ರಂಗಭೂಮಿ ಹಾಗೂ ಕ್ಯಾಮೆರಾ ಎರಡನ್ನೂ ಸಮಾನವಾಗಿ ಪ್ರೀತಿಸುವವರು ನಾಗರಾಜ ಸೋಮಯಾಜಿ.
ಇತ್ತೀಚಿಗೆ ತಾನೇ ‘ಫೋಕಸ್’ ಎನ್ನುವ ತಮ್ಮದೇ ಕನಸಿಗೆ ಗರಿ ಕಟ್ಟಿದ್ದಾರೆ.
ಸೋಮಯಾಜಿ ತೆಗೆದ ಒಂದು ಫೋಟೋ ‘ಅವಧಿ’ಯಲ್ಲಿ ಪ್ರಕಟಿಸಿದ್ದೆವು. (ಮೇಲಿನ ಫೋಟೋ)
ಈ ಚಿತ್ರಕ್ಕೆ ಗೀತಾ ಹೆಗ್ಡೆ ಕವಿತೆಯ ಪ್ರತಿಕ್ರಿಯೆ ನೀಡಿದರು. ಅದು ಇಲ್ಲಿದೆ
ನಂತರ ಕುಸುಮಾ ಪಟೇಲ್ ಕವಿತೆಯ ಮೂಲಕವೇ ತಮ್ಮ ಮನದಾಳವನ್ನು ತೆರೆದಿಟ್ಟರು. ಅದು ಇಲ್ಲಿದೆ
ವಿಜಯಲಕ್ಷ್ಮಿ ಅವರು ‘ರಂಗಮಂಚ’ಕೆ ಮನಸೋತು ಕುಣಿಯಿತೊಂದು ಕವಿತೆ! ಬರೆದರು
ಓಈಗ ವೃಂದಾ ಸಂಗಂ ಸರದಿ
ಓದಿ, ನೀವೂ ಕವಿತೆ ಬರೆಯಿರಿ
ವೃಂದಾ ಸಂಗಂ
ಭಾವನೆಗೆ ಇಲ್ಲಿ ಬೆಲೆಯಿಲ್ಲ.
ರಂಗ ಮಂಚದ ಬೆಳಕು
ಇಲ್ಲಿಯೂ ತೂರಿ,
ಸಮಯವಾಗಿದೆ ಎನ್ನುತಿದೆ
ಏಳಮ್ಮ ಗೌರಿ.
ಅಭಿಮಾನಿ ದೇವರು ನಿನಗೆ
ಕಾದಿಹರೆ ನಾರಿ,
ತಟ್ಟುವರು ಚಪ್ಪಾಳೆ ತಮ್ಮ
ಅಭಿಮಾನ ತೋರಿ.
ಅವರ ಕಾಯುವಿಕೆ ಇಹುದು ನಿನ್ನ
ಕಡೆಗಣ್ಣ ನೋಟಕೆ,
ಅವರ ಕಣ್ಣೆಲ್ಲ ಇಹುದು ನಿನ್ನ
ಸುಳಿಗಲ್ಲದ ಮಾಟಕೆ.
ತಿರುತಿರುಗುತ ಮೆರೆವ
ವೈಯಾರದ ಸೊಂಟಕೆ,
ಹಾರ ಪದಕಗಳ ಹೊತ್ತ
ಸೆರಗಿನ ಮರೆಯಾಟಕೆ.
ಬೇಕಾಗಿಲ್ಲ ಇಲ್ಲಿ ಯಾರಿಗೂ
ನಿನ್ನ ಪ್ರತಿಭೆಯ ಹೆಜ್ಜೆ,
ತಾಳಕೆ ಸರಿಯಾಗಿ ಕುಣಿವ
ಘಲ್ಲು ಘಲ್ಲೆನುವ ಗೆಜ್ಜೆ.
ಹಾಡಿನ ರಾಗ ಭಾವಕೆ ನಿನ್ನ
ಆಂಗಿಕ ಅಭಿನಯದ ಹೆಜ್ಜೆ,
ಬೇಕವರಿಗೆ ಕೇವಲ ನಿನ್ನ
ಸಿರಿಮೊಗದ ಲಜ್ಜೆ,
ಕುಡಿನೋಟದ ಸಜ್ಜೆ.
ದೇಗುಲದ ಘಂಟೆ ನಾದದಂತೆ
ಕೈ ಮುಗಿಯರು ಈ ಗೆಜ್ಜೆ ನಾದಕೆ,
ಎಷ್ಟೆ ಕುಣಿದರು ನಿನ್ನ ಕೂರಿಸರು ನಿನ್ನ
ಪಟ್ಟದರಸಿಯ ಸ್ಥಾನಕೆ,
ಇಲ್ಲಿರುವ ಸೊಡರುಗಳು ಬೆಳಕ ಚಲ್ಲಲು ಮಾತ್ರ
ನಂದಾದೀವಿಗೆಗಳಲ್ಲ.
ಕುಣಿಯಲಣಿಯಾಗು ಏಳು
ಭಾವನೆಗೆ ಇಲ್ಲಿ ಬೆಲೆಯಿಲ್ಲ.
ಓಹ್, ಚೆನ್ನಾಗಿದೆ.
ಅವಧಿ ತುಂಬಾ ಧನ್ಯವಾದಗಳು
ಧನ್ಯವಾದಗಳು ಸಂಗೀತ.
ಧನ್ಯವಾದ ಅವಧಿಗೂ.
ಅದ್ಬುತ ! ಕಲ್ಪನೆಯು ಬರಹ ರೂಪದಲ್ಲಿ ಬಂದಿರುವುದು ತುಂಬಾ ಚೆನ್ನಾಗಿದೆ . ಈ ರೀತಿಯ ಪ್ರತಿಭೆಯು ಸದಾ ಹೊರಹೊಮ್ಮುತಿರಲಿ ಎಂದು ಹಾರೈಸುತ್ತೇನೆ.
Vrundakka,
tumba marmikavagi barididdi.
Lot of us still expect this from women ! so sad !!
Hope the performance of our daughters in the Olympic , brings the desired change in our mean thinking !
Satyabodha Raichur
Thanks Mama.
ಧನ್ಯವಾದಗಳು ಶೋಭಾ.
Bhavanegalige beleilla. Very true.
Mududida manasikatege hidida kaigannadi.
Suresh. Kulkarni