'ನಿ ಹಾವ್'  ಮೈಸೂರು ದಸರಾ…

rajaram tallur low res profile

ರಾಜಾರಾಂ ತಲ್ಲೂರು

ಮೊನ್ನೆ ದಸರಾ ರಜೆಗೆ ಮೈಸೂರಿಗೆ ಹೋದಾಗ, ಅಲ್ಲಿ ದಸರಾ ವಸ್ತುಪ್ರದರ್ಶನದಲ್ಲಿ ಚೆನ್ನಪಟ್ಟಣ ಗೊಂಬೆಗಳನ್ನ ಕೊಡಿಸುತ್ತೇನೆ ಎಂದು ಮಗಳಿಗೆ ಆಶ್ವಾಸನೆ ಕೊಟ್ಟಿದ್ದೆ. ಅಲ್ಲಿ ಹೋಗಿ ನೋಡಿದರೆ ಮೈಸೂರಿನ ದಸರಾ ಮೈದಾನದಲ್ಲಿ  “ಚೀನಾ” ಎಕ್ಸಿಬಿಷನ್ ನಡೆದಿತ್ತು!

ನಾವು ಸಣ್ಣವರಿದ್ದಾಗ, ಯಾರು ಮೈಸೂರಿಗೆ ಹೋದರೂ ಚೆನ್ನಪಟ್ಟಣದ ಮರದ ಬೊಂಬೆಗಳನ್ನು ತಂದುಕೊಡುವುದು ರೂಢಿ. ಅದೇ ಧೈರ್ಯದಲ್ಲಿ ಮಗಳಿಗೆ ನನ್ನ ಆಶ್ವಾಸನೆ ಕೊಟ್ಟಿದ್ದೆ. ಮಗಳಂತೂ ಬಹಳ ಸ್ಪೆಸಿಫಿಕ್ ಇದ್ದಳು. ತಲೆ ಅಲ್ಲಾಡಿಸುವ ಮದುವೆ ದಿಬ್ಬಣದ ಗೊಂಬೆಗಳ ಸೆಟ್ ಬಗ್ಗೆ. ನಾವು ಮೈಸೂರು ತಲುಪಿದ್ದೇ ವಿಜಯದಶಮಿಯ ಮರಾಮರುದಿನ.

avadhi-column-tallur-verti- low res- cropಸಾಂಪ್ರದಾಯಿಕ, ಸರ್ಕಾರಿ ವಸ್ತುಪ್ರದರ್ಶನವೊಂದನ್ನು ನಿರೀಕ್ಷಿಸಿ ಹೋಗಿದ್ದ ನಮಗೆ ಸಿಕ್ಕಿದ್ದು, ಇಲ್ಲೇ ಮಂಗಳೂರಲ್ಲೋ, ಉಡುಪಿಯಲ್ಲೋ ಖಾಸಗಿ ಎಕ್ಸಿಬಿಷನ್ ಗಳ ಹೆಸರಲ್ಲಿ ನಡೆದಾಗಲೂ ಸಿಗುವ ಸಾಲುಸಾಲು ಚೀನಾಮಾಲು ‘ಹಸರ’ಗಳ ಸಾಲು. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜಂಟ್ಸ್ ಮಳಿಗೆಯೊಂದನ್ನು ಬಿಟ್ಟರೆ ಬೇರಾವುದೇ ಸರ್ಕಾರಿ ಮಳಿಗೆಯೂ ಅಲ್ಲಿರಲಿಲ್ಲ. ‘ನಾಡ ಹಬ್ಬ’ದ ಹೆಸರಲ್ಲಿ ನಡೆಯುವ, ಪ್ರತ್ಯೇಕವಾಗಿ ಒಂದು ವಸ್ತುಪ್ರದರ್ಶನ ಪ್ರಾಧಿಕಾರವನ್ನೇ ಹೊಂದಿರುವ ವ್ಯವಸ್ಥೆಯೊಂದರಲ್ಲಿ ಈ ಮಟ್ಟಿನ ಬೇಜವಾಬ್ದಾರಿತನವನ್ನು ನಿರೀಕ್ಷಿಸಿರಲಿಲ್ಲ.

ಕನಿಷ್ಟ ದಿಲ್ಲಿಯ ‘ದಿಲ್ಲಿ ಹಾಟ್’ ಹೈದರಾಬಾದಿನ ‘ಶಿಲ್ಪರಾಮಮ್’ ಮಾದರಿಯ ಪ್ರದರ್ಶಿನಿ ನಿರೀಕ್ಷಿಸಿ ಹೋಗಿದ್ದ ನಮಗೆ ಅಲ್ಲಿ ತೀರಾ ನಿರಾಸೆ ಕಾದಿತ್ತು. ಹಾಗಂತ, ಜನಸಂದಣಿಗೆ ಏನೂ ಕಡಿಮೆ ಇರಲಿಲ್ಲ. ಮೈದಾನಿನ ಆಸುಪಾಸಿನ ವ್ಯಾಪಾರಿಗಳಲ್ಲಿ ವಿಚಾರಿಸಿದರೆ, ಈ ಬಾರಿ ಜನ ಕಡಿಮೆಯಂತೆ!

ದೇಶದೊಳಗಿನಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಕಿಕ್ಕಿರಿದು ಜನ ಸೇರುವ “ನಾಡಹಬ್ಬ” ಕರ್ನಾಟಕದ ಶೋಕೇಸ್ ಆಗುವ ಬದಲು ಚೀನಾದ ಶೋಕೇಸ್ ಆಗಿಹೋಗಿರುವುದು ತೀರಾ ನಾಚಿಕೆಗೇಡಿನ ಸಂಗತಿ. ಅವ್ಯವಸ್ಥೆ ಇಲ್ಲಿಗೇ ಮುಗಿದಿಲ್ಲ.  ವಸ್ತುಪ್ರದರ್ಶನ ಮೈದಾನು ಮತ್ತು ಅರಮನೆ ಗಳ ನಡುವಿನ ರಸ್ತೆ ದಸರೆ ಆರಂಭವಾದಂದಿನಿಂದಲೂ ಪ್ರತಿದಿನ ರೋಡ್ ಬ್ಲಾಕ್ – ರೋಡ್ ರೇಜ್ ಗಳಿಗೆ ದಾರಿ ಆಗುತ್ತಿದೆ.

ಸ್ವತಃ ನನಗೂ ಒಂದೂವರೆ ತಾಸು ರೋಡ್ ಬ್ಲಾಕ್ ಅನುಭವ ಸಿಕ್ಕಿತು; ಏಳೆಂಟು ವಾಹನಗಳು ಗುದ್ದಿಕೊಂಡು, ಅದರ ಚಾಲಕರು ಕಚ್ಚಾಡಿಕೊಂಡದ್ದನ್ನೂ ಕಂಡೆ. ಪಾವತಿ ಸಹಿತ ಪಾರ್ಕಿಂಗ್ ಇರುವ, ಅನಿರೀಕ್ಷಿತ ಅಲ್ಲದ, ಯೋಜಿತ ಜನಸಂದಣಿಗಳ ನಡುವೆ ಕೂಡ ವ್ಯವಸ್ಥೆಯಲ್ಲಿ ಇಂತಹ ಬೇಜವಾಬ್ದಾರಿತನ ಇರುತ್ತದೆಂದಾದರೆ, ಇದನ್ನೆಲ್ಲ ನೋಡಿಕೊಳ್ಳಲು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಎಂಬ “ಬಾರ್ದಾನು” ಅಗತ್ಯ ಇದೆಯೆ?

ಚೀನೀ ಮಾರುಕಟ್ಟೆಯ ಕಾರಣದಿಂದಾಗಿ, ದೇಶದ ಬಹುತೇಕ ಎಲ್ಲ ಸಾಂಪ್ರದಾಯಿಕ ಗುಡಿಕೈಗಾರಿಕೆಗಳು ನೆಲಕಚ್ಚುತ್ತಿರುವ ಹೊತ್ತಿನಲ್ಲಿ, ಸ್ವತಃ ಸರ್ಕಾರ ಪ್ರಾಯೋಜಿಸುತ್ತಿರುವ ಪ್ರದರ್ಶಿನಿಯೊಂದು ಸ್ವಲ್ಪ ಯೋಚಿಸಿ, ಯೋಜಿಸಿ ಮುಂದುವರಿಯಬೇಕು. ಮೇಲುನೋಟಕ್ಕೆ – ಕಾಸು ಬಂದರೆ ಮುಗಿಯಿತು – ಎಂದು ಸರಳವಾಗಿ ಕಾಣುವ ಈ ರೀತಿಯ ನಿರ್ಧಾರಗಳು ಮುಂದೊಂದು ದಿನ ಸರ್ಕಾರಗಳ ಕೈಕಚ್ಚಿ ನಂಜೇರಿಸಲಿರುವುದರ ಬಗ್ಗೆ ಯಾವುದೇ ಅನುಮಾನ ಬೇಡ.

channapattana-dolls2ಕುಳಿತುಣ್ಣುವ ಅಧಿಕಾರಿಗಳ ಬಾಯಿಮಾತಿನ ಬಡಿವಾರಗಳಿಗೇನೂ ಕಡಿಮೆ ಇಲ್ಲ.  ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವೆಬ್ ಸೈಟಿನಲ್ಲಿ (http://keaonline.in) ಪ್ರಾಧಿಕಾರದ ಸಿ ಇ ಒ ಜಂಬ ಕೊಚ್ಚಿಕೊಂಡಿರುವುದು ಹೀಗೆ:

Mysore and ‘dasara exhibition’ are the two faces of a coin. It goes without any explanation that it stands among the list of attractions in Mysore, augmenting tourism to a larger extent.
What came into existence as a dream of the then Maharaja Sri Chamaraja Wadiyar Ten in 1880, today it has grown larger by leaps and bounds. From stalls to amusements, from information to exchange of culture and tradition, you can find an array of attractions on a platter. Also, it is a suitable place to market your products, albeit in a fixed time of 45 or 60 days.

ಕೊನೆಗೂ, ಊರೆಲ್ಲ ಹುಡುಕಾಡಿದ ಮೇಲೆ ರಾಮ್ಸನ್ಸ್ ಪ್ರತಿಷ್ಠಾನದ ಗೊಂಬೆಮನೆಗೆ ಹೋದರೆ, ಅಲ್ಲೂ ಚೆನ್ನಪಟ್ಟಣದ ಗೊಂಬೆಗಳ ಜಾಗದಲ್ಲಿ ಸಿಕ್ಕಿದ್ದು ಪಿಒಪಿ ಮತ್ತು ಪೇಪರ್ ಮಾಷ್ ಬೊಂಬೆಗಳು.

ಹಾಗಾದರೆ, ಚೆನ್ನಪಟ್ಟಣದ ಕಟ್ಟಿಗೆ ಗೊಂಬೆಗಳು ಮೈಸೂರು ಬಿಟ್ಟು ಹೋದದ್ದಾದರೂ ಎಲ್ಲಿಗೆ?!!!

* ni hao (ನಿ ಹಾವ್) ಅಂದರೆ  ಚೀನೀ ಭಾಷೆಯಲ್ಲಿ ‘ಹಲೋ’

 

ysore-dasara

‍ಲೇಖಕರು Admin

October 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಗಿಫ್ಟ್’ ಕೊಡ್ತಾರೆ ಹುಷಾರ್..!!

‘ಗಿಫ್ಟ್’ ಕೊಡ್ತಾರೆ ಹುಷಾರ್..!!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This