ನಿಮ್ ಗರ್ಲ್ ಫ್ರೆಂಡ್ ನಿಮ್ ತಲೇಲಿ ಬಿಟ್ಟ ಹುಳ

ಪ್ರೇಮ ಗೀಮಾ ಜಾನೇ ದೋ

mruthunjaya-kauti

ಮೃತುಂಜಯ ಕೌಟಿ

ನಿಮ್ಮ ಒಂದು ಅಡಿಕ್ಷನ್, ಅದೂ ನಿಮ್ಗೆ ಇಷ್ಟ ಆಗಿರೋ ಒಂದು ಸಿನಿಮಾ ನೋಡೋ ಅಡಿಕ್ಷನ್ ! ಅದನ್ನೇ ಇಡ್ಕೊಂಡು, ನಿಮ್ ಗರ್ಲ್ ಫ್ರೆಂಡ್ ನಿಮ್ ತಲೇಲಿ ಹುಳ ಬಿಟ್ಟು, ನಿಮ್ಮನ್ನ ಹುಚ್ಚಾ ಅಂತ ಪ್ರೂವ್ ಮಾಡ್ಸಿ, ಹೊಗೆ ಹಾಕ್ಸೋ ಲೆವಲ್ಗೆ ನಿಮ್ಮನ್ನ ಎಳ್ಕೊಂಡ್ ಹೋಗ್ಬೌದು ! ಊರು ಬಿಡ್ಸ್ ಬೌದು.. ಹುಷಾರ್ ! ಅದ್ಕೆ, ‘ಪ್ರೇಮಾ ಗೀಮಾ ಜಾನೇದೋ, ಆಗ್ಲೆ ಉದ್ದಾರ ಆಗೋದು’ ಅಂತ ಪೂರ್ಣಚಂದ್ರ ತೇಜಸ್ವಿ ಹಾಡಿರೋದು !

ಸಿನಿಮಾ ಶುರು ಆಗೋದೆ ಕಣ್ ತುಂಬೋ ಮನಮೋಹಕ ಸೀನರೀಸ್ಗಳಿಂದ. ಸಿನ್ಮಾ ಮುಗಿಯೋದೂ ಹಸಿರನ್ನ ಕಣ್ಣು ತುಂಬಿಸೇನೇ, ಅಷ್ಟು ಚೆನ್ನಾಗಿರೋ ಲೊಕೇಷನ್ಸ್ ! ಈ ಹಸಿರು ಹಸಿರು ರೊಮ್ಯಾಂಟಿಕ್ ಮೂಡಲ್ಲಿರೊ ಮಧ್ಯ ‘ನೀಲಿ’ ವಿಲನ್ ಬಂದು ತಲೆ ಕೆಡ್ಸಾನೆ ! ಯಾರು ಆ ನೀಲಿ ವಿಲನ್ ?, ಅವ್ನಿಗೂ ನಮ್ಮ್ ಹೀರೋ ಅಡಿಕ್ಷನ್ ಗೂ ಏನ್ ಸಂಭಂದ ? ಪ್ರೇಮಾ ಗೀಮಾ ಬೇಕಾ ? ಇದೆಲ್ಲಾ ಗೊತ್ತಾಗ್ಬೇಕಂದ್ರೆ ಹೋಗಿ ಸಿನಿಮಾ ನೋಡಿ.

images-1ಹೊಸಾ ಕಾನ್ಸೆಪ್ಟ್ ಇಡ್ಕೊಂಡು, ಹೊಸಾ ಟೀಮ್ ಕಟ್ಕೊಂಡು ಹೊಸ ಡೈರೆಕ್ಟರ್ ಒಂದು ಒಳ್ಳೆಯ ಸಿನಿಮಾ ತಂದಿದ್ದಾರೆ. ಮೊದಲಾರ್ದದಲ್ಲಿ ಸಿನಿಮಾ ಕಚಗಳಿ ಇಟ್ರೆ, ಸೆಕೆಂಡ್ ಹಾಫ್ ನಲ್ಲಿ ತಲೆ ಕೆಡ್ಸತ್ತೆ. ಕೊನೆಗೆ ಡೈರೆಕ್ಟರ್ ಹೈಕ್ಳುಗಳ್ಗೆ ಹೇಳಿರೋ ಪಾಠ ಏನಂದ್ರೆ : ನಾವ್ ಸಿಂಗಲ್, ಸೋ ಅವ್ಳೂ ಸಿಂಗಲ್ ಅಂದ್ಕೊಂಡ್, ಅವ್ಳು ನಂಗೇ ಸಿಗ್ಲಿ ಅನ್ನೋ ಸರ್ಕಸ್ ಮಾಡೋದ್ಕಿಂತ, ಆ ‘ಅವ್ಳು’ ಸಿಗೋ ತನ್ಕ ಕಾಯೋದು ವಾಸಿ! ಬೀ ಪೇಷಂಟ್ ಯಾ…

ಅಭಿನಯದ ವಿಷಯಕ್ಕೆ ಬಂದ್ರೆ, ಹೊಸ ಟೀಮ್ ನ ಮಧ್ಯ ಬರೋ ಹಳೇ ಆಕ್ಟರ್ಸ್, ಹೊಸಬ್ರು ತಮ್ಮಿಂದ ಕಲಿಯೋದು ಇನ್ನೂ ಬಹಳಾ ಇದೆ ಅಂತ ತೋರ್ಸಿದಾರೆ. ಹಾಗೆ ಹೊಸಾ ಆಕ್ಟರ್ಸ್ ಕೂಡಾ ಇದು ಅವರ ಮೊದಲನೆ ಪ್ರಯತ್ನ ಅನ್ನೊದನ್ನ ಅಲ್ಲಲ್ಲಿ ತೋರ್ಸಿದ್ರೂ, ಅವ್ರ ಆ ಪ್ರಯತ್ನ ಸಾರ್ಥಕವಾಗಿದೆ ಅಂತಾನೆ ಹೇಳ್ಬೌದು. ಪದೇ ಪದೇ ಹಾಡು ಪದೇ ಪದೇ ಕಾಡ್ತಾ ಇದೆ.

‍ಲೇಖಕರು Admin

September 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..

ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..

ಮಂಸೋರೆ ನಿರ್ದೇಶನದ 'ಆಕ್ಟ್ 1978' ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ವೀಕ್ಷಕರು ಮತ್ತೆ ಚಲನಚಿತ್ರ ಮಂದಿರಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ....

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ಗೊರೂರು ಶಿವೇಶ್ High noon  ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ  ಫ್ರೆಡ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This