ನಿತ್ಯಾನ೦ದನ ಆಶ್ರಮದಲ್ಲಿ…

– ಬಿ ಎ೦ ಬಶೀರ್

  ನಿತ್ಯಾನಂದನ ಆಶ್ರಮದಲ್ಲಿ ಪಂಕ್ತಿ ಭೇದ ಇಲ್ಲ… ಮಡೆ ಸ್ನಾನ ಇಲ್ಲ…. ಉಡುಪಿಯ ಅಷ್ಟ ಮಠದ ಓರ್ವ ಯತಿಯ ಪುತ್ರ ಈಗಲೂ ಅಪ್ಪನ ಹೆಸರು ಬಹಿರಂಗ ಹೇಳಲಾರದೆ ತಿರುಗಾಡುತ್ತಿದ್ದಾನೆ. ಇದು ಇಡೀ ಉಡುಪಿಗೆ ಗೊತ್ತು. ಎಲ್ಲ ಮಠಗಳಲ್ಲಿರುವಂತೆ ನಿತ್ಯಾನಂದ ಆಶ್ರಮದಲ್ಲೂ ಲೈಂಗಿಕ ಹಗರಣ ನಡೆಯುತ್ತಿದೆ. ನಿತ್ಯಾನಂದನ ಮಠದಲ್ಲಿ ಹೆಣ್ಣು ಮಕ್ಕಳು ಕುಣಿಯುತ್ತಾರೆ. ಹಾಗೆಯೇ ಸುಬ್ರಹ್ಮಣ್ಯದಲ್ಲಿ ಹಿಂದುಳಿದವರು ಎನ್ಜಳಲ್ಲಿ ಹೊರಲಾಡುತ್ತಾರೆ. ಎರಡರಲ್ಲಿ ವ್ಯತ್ಯಾಸವೆನಿದೆ? ಒಂದು ತಪ್ಪು, ಒಂದು ಸರಿ ಏಕೆ? ಖಂಡಿಸೂದಾದರೆ ಎರಡನ್ನೂ ಖಂಡಿಸಬೇಕಲ್ಲ. ನಾಡಿನ ಹೆಚ್ಚಿನ ಮಠಗಳು ಬಹಿರಂಗವಾಗಿ ರಾಜಕೀಯದಲ್ಲಿ ಗುರಿತಿಸಿಕೊಲ್ಲುತ್ತಿವೆ. ನಿತ್ಯಾನಂದ ಇನ್ನೂ ಅಷ್ಟರಮಟ್ಟಿಗೆ ಕೆಟ್ಟಿಲ್ಲ. ರವಿಶಂಕರ ಗುರೂಜಿ ಕಂಡವರ ಭೂಮಿಯನ್ನು ದೋಚಿಲ್ಲವೇ? ನಿತ್ಯಾನಂದನಿಗೆ ಮಾತ್ರ ಯಾಕೆ ಈ ಶಿಕ್ಷೆ. ಪೆಜಾವರರಂತೆ ಈತ ಬಾಬರಿ ಮಸೀದಿ ಧ್ವಂಸಕ್ಕೆ ಪ್ರಚೋದನೆ ನೀಡಿಲ್ಲ. ಕೆಲವು ಸನ್ಯಾಸಿಗಳಂತೆ ಕೋಮು ಉದ್ವಿಗ್ನ ಭಾಷಣ ಮಾಡಿಲ್ಲ. ಎಲ್ಲ ಮಠಗಳು ರಾಜಕಾರಣಿಗಳ ಸ್ವಿಸ್ಸ್ ಬ್ಯಾಂಕ್ ಆಗಿರುವಾಗ, ನಿತ್ಯಾನಂದ ಮಾತ್ರ ತಪ್ಪುಗಾರನಾಗೂದು ಹೇಗೆ? ನಿತ್ಯಾನಂದನಿಗೆ ಶಿಕ್ಷೆಯಾಗೂದಾದರೆ ಎಲ್ಲ ತಕ್ಕ ಸ್ವಾಮಿಜಿಗಳಿಗೂ ಶಿಕ್ಷೆಯಾಗಬೇಡವೆ? ಒಂದು ತಪ್ಪು, ಒಂದು ಸರಿ ಏಕೆ? ಇದನ್ನು ನಿರ್ಧರಿಸುವವರು ಯಾರು?  ]]>

‍ಲೇಖಕರು G

June 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

11 ಪ್ರತಿಕ್ರಿಯೆಗಳು

 1. Manjula

  It is not fair to write like this – tappugala samarthane yavareeti bekadaru madabahudu, holike sariyalla.

  ಪ್ರತಿಕ್ರಿಯೆ
 2. Vasanth

  The Suvarna TV channel which is acting like crusader, recently telecasted a sex film kind of material in its program. Now they are taking of morality. What a pity.

  ಪ್ರತಿಕ್ರಿಯೆ
 3. Pramod ambekar

  Mathagal Holike smpradya holike yavudarallu hondolla nityananad, Bharat samskrutige bereyada smaskruti nrmisuttiddane, Yanvan tande sattare avan bodymele kalu ittu namskarisuva smaskar nammalli aste eke pashatyarallyuu iila
  ambkar

  ಪ್ರತಿಕ್ರಿಯೆ
 4. shashi

  thanau madida thappannu muchikolake,…………… ennobbru madida thappannu etthi thorisodu kooda dodda thappu………….. bereyavaru galeeju thinnuthare……….nithyananda thinnuthana keli…………….. swamy bashir ravare….thappu yare madidru thappe………..adu yare agali shikshe age aguthe….. Shri krishna helidahage 101ne thappu madida mele shikshe sikke siguthe…………. adu yare agle………. Khanditha avaru shikshe anubhavise sidha……………nenpirali…………

  ಪ್ರತಿಕ್ರಿಯೆ
 5. ಅರುಣ್ ಕಾಸರಗುಪ್ಪೆ

  ಪ್ರಿಯ ಬಶೀರ್‌,
  ಇಂಥ ವಾದಗಳನ್ನು ಮಾಡುತ್ತಾ ಹೊರಟರೆ ಕೊನೆಗೆ ನಾವು ಮುಟ್ಟುವುದಾದರೂ ಎಲ್ಲಿಗೆ? ಮಠಗಳೆಂಬ “ಪವಿತ್ರ ಗೋವು”ಗಳ ಹಿಂದಿನ ಠಕ್ಕತನವನ್ನು ಹೊರಗೆಳೆಯುವ ಕ್ರಿಯೆ ನಿತ್ಯಾನಂದನಿಂದ ಶುರುವಾಗಿದೆ ಎಂದಿಟ್ಟುಕೊಳ್ಳಿ. ಮುಂದೆ ಒಂದಿನ ಪ್ರತಿಯೊಂದು ಮಠವೂ ಹೀಗೆ ಬೆತ್ತಲೆಗೊಳ್ಳುತ್ತವೆ. ಮಠಗಳನ್ನು ಸಾರ್ವಜನಿಕವಾಗಿ ಯಾವುದೇ ಎಗ್ಗಿಲ್ಲದೇ ಟೀಕಿಸುವ ಬಂಡಾಯ ಮನೋಧರ್ಮದ ಹಿಂದೆ “ಜರತಾರಿ ಜಗದ್ಗುರು” ರೀತಿಯ ಕಾದಂಬರಿಯೂ ತನ್ನ ಕೊಡುಗೆ ಸಲ್ಲಿಸಿದೆ ಎಂಬುದನ್ನು ಮರೆಯಬೇಡಿ. ಆ ಬಗೆಯ ಕಾದಂಬರಿ ಪ್ರಕಟಗೊಂಡಾಗ, ಏಕೆ ಲಿಂಗಾಯಿತರ ಮಠಗಳ ಬಗ್ಗೆಯೇ ಮಾತಾಡಬೇಕು? ಕ್ರಿಶ್ಚಿಯನ್‌ ಮಿಷನರಿಗಳಲ್ಲಿ, ಮಸೀದಿ ಗೋಡೆಯ ಹಿಂದೆ ಅಕ್ರಮಗಳಿಲ್ಲವೇ ಎಂದು ಪ್ರಶ್ನಿಸುತ್ತಾ, ಅದು ಎತ್ತಿದ್ದ ಪ್ರಶ್ನೆಗಳನ್ನು ನಿರ್ಲಕ್ಷಿಸಿದ್ದರೆ ಏನಾಗಬಹುದಿತ್ತು? ಒಮ್ಮೆ ಯೋಚಿಸಿ.

  ಪ್ರತಿಕ್ರಿಯೆ
 6. NEELANJAN,DUBAI

  ಒಳ್ಳೆಯ ಟಾಪಿಕ್ ಸಬ್ಜೆಕ್ಟು . ಈಗ ಜಾತಿ-ಮತ-ಬೇಧ ಮರೆತು ಹಲವಾರು ನಿತ್ಯಾ ಆನಂದದ ಸ್ವಾಮೀಜಿಗಳು ಮುಖವಾಡ ಕಳಚಿ ಬೀದಿಯಲ್ಲಿ ಬೆತ್ತಲಾಗುತ್ತಿದ್ದಾರೆ ಅನ್ನಿಸುತ್ತಿದೆ. ಎಲ್ಲಾ ಕೊಳೆಗಳು ಗಬ್ಬು ನಾರುತ್ತಿರುವ ಸಮಾಜಕ್ಕೆ ಹರಿದು ಬರಲಿ.

  ಪ್ರತಿಕ್ರಿಯೆ
 7. D.RAVI VARMA

  ಇದು ಅನಿತಿಕತೆ ಇದನ್ನು ಉಗ್ರವಾಗಿ ಕಂಡಿಸಲೇಬೇಕು ಇವರ ಬದುಕನ್ನು ಬೆತ್ತಲೆಗೊಲಿಸಬೇಕು ,ಆದರೆ ಬಷೀರ್ ಹೇಳುವ ಹಾಗೆ ಇದು matakonde ಸೀಮಿತವಲ್ಲ, ಇಲ್ಲಿ ಇತ್ತೀಚಿಗೆ ಸಿಕ್ಕ ಪಾದ್ರಿ ಇದ್ದಾರೆ , ಮುಲ್ಲಗಲಿದ್ದರೆ, ಹಾಗೆಯೇ ಸ್ವಾಮೀಜಿಗಳು ಇದ್ದಾರೆ
  ನನಗನ್ನಿಸೋ ಹಾಗೆ ಇದು ಇಂದಿನ ವ್ಯವಸ್ತೆಯ ಸಮಸ್ಯೆ ,ನಿತ್ಯಾನಂದ ಇಂದು ಸಿಕ್ಕಿದ್ದರೆ,ಮೊನ್ನೆಯಸ್ತೆ ಒಬ್ಬ ಅಂತರಸ್ತ್ರೀಯಮಟ್ಟದ ಪಾದ್ರಿ ಸಿಕ್ಕಿದ್ದರೆ, ಇನ್ನು ಎಸ್ಟೋ ಇವೆ,ಸತ್ಯ ಹೊರಬಂದಾಗ ಮಾತ್ರ ತಿಳಿಯೋದು ,ಇದಕ್ಕೆ ಪರಿಹಾರವೇನು, ನಮ್ಮ ಮುಗ್ದ ಜನರಿಗೆ ಪಾಠ ಹೇಳುವವರು ಯಾರು , ಬೆಕ್ಕಿಗೆ ಘಂಟೆ ಕಟ್ಟುವವರು ಯಾರು .
  ರವಿವರ್ಮ ಹೊಸಪೇಟೆ

  ಪ್ರತಿಕ್ರಿಯೆ
 8. ವಿದ್ಯಾಲಕ್ಷ್ಮಿ

  ಲೇಖನ ಓದಿ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ. ಕಾಮಿ ಸ್ವಾಮಿ ನಿತ್ಯಾನಂದ ನ ಅಶ್ರಮದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ಸಮರ್ತಿಸಿಕೊಳುವಂತಿದೆ. ಭಕ್ತರು ಏನೋ ಮೂಢನಂಬಿಕೆ ಯಿಂದಲೋ, ಅಂಧಶ್ರದ್ಧೆಯಿಂದಲೋ ಮಾಡುವ ಮಡೆ ಸ್ನಾನಕ್ಕೂ ನಿತ್ಯಾನಂದ ನ ಪಾಪಕಾರ್ಯ ಕ್ಕೂ ಎಲ್ಲಿಯ ಹೋಲಿಕೆ?…..ಸರ್ಕಾರ ಕೊನೆಗೂ ಎಚ್ಚೆತ್ತು ಇಂಥ ಸಮಾಜಕಂಟಕರನ್ನು ಮತ್ತ ಹಾಕುವ ಕೆಲಸ ಮಾಡಿದರೆ ಎಲ್ಲರಿಗೂ ನೆಮ್ಮದಿ…
  ವಿದ್ಯಾ ಮಂಗಳೂರು

  ಪ್ರತಿಕ್ರಿಯೆ
 9. nempedevaraj

  aniitivanta nithyananda niitivantanagalu heege sadhyavillavoo hageyee pankti beedha maduva, madesnana prachodisuva mandiyuu kshamarharenalla.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: