸಿಯೂ ಕೆಲವು ಮೌಲ್ಯಗಳು ಸಮಾಜದ ಮುನ್ನಡೆಗೆ ಸಹಕಾರಿಯಾಗುತ್ತವೆ ಎಂಬ ಅಂಶವನ್ನು ಬಹುತೇಕ ಸಂಕಥನಗಳಲ್ಲಿ ಮರೆಮಾಚಲಾಗುತ್ತದೆ.   ಭಾರತದ ರಾಜಕಾರಣ ಭ್ರಷ್ಟತೆಯ ಪಾತಾಳ ತಲುಪಿದೆ. ಇದು ಸಂಶಯಾತೀತ ಅಭಿಪ್ರಾಯ. ಇದಕ್ಕೆ ಕಾರಣಗಳೂ ಹಲವಾರು. ಮಾನವನನ್ನು ಮಾನವನಂತೆ ಕಾಣದ ಜಾತಿ ವ್ಯವಸ್ಥೆಯನ್ನು ಇಂದಿಗೂ ತನ್ನ ಒಡಲಲ್ಲಿ ಪೋಷಿಸುತ್ತಿರುವ ಭಾರತೀಯ ಸಂಸ್ಕೃತಿಯಲ್ಲೇ ಅಡಗಿರುವ ಭ್ರಷ್ಟಪರಂಪರೆ ಈಗ ವಿಭಿನ್ನ ಸ್ವರೂಪಗಳಲ್ಲಿ ಅನಾವರಣಗೊಳ್ಳುತ್ತಿದೆ. ಆಳುವ ವರ್ಗಗಳ ಅಧಿಕಾರ ದಾಹ, ಶ್ರೀಮಂತ ವರ್ಗದ ಲಾಭಕೋರತನ, ಕಾಪರ್ೋರೇಟ್ ಉದ್ಯಮದ ವಸಾಹತು ಧೋರಣೆ ಇವೆಲ್ಲವೂ ರಾಜಕೀಯ ಭ್ರಷ್ಟಾಚಾರಕ್ಕೆ ಸುಭದ್ರ ಅಡಿಪಾಯ ಒದಗಿಸಿವೆ. 2ಜಿ ಹಗರಣವಾಗಲಿ, ಕಾಮನ್ವೆಲ್ತ್ ಹಗರಣವಾಗಲಿ ಉದ್ಭವಿಸುವುದು ಕಾಪರ್ೋರೇಟ್ ಉದ್ಯಮ ಮತ್ತು ರಾಜಕಾರಣಿಗಳ ನಡುವಿನ ಪಬ್ಲಿಕ್ ಪ್ರೈವೇಟ್ ಸಹಕಾರ ತತ್ವದಡಿಯಲ್ಲೇ ಎಂಬ ಸತ್ಯ ಇದೀಗ ಅರಿವಾಗುತ್ತಿದೆ. ರಾಜಾ, ಕನ್ನಿಮೊಳಿ, ಚಿದಂಬರಂ ಮುಂತಾದ ರಾಜಕೀಯ ನಾಯಕರುಗಳನ್ನು ಪ್ರಶ್ನಿಸುವ ನಾಗರಿಕ ಸಮಾಜ ಕಾಪರ್ೋರೇಟ್ ಉದ್ಯಮಿಗಳನ್ನು ಪ್ರಶ್ನಿಸಲಾಗುವುದಿಲ್ಲ ಏಕೆಂದರೆ, ಔದ್ಯಮಿಕ ಕ್ಷೇತ್ರ ಸ್ವತಂತ್ರ ಮತ್ತು ಸಾರ್ವಜನಿಕ ಹೊಣೆಗಾರಿಕೆಯಿಂದ ಹೊರತಾಗಿದೆ. ರಾಜಕೀಯ ಕ್ಷೇತ್ರವೇನೋ ಹದಗೆಟ್ಟಿದೆ ಆದರೆ ಸಾಮಾಜಿಕ ಸ್ತರದಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ, ನ್ಯಾಯಾಂಗ ಕ್ಷೇತ್ರದಲ್ಲಿ ಪರಿಸ್ಥಿತಿ ಭಿನ್ನವಾಗಿದೆಯೇ ಎಂದು ನೋಡಿದಾಗ ನಿರಾಸೆಯಾಗುವ ಸಂಭವವೇ ಹೆಚ್ಚು. ನಾಗರಿಕ ಪ್ರಜ್ಞೆ ಮತ್ತು ಮೌಲ್ಯಗಳು ವ್ಯಕ್ತಿಗತವಾಗಿ ಹೊರಹೊಮ್ಮುತ್ತಲೇ ಒಂದು ಸಾಮಾಜಿಕ, ಸಾಮುದಾಯಿಕ ಆಯಾಮವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ಸಾಮಾಜಿಕ ಪರಿಸರದಲ್ಲಿ ವ್ಯಕ್ತವಾಗುವ ವ್ಯಕ್ತಿಗತ ಮೌಲ್ಯಗಳು ಇಡೀ ಸಮಾಜದ ಬುನಾದಿಯನ್ನೇ ಪ್ರಶ್ನಿಸುವ ರೀತಿಯಲ್ಲಿ ಪ್ರಕಟಗೊಳ್ಳುತ್ತಿರುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ನಿದರ್ಿಷ್ಟವಾದ ಮೌಲ್ಯಯುತ ವಾತಾವರಣವನ್ನು ಸೃಷ್ಟಿಸುವ ಹೊಣೆಗಾರಿಕೆ ಎಲ್ಲ ಪ್ರಜೆಗಳ ಮೇಲೂ ಇರುತ್ತದೆ. ಈ ಹೊಣೆಗಾರಿಕೆಯನ್ನು ಭಾರತೀಯ ಸಮಾಜ ಒಂದು ಸಾಮುದಾಯಿಕ ಪ್ರಜ್ಞೆಯಿಂದ ನಿಭಾಯಿಸಿದೆಯೇ ಎಂದು ನೋಡಿದಾಗ ನಿರಾಸೆಯ ಕಾಮರ್ೋಡ ಕವಿಯುತ್ತದೆ. ಆತ್ಮವಿಶ್ವಾಸ ಇದೆ ಆತ್ಮಸಾಕ್ಷಿ ಇಲ್ಲ ಒಂದು ಪ್ರಬುದ್ಧ ಆಧುನಿಕ ಸಮಾಜದಲ್ಲಿ ಆತ್ಮಸಾಕ್ಷಿಯ ಪ್ರಶ್ನೆ ಹೆಚ್ಚಿನ ಮಹತ್ವ ಪಡೆಯುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಕಳೆದ ಒಂದು ವರ್ಷದಲ್ಲಿ ಭಾರತದ ರಾಜಕಾರಣದಲ್ಲಿ ಅನೇಕ ಭ್ರಷ್ಟಾಚಾರ ಹಗರಣಗಳನ್ನು ಕಂಡು ರೋಸಿ ಹೋಗಿರುವ ಜನಸಾಮಾನ್ಯರಿಗೆ ಎಲ್ಲೋ ಒಂದು ಆಶಾವಾದದ ಬೆಳಕಿನ ಕಿಂಡಿ ಗೋಚರಿಸಿದ್ದರೆ ಅದು ನ್ಯಾಯಾಂಗ ಕ್ಷೇತ್ರದಲ್ಲಿ ಎಂದು ಹೇಳಬಹುದು. ಅಣ್ಣಾ ಹಜಾರೆಯವರ ದೇಶವ್ಯಾಪಿ ಹೋರಾಟವನ್ನೂ ನುಂಗಿ ನೀರುಕುಡಿದ ನವ ಉದಾರವಾದಿ ಆಡಳಿತ ವ್ಯವಸ್ಥೆ ಯಾವುದೇ ಜನಾಂದೋಲನಗಳನ್ನೂ ಊಜರ್ಿತವಾಗಲು ಬಿಡುವುದಿಲ್ಲ ಎಂಬ ಸತ್ಯ ಇದೀಗ ಅರಿವಾಗುತ್ತಿದೆ. ಆದರೂ ಭಾರತದ ಜನತೆಗೆ ನ್ಯಾಯಾಂಗದ ಮೂಲಕ ಒಂದು ಆಶಾಕಿರಣ ಕಾಣಿಸಿಕೊಂಡಿದೆ. ನ್ಯಾಯಾಂಗ ವ್ಯವಸ್ಥೆ ನ್ಯಾಯಾಲಯಗಳ ಮೂಲಕ, ಲೋಕಾಯುಕ್ತದ ಮೂಲಕ ದೇಶದ ಜನತೆಯ ಸಿನಿಕತೆಯನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಇತ್ತೀಚಿನ 2ಜಿ ಹಗರಣದ ತೀಪರ್ಿನಲ್ಲಿ ಸುಪ್ರೀಂ ಕೋಟರ್್ ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳು ಆದರೆ ಕನರ್ಾಟಕದ ಸಂದರ್ಭದಲ್ಲಿ ನೋಡಿದಾಗ ಈ ಭಾವನೆ ಹುಸಿ ಎನಿಸುತ್ತದೆ. ನೂತನ ಲೋಕಾಯುಕ್ತರ ನೇಮಕ ಮಾಡುವ ವಿಚಾರವನ್ನೇ ಪರಿಗಣಿಸಿದಾಗ, ನ್ಯಾಯಾಂಗವನ್ನು ಪ್ರತಿನಿಧಿಸುವ ಉನ್ನತ ವ್ಯಕ್ತಿಗಳೂ ಸಹ ಭ್ರಷ್ಟ ವ್ಯವಸ್ಥೆಯ ಒಂದು ಭಾಗವಾಗಿರುವುದನ್ನು ಕಾಣಬಹುದಾಗಿದೆ. ಪ್ರಗತಿಪರ ಚಳುವಳಿಗಳ ತವರೂರಾದ, ಪ್ರಜ್ಞಾವಂತ ನಾಯಕರ ಮತ್ತು ಸೃಜನಶೀಲ ಸಾಹಿತ್ಯದ ಆಗರವಾದ ಕನರ್ಾಟಕದಲ್ಲಿ ಲೋಕಾಯುಕ್ತ ಸ್ಥಾನಕ್ಕೆ ಸೂಕ್ತ-ಅರ್ಹ-ಸಮರ್ಥ ಅಭ್ಯಥರ್ಿಯನ್ನು ಆಯ್ಕೆ ಮಾಡಲು ಆರು ತಿಂಗಳಿಗೂ ಹೆಚ್ಚು ಕಾಲ ಬೇಕಾಗಿದೆ ಎಂದರೆ ನಮ್ಮ ಪ್ರಜ್ಞಾವಂತಿಕೆಯ ಬಗ್ಗೆಯೇ ಸಂಶಯ ಮೂಡುವುದು ಸಹಜ. ರಾಜಕಾರಣಿಗಳ ಮತ್ತು ಅಧಿಕಾರಶಾಹಿಯ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದೇ ಅಲ್ಲದೆ, ನಿಯಂತ್ರಿಸುವ ನಿಟ್ಟಿನಲ್ಲೂ ಪ್ರಧಾನ ಪಾತ್ರ ವಹಿಸುವ ಲೋಕಾಯುಕ್ತದಂತಹ ಸಾಂವಿಧಾನಿಕ ಸಂಸ್ಥೆಗೆ ಮುಖ್ಯಸ್ಥರನ್ನು ನೇಮಿಸುವಾಗ ಲೋಕಾಯುಕ್ತ ಹುದ್ದೆಯನ್ನು ಅಲಂಕರಿಸುವ ವ್ಯಕ್ತಿಗಳ ವಿಶ್ವಾಸಾರ್ಹತೆ ಅತ್ಯುನ್ನತ ಮಟ್ಟದ್ದಾಗಿರಬೇಕು. ನಿವೃತ್ತ ನ್ಯಾಯಾಧೀಶರಾಗಿ ಅಂತಹ ವ್ಯಕ್ತಿಗಳ ಜೀವನ ಪಾರದರ್ಶಕವಾಗಿರಬೇಕು. ಒಂದು ಸಮಾಜದ ಓರೆಕೋರೆಗಳನ್ನು ತಿದ್ದುವ ಅಧಿಕಾರ ಮತ್ತು ಹೊಣೆಗಾರಿಕೆ ಹೊತ್ತಿರುವ ಲೋಕಾಯುಕ್ತರ ಪ್ರಾಮಾಣಿಕತೆ ಪ್ರಶ್ನಾತೀತವಾಗಿರಬೇಕು. ಈ ಮಾನದಂಡಗಳನ್ನೇ ಪರಿಗಣಿಸಿ ನೋಡಿದಾಗ ಕನರ್ಾಟಕದ ಲೋಕಾಯುಕ್ತ ಸುತ್ತಲಿನ ವಿವಾದ ನಿರಾಸೆ ಮೂಡಿಸುತ್ತದೆ. ತಮ್ಮ ವಿರುದ್ಧ ಹೊರಿಸಲಾಗಿರುವ ಆರೋಪ ಸತ್ಯವೇ ಆಗಿದ್ದಲ್ಲಿ ಮೂವರೂ ವಿವಾದಿತ ನ್ಯಾಯಾಧೀಶರುಗಳು ಖುದ್ದಾಗಿ ಈ ಹುದ್ದೆಯನ್ನು ನಿರಾಕರಿಸಬಹುದಲ್ಲವೇ ? ಇಲ್ಲಿಯೇ ಆತ್ಮಸಾಕ್ಷಿಯ ಪ್ರಶ್ನೆ ಮಹತ್ವ ಪಡೆಯುತ್ತದೆ. ವಿಪಯರ್ಾಸವೆಂದರೆ ಮೂವರಲ್ಲಿ ಯಾರೂ ಸಹ ಈ ನಿಟ್ಟಿನಲ್ಲಿ ಪ್ರಾಮಾಣಿಕತೆ ತೋರಿಲ್ಲ. ತಮ್ಮ ಆತ್ಮಸಾಕ್ಷಿಗೆ ಧಕ್ಕೆ ಬಾರದಂತೆ ನಡೆಯಬೇಕಾದ ಅಗತ್ಯತೆ ಈ ನ್ಯಾಯಮೂತರ್ಿಗಳಿಗಿದೆ. ಆದರೆ ಹಾಗಾಗುತ್ತಿಲ್ಲ. ನ್ಯಾಯ ಮತ್ತು ಕಾನೂನು ಪರಿಪಾಲನೆಗೆ ನಿಯುಕ್ತರಾದ ಪೊಲೀಸ್ ಮತ್ತು ವಕೀಲರ ವರ್ತನೆಗಳೂ ಇತ್ತೀಚೆಗೆ ಪ್ರಶ್ನಾರ್ಹವಾಗಿವೆ. ಬೆಂಗಳೂರಿನ ಘಟನೆಯನ್ನೇ ಪರಿಗಣಿಸಿದಾಗ, ನಮ್ಮ ಕಾನೂನು ಪಾಲಕರು ಸಂವಿಧಾನದ ತತ್ವ ಮತ್ತು ಆಶಯಗಳನ್ನು ಅರಿತಿದ್ದಾರೋ ಇಲ್ಲವೋ ಎಂಬ ಅನುಮಾನ ಮೂಡುವುದು ಸಹಜ. ವಕೀಲರಷ್ಟೇ ಅಲ್ಲ ಯಾವುದೇ ನಾಗರಿಕರಾದರೂ ಕೆಲವು ಸಂದರ್ಭಗಳಲ್ಲಿ ನಿಯಮಗಳನ್ನು ಉಲ್ಲಂಘಿಸುವುದು ಸಹಜ, ಸ್ವಾಭಾವಿಕ. ಮೇಲೆ ಹೇಳಿದಂತೆ ನ್ಯಾಯಾಧೀಶರುಗಳೇ ನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಪಡೆದಿರುವ ನಿದರ್ಶನಗಳಿವೆ. ಹೀಗಿರುವಾಗ ಇನ್ನು ಕಾನೂನು ಅರಿಯದ ಜನಸಾಮಾನ್ಯರ ಪಾಡೇನು ? ಈ ರೀತಿಯ ಘಟನೆಗಳು ಸಂಭವಿಸಿದಾಗ ಕಾನೂನು ಪಾಲಕರು ಸಂಯಮದಿಂದ ವತರ್ಿಸಬೇಕಾಗುತ್ತದೆ. ತಮ್ಮ ಅಧಿಕಾರ ವ್ಯಾಪ್ತಿಯ ಇತಿಮಿತಿಗಳನ್ನು ಅರಿತು ನಡೆಯಬೇಕಾಗುತ್ತದೆ. ಆದರೆ ಬೆಂಗಳೂರಿನ ಘಟನೆಯಲ್ಲಿ ನಡೆದದ್ದೇ ಬೇರೆ. ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸರ ವರ್ತನೆ ಸರ್ವಥಾ ಸಮರ್ಥನೀಯವಲ್ಲ. ಪೊಲೀಸ್ ಇಲಾಖೆಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ನಮ್ಮ ಪೊಲೀಸ್ ಅಧಿಕಾರಿಗಳಲ್ಲಿ ಸಂಯಮ, ಸಂವೇದನೆಗಳು ಮಾಯವಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ತಮಗೆ ನೀಡಿರುವ ಲಾಠಿ, ಬಂದೂಕು ಮತ್ತಿತರ ಅಧಿಕಾರಯುತ ಅಸ್ತ್ರಗಳಿರುವುದು ಸಮಾಜದಲ್ಲಿನ ಅಶಿಸ್ತನ್ನು ಹೋಗಲಾಡಿಸಿ, ಸಮಾಜಘಾತುಕರನ್ನು ಶಿಕ್ಷಿಸಿ, ಒಂದು ಸ್ವಾಸ್ಥ್ಯ ಸಮಾಜದ ನಿಮರ್ಾಣಕ್ಕೆ ನೆರವಾಗಬೇಕೆಂದೇ ಹೊರತು ಮನಬಂದಂತೆ ಜನಸಾಮಾನ್ಯರನ್ನು ಥಳಿಸುವುದಕ್ಕಲ್ಲ. ಆದರೆ ಭಾರತದ ಪೊಲೀಸ್ ಇಲಾಖೆಯಲ್ಲಿ ಕೆಲವೊಮ್ಮೆ ಯಾವುದೇ ಕಾನೂನುಗಳೂ ಅನ್ವಯಿಸುವುದಿಲ್ಲವೇನೋ ಎಂಬಂತೆ ವತರ್ಿಸಲಾಗುತ್ತದೆ. ದೇಶಾದ್ಯಂತ ಜೈಲಿನಲ್ಲಿ ಕೊಳೆಯುತ್ತಿರುವ ಸಾವಿರಾರು ಅಮಾಯಕ ವಿಚಾರಣಾಧೀನ ಖೈದಿಗಳೇ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ. ಜೈಲಿನಲ್ಲಿ ಚಿತ್ರಹಿಂಸೆ ನೀಡುವುದು, ದೈಹಿಕವಾಗಿ ದಂಡಿಸುವುದು, ಕೈಕೋಳ ತೊಡಿಸುವುದು ಇವೇ ಮುಂತಾದ ಅಸಾಂವಿಧಾನಿಕ ಕೃತ್ಯಗಳು ಅವ್ಯಾಹತವಾಗಿ ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿವೆ. ಸುಳ್ಳು ಆರೋಪಗಳ ಮೇಲೆ ಬಂಧಿಸಲಾಗಿರುವ ಅಸಂಖ್ಯಾತ ಅಮಾಯಕರು ಈ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಇಲ್ಲಿ ಆಳುವ ಪಕ್ಷಗಳ ರಾಜಕಾರಣಿಗಳು ಮತ್ತು ಪ್ರಭಾವಶಾಲಿ ವ್ಯಕ್ತಿಗಳ ಹಿತಾಸಕ್ತಿಗಳೇ ಮೇಲುಗೈ ಸಾಧಿಸುವುದನ್ನು ಸ್ಪಷ್ಟವಾಗಿ ಕಾಣಬಹುದು. ಹಾಗಾಗಿಯೇ ಪೊಲೀಸರ ಕೈ ಮೇಲಾಗಿರುತ್ತದೆ. ಇಂತಹ ವರ್ತನೆಯ ವಿರುದ್ಧ ಕಾನೂನುಸಮ್ಮತವಾಗಿ ಪ್ರತಿಭಟಿಸಲು ನಮ್ಮ ಸಂವಿಧಾನವೇ ಅವಕಾಶ ನೀಡಿದೆ. ಆದರೆ ಬೆಂಗಳೂರಿನ ವಕೀಲರು ಮಾಡಿದ್ದೇ ಬೇರೆ. ತಮ್ಮ ಸಹೋದ್ಯೋಗಿಯ ಮೇಲಿನ ಹಲ್ಲೆಯನ್ನು ಪ್ರತಿಭಟಿಸಲು ಬೆಂಗಳೂರಿನ ಕೇಂದ್ರ ಪ್ರದೇಶದಲ್ಲಿ ಹಠಾತ್ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸಲಾಯಿತು. ಇನ್ನೂ ದುರಂತವೆಂದರೆ ವಕೀಲರ ಸಂಘ ಇದನ್ನು ಸಮಥರ್ಿಸಿಕೊಂಡಿದ್ದು. ಮಹಿಳಾ ಬಸ್ ಕಂಡಕ್ಟರ್ಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಅಧಿಕಾರಿಗೂ, ವಕೀಲರ ಸಂಘದ ಅಧ್ಯಕ್ಷರಿಗೂ ವ್ಯತ್ಯಾಸವೇನೂ ಕಾಣುವುದಿಲ್ಲ ಅಲ್ಲವೇ ? ಮತ್ತೊಂದು ಪ್ರಕರಣದಲ್ಲಿ ಪೂನಾದ ಬಳಿ ಸೇನಾ ಪಡೆಯ ಯೋಧರು ಪೊಲೀಸರ ಮೇಲೆ ಹಲ್ಲೆ ನಡೆಸಿರುವುದೂ ವರದಿಯಾಗಿದೆ. ಏಕೆ ಹೀಗೆ ? ಶಿಸ್ತು, ಸಂಯಮ, ನಿಯಮ ಬದ್ಧತೆ ಮತ್ತು ಕಾನೂನು ಪಾಲನೆಯ ಬಗ್ಗೆ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಈ ವರ್ಗದಲ್ಲೇ ಇಷ್ಟು ಅಶಿಸ್ತು, ಆಕ್ರೋಶಗಳು ಅಡಗಿರುವುದನ್ನು ನೋಡಿದರೆ ನಮ್ಮ ಸಾಮಾಜಿಕ ಚೌಕಟ್ಟಿನಲ್ಲೇ ಊನ ಇರುವುದು ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅನೇಕ ಸಂಘಟನೆಗಳಿಗೆ ಭಾರತೀಯ ಸಮಾಜವನ್ನು ಕಾಡುತ್ತಿರುವ ಈ ನೈತಿಕ ಭ್ರಷ್ಟತೆ ಮತ್ತು ಸಾಂಸ್ಕೃತಿಕ ಅನೈತಿಕತೆಗಳು ಸಹ ಭ್ರಷ್ಟ ಸಮಾಜದ ಒಂದು ಅವಿಭಾಜ್ಯ ಅಂಗ ಎಂಬ ಸಂಗತಿ ಅರಿವಾಗಬೇಕಿದೆ. . ಮಾನವ ಸಮಾಜವನ್ನು ಮಾನವೀಯ ನೆಲೆಗಟ್ಟಿನಲ್ಲಿ ಮುನ್ನಡೆಸಲು ಅಗತ್ಯವಾದ ಮೌಲ್ಯಗಳು ಮೂಲತಃ ಅಡಗಿರುವುದು ನಾಗರಿಕ ಸಮಾಜದ ಪ್ರಜ್ಞೆಯಲ್ಲಿ. ಈ ಪ್ರಜ್ಞೆಯೇ ಭ್ರಷ್ಟವಾಗಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆಗೂ ಆತ್ಮಾವಲೋಕನದ ಅವಶ್ಯಕತೆ ಇದೆ. ಆತ್ಮಸಾಕ್ಷಿಯನ್ನು ಕಾಪಾಡಿಕೊಳ್ಳುವ ಅಗತ್ಯತೆ ಇದೆ. ಬಹುಶಃ ಈ ಎರಡು ವಿದ್ಯಮಾನಗಳ ಕೊರತೆಯೇ ಭಾರತೀಯ ಸಮಾಜವನ್ನು ನೈತಿಕ ಅಧಃಪತನದತ್ತ ಕೊಂಡೊಯ್ಯುತ್ತಿದೆ. ಆರು ದಶಕಗಳಿಂದಲೂ ಮಾದರಿಯೊಂದನ್ನು ಅರಸುತ್ತಿರುವ ಭಾರತೀಯ ಸಮಾಜಕ್ಕೆ ಆತ್ಮಸಾಕ್ಷಿಯೇ ಮಾದರಿಯಾಗಿ ಪರಿಣಮಿಸಬೇಕಿದೆ.  ]]>

‍ಲೇಖಕರು G

February 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: