ನಿನ್ನ ನಿರ್ಭಾವುಕ ನೋಟವ ಸಹಿಸಲಾರೆ….

ಪ್ರಿಯೆ..

– ಕೆ ಎಸ್ ಅಪ್ಪಣ್ಣ

ಪ್ರಿಯೆ, ನಿನ್ನ ಮನೆಯೆದುರು ನಿನಗಾಗಿ ಕಾದು ನಿಂತಿದ್ದೇನೆ.. ಗೊತ್ತು ನೀ ಒಳಗಂತೂ ಕರೆಯಲಾರೆ.. ಬೇಕಾದರೆ ಬಯ್ದು ಬಾಗಿಲು ಮುಚ್ಚಿಬಿಡು.. ತಡೆದುಕೊಳ್ಳುತ್ತೇನೆ..   ನಿನ್ನ ಪ್ರೇಮಕ್ಕಾಗಿ ಹಂಬಲಿಸುತ್ತಿದೆ ಜೀವ.. ಪ್ರೀತಿಸಬೇಡ ಬಿಡು..ಒಮ್ಮೆ ಮಾತಾಡಿಸಿದರೂ ಸಾಕು .. ನಿನ್ನ ಮನಸನ್ನು ತಾಕಿದ ಖುಷಿಯಲ್ಲೇ ಬದುಕಿಕೊಳ್ಳುತ್ತೇನೆ..   ನಿನ್ನೊಂದು ಕಿರುನಗೆಗೆ ಕಾತರಿಸುತ್ತಿದ್ದೇನೆ.. ಬೇಕಾದರೆ ಉಗಿದು ಆಚೆಗಟ್ಟಿಬಿಡು ಅವಮಾನ ತಾನೇ… ಅವಡುಗಚ್ಚಿ ನುಂಗಿಬಿಡುತ್ತೇನೆ..   ನಿನ್ನ ಪ್ರೇಮವ ಬೇಡುತ್ತಿವೆ..ನನ್ನ ಕಂಗಳ ಭಿಕ್ಷೆಬಟ್ಟಲು ನಿರಾಕರಿಸಿ ಸರಿದುಬಿದು ,ಒಪ್ಪಿಕೊಳ್ಳುತ್ತೇನೆ.. ಕಲ್ಲುಹೃದಯಿಯೆಂದು ನಕ್ಕು ಸುಮ್ಮನಾಗುತ್ತೇನೆ..   ನಿನ್ನೊಂದು ಅಕ್ಕರೆಯ ನೋಟಕ್ಕೆ ಪರಿತಪಿಸಿದೆ..ಹೃದಯ.. ಸುಮ್ಮನೆ ದಾಟಿ ಸಾಗುವ ಮುನ್ನ ಒಮ್ಮೆ ಪ್ರೀತಿಯಲಿ ತಿರುಗಿ ನೋಡು..ತೃಪ್ತನಾಗುತ್ತೇನೆ..   ನಿನ್ನ ಬೆರಳ ಮೊನೆಯನೊಮ್ಮೆ ತಾಕುವಾಸೆ.. ಬೇಕಾದರೆ ಕಪಾಳಕ್ಕೆ ಹೊಡೆದುಬಿಡು ನಿನ್ನ ಮೊದಲ ಉಡುಗೊರೆಯೆಂದು ನೆನಪಿನಲ್ಲಿ ಜೋಪಾನ ಮಾಡುತ್ತೇನೆ..   ಆದರೆ ಹುಡುಗೀ, ಹೀಗೆ ನೋಡಬೇಡ ಖಾಲಿ ಕಣ್ಣುಗಳಿಂದ…. ನಿನ್ನ ನಿರ್ಭಾವುಕ ನೋಟವ ಸಹಿಸಲಾರೆ. ಕಡೆಗಣಿಸಬೇಡ ನನ್ನ , ನನ್ನಿರವನ್ನೇ ಅಲ್ಲಗೆಳೆವಂತೆ.. ನಿನ್ನೀ ನಿರ್ಲಕ್ಷ್ಯ ತಾಳಲಾರೆ…   ಪ್ರೇಮದಾಣೆ… ನಾ ಬದುಕಲಾರೆ….]]>

‍ಲೇಖಕರು G

June 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸತ್ಯವು ಸುಡುತಿರುವಾಗ…

ಸತ್ಯವು ಸುಡುತಿರುವಾಗ…

ಇಮ್ತಿಯಾಜ್ ಶಿರಸಂಗಿ ರಾತ್ರೋರಾತ್ರಿ ಚಿತೆಗಳೂರಿದುಸತ್ಯವು ಸುಡುತಿರುವಾಗ... ಸತ್ತವರ ನೋವನ್ನುಪ್ರಜೆಗಳು ನೆನಪಿಟ್ಟುಕೊಳ್ಳಬೇಕು…...

ಎಲ್ಲವೂ ಸಾಕು

ಎಲ್ಲವೂ ಸಾಕು

ಸುಮಾ ಕಂಚೀಪಾಲ್ ಎಲ್ಲವೂ ಸಾಕುಈ ಕೆಂಡದ ಮಳೆ ಸುರಿವ ಪ್ರೀತಿಯಗಾಳಿಯಲಿನಾನು, ಅವನ ಸಿಗರೇಟಿನವಾಸನೆ ಇಲ್ಲದಬರಿಯ ಗಾಳಿಗೆ ಜೀವ ಇಲ್ಲಎಂದು ಈಗ...

ನಿರುತ್ತರ

ನಿರುತ್ತರ

ಪ್ರಕಾಶ್ ಬಿ ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು, ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ, ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This