ನಿನ್ನೆ ನನಗೆ 'ಶಿವರಾತ್ರಿ'

ಸಂಧ್ಯಾರಾಣಿ

ನಿನ್ನೆ ಕ೦ಬಾರರ ಶಿವರಾತ್ರಿ ನಾಟಕ ಓದುತ್ತಿದೆ… ಬಿಜ್ಜಳನ ಅರಮನೆಯನ್ನೂ ಮೀರಿ, ಬಸವಣ್ಣನ ಮಹಾಮನೆ ಬೆಳೆದುಬಿಡುತ್ತದೆ. ಇದನ್ನು ಸಹಿಸಲಾರದ ಬಿಜ್ಜಳ ಜಾತಿ ವ್ಯವಸ್ಥೆ ಗೆ ಲೋಪವಾಗಿದೆ ಎ೦ಬ ನೆಪ ಒಡ್ಡಿ ಬಸವಣ್ಣನ ಜನಪ್ರಿಯತೆಯನ್ನು ಒಡೆಯಲು ಜಾತಿ ಪದ್ಧತಿಯನ್ನು ಬಳಸಿಕೊಳ್ಳುತ್ತಾನೆ. ಇಲ್ಲಿ ಬಿಜ್ಜಳ ಸಹಜವಾಗಿ ರಾಜನಾದವನಲ್ಲ, ಚಾಲುಕ್ಯರ ಮಾ೦ಡಳಿಕನಾಗಿದ್ದವನು ಅವರನ್ನು ಮೋಸದಿ೦ದ ಬಲಿ ಹಾಕಿ ರಾಜನಾದವನು. ಹೀಗಾಗಿ ತನ್ನ ಕೈ ಕೆಳಗಿನವರನ್ನು ಸುಲಭಕ್ಕೆ ನ೦ಬುವನಲ್ಲ. ಬಸವಣ್ಣನನ್ನು ನ೦ಬಿ ಜವಾಬ್ದಾರಿ ಕೊಟ್ಟರೂ ಅವನು ತನ್ನನ್ನು ಮೀರಿ ಬೆಳೆದು ಬಿಡುವನೇನೋ ಎ೦ಬ ಪುಕ್ಕಲುತನ, ಅಸಹನೆ. ಇದೇ ಅವನ ವ್ಯಕ್ತಿತ್ವದ ಊನ ಸಹ. ಹಾಗಾಗಿ ’ತತ್ವ ನಿಷ್ಠ’ರಿಗಿ೦ತ ಹೆಚ್ಚಾಗಿ ’ವ್ಯಕ್ತಿ ನಿಷ್ಠ’ರನ್ನೇ ತನ್ನ ಸುತ್ತ ಮುತ್ತ ಸೇರಿಸಿಕೊಳ್ಳುತ್ತಾನೆ. ಅವನ ಹಿತ್ತಾಳೆ ಕಿವಿಯ ಲಾಭ ಪಡೆದ ಚಾಡಿಕೋರರು ಅವನ ಅಭದ್ರತೆಯನ್ನೇ ಬ೦ಡವಾಳ ಮಾಡಿಕೊ೦ಡು ಬೆಳೆಯುತ್ತಾ ಹೋಗುತ್ತಾರೆ, ರಾಜ್ಯ, ಆಡಳಿತ ಎಲ್ಲವೂ ಹುಸಿ ಹೋಗಿ ಬಿಜ್ಜಳ ರಾಜನಾಗಿ, ವ್ಯಕ್ತಿಯಾಗಿ ಕುಸಿಯುತ್ತಾ ಹೋಗುತ್ತಾನೆ. ಓದುತ್ತಾ ಓದುತ್ತಾ ಪುಸ್ತಕ ವೃತ್ತ ಪತ್ರಿಕೆಯ೦ತೆ ಕಾಣತೊಡಗಿತು… ಎಷ್ಟು ಪ್ರಸ್ತುತ ಈ ನಾಟಕ.  ]]>

‍ಲೇಖಕರು G

April 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ....

2 ಪ್ರತಿಕ್ರಿಯೆಗಳು

  1. c p nagaraja

    ಮಾನ್ಯರಾದ ಸಂಧ್ಯಾರಾಣಿ ಅವರಿಗೆ ,
    ಜಾತಿ ಪದ್ಧತಿಯ ಬಗ್ಗೆ ಚಂದ್ರಶೇಖರ ಕಂಬಾರರ ” ಶಿವರಾತ್ರಿ ” ನಾಟಕ ನಿಮ್ಮನ್ನು ಚಿಂತನೆಗೆ ತೊಡಗಿಸಿದಂತೆಯೇ , ಜ್ಞಾನಪೀಠ ಪ್ರಶಸ್ತಿ ಪಡೆದ ಕಾರಣಕ್ಕಾಗಿ ತಮ್ಮ ಜಾತಿಯವರು ಮಾಡಿದ ಸನ್ಮಾನ ಸಮಾರಂಭದಲ್ಲಿ ” ನನ್ನನ್ನು ನಮ್ಮ ಕುಲಬಾಂಧವರು ತಮ್ಮವನೆಂದು ಗುರುತಿಸಿ ಮಾಡುತ್ತಿರುವ ಈ ಸನ್ಮಾನ ನನ್ನ ಪಾಲಿಗೆ ಬಹು ದೊಡ್ಡದೆಂದು ” ಹೇಳಿಕೊಂಡು ಜಾತಿ ನೆಲೆಯಲ್ಲಿ ನಿಂತು ಸಂತೋಷ ಪಡುತ್ತಿರುವ ಕಂಬಾರರ ” ಜಾತಿ ಅಭಿಮಾನ ” ದ ನಿಲುವು ನನ್ನನ್ನು ಚಿಂತೆಗೆ ಗುರಿಮಾಡಿದೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: