ನಿನ್ನ ಮನೆಯ ಬಾಗಿಲು ಬಡಿದೆ…

ಮೂಲ ತೆಲಗು: ದೇವರಕೊಂಡ ಬಾಲಗಂಗಾಧರ ತಿಲಕ
ಇಂಗ್ಲಿಷ್ ಗೆ: ಜೆ. ಸತ್ಯಾನಂದ ಕುಮಾರ
ಕನ್ನಡಕ್ಕೆ: ಉದಯ ಇಟಗಿ

‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇದು ೧೯೭೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

rain_by_cunyadenki

ನಿನ್ನೆ ರಾತ್ರಿಯ ತುಂತುರು ಮಳೆಯಲ್ಲಿ ನೆನೆದುಕೊಂಡೇ ಬಂದು ನಿನ್ನ ಮನೆಯ ಬಾಗಿಲು ಬಡಿದೆ

ನಿದ್ದೆಗಣ್ಣಲ್ಲೊಮ್ಮೆ ನನ್ನ ನೋಡಿ ಕರುಣಾಜನಕವಾಗಿ ನಕ್ಕು ಒಳಗೆ ಬರ ಹೇಳಿದೆ

ಮಬ್ಬುಗತ್ತಲೆಯ ಚಂದಿರ ಕತ್ತಲನ್ನು ಸೀಳಿಕೊಂಡುಬಂದು ನನ್ನ ಕಣ್ಣೊಳಗೆ ಮಿನುಗಿದ

ಹೂ ಮೇಲಿನ ಪರಾಗವೊಂದು ಹಾರಿಬಂದು ನನ್ನೆದೆಗೆ ಬಡಿದು ಕೆಳಗೆಬಿತ್ತು

ನಾಚಿಕೆಯಿಂದ ತಲೆತಗ್ಗಿಸಿದೆ ನಿನ್ನತ್ತ ನೋಡಲಿಲ್ಲ

ಅವಸರವಸರವಾಗಿ ಕೋಣೆಯೊಳಗೆ ಓಡಿಹೋಗಿ ಬಾಗಿಲು ಮುಚ್ಚಿಕೊಂಡೆ

ಆ ಕತ್ತಲ ರಾತ್ರಿಯ ಏಕಾಂತದಲ್ಲಿ ಎತ್ತೆಂದೆರತ್ತ ಒಬ್ಬಂಟಿಯಾಗಿ ಓಡಾಡಿದೆ

ಎಷ್ಟೊಂದು ನೋವುಗಳು! ಎಷ್ಟೊಂದು ನಿಟ್ಟುಸಿರುಗಳು!

ಥಟ್ಟನೆ ನನ್ನೊಳಗಿನ ನಿನಾದ ನಿಂತುಹೋಯಿತು

ಆ ರಾತ್ರಿ ನನ್ನ ಅಖಂಡ ಪ್ರೀತಿಯನ್ನು ಸಾದರಪಡಿಸಲೆಂದೇ

ಸುಮಧುರ ಗೀತೆಗಳ ಗುಚ್ಚವೊಂದನ್ನು ಉಡುಗೊರೆಯಾಗಿ ಕೊಡಲು ತಂದಿದ್ದೆ

ಊಹೂಂ, ಕೊಡಲಾಗಲಿಲ್ಲ ಹಾಗೆ ಹೊರಟುಹೋದೆ

ಊರೂರು ಅಲೆಯುತ್ತಾ ಕಾಡು-ಮೆಡುಗಳನ್ನು ದಾಟುತ್ತಾ

ನಭದ ನಕ್ಷತ್ರಗಳಿಗೆ ರಾಗ ಹಾಕುತ್ತಾ ಅನಂತಾನಂತ ಜಗದ ಗಡಿಗಳನ್ನು ಹುಡುಕುತ್ತಾ

ಅತ್ತ ಇತ್ತ ಒಬ್ಬಂಟಿಯಾಗಿ ಅಲೆದಾಡಿದೆ ಆ ಕತ್ತಲ ರಾತ್ರಿಯ ಏಕಾಂತದಲ್ಲಿ

ಎಲ್ಲಿ ನೋಡಿದರಲ್ಲಿ ಶೋಚನೀಯ ಕಣ್ಣುಗಳ ಪ್ರಶ್ನೆಗಳು

ಮೂಕ ವೇದನೆಗಳ ಕರೆಗಳು ಗೋಳಿಡುವ ಪ್ರಲಾಪನೆಗಳು

ನೋವಿನ ಬೇಗೆಯಲ್ಲಿ ಬೆಂದುಹೋದ ಜೀವಗಳು

ಬರಿ ಇಂಥವೇ ದೃಶ್ಯಗಳು ಕಾಣಿಸಿದವು!

‍ಲೇಖಕರು avadhi

September 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

ಚೈತ್ರಚೇತನ ಕೊನರಿ…

ಚೈತ್ರಚೇತನ ಕೊನರಿ…

ಅರ್ಚನಾ ಎಚ್ ಹೆಡೆಯರಳಿ ಬುಸುಗುಟ್ಟಿಕೋಪದುರಿಬುಗ್ಗೆಗಳ ಎಸರು..ತಿಳಿಬಾನಿಗೆರಚಿ ಕೆಸರು..!!ರಾಡಿಕೊಳದಲಿ ಕಂಡದ್ದು ಭಗ್ನ...

ಮಣ್ಣ ಕಾಯಕ ಕಾಯುವುದಷ್ಟೇ…

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ...

೧ ಪ್ರತಿಕ್ರಿಯೆ

  1. minchulli

    ತುಂಬಾ ಚೆಂದದ ಕವನ… ಭಾವಲೋಕ ಕಣ್ಣಿಗೆ ಕಟ್ಟುವಂತಿತ್ತು….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: