ನಿನ್ನೆ ಸಾಯಿನಾಥ್ ಬೆಂಗಳೂರಿನಲ್ಲಿದ್ದರು…

– ಸುನಿಲ್ ರಾವ್

ಲೆಡರರ್ ಹೇಳ್ತಾನೆ “we celebrate words as the most glorious of all human inventions,incomparably the finest of our achievements ” ಅಂತ.ಇವತ್ತು ಅಂತಹ ಪದಗಳನ್ನು ಜೋಡಿಸಿ,ವಾಕ್ಯವಾಗಿಸಿ,ದೃಶ್ಯವಾಗಿಸಿ ನಮ್ಮ ಮುಂದೆ ಇಟ್ಟಿರೋದು ಪತ್ರಿಕೋದ್ಯಮವೆಂಬ ಮಹಾ ಸಾಗರ. ಜುಲೈ ೧ನೆ ತಾರೀಖು ಕನ್ನಡ ಪತ್ರಿಕೋದ್ಯಮದ ದಿನ ಅಂತ ಕರೆಯಲಾಗಿದೆ.ನಮ್ಮ ಸಂವಿದಾನದ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವದ ವ್ಯವಸ್ಥೆಯ ಮುಖ್ಯ ವಾಹಿನಿ ಪತ್ರಿಕೋದ್ಯಮ,ಅದನ್ನು ಅತ್ಯಂತ ಬಲಿಷ್ಟವಾಗಿ ಕಟ್ಟಿದ,ಈಗಲೂ ಅದಕ್ಕಾಗಿ ಶ್ರಮಿಸುತ್ತಿರುವ ಹಿರಿಯರಲ್ಲಿ ಪಿ.ಸಾಯಿನಾಥ್,ದಿ ಹಿಂದೂ ಪತ್ರಿಕೆಯ ಗ್ರಾಮೀಣ ಆವೃತ್ತಿಯ ಸಂಪಾದಕರು,ಅತ್ಯಂತ ಸ್ಮರಣೀಯರು. ನಿನ್ನೆ ಸಾಯಿನಾಥ್ ಬೆಂಗಳೂರಿನಲ್ಲಿದ್ದರು. ಅಭಿನವ,ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನ ಹಾಗು ಅವಧಿಯ ಸಂಯುಕ್ತ ಆಯೋಜನೆಯಲ್ಲಿ ಭಾನುವಾರ ಗಾಂಧೀ ಭವನದಲ್ಲಿ ಹಿರಿಯ ಪತ್ರಕರ್ತರಾದ ಜಿ.ಏನ್.ಮೋಹನ್ ಕನ್ನಡಕ್ಕೆಅನುವಾದಿಸಿದ,ಪಿ.ಸಾಯಿನಾಥ್ ಅವರ EVERY ONE LOVES A GOOD DROUGHT ಪುಸ್ತಕ “ಬರ ಅಂದ್ರೆ ಎಲ್ಲರಿಗೂ ಇಷ್ಟ” ಬಿಡುಗಡೆ ಮಾಡಲಾಯ್ತು.ತಮ್ಮ ಪತ್ರಿಕಾ ವೃತ್ತಿಯಲ್ಲಿ ಸಾಯಿನಾಥ್ ಅವರು ನಡೆಸಿದ ಎಷ್ಟೋ ಸುತ್ತಾಟಗಳು,ರಸ್ತೆಗಳೇ ಇಲ್ಲದ,ನೀರೆ ಇಲ್ಲದ,ಅನ್ನಕ್ಕೂ ಸಮಸ್ಯೆ ಎದುರಿಸುವ,ಯಾವ ರಾಜಕಾರಣಿಯೂ ಓಡಾಡಿರದ ಹಳ್ಳಿಗಳಿಗೆ ಭೇಟಿ ಕೊಟ್ಟು ಅಲ್ಲಿನ ವಾಸ್ತವತೆಯನ್ನು ಪತ್ರಿಕೆಯ ಮೂಲಕ ಕೋಟ್ಯಾಂತರ ಜನಕ್ಕೆ ನೈಜತೆಯನ್ನು ತಿಳಿಸುತ್ತಬಂದ ಮಹಾನುಭಾವ ಅವರು. ಜವಾಬ್ದಾರಿಯುತರಾಗಬೇಕಾದ ರಾಜಕಾರಣಿಗಳು ಮಾಡಬೇಕಾದ ಇಂತಹ ಕಾರ್ಯಗಳನ್ನು ಒಬ್ಬ ಪತ್ರಕರ್ತರು ಮಾಡಿದ್ದಾರೆ ಅಂದ್ರೆ ಅದೊಂದು ಘೋರ ಆಶ್ಚರ್ಯ…ನಿಜಕ್ಕೂ ಅವರ ಕಾರ್ಯಗಳ ಹಿಂದೆ ಅಭಿವೃದ್ಧಿ ಹಾಗು ಸತ್ಯದ ತುಡಿತವಿದೆ,ಇಲ್ಲದೆ ಇರೋದನ್ನು ಸೃಷ್ಟಿಸಿ,ಇದೆ ಎಂದು ಬಿಂಬಿಸುವ ರಾಜಕಾರಣಿಗಳ ಬಗ್ಗೆ ನಾವು ಅಸಹ್ಯ ಪಡಬೇಕಾದರೆ,ರಾಜಕಾರಣಿಗಳಷ್ಟೆ ಅಲ್ಲ,ಬಹಳ ಸಲ ನಮ್ಮ ಬಗ್ಗೆ ಯೋಚಿಸಿಕೊಂಡಾಗಲೂ ಅನ್ನಿಸೋದು ಇದೇ,ನಾವಾದರು ಸಮಾಜಕ್ಕೆ ಮಾಡಿದ್ದೇನು??ನಮ್ಮ ನಮ್ಮ ಸಾಂಸಾರಿಕ ಹಾಗು ಆರ್ಥಿಕ ಬದುಕಿನ ತೊಳಲಾಟಗಳಲ್ಲಿ ಸಾಗುವ ನಮಗೆ ಇದೆಲ್ಲ ಗೊತ್ತೇ ಆಗೋಲ್ಲ,ಗೊತ್ತಾದರೂ ಗಮನ ಹರಿಸೋಲ್ಲ….ನಿಜಕ್ಕೂ ಒಂದು ಸಮಾಜಕ್ಕೆ ಅಭಿವೃದ್ಧಿಯ ಪಥಕ್ಕೆ ಬೇಕಾಗಿರೋದು ಏನು ಎಂಬ ದೀರ್ಘ ವಿಶ್ಲೇಷಣೆ ಹಾಗು experiment ಗಳನ್ನೂ ಸಾಯಿನಾಥ್ ಮಾಡಿದ್ದಾರೆ… ವಿಧರ್ಭದಲ್ಲಿ ಸಾಲು ಸಾಲು ರೈತರ ಆತ್ಮಹತ್ಯೆಗಳು ಸಂಭವಿಸಿದಾಗ ಅಲ್ಲಿ ಹೊರಟು ನಿಂತು ವರದಿ ಮಾಡಿದ್ದಷ್ಟೇ ಅಲ್ಲದ,ಅಲ್ಲಿನ reality check ನಡೆಸಿದವರು ಅವರೇ…ಅದರ ಸಂಪೂರ್ಣ ವರಧಿಯನ್ನು ಮಾಡಿ ಹಿಂದೂ ಪತ್ರಿಕೆಯಲ್ಲಿ ಪ್ರಕಟ ಮಾಡಿದ್ದರು,ಸಾಯಿನಾಥ್ ಬಗ್ಗೆ ಹೇಳಲು ಬೇಕಾದಷ್ಟಿದೆ… ಅಂತಹವರನ್ನು ಬೆಂಗಳೂರಿನಲ್ಲಿ ನಮಗೆ ಲಭ್ಯವಾಗಿಸಿದ್ದು GN.ಮೋಹನ್ ಅವರು. ರಾಜ್ಯ ರಾಜಕಾರಣ,ಕೊಲೆ ಸುಲಿಗೆ ದರೋಡೆಗಳಲ್ಲಿ ಮುಳುಗಿರುವ ನಮ್ಮ TRP ಜೀವಾಳವೆ೦ಬ೦ತೆ ಬದುಕುತ್ತಿರುವ ನಮ್ಮ ಮಾಧ್ಯಮದ ಹಾಗು ಅದರ ರುವಾರಿಗಳ ಮಧ್ಯೆ ಕನ್ನಡಕ್ಕೆ ಒಂದು ಉತ್ಕೃಷ್ಟ ಪುಸ್ತಕವನ್ನು ಸದ್ದಿಲ್ಲದೇ ಅನುವಾದ ಮಾಡಿ,ಅದನ್ನು ನಮಗೆ ಕೊಟ್ಟಿದ್ದು ಮೋಹನ್ ಅವರು.ನಮ್ಮ ಪತ್ರಿಕೆಗಳು ನಮ್ಮನ್ನು ಸಂಕುಚಿತ ಮಾಡ್ತಿವೆ,ನಮ್ಮ ಭಾಷಾವಲಯ ಹಾಗು ಆಲೋಚನಾ ವಿಧಾನ ಬಹಳವೇ ಸಂಕುಚಿತವಾಗಿತ್ತು,ಉದಾಹರಣೆ ನಮ್ಮ ಪತ್ರಿಕೆಗಳಲ್ಲಿ ನಾವು ಕಾಣುವ ಕೊಲೆ ಸುಲಿಗೆ ದರೋಡೆಯ ಸುದ್ಧಿಗಳನ್ನು ಬಿಟ್ಟು,ಅಬ್ಬಬ್ಬ ಅಂದರೆ ಹೆಚ್ಚಾಗಿ ಕಾಣುತ್ತಿದ್ದದ್ದು ಕೆಲವೇ ಕೆಲವು ಪತ್ರಕರ್ತರ ಒಳ್ಳೆಯ ಅಂಕಣಗಳು,ಅದನ್ನು ಬಿಟ್ಟರೆ ಅನುವಾದಿತ ಅಂಕಣಗಳು…..ಇನ್ನು ಮಿಕ್ಕೀಲ್ಲ ಕುಚೇಷ್ಟೆ,ತೆಗಳಿಕೆ ಹಾಗು ಹೊಗಳಿಕೆಯಲ್ಲೇ ಮುಳುಗಿಬಿಟ್ಟಿವೆ ..ಇದು ಒಬ್ಬ ಓದುಗನಾಗಿ ನನ್ನ ಪ್ರಾಮಾಣಿಕ ಅಭಿಪ್ರಾಯ…ನಮ್ಮ ಆಲೋಚನಾ ವಿಧಾನದ ವಿಸ್ತೀರ್ಣತೆ ಹಾಗು ಆಳವನ್ನು ಹೆಚ್ಚಿಸುವ ಯಾವೊಂದು ಪ್ರಯತ್ನ ಮಾಧ್ಯಮ ಮಾಡುತ್ತಿಲ್ಲ ಅಥವಾ ಮಾಡಲು ಇನ್ನು ಮಂದ ಗತಿ ಅಂದುಕೊಳ್ಳುತ್ತಿದ್ದಾಗ ಇಂತಹ ಪುಸ್ತಕ ನಮಗೆ ಕೊಟ್ಟ ಮೋಹನ್ ಅವರಿಗೆ ಬಹಳವೇ ಆಭಾರಿ. ಗಾ೦ಧಿಭವನದಲ್ಲಿ ಕಾರ್ಯಕ್ರಮ ಚನ್ನಾಗಿ ವ್ಯವಸ್ತೆ ಮಾಡಲಾಗಿತ್ತು.ದೇವನೂರು ಮಹಾದೇವ,ಜಸ್ಟಿಸ್ HN ನಾಗಮೋಹನ ದಾಸ್,ಪಾರ್ವತಿ ಮೆನನ್,ಚಿಕಿ ಸರ್ಕಾರ್ ಪುಸ್ತಕ ಬಿಡುಗಡೆ ಗೊಳಿಸಿದರು,ಎಲ್ಲಕಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಕೌಂಟರ್ ಮೀಡಿಯಾ ಪ್ರಶಸ್ತಿ ಸಮಾರಂಭ….ಗ್ರಾಮೀಣ ವಿಭಾಗದಲಿ ಜನರೊಂದಿಗೆ ಬೆರೆತು,ಅವರ ತುಡಿತಗಳನ್ನು ಅರ್ಥಮಾಡಿಕೊಂಡು ವರದಿ ಮಾಡಿ,ತಾವೇ ಸಮಸ್ಯೆಯ ಒಂದು ಭಾಗವೇನೋ ಎಂಬಂತೆ ಆಳವಾಗಿ ತಮ್ಮನ್ನು ತೊಡಗಿಸಿಕೊಂಡ ಪತ್ರಕರ್ತರಾದ ಗಾಯತ್ರಿ ಹಾಗು TK ದಯಾನಂದ ಅವರಿಗೆ ಪ್ರಶಸ್ತಿ ಕೊಟ್ಟಿದ್ದು.ಅಯ್ವತ್ತು ಸಾವಿರ ನಗದು ಹಾಗು ಸ್ಮರಣಿಕೆಯನ್ನು ಕೊಟ್ಟು,ಜೊತೆಯಲ್ಲೇ ಒಂದು ಕ್ಯಾಮೆರಾವನ್ನು ಕೊಡಲಾಯ್ತು…ಇದು ಪತ್ರಕರ್ತರ ಸಾಧನೆಗೆ ಅತ್ಯಂತ ಸೂಕ್ತ ಪ್ರಶಸ್ತಿ…ಹಾಗು ಉಳಿದೆಲ್ಲರಿಗೂ ಸ್ಫೂರ್ತಿ.ಕೊನೆಯಭಾಗವಾಗಿ NERO ‘s guest ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯ್ತು ಹಾಗು ಸಾಯಿನಾಥ ಅವರೊಂದಿಗೆ ಸಂವಾದ ನಡೆಸಲಾಯ್ತು…ನಾಗೇಶ್ ಹೆಗ್ಡೆ,ಅಮ್ಮು ಜೋಸೆಫ್ರಂತಹ ಹಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು… ಒಟ್ಟಿನಲ್ಲಿ ಇದೊಂದು ಪ್ರೌಢ ಕಾರ್ಯಕ್ರಮn, ಈಗೀಗ ಬರೆಯಲು ಶುರುವಿಟ್ಟಿರುವ,ಪ್ರತಿಯೊಬ್ಬರಿಗೂ ಸ್ಫೂರ್ತಿ ಕೊಡುವ ಇಂತಹ ಪುಸ್ತಕ ಹಾಗು ಕಾರ್ಯಕ್ರಮ ಇನ್ನು ಹೆಚ್ಚು ಹೆಚ್ಚು ನಮಗೆ ಮಾಧ್ಯಮ ಕೊಡಲಿ ಎಂದು ವಿನಂತಿ ಮಾಡುವೆ..]]>

‍ಲೇಖಕರು G

July 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

5 ಪ್ರತಿಕ್ರಿಯೆಗಳು

 1. Prakash Srinivas

  ಸುನಿಲ್..
  ನಿಜಕ್ಕೂ ಒಳ್ಳೆಯ ಲೇಖನ!
  ನಿಮ್ಮ ಕೈಯಲ್ಲಿ ಸಿಗುವ ಎಲ್ಲ ವಿಷಯಗಳನ್ನು ಜನಗಳಿಗೆ ಅರ್ಥ ಮಾಡಿಸುವ
  ನಿಮ್ಮ ಬರವಣಿಗೆಗೆ ನಾನು ಅಭಿಮಾನಿ!
  ನಿಮ್ಮ ಬರವಣಿಗೆಯ ಪಯಣ ಹೀಗೆ ಸಾಗುತ್ತಲೇ ಇರಲಿ!
  ನಿಮ್ಮ ಮತ್ತಷ್ಟು ಲೇಖನಗಳನ್ನು ಓದುವುದಕ್ಕೆ
  ಕಾಯುತ್ತಿರುವ ನಿಮ್ಮ ಅಭಿಮಾನಿ!

  ಪ್ರತಿಕ್ರಿಯೆ
 2. H.R.NAVEENKUMAR

  ಜುಲೈ 1 ಪತ್ರಕರ್ತರ ದಿನಾಚರಣೆ ಅಂದು ಭಾರತದ ಪತ್ರಿಕಾ ರಂಗದ ದಿಕ್ಕನ್ನು ಬದಲಾಯಿಸಿದ, ಪತ್ರಿಕೋಧ್ಯಮಕ್ಕೆ ಹೊಸ ಭಾಶ್ಯೆ ಬರೆದ ಪಿ.ಸಾಯಿನಾಥ್ ರವರು ಬೆಂಗಳೂರಿಗೆ ಬಂದಿದ್ದರು. ಅವರು ಇಂಗ್ಲೀಷ್ ನಲ್ಲಿ ಬರೆದಿರುವ ‘ಎವರಿ ಬಡಿ ಲವ್ಸ್ ದಿ ಡ್ರಾಟ್’ ಪುಸ್ತಕವನ್ನು ಸೃಜನಶೀಲ ಬರಹಗಾರರಾದ ಜಿ.ಎನ್.ಮೋಹನ್ ಕನ್ನಡಕ್ಕೆ ಅನುವಾದಿಸಿದ್ದ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಪುಸ್ತಕ ಬೆಂಗಳೂರಿನ ಗಾಂಧಿ ಭವನದಲ್ಲಿ ಕಿಕ್ಕಿರಿ ಅಭಿಮಾನಿಗಳ ನಡುವೆ ಅಭನವ ಪ್ರಕಾಶನ ಬಿಡುಗೊಡೆಗೊಳಿತು. ಪುಸ್ತಕವನ್ನು ಬಿಡುಗಡೆಮಾಡಿದ ನಂತರ ಪಿ.ಸಾಯಿನಾಥ್ ರವರ ಕುರಿತಾದ ‘ನ್ಯೂರೋ ಗೆಸ್ಟ್’ ಸಾಕ್ಷಚಿತ್ರ ಪ್ರದರ್ಶನವಾಯಿತು. ಈ ಸಾಕ್ಷ ಚಿತ್ರವನ್ನು ನೋಡಿದಮೇಲಂತೂ ಪಿ.ಸಾಯಿನಾಥ್ ರ ಕೆಲಸದ ವೈಕರಿ ಅವರು ಬೆಳೆದು ಬಂದ ರೀತಿ ಮತ್ತು ದೇಶದ ದುಡಿಯುವ ವರ್ಗದ ಮೇಲೆ ಅದರಲ್ಲೂ ರೈತ ಸಮುದಾಯದ ಮೇಲೆ ಅವರಿಟ್ಟಿರುವ ಅಪಾರ ಶ್ರದ್ದೆ, ತಮ್ಮ ಬರಹಗಳ ಮೂಲಕ ರೈತ ಸಮುದಾಯದ ನೈಜ ಸಮಸ್ಯೆಗಳನ್ನು ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಅಂಶಗಳನ್ನು ಪತ್ರಿಕೆಗಳಿಗೆ ಬರೆಯುತ್ತಲೇ ಅವರು ಬೆಳದರು, ಆಮೂಲಕ ಆಳುವ ಸರ್ಕಾರಗಳ ಬೇಜವಾಭ್ದಾರಿತನವನ್ನು ಬಯಲಿಗೆಳೆಯುತ್ತ ಜವಾಭ್ದಾರಿಗಳ ಬಗ್ಗೆ ಎಚ್ಚರಿಸಿಕೊಂಡು ಭಾರತದ ಪತ್ರಿಕೋಧ್ಯಮದಲ್ಲೇ ಒಂದು ವಿಭಿನ್ನ ದೃಷ್ಟಿಕೋನವನ್ನು ಕೊಡುವ ಮೂಲಕ ಯು ಪತ್ರಕರ್ತರನ್ನು ಗ್ರಾಮೀಣ ಬಡ ಜನರ ಬಳಿಗೆ ಸೆಳೆದವರು ಪಿ.ಸಾಯಿನಾಥ್.
  ಇವರು ಮಾತನಾಡುತ್ತಾ ಜಾಗತೀಕರಣದ ಪರಿಣಾಮವಾಗಿ ಮಾಧ್ಯಮ ಉಧ್ಯಮವಾಗಿ ಬದಲಾಗಿದೆ, ಅಲ್ಲಿ ಎಲ್ಲರಿಗೂ ಲಾಭ ಮಾಡುವ ಉದ್ದೇಶ ಬಿಟ್ಟರೆ ಜನರ ಸಮಸ್ಯೆಗಳನ್ನು ಕುರಿತು ವರದಿಗಳನ್ನು ಮಾಡುವ ಯಾವ ಉದ್ದೇಶವೂ ಇಲ್ಲ. ಅದಕ್ಕಾಗಿಯೇ ದೇಶದ ಯಾವುದೇ ದೃಶ್ಯಮಾಧ್ಯಮವಾಗಲೀ ಅಥವಾ ಮುದ್ರಣ ಮಾಧ್ಯಮವಾಗಲೀ ಕೃಷಿ, ನಿರುದ್ಯೋಗದಂತಹ ವಿಷಯಗಳನ್ನು ಒರತುಪಡಿಸಿ ಎಲ್ಲಾ ವಿಚಾರಗಳಗೂ ಪ್ರತ್ತೇಕ ವರದಿಗಾರರನ್ನು ನೇಮಿಸಿರುತ್ತಾರೆ ಎಂದರು.
  ನನಗೆ ಪಿ.ಸಾಯುನಾಥ್ ತುಂಬ ಇಷ್ಟವಾಗುವುದು ಅವರು ಯಾವುದೇ ಒಂದು ಸಮಸ್ಯೆಯನ್ನು ನೋಡುವ ರೀತಿ ಮತ್ತು ಅದರ ಮೂಲಕ ಸಮಸ್ಯೆಯ ಆಳಕ್ಕಿಳಿದು ಅದನ್ನು ಪ್ರತ್ಯಕ್ಷವಾಗಿ ಕಂಡು ಅದನ್ನು ಧಾಖಲಿಸುವ ವಿಧಾನ ಮತ್ತು ಅವರು ಸಮಾಜದ ಎರಡು ತುದಿಗಳಲ್ಲಿ ನಡೆದಿರುವ ಘಟನೆಗಳನ್ನು ಆದರಿಸಿ ಅವುಗಳ ವೈರುಧ್ಯವನ್ನು ಬಹಳ ಸೊಗಸಾಗಿ ವಿವರಿಸುತ್ತಾರೆ ಉದಾಹರಣೆಗೆ ಅವರು ಯಾವಾಗಳೂ ಮಾತನಾಡುವಹಾಗೆ ಮಹಾರಷ್ಟ್ರದ ರಾಜಧಾನಿ ಬಾಂಬೆಯಲ್ಲಿ ಕಾಟನ್ ಬಟ್ಟೆ ಕುರಿತು ಲ್ಯಾಕ್ಮಿ ಕಂಪನಿಯಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಅದನ್ನು ವರದಿಮಾಡಲೆಂದು ದೇಶ-ವಿದೇಶಗಳಿಂದ 200 ಕ್ಕೂ ಹೆಚ್ಚು ಪತ್ರಕರ್ತರು, ಚಾಯಾಚಿತ್ರಗಾರರು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದರು. ಆದರೆ ಅದೇ ರಾಜ್ಯದ ಫ್ಯಾಶನ್ ಶೋ ನಡೆಯುವ 300 ಕಿ.ಮಿ ದೂರದಲ್ಲಿ ರುವ ವಿದರ್ಬಾದಲ್ಲಿ ರೈತರು ಅತ್ತಿ ಬೆಳೆದು ಬೆಲೆಸಿಗದೆ ಸಾಲಮಾಡಿ ಆತ್ಮಹತ್ಯೆಮಾಡಿಕೊಂಡಿದ್ದರೆ ಅದನ್ನು ವರದಿಮಾಡಲು ಕೇವಲ 5 ಜನ ಪತ್ರಕರ್ತರಿದ್ದರಂತೆ. ಅಂದರೆ ಭಾರತದ ಪತ್ರಿಕೋಧ್ಯಮದ ಆಧ್ಯತೆ ಏನೆಂದು ಕೊತ್ತಾತಿತ್ತಲ್ಲ. ಇದನ್ನು ಸಮಾಜದ ಮುಂದೆ ಅಂಕಿಸಂಖ್ಯೆ ಸಮೇತ ಸಾದರಪಡಿಸುವುದರಲ್ಲಿ ಸಾಯಿನಾಥ್ ಎಲ್ಲರಿಗೂ ಮಾದರಿಯಾಗಿದ್ದಾರೆ.

  ಪ್ರತಿಕ್ರಿಯೆ
 3. puttegowda

  ಕಾರ್ಯಕ್ರಮ ಚೆನ್ನಾಗಿತ್ತು.ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ನಾಗೇಶ ಹೆಗಡೆ ಅವರು ಪತ್ರಕೋದ್ಯಮದ ೊಬ್ಬ ಟೀಚರ್ರೂ ಬರಲಿಲ್ಲ ೆಂದು ಬೇಸರಿಸಿದರು ಅದಕ್ಕೆ ಯು ಜಿ ಸಿ ಯನ್ನು ಹೊಣೆಮಾಡಬೇಕು ಎಂದು ಯಾರೋ ಕಾಮೆಂಟ್ ಮಾಡಿದರು. ಕಾಲೇಜು ಮೇಷ್ಟ್ರಿಗೆ ಸಿಗುವ ಻ಧಿಕ ವೇತನದಿಂದಾಗಿ ಮೇಷ್ಟ್ರುಗಳು ರಿಯಲ್ ಎಸಟೇಟ್ ಧಮಧೆ, ಟ್ರಾವೆಲ್ ಬಿಸಿನೆಸ್, ಎರಡು ಮೂರು ಸಂಸಾರಗಳ ತಾಪತ್ರಯದಲ್ಲಿ ಸಾಯಿನಾಥರ ಭಾಷಣಕ್ಕೆ ಸಮಯ ಹೊಂದಿಸುವುದು ಹೇಗೆ? ಅಂದಹಾಗೆ ಮೇಲಿನ ಲೇಖನದಲ್ಲಿ ಹೇಳಿರುವ ಘೋರ ಆಶ್ಚರ್ಯಎದರೇನು? ಗೊತ್ತಾಗಲಿಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: