ಗೆಜ್ಜೆ ಕಟ್ಟಿಕೊಂಡ ಕಾಲು ಕುಣಿಯಲೇ ಬೇಕೆಂದೇನೂ ಇಲ್ಲ
ಸಂತೋಷ್ ಬಾಗಿಲಗದ್ದೆ
ಘಲ್ಲೆಂದರೆ ಅದರರ್ಥ
ಬರೀ ಖುಷಿ ಮಾತ್ರವೇ ಅಲ್ಲ
ಗೆಜ್ಜೆ ಸದ್ದಿನ ಗರ್ಭದಲ್ಲೂ
ಇದ್ದೀತು ಸುಡು ನೋವು
ಕುಣಿವ ಮೃದು ಪಾದಕ್ಕೂ
ಒಮ್ಮೊಮ್ಮೆ ಒಜ್ಜೆ ಅನ್ನಿಸೀತು
ಗೆಜ್ಜೆ ಗೊಂಚಲ ಹಾರ
ಇದ್ದರೂ ಇದ್ದೀತು ಬೆಳಕಲ್ಲಿ
ಮಿಂದ ಪಾದದಾತ್ಮದಲಿ
ಬರೀ ಕತ್ತಲ ಪಸೆ, ಯಾರದೋ
ಮೋಸದಿರಿತದ ಗಾಯ
ಗೆಜ್ಜೆ ಕಟ್ಟಿಕೊಂಡ ಕಾಲು
ಕುಣಿಯಲೇ ಬೇಕೆಂದೇನೂ ಇಲ್ಲ
ಬೆಳಕಿನ ಬೆನ್ನಲ್ಲಿಯೇ
ಅವಿತಿದ್ದೀತು ಕತ್ತಲು
ಇದೆಲ್ಲದರಾಚೆ
ನೀನು ಬಿಕ್ಕಳಿಕೆಗಳನ್ನೂ
ಭರಿಸಿಕೊಂಡು ಕುಣಿಯುತ್ತೀಯಾದರೆ
ನಿನ್ನ ಅಂಗಾಲು ಮುತ್ತಿಡುವ
ನೆಲ ನಾನಾದೇನು!
ಕೊನೆಯೆರಡು ಸಾಲುಗಳು ಅತೀ ಅಪರೂಪ ಚಿತ್ತಕ್ಕೆ. ಸೂಪರ್ ಸರ್
ಗೆಜ್ಜೆ ಕಟ್ಟಿಕೊಂಡ ಕಾಲು
ಕುಣಿಯಲೇ ಬೇಕೆಂದೇನೂ ಇಲ್ಲ…
ತುಂಬಾ ಕಾಡಿದ ಸಾಲು.
Subtle & touching. Very nice.
Aha, ishtavaaythu….
ಅದ್ಭುತ ಸಾಲುಗಳು ಸಂತು..
ತುಂಬ ಚೆನ್ನಾಗಿದೆ ಸಂತೋಷ್ ಜೀ…
Super….super…..Thumba channagide..
kaaduva kavite..