ನಿತ್ಯಾನಂದ -Buzz ನಲ್ಲಿ ಹೀಗೊಂದು ಚರ್ಚೆ

gmail ನ ಭಾಗವಾಗಿ ಆರಂಭವಾಗಿರುವ Buzz ನಲ್ಲಿ ನಿತ್ಯಾನಂದ ಪ್ರಕರಣ ವಿವರ ಚರ್ಚೆಗೆ ಒಳಗಾಗುತ್ತಿದೆ.
ಮಾಧ್ಯಮದ ಬಗ್ಗೆಯೂ ಚರ್ಚೆ ಹಾದುಹೋಗಿದೆ.
ವಿ ಆರ್ ಭಟ್ ಆರಂಭಿಸಿದ ಚರ್ಚೆ ಯಾವೆಲ್ಲಾ ದಾರಿ ಹಿಡಿದಿದೆ, ಈ ಹಗರಣದ ಬಗ್ಗೆ ಜನ ಏನೆಲ್ಲಾ ಯೋಚಿಸುತ್ತಿದ್ದಾರೆ
ಎಂಬ ಹೊಳಹು ನೀಡಲು ಚರ್ಚೆಯ ಒಂದು ಭಾಗ ಇಲ್ಲಿದೆ.

ಕಳ್ಳ ಕಾವಿಯ ಬೆಕ್ಕು
ಜಗದಮಿತ್ರನಿಗೆ ಇಂದೇಕೋ ಮನಸ್ಸಿಗೆ ಬೇಸರವಾಗಿಬಿಟ್ಟಿದೆ ! ತನ್ನ ಕರ್ತವ್ಯವನ್ನು ಮನದಂದು ತನ್ನ ಕೆಲಸದಲ್ಲಿ ತಾನು ತನ್ಮಗ್ನನಾಗಿರುತ್ತಿದ್ದ ಆತ, ಎಂದೂ ಯಾವ ವಿಷಯಗಳಿಗೂ ಬಹಳ ತಲೆಕೆಡಿಸಿಕೊಳ್ಳದ ಆತ ಇಂದು ವಿಮುಖನಾಗಿದ್ದಾನೆ! ಕಾರಣ ಯಾವಜ್ಜೀವಿತದಲ್ಲಿ ಸಮಸ್ತ ತ್ಯಾಗದ ಸಂಕೇತವಾದ ಕಾವಿಯ ಬಣ್ಣಕ್ಕೆ ಬೇರೆ ಬಣ್ಣ ಕೊಡುವ ಕೆಲಸ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಆತನಿಗೆ ಅರ್ಜುನ ಸನ್ಯಾಸಿಯ ಕಥೆ ನೆನಪಿಗೆ ಬರುತ್ತಿದೆಯಂತೆ. ಅಂದರೆ ಹಿಂದೂ ಕೂಡ ಇಂತಹ ಕೆಲವು ಕಾವಿ ಧಾರಿಗಳಿದ್ದರು, ಆದರೆ ಇಷ್ಟೊಂದು ಸಂಖ್ಯೆಯಲ್ಲಿರಲಿಲ್ಲ! ಈಗ ಕಾವಿ ಕೆಲವರಿಗೆ ದುಡ್ಡು ಮಾಡುವ ಸುಲಭ ಉಪಾಯವಾಗಿಬಿಟ್ಟಿದೆ. ಇಂತಹ ಕಾವಿ ವೇಷದವರನ್ನು ಕಂಡಾಗ ಗೌರವಾನ್ವಿತ ಕಾವಿಗೆ ಎಂತಹ ಅಪಚಾರಮಾಡುತ್ತಿದ್ದಾರಲ್ಲ ಎಂಬ ಆಕ್ರೋಶ ಮನದ ತುಂಬೆಲ್ಲ ಭುಗಿಲೆದ್ದು ಜಗದಮಿತ್ರ ಬೊಬ್ಬಿರಿದಿದ್ದಾನೆ ! ಸಿಂಹದಂತೆ ಗರ್ಜಿಸಿದ್ದಾನೆ; ಸಂಸ್ಕೃತಿಗೆ ಹೆಸರಾದ ಭಾರತದಲ್ಲಿ ಯಾವುದು ನಡೆಯಬಾರದಿತ್ತೋ ಅದನ್ನೇ ಜಾಸ್ತಿ ನೋಡುವಂತಾಯ್ತಲ್ಲ ಅಂತ ಮರುಗಿದ್ದಾನೆ.
ಹಿಂದೆ ರಾಜರುಗಳು ಆಳುವಾಗ ಈ ರೀತಿ ಅಪಚಾರವೆಸಗುವ ವ್ಯಕ್ತಿಗಳನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸುತ್ತಿದ್ದರು,ಮಾತ್ರವಲ್ಲ ಕಿವಿ-ಮೂಗು ಮುಂತಾದ ಅಂಗಗಳಲ್ಲಿ ಒಂದನ್ನು ಊನ ಮಾಡಲು ಆಜ್ಞೆ ಮಾಡುತ್ತಿದ್ದರು. ಶಿಕ್ಷೆ ನೋಡಿಯೇ ಅಂತಹ ಖದೀಮರು ಕೆಟ್ಟ ಕೆಲಸಕ್ಕೆ ಇಳಿಯಲು ಹಿಜರಿಯುತ್ತಿದ್ದರು. ಇಂದಿನ ರಾಜಕೀಯ ವಿಪರ್ಯಾಸ ಎಂದರೆ ಅಂತಹ ಕಳ್ಳ-ಖದೀಮರನ್ನು, ದೇವರ ಹೆಸರಲ್ಲಿ ದುಡ್ಡು ಗಳಿಸಿ ಮೆರೆವ ಬಕಗಳನ್ನು ಪೋಷಿಸುವುದು ಮತ್ತು ಅವರು ಸೋಗಿನಲ್ಲಿ ಮತ್ತಷ್ಟು ಜನರನ್ನು ಕಲೆಹಾಕಲು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಂದಿನ ರಾಜಕಾರಣಿಗಳ ವೈಶಿಷ್ಟ್ಯ !
|| ಸಮಾನ ಶೀಲೇಷು ವ್ಯಸನೇಷು ಸಖ್ಯಂ || ಎಂಬ ಉಕ್ತಿಯಂತೆ ಒಂದೇ ಥರದ ಶೀಲ, ಸ್ವಭಾವಗಳುಳ್ಳ ಜನರು ಸ್ನೇಹಿತರಾಗುತ್ತಾರಂತೆ, ಇಲ್ಲೂ ಕೂಡ ರಾಜಕಾರಣಿಗಳೇ ಹಾಗಿದ್ದಾಗ ಅವರ ಸಖ್ಯ ಕೂಡ ಅಂಥಹ ನಿರ್ಲಜ್ಜ ಖೂಳರೊಂದಿಗೇ ಆಗುತ್ತದೆ !

ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ -ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ ||

ಕೆರಳಿ ಕೆಂಡಾಮಂಡಲವಾದ ಜಗದಮಿತ್ರನನ್ನು ಮರಳಿ ತಂಪಾಗಿಸಲು ಮುಂಜಾವಿನ ತಂಪಿನ ಹಾಡು ಹಾಡಿದರೂ ಸಾಧ್ಯವಾಗಲಿಲ್ಲ ! ಅಂತೂ ಇಂತೂ ಹೇಗೋ ಕೊನೇ ಸಲ ಅಂತ ಪ್ರಯತ್ನಿಸಿ ಕೊನೆಗೊಮ್ಮೆ ತನಗೆ ಮನದಲ್ಲಿ ಇರುವ ಖಾರವನ್ನೆಲ್ಲ ಹೊರಗೆ ಕಾವ್ಯದ ರೂಪದಲ್ಲಿ ತೂರಿಬಿಟ್ಟಿದ್ದಾನೆ; ಅದಾದಮೇಲೆ ಸ್ವಲ್ಪ ಶಾಂತನಾಗಿದ್ದಾನೆ- ಇದು ನಮ್ಮ ಜಗದಮಿತ್ರನ ನಾರಸಿಂಹಾವತಾರ ! ” ಕೈಮುಗಿದು ಬಿಟ್ಟೆನಪ್ಪಾ ನರಸಿಂಹ ಭಕ್ತರನ್ನು ಹೆದರಿಸಬೇಡ ” ಅಂತ ಪ್ರಾರ್ಥಿಸಿದರೆ ” ಭಕ್ತಿಯ ಹೆಸರಲ್ಲಿ , ಸ್ವಾಮಿಗಳ ಸೋಗಿನಲ್ಲಿ ಅಡ್ಡಾಡುವ ಉಂಡಾಡಿ ಗುಂಡರನ್ನು ಅವರ ಕಾವಿಯನ್ನು,ವೇಷವನ್ನು ಪರಾಮರ್ಶಿಸಿ, ಅದು ನಾಟಕದ ವೇಷವಾದರೆ-ಕಪಟ ವೇಷವಾದರೆ ಹಿಡಿದು ಥಳಿಸುವಂತೆ ಆಜ್ಞೆ ” ವಿಧಿಸಿದ್ದಾನೆ, ನಮಿಸಿ ನಾರಸಿಂಹಗೆ ಆತನ ಆಜ್ಞೆಯನ್ನು ಶಿರಸಾವಹಿಸಲು ಒಪ್ಪಿದಮೇಲೆ ಸದ್ಯಕ್ಕೆ ಅವತಾರ ಮುಗಿದಿದೆ, ಅದರ ತಾತ್ಪರ್ಯವನ್ನು ಡೀವೀಜಿ ಶೈಲಿಯಲ್ಲಿ ಓದಿ —

ಕಳ್ಳ ಕಾವಿಯ ಬೆಕ್ಕು

ಪ್ರಾಯದಲಿ ಹುಡುಗರಲಿ ‘ರಾಣಿಹುಳಗಳ’ ಚಿಂತೆ
‘ರಾಯಭಾರವ’ ತೋರಿ ಬರಸೆಳೆಯಲವರ
ಕಾಯನಲುಗಿದರೆಷ್ಟು ತಾಯಿ-ತಂದೆಯರಿಂಗೆ
ಮಾಯವಾಗದು ಮನದಿ | ಜಗದಮಿತ್ರ
ಭೂಮಿಯದು ಹಲವು ಕಲೆಗಳ ತವರು ಎನ್ನುವುದು
ಕಾಮಿಗಳಿಗೂ ತಿಳಿದ ಸಾಮಾನ್ಯ ವಿಷಯ
ನೇಮ ನಿಷ್ಠೆಯ ಸೋಗು ತೋರಿಸುತ ಘನತರದಿ
ನಾಮವೆಳೆವರು ನೋಡು | ಜಗದಮಿತ್ರ
ಸುರಪತಿಯು ರಾಜ್ಯಭಾರವ ಹಿತದಿ ತಾ ನಡೆಸಿ
ಪರಸತಿಯ ಪೀಡಕರ ಹಿಡಿದು ಗುರುತಿಸುತ
ದರದರನೆ ಎಳೆದೊಯ್ದು ಕುಳ್ಳಿರಿಸಿ ಸಜೆಯೊಳಗೆ
ಬರೆಯನೆಳೆದನು ನೋಡ | ಜಗದಮಿತ್ರ
ಸನ್ಯಾಸಿ ತಾನೆಂದು ಬಂದ ವ್ಯಕ್ತಿಯ ಹಿಡಿದು
ಅನ್ಯವಿಷಯಂಗಳನು ಅವಲೋಕಿಸುತ
ಮಾನ್ಯಮಾಡಲು ಹಲವು ಮೆಟ್ಟಿಲುಗಳನುಸರಿಸು
ಧನ್ಯನಾಗುತ ಜಗದಿ | ಜಗದಮಿತ್ರ
ಹುಡುಗಿಯರು ದಿರಿಸಿನಲಿ ಸೆಳೆಯುವರು ಕಣ್ಣುಗಳ
ಬೆಡಗು ಬಿನ್ನಾಣಗಳ ನಗೆ ಪ್ರದರ್ಶಿಸುತ
ಹಡಗಿನೋಪಾದಿಯಲಿ ನಡೆದು ಹೋಪರು ಮುಂದೆ
ಗುಡುಗಿಲ್ಲದಾ ಮಳೆಯೂ | ಜಗದಮಿತ್ರ
ಹೆಂಗಸರು ತಮಗೆಲ್ಲ ಮೀಸಲಾತಿಯ ಎಣಿಸಿ
ಭಂಗವಿಲ್ಲದೆ ಪಡೆದು ನುಗ್ಗಲಾಶ್ರಮಕೆ
ಕಂಗೆಟ್ಟು ಕುಲಗೆಟ್ಟ ಕಳ್ಳ ಕಾವಿಯ ಬೆಕ್ಕು
ಚಂಗನೇ ಜಿಗಿಯಿತದೊ | ಜಗದಮಿತ್ರ
ಕಾವಿಯುಟ್ಟರೆ ಜಗಕೆ ಕಾಣದದು ಅನುಕೊಳುತ
ಹಾವಿನಂದದಿ ಹುದುಗಿ ಕಳ್ಳ ಕಿಂಡಿಯಲಿ
ಹೂವಿನಂತಹ ಮುಗ್ಧ ಮನಸುಗಳ ಬಲಿಗೈದ
ಆವಿಚಿತ್ರನ ಥಳಿಸು | ಜಗದಮಿತ್ರ

3 ಜನರು ಇದನ್ನು ಇಷ್ಟಪಟ್ಟಿದ್ದಾರೆ – Prakash Hegde, Shashi Jois , Chetana Bhat
Prakash Hegde – ಸಕಾಲಿಕ…ವಾಗಿದೆ..
ಯಾಕೋ..
ಇಂಥಹ ಕಳ್ಳ ಸನ್ಯಾಸಿಗಳ ಬಗ್ಗೆ ಬೇಸರವಾಗುತ್ತದೆ…ಮಾರ್ಚ್ 11
V.R. BHAT – ಧನ್ಯವಾದಗಳು ಚೈತ್ರ ಮತ್ತು ಪ್ರಕಾಶ್ , ಶಶಿ ಮತ್ತು ಚೇತನ ಅಲ್ಲದೇ ಮುಂದೆ ಓದಲಿರುವ ಎಲ್ಲಾ ಓದುಗ ಬಂಧುಗಳಿಗೆಮಾರ್ಚ್ 11
Kumara Subrahmanya Muliyala – ಸನ್ಯಾಸಿಗಳು ದೌರ್ಬಲ್ಯಗಳಿ೦ದ ಹೊರತಲ್ಲವೇನೋ?.ಒಟ್ಟಿನಲ್ಲಿ ಒ೦ದು ಸ್ವಸ್ಥ ನ೦ಬಿಕೆಯನ್ನು ಇ೦ತವು ಅಲುಗಾಡಿಸಿಬಿಡುತ್ತದೆ.
ಹೌದು ಇದೇ ಸರಿ ”
ಹೂವಿನಂತಹ ಮುಗ್ಧ ಮನಸುಗಳ ಬಲಿಗೈದ
ಆವಿಚಿತ್ರನ ಥಳಿಸು | ಜಗದಮಿತ್ರ !!ಮಾರ್ಚ್ 11
Shrikant Hegde – ಬಹುಶಃ ಭಟ್ಟರು, ಮಾಧ್ಯಮದ ಪ್ರಚಲಿತ ವಿದ್ಯಮಾನ ನೋಡಿ ಬರೆದಿರಬೇಕು, ಹಿಂದೆ ಕಂಚಿಶ್ರೀಗಳನ್ನೂ ಕಂಬಿಹಿಂದೆ ಹಾಕಿದ್ದರು,
ಆಮೇಲೆ ಏನಾಯಿತು, ಪ್ರತ್ಯಕ್ಷ ಕಂಡರೂ ಪರಾಂಭರಿಸಬೇಕಂತೆ, ಈಗ ಪ್ರತ್ಯಕ್ಷನೋಡೇ ಇಲ್ಲ ಯಾರೂ ! ನನಗಂತೂ ನಂಬಲಸಾಧ್ಯ.
ದೇಶಾದ್ಯಂತ ಹಿಂದುತ್ವವನ್ನು ಮಣ್ಣುಗೂಡಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ವಿದೇಶೀ ಕೈವಾಡ ಬಹಳ ಇದೆ ಭಟ್ಭಾಗ !ಮಾರ್ಚ್ 11
nagendra somayaji – @ Shrikant ಹೆಗ್ಡೆ
ಒಪ್ಪುವಂತ ಮಾತು, ಮಾಧ್ಯಮಗಳಿಗೆ ಅಪರಾಧಿಗಳೆಂದು ಬಿಂಬಿಸುವ ಉಮೇದು, ಅವರು ನಿರಪರಾಧಿಗಳದಾಗ ತಮ್ಮ ತಪ್ಪನ್ನು ಒಪ್ಪಿಕೊಳ್ಳುವಾಗ ಇರುವುದಿಲ್ಲ.
ಒಂದು ಕಡೆ ೨೦೨೦ ರ ಒಳಗೆ ಭಾರತವನ್ನು ಇಸ್ಲಾಮಿಕ್ ರಿಪಬ್ಲಿಕ್( http://3.bp.blogspot.com/_J52IpbrnHZc/SUIKoJZShtI/AAAAAAAAAO8/oBHCkgeg-lE/s1600-h/image002.jpg ) ಮಾಡುವತ್ತ
ಭಯೋತ್ಪಾದಕರ ಗುಂಪು.
ಇನ್ನೊಂದೆಡೆ, ದುಡ್ಡು ಕೊಟ್ಟು ಮತಾಂತರ ಮಾಡೋ ಮಿಷನರಿಗಳ ಗುಂಪು,
ಮತ್ತೊಂದೆಡೆ ಕೆಲವು ಕಳ್ಳ ಸ್ವಾಮಿಗಳ ಗುಂಪು(ಇದರಿಂದ ಭಟ್ಟರು ಹೇಳಿದ ಹಾಗೆ ಕಾವಿ ಧಾರಿಗಳು ರಾಜಕಾರಣಿಗಳಂತೆ ತಮಾಷೆಯ ವಸ್ತುಗಳಾಗಿದ್ದಾರೆ),
ಇದರ ಮಧ್ಯೆ ನಮ್ಮ ಗತಿ?ಮಾರ್ಚ್ 11
Kumara Subrahmanya Muliyala – ಗಾಳಿ ಬಾರದೆ ಎಲೆ ಅಲುಗಾಡುತ್ತದೆಯೇ? ಬೆ೦ಕಿಯಿಲ್ಲದೇ ಹೊಗೆ ಬರುವುದಕ್ಕೆ ಸಾದ್ಯವೇ? ವ್ಯವಸ್ತೆಯನ್ನು ಹಾಳು ಮಾಡುವಲ್ಲಿ ತಮ್ಮ ನೆಲೆಯನ್ನೇ ತಿಳಿಯದವರ ಪಾಲೂ ಇದೆ ಎ೦ದೆನಿಸುತ್ತಿದೆ.ಅಲ್ಲವೇ ಶ್ರೀಕಾ೦ತ ಹೆಗ್ಡೆಯವರೆ?ಮಾರ್ಚ್ 11
V.R. BHAT – ನನ್ನ ವೈಯಕ್ತಿಕ ಅಭಿಪ್ರಾಯವನ್ನು ಮಂಡಿಸಿದ್ದೆನೇ ಹೊರತು ನಿಮ್ಮ ನಿಮ್ಮ ಅನಿಸಿಕೆ ನಿಮನಿಮಗೆ ಬಿಟ್ಟಿದ್ದು, ಒಂದು ನಾಣ್ಯವನ್ನು ಎರಡು ಮುಖಗಳಿಂದ ನೋಡಿ ಮೌಲ್ಯಮಾಡುತ್ತೇವೆ ಹೇಗೋ ಹಾಗೇ ಖಾವಿ, ಖಾಕಿ, ಖಾದಿ,ಸ್ಟೆತೊಸ್ಕೋಪ್ ಇವೆಲ್ಲ ಕಂಡಾಗ ಏಕಮುಖವಾಗಿ ನಂಬಿ ಬಿಡುವ ಕಾಲ ಇದಲ್ಲ, ಹಾಗೊಮ್ಮೆ ಮಾಡಿದರೆ ಅಪಾತ್ರರಿಗೆ ದಾನಮಾಡಿದ ಪಾಪದಂತೆ ಸಮಾಜಕ್ಕಾಗುವ ತೊಂದರೆ ನಮ್ಮ ಪಾಪವಾಗಿ ಪರಿಣಮಿಸುತ್ತದೆ, ಈ ದಿಸೆಯಲ್ಲಿ ಶ್ರೀಕಾಂತ್ ಹೆಗಡೆಯವರು ಮತ್ತು ನಾಗೇಂದ್ರಋ ಎಲ್ಲಾ ಯೋಚಿಸಿ ಆಮೇಲೆ ಕಾವಿಗೆ ಅಡ್ಡಬೀಳಿ ಎಂದು ನಿಮ್ಮಲ್ಲಿ ಒಂದು ಅರಿಕೆ, ಇಂದಿನದಿನ ಮೌಡ್ಯದ ಭಕ್ತಿಗಿಂತ, ಆ ಧರ್ಮವನ್ನು ಮೆರೆವುದಕ್ಕಿಂತ ಅರಿತು ನಡೆದರೆ ಅದೇ ಧರ್ಮ, ಆಗ ನಿಮಗೆ ಖಾಕಿ,ಕಾವಿ,ಖಾದಿ,ಕೋವಿ ಯಾವುದರ ಹಂಗೂ ಇರುವುದಿಲ್ಲ ಆಗದೇ ?ಮಾರ್ಚ್ 11
V.R. BHAT – Thanks to one & all who understand the truth what I tried to explore !ಮಾರ್ಚ್ 11
V.R. BHAT – ಇಷ್ಟಕ್ಕೂ ಭಟ್ಟರು ತಲೆ ಇಲ್ಲದೇ ಬರೆದಿಲ್ಲ ಶ್ರೀಕಾಂತ್, ನಿನ್ನೆ ಮೊನ್ನೆಯ ಮಾಧ್ಯಮಗಳು, ಪತ್ರಿಕೆಗಳು, ಪ್ರಚಲಿತ ವಿದ್ಯಮಾನಗಳು, ಡೊಂಬರಾಟಗಳು, ಮೀಟಿಂಗ್ ಗಳು ಇವನ್ನೆಲ್ಲ ಸಂಪೂರ್ಣ ಅವಲೋಕಿಸಿ ಒಳ ಮನಸ್ಸಿನ ಒಪ್ಪಿಗೆ ಸಿಕ್ಕ ಮೇಲೆ ಬರೆದಿದ್ದೇನೆ, face is the index of mind ಅಂತಾರೆ ಇಂಗ್ಲಿಷ್ ನಲ್ಲಿ, ನಿಮಗೆ ಬಂಗಾರದ ಅಕ್ಷರದಲ್ಲಿ ಬರೆದು ಇಡುತ್ತೇನೆ ನಿತ್ಯಾನಂದ ಎನ್ನುವುದು ಕಳ್ಳ ಬೆಕ್ಕು ಎಂಬುದನ್ನು, ನೀವೆಲ್ಲ ಆಮೇಲೆ ಪರಿಶೀಲಿಸಿ, ಕಂಚಿ ಶ್ರೀ ಗಳ ಮಾತು ಬೇಡ ಅವರ ರೀತಿ-ನೀತಿ ಬಗ್ಗೆ ಯಾರೂ ಮಾತನಾಡಬಹುದಾದ ಬಹಿರಂಗದ ಅಂತರಂಗ ಅದು, ಅಲ್ಲಿ ಕಲ್ಮಶವಿರಲಿಲ್ಲ, ಬದಲಿಗೆ ಜಯಾ ರಾಜಕೀಯವಿತ್ತು ! ಹಾಗಾಗಿ ಶ್ರೀಗಳು ಸಹಜವಾಗಿ ಗೆದ್ದರು-ಅದು ಧರ್ಮದ ಗೆಲುವು, ಇದು ಹಾಗಲ್ಲವೇ ಅಲ್ಲ, ತಲೆ ಇರುವ ಯಾರಿಗಾದರೂ ಅರ್ಥವಾಗುವ ಪರಿಸ್ಥಿತಿ, ಇದಕ್ಕೂ ನೀವಿ ಷಡ್ಯಂತ್ರ ಅಂದರೆ ಅದು ನಮ್ಮೆಲ್ಲರ ಮೂರ್ಖತನ ಅಷ್ಟೇ!ಮಾರ್ಚ್ 11
Shrikant Hegde – ಸತ್ಯ ಕು.ಸು.ಮುಳಿಯಾಳರೇ, ದೂರದಿಂದ ಎಲೆ ಅಚಲವಾಗಿದ್ದರೂ ಅಲುಗಾಡಿದಂತೆ ಕಾಣುವುದು, ಬೆಟ್ಟದಿಂದೇಳುವ ಮಂಂಜೂ
ಹೊಗೆಯಂತೆಯೇ ಗೋಚರಿಸುವುದು, ತಮ್ಮ ನೆಲೆ ತಿಳಿಯವರು….ಇರಬಹುದು.
ಭಟ್ರೆ ಕವನ, ಅನುಭವ, ಕಥೆ, ವ್ಯಥೆ ಬರೆರಿ ಸೊಗಸಾಗಿರುತ್ತದೆ.
ನೆರಮನೆಯ ವಸ್ತುವಿಗೆ ಹೆಗ್ಗಣ ಗುದ್ದಾಡಿಂತಾಗುವುದು ಬೇಡ, ನಿಮ್ಮ ಬುದ್ಧಿಮತ್ತೆ ಹೀಗೆ ಸೋರುವುದು ಬೇಡ ಎಂಬ ಆಶಯ
ಅಷ್ಟೆ. ನೋಡ್ವ ಕಾಗೆ …..ಇದ್ದರೆ ಹಾರಕಾದ್ರೆ ಕಾಣ್ತಡ !!ಮಾರ್ಚ್ 11
V.R. BHAT – ಶ್ರೀಕಾಂತ್, ಇಡೀ ಸಮಾಜ ನೋಡಿದ್ದು ನಿತ್ಯಾನಂದನ ರಾಸಕೇಳಿಯನ್ನು, ಅಂತಹ ವಿಕೃತ ಮನುಷ್ಯನನ್ನು ಹಿಂದೂ ಧರ್ಮದ ಸನ್ಯಾಸಿ ಅಂತ ಪರಿಗಣಿಸಿ ಬೇರೆ ಮಠಾಧೀಶರ ಜೊತೆ ತಾಳೆ ಹಾಕಬೇಡಿ, ನನಗೆ ಅಥವಾ ನನ್ನ ಬುದ್ಧಿಮತ್ತೆಗೆ ನೀವು ಮಾನ್ಯತೆ ಕೊಡುವುದು ಬೇಡ ಆದರೆ ಇಲ್ಲಿ ಮಂಜು ಮಂಜಲ್ಲ ಅದು ಹಳೇ ರಬ್ಬರ್ ಟೈರ್ ಸುಟ್ಟ ಹೊಗೆ ಎನ್ನುವುದನ್ನು ದಯವಿಟ್ಟು ಪರಾಮರ್ಶಿಸಿ, ಇನ್ನು ನಿಮ್ಮೆಲ್ಲರಿಗೆ ಬಿಟ್ಟಿದ್ದು , ಇಲ್ಲಿಗೆ ನನ್ನ ಪ್ರತಿಕ್ರಿಯೆಗೆ ಮಂಗಳ ಹಾಡುತ್ತೇನೆ, ಎಲ್ಲರಿಗೂ ಶುಭವಾಗಲಿ, ಧನ್ಯವಾದಗಳುಮಾರ್ಚ್ 11
V.R. BHAT – ಸಹೃದಯರೇ,ತಪ್ಪು ಮಾದಿದವರಿಗೆ ತಪ್ಪಿಸಿಕೊಳ್ಳಲು ಇರುವ ಸುಲಭದ ದಾರಿ-“ಇದರಲ್ಲಿ ಏನೋ ರಾಜಕೀಯ ಷಡ್ಯಂತ್ರ ಇದೆ’ ಎಮ್ಬ ಕೂಡು ಕಥೆ ಹೊಸೆಯುವುದು. ಮೊನ್ನೆ ಜಗದಮಿತ್ರ ತನ್ನ ಭಾರವಾದ-ಖಾರವಾದ ಮನಸ್ಸಿನಿಂದ ‘ ಕಾವಿಯ ಕಳ್ಳ ಬೆಕ್ಕು ‘ ಎಂಬ ಕವನ ಬರೆದಿದ್ದನಷ್ಟೇ, ಗೂಗಲ್ ಬಜ್ ನಲ್ಲಿ ನಮ್ಮ ಓದುಗ ಮಿತ್ರರಾದ ಶ್ರೀಕಾಂತ್ ಹೆಗಡೆಯವರು ಈ ಬಗ್ಗೆ ತಮ್ಮ ಅತೀವ ವಿರೋಧವನ್ನು ವ್ಯಕ್ತಪಡಿಸಿದ್ದರು, ಇವತ್ತು ಕಳ್ಳ ಬೆಕ್ಕೇ ಸ್ವತಹ ತಾನೇ ಹಾಲು ಕುಡಿದಿದ್ದು ಅಂತ ಒಪ್ಪಿಕೊಂಡಿದೆ ಮಾಧ್ಯಮಗಳಲ್ಲಿ ಅರ್ಥಾತ್ ಈ ತರ್ಕದಲಿ ಕುತರ್ಕ ಮಾಡಹೊರಟ ನಮ್ಮ ಮಿತ್ರರಿಗೆ ಹೇಳುತ್ತಿದ್ದೇನೆ- ಜಗದಮಿತ್ರ ಬರೆಯುವಾಗ ದೇಹದ ‘ ಒಳಗಿನ ಬಲ’ [ಆತ್ಮ ಬಲ] ಇದ್ದರೆ ಮಾತ್ರ ಜಗದಮಿತ್ರನಿಗೆ ಆ ಕಾವ್ಯ ಬರೆಯಲು ಸಾಧ್ಯ, ಇಲ್ಲದಿದ್ದರೆ ಸಾಧ್ಯವೇ ಇಲ್ಲ, ನಿಜವಾಗಿಯೂ ಹೇಳುತ್ತಿದ್ದೇನೆ ಅಂದು ಮನಸ್ಸು ತುಂಬಾ ‘ನಾರಸಿಂಹಾವತಾರ’ವಿತ್ತು . ಅದು ಇದ್ದಾಗಲೇ ಬರೆದಿದ್ದು ಬಿಟ್ಟರೆ ನಂತರ ಅದು ಸಾಧ್ಯವಿರಲಿಲ್ಲ. ಕವಿಮನಕ್ಕೆ ಸಾತ್ವಿಕತೆಗೆ ಒಂದು ಅದ್ಬುತ ಶಕ್ತಿಯಿರುತ್ತದೆ, ಅದರ ಅನುಭವ ಪಡೆದು ನಾನು ನಾನಲ್ಲದಾಗ ಬರೆಯುವುದೇ ‘ಜಗದಮಿತ್ರನ ಕಗ್ಗ’. ತರ್ಕದಲ್ಲಿ ಯಾರು ಗೆದ್ದರು ಅನ್ನುವುದಕ್ಕಿಂತ ಇದು ಧರ್ಮಕ್ಕೆ ಸಂದ ಜಯ, ಅಂತೂ ನಾರಸಿಂಹ ಬಂದು ಹೇಳಿದ್ದು ನಿಜವೇ ಆಯಿತು, ತಮಗೆಲ್ಲ ಧನ್ಯವಾದಗಳು.08:01 am

‍ಲೇಖಕರು avadhi

March 14, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

6 ಪ್ರತಿಕ್ರಿಯೆಗಳು

 1. Muralidhar Sajjan

  ನಿತ್ಯಾನಂದನಿಗೆ ಪುಸ್ತಕ ಜ್ಞಾನವಿದೆಯೇ ಹೊರತು ಬ್ರಹ್ಮಜ್ಞಾನವಿಲ್ಲ.ಜನತೆ ಪುಸ್ತಕಜ್ಞಾನಕ್ಕೆ ಶರಣು ಹೊಡೆದಿದ್ದಾರೆ. ಅನುಭವದಿಂದ ಗಳಿಸಿದ ಜ್ಞಾನಕ್ಕೆ ಕಿಮ್ಮತ್ತಿಲ್ಲ.ಶಾಲೆ ಕಲಿಯದ,ಆಂಗ್ಲ ಭಾಷೆ ಗೊತ್ತಿಲ್ಲದ ಜೀವಮಾನವಿಡಿ ತನ್ನ ತತ್ವಕ್ಕೆ ಬದ್ದನಾಗಿ ಸರಳ ಜೀವನ ನಡೆಸಿದ ಸಂತನಿಗೆ ಈ ಜಗತ್ತಿನಲ್ಲಿ ಮಾನ್ಯತೆ ಇಲ್ಲ ಯಾಕೆಂದರೆ ಆತನ ನಡೆ,ನುಡಿ ನೇರವಾಗಿ ಇರುವುದು. ನಿತ್ಯಾನಂದ ಪುಸ್ತಕದಲ್ಲಿರುವುದನ್ನು ಬಣ್ಣ ಬಣ್ಣವಾಗಿ ಇಂದ್ರ,ಚಂದ್ರ ಎಂದು ವಿವರಿಸುತ್ತಾನೆ.ಅದಕ್ಕೆ ಜನ ಮುಗಿಬಿಳುತ್ತಾರೆ.

  ಪ್ರತಿಕ್ರಿಯೆ
 2. V.R.BHAT

  ಸರ್, ತಮ್ಮ ಮನಸ್ಸಿಗೆ ಈ ಪ್ರಹಸನ ಸಂಪೂರ್ಣ ಅರ್ಥವಾಗಿ ‘ಅವಧಿ’ ಯಲ್ಲಿ ಅಳವಡಿಸಿದಿರಿ, ಅನೇಕರಿಗೆ ಇನ್ನೂ ನಂಬಲು ಸಾಧ್ಯವಾಗದ ಕಾಟು ಸತ್ಯದ ಬಗ್ಗೆ ಕವನ ಬಂದಾಗ ಬಂದು ಓದಿ ಆನಂದಿಸಿದ, ಆನಂದಿಸುವ ಎಲ್ಲಾ ಓದುಗ ಮಿತ್ರರಿಗೆ ಈ ಮೂಲಕವೂ ನನ್ನ ಧನ್ಯವಾದಗಳು, ತಮಗೂ ಕೂಡ.

  ಪ್ರತಿಕ್ರಿಯೆ
 3. Shaji-Pokanangod Panchayat

  idhu bhakthara niranthara shoshanege utthana udhaharane.dine dine vyathirikthavaadha statement needuthiruva eethanannu oddhu volage haakuvavaru yaaru illave?idhu namma vyvastheya dhurantha vaagidhe.

  ಪ್ರತಿಕ್ರಿಯೆ
 4. ಸೂರ್ಯನಾರಾಯಣ ಜೋಯಿಸ್

  ಬೆಂಕಿ ಬೆಂಕಿಯೇ ಅದು ನೀರಾಗಲು ಸಾಧ್ಯವಿಲ್ಲ. ಆದರಿಂದ ಅವರನ್ನು ದೂರವಿಡುತ್ತಿದ್ದಾರೆ ನಮ್ಮ ಕೆಲವು ಸಂನ್ಯಾಸಿಗಳು. ರಾಮಕೃಷ್ಣಮಠದ ಸಂನ್ಯಾಸಿಗಳು ಇದಕ್ಕೆ ಉತ್ತಮ ಪರಂಪರೆಯನ್ನೆ ನೀಡಿದ್ದರೆ. ಹೀಗೇ ಹಲವಾರು ಪರಂಪರೆಗಳನ್ನು ನಾವು ಹ್
  ಏಲಬಹುದು. ಇಲ್ಲಿ ಕೇವಲ ರಾಮಕೃಷ್ಣಮಠವೊಂದನ್ನೆ ಉದಾಹರಣೆಯಾಗಿ ನೀಡಿದ್ದೇನೆ.

  ಪ್ರತಿಕ್ರಿಯೆ
 5. preethi

  parara chinte namagyaatake endu tamma daariyali munduvariyuva janagaLa madye nimma barahavanu nimma kartavyavembante akshara roopake tandudake dhanyavaadagaLu.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: