ನಿಯರೆಸ್ಟ್‌ ಬಾರಿನ ದಾರಿ ತೋರೊ..

ನಾನೂ ನಿಮ್ಮಂತೆಯೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ಆಗ ಬರೆದು ಬಳಸದೆ ಉಳಿದಿದ್ದ ಈ ಪದ್ಯಗಳು ಮೊನ್ನೆ ಸಿಕ್ಕವು. ಸಿನಿಮಾದ ಡಿವಿಡಿಯಲ್ಲಿನ ಡಿಲೀಟೆಡ್ ಸೀನ್‌ಗಳಂತೆ ಓದಿಕೊಳ್ಳಬಹುದೇನೊ ಎನಿಸಿ ಇಲ್ಲಿ ಹಾಕುತ್ತಿರುವೆ. ನಿಜಕ್ಕೂ ಇದು ಕಡೆಯ ಕಂತು!
-ಅಪಾರ

 ತುಸು ಜಾಸ್ತಿ ಆಗಿದೆ ಇಂದು
 ಮೈಮೇಲೆ ಬಿದ್ದದ್ದಕ್ಕೆ ಸಾರಿ
 ನಿಮ್ಮನ್ಯಾಕೆ ಅಳಿಸಲಿ ಹೇಳಿ
 ನನ್ನೆದೆ ಮೇಲ್ ಬಿದ್ದುದ ತೋರಿ
 ೨
ಯಾರು ಪರೀಕ್ಷೆ ಮಾಡಿದರೇನು
 ನೂರು ಪ್ರಶ್ನೆ ಹಾಕಿದರೇನು
 ಚೂರೂ ಹೆದರುವುದಿಲ್ಲ ನಾನು
 ಬಾರು ಎಲ್ಲಿದೆಯೆಂದು ಗೊತ್ತಿಲ್ಲವೇನು?
 ೩
ದ್ರೋಹದ ಬೆಂಕಿಯಲಿ ನಾನು
 ಉರೀತಿರುವೆ ನಖಶಿಖಾಂತ
 ಯಾರು ಕುಡೀತಿದ್ದರು ಹೀಗೆ
 ಆಗಿದ್ದರೆಲ್ಲವೂ ಸುಖಾಂತ?
 ೪
 ಪಾರು ಮಾಡೋ ಕೃಷ್ಣಾ
 ಪಾರು ಮಾಡೋ
 ನಿಯರೆಸ್ಟ್‌ ಬಾರಿನ
 ದಾರಿ ತೋರೊ
 ೫
ಮೋರಿಯಲಿ ಬಿದ್ದವನ ಕಾಣಬಲ್ಲ ನಿಮಗೆ
ಕಾಣದು ಅವನ ನರಕ ಸದೃಶ ಹಗಲು
ಬೆಚ್ಚಿಸುವ ಥರಥರದ ದಿಗಿಲು
ಮತ್ತೀಗ ಅವನು ತೇಲುತಿರುವ ಮುಗಿಲು
 ೬
ನೀನು ಕೈ ಕೊಟ್ಟದ್ದೂ
ಒಳ್ಳೆಯದೇ ಆಯಿತು
 ಇಲ್ಲದಿದ್ದರೆನಗೆ ಮದಿರೆಯ
ಪರಿಚಯವೇ ಆಗುತ್ತಿರಲಿಲ್ಲ
 ೭
 ಆದಿಯೂ ಇಲ್ಲ ಅಂತ್ಯವೂ ಇಲ್ಲ
 ನನ್ನದೊಂದು ವಿಚಿತ್ರ ವ್ಯಥೆ
ಮದ್ಯದಲ್ಲೇ ಶುರುವಾದದ್ದು
ಮದ್ಯದಲ್ಲೇ ಮುಗಿವುದೆ ಕತೆ?

‍ಲೇಖಕರು avadhi

June 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. dundiraj

  annuvaru kelavru
  ide koneya baarige
  prathiyondusala hodagalu
  barige
  bahusha nivu haage!
  nenapirali
  kudukaru
  nillisuva vicharadalli
  dudukaru!

  ಪ್ರತಿಕ್ರಿಯೆ
 2. sudhakara

  hai, nimma blag nanu nodiralilla nijakku suprab.nimma aneka pustakagala coverpage nodi tumba kushi pattidene.dayavittu omme hampige banni.thanQ
  SUDHAKARA,HAMPI

  ಪ್ರತಿಕ್ರಿಯೆ
 3. ಶ್ರೀ ಹರ್ಷ

  ಮುಗಿಲು ಅ೦ದ್ರೆ ಆಕಾಶ.. ಆಕಾಶ ತೇಲುತ್ತಾ??? 😉

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: