ಗಜಲ್
– ಪ್ರಕಾಶ ಬಿ. ಜಾಲಹಳ್ಳಿ
ಮಧುವ ಬೇಡಿದ ತುಟಿಗಳವು ಕಂಡಿವೆ ಕನಸು
ಮನದಿ ಮೂಡಿದ ಆಸೆಗಳವು ಕಂಡಿವೆ ಕನಸು
ನಿದ್ದೆಯಲ್ಲೂ ನಿದ್ದೆಯಿಲ್ಲ ಮನಸದು ಮಲಗಿಲ್ಲವಲ್ಲ
ನಿದ್ದೆಯಲ್ಲಿ ಕೈ ತಾಕಿದ ಸ್ಪರ್ಶವನು ನೀನೆಂದೆ ಹಿಡಿದಿವೆ ಕನಸು
ನೀನು ಕೊಟ್ಟ ಹೂವನು ತಲೆದಿಂಬಲೇ ಇಟ್ಟು ಕಾದಿಹೆನಲ್ಲ
ಕನಸಲ್ಲಾದರು ಚುಂಬಿಸುವೆಯೆಂದು ಮನಸು ಕಂಡಿವೆ ಕನಸು
ಕಣ್ಣ ರೆಪ್ಪೆಗಳವು ನಿನ್ನ ರೂಪ ಬಿಡದೆ ಮುಚ್ಚಿ ಹಿಡಿದಿವೆ
ನೆಲಕೂರಿದ ಪಾದವದು ಜೊತೆ ಹೆಜ್ಜೆ ಹಾಕಲು ಕಾದು ಕಂಡಿವೆ ಕನಸು
ನೀನಿಲ್ಲದೆ ನಾನಿಲ್ಲ ನನ್ನ ಮನವಿಲ್ಲಿ ನಿಲ್ಲುವುದಿಲ್ಲ
ನಿನ್ನ ನೆನಪ `ಪ್ರಕಾಶ’ದಲ್ಲೆ ಮನವು ಏಸೊ ದಿನಗಳು ಕಂಡಿವೆ ಕನಸು
]]>
ಈ ಆಸೆಯ ಬಸುರು ಬಲು ಭಾರ…
ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ...
Simply superb.:-)
Fantastic lines.. like it Prakash…
chennagige . so nice